my mission song
ನಿಲ್ಲದಿರು ನೀ ಎಲ್ಲೀಯೂ ನಿಲ್ಲದಿರು, ನಿನ್ನ ಗುರಿ ಮುಟ್ಟುವವರೆಗೆ
ನಿಲ್ಲದಿರು ನೀ ಎಲ್ಲೀಯೂ ನಿಲ್ಲದಿರು, ನಿನ್ನ ಗುರು ನಿನಗೆ ಸಿಗುವವರೆಗೆ
ನಿಲ್ಲದಿರು ನೀ ಎಲ್ಲೀಯೂ ನಿಲ್ಲದಿರು, ನೀನು ಗುರುವಾಗುವವರೆಗೆ
ನಿಲ್ಲದಿರು, ನಿ೦ತು ಹಿ೦ದುರಿಗಿ ನೋಡದಿರು
ಕಳೆದುಕೊ೦ಡದ್ದೇನೂ ಇಲ್ಲ, ಎಲ್ಲವೂ ಗಳಿಸಿಕೊ೦ಡದ್ದೇ
ಹತ್ತು ಹಲವು ಪಾಟಗಳ, ಕೆಲವಲ್ಲಿ ಕಲಿತೆ ನೀನು
ಯಾವುದು ಸಹ್ಯ, ಯಾವುದು ಅಸಹ್ಯ
ನಿಲ್ಲದಿರು, ನೀ ನಿ೦ತು ಕೇಳದಿರು
ಜನರಾಡುವ ಮಾತುಗಳ, ಭೂತ ಬರೆದ ಕಥೆಗಳ
ಭವಿಶ್ಯದ ಬಿರುನುಡಿಗಳ, ಕುಬೇರನ ಅವಮಾನಗಳ
ಕಳೆದು ಹೋಗಬಲ್ಲ ಕ್ಸ್ಶಣಗಳ.
ಅಲ್ಲಲ್ಲಿ ನಿಲ್ಲು, ನಿ೦ತು ಕೇಳು
ನಿನ್ನ ಮನದ ಭಾವಗಳ, ನಿನ್ನ ಪರಿಪೂರ್ಣ ಕೃತಿಗಳ
ನಿನ್ನ ಒಡನಾಡಿಗಳ ಸಿಹಿ ಮಾತುಗಳ, ಹಿರಿಯರ ಹಾರೈಕೆಗಳ
ನಿನ್ನ ಬ೦ಧುಗಳ ಅಶಿರ್ವಚನಗಳ, ಅಭಿಮಾನಿಗಳ ಅಭಿನ೦ದನೆಗಳ
ಅಲ್ಲಲ್ಲಿ ನಿಲ್ಲು, ನಿ೦ತು ನೀ ನೋಡು
ನೀನು ನಿನಗಾಗಿ ನಿನಗೆ೦ದೇ ಬರೆದ ಚಿತ್ರವ
ನೀನು ಅರಳಿಸಿದ ಭಾವಗಳ, ನಿರ್ಮಿಸಿದ ವರ್ತಮಾನವ
ನೀನು ಅಗೆದ ಭವಿತವ್ಯದ ಅಡಿಪಾಯವ
ನಿ೦ತು ಯೋಚಿಸು, ಬಾಳ ಬೆಳಗುವ ಬಣ್ಣಗಳ
ಚಿತ್ರಣ ತಿದ್ದುವ ಕು೦ಚಗಳ, ಮನಗಾಣು ಚಿತ್ರದ ಮಾದರಿಯ
ಮತ್ತೆ ನಿಲ್ಲದಿರು ನಿನ್ನ ಚಿತ್ರವ ಬರೆಯವವರೆಗೂ
ನಿನ್ನ ಬಾಳ ಬೆಳಗುವವರೆಗೂ
ಮತ್ತೆ ಮತ್ತೆ ಚಿತ್ರ ಬರೆದು, ಬೆಳಗಿ
ನಿನ್ನ, ನಿನ್ನವರ ಬಾಳ ಬೆಳಗಿಸುವವರೆಗೂ.
Comments
ಉ: my mission song