Sangita Madurya
ಸಂಗೀತದ ಮಾಧುರ್ಯ
ಸಂಗೀತ ಕೇಳಲು ಎಲ್ಲರಿಗೂ ಆಸಕ್ತಿ. ಜಾನಪದ, ಶಾಸ್ತ್ರೀಯ ಸಂಗೀತ, ಭಾವಗೀತೆ, ಸಿನಿಮಾ ಸಂಗೀತ ಹೀಗೆ ಹಲವು ಸಂಗೀತ ಕೇಳಲು ಜನರು ಇಷ್ಟ ಪಡುತ್ತಾರೆ. ಈಗಿನ ಕಾಲದ ಯುವಕರು ಧ್ಯಾನ ಮಾಡುವ ವೇಳೆಯಲ್ಲಿ ಶಾಸ್ತ್ರೀಯ ಸಂಗೀತ ಕೇಳುತ್ತಾರೆ. ಪಂ ಹರಿಪ್ರಸಾದ್ ಚೌರಾಸಿಯಾ, ಪಂ. ಭೀಮಸೇನ ಜೋಶಿ, ಪಂ. ರವಿಶಂಕರ್ ಹಾಗು ಪಂ. ಜಸ್ ರಾಜ್ ಅವರ ಧ್ವನಿ ಮುದ್ರಕೆಗಳನ್ನು ಹೆಚ್ಚಾಗಿ ಕೇಳ ಬಯಸುತ್ತಾರೆ. ಇತ್ತೀಚೆಗೆ ನಾನು ಕೇಳಿ ಆನಂದಿಸಿದ ಧ್ವನಿ ಮುದ್ರಿಕೆ ಬಗ್ಗೆ ನಿಮ್ಮೊಡನೆ ಹಂಚಿಕೊಳ್ಳು ಬಯಸುತ್ತೇನೆ. ಈ ಧ್ವನಿ ಮುದ್ರಿಕೆಯ ಹೆಸರು ಅಂತರಯಾಮಿ ಸುಪ್ರಸಿಧ್ದವಾದ ಭಾಂಸುರಿ (ಕೊಳಲು) ವಾದಕ ಪಂ. ಪ್ರವಿಣ್ ಘೋಡ್ಕಿಂಡಿ ಅವರು ರಾಗ್ ಭೂಪ್ (ಕರ್ನಾಟಕ ಸಂಗೀತ ಪದ್ದತಿಯಲ್ಲಿ ಇದನ್ನು ರಾಗ ಮೋಹನವೆಂದು ಕರೆಯುತ್ತೇವೆ). ಈ ಧ್ವನಿ ಮುದ್ರಿಕೆಯ ವಿಷೇಶ ಏನಂದ್ರೆ ಒಂದು ಗಂಟೆಯ ಕಾಲ ಬರಿ ಆಲಾಪ್ ಮಾಡಿದ್ದಾರೆ. ತಬಲದ ಸಾತೇ ಇಲ್ಲ.ನಿಧಾನ ಗತಿಯಲ್ಲಿ ಭೂಪ್ ರಾಗವನ್ನು ಎಳೆ ಎಳೆಯಾಗೆ ಚಿತ್ರಿಸಿದ್ದಾರೆ. ಈ ಧ್ವನಿ ಮುದ್ರಿಕೆ ಕೇಳುತ್ತಾ ಧನ್ಯ ಮಗ್ನರಾಗಿ ಕುಳಿತರೆ ಯಾರು ಬೇಕಾದರು ಈ ಪ್ರಪಂಚವನ್ನು ಮರೆಯ ಬಹದು. ನಿತ್ಯವು ಇದ್ದನ್ನು ಕೇಳುತ್ತಾ ಧ್ಯಾನ ಮಾಡಿದರು ಮತ್ತೆ ಮತ್ತೆ ಕೇಳ ಬೇಕೆಂಬ ಹಂಬಲ ಹೆಚ್ಚುತ್ತದೆ. ಮನಸ್ಸಿಗೆ ಉಲ್ಲಾಸ, ಹಾಗು ದೇಹದ ಶ್ರಮವನ್ನು ಮರೆಯಬಹುದು. ಕೆಲಸ ಮಾಡುವಾಗ ಈ ಮುದ್ರಿಕೆ ಕೇಳುತ್ತಾ ಕೆಲಸ ಮಾಡಿದರೆ ಕೆಲಸದ ಶ್ರಮ ಗೊತ್ತಾಗುವುದಿಲ್ಲ, ಹಾಗು ಸಮಯ ಕಳೆಯುವುದು ಗೊತ್ತಾಗುವುದಿಲ್ಲ.
ಅ. ಆನಂದ ರಾವ್.
ಧನ್ಯ ಫೀಚರ್ಸ್.