"Scienceಉತ್ಸವ" ಯೇ ಮೇರೆ ಪಾಠ್ ಶಾಲಾ ಅಪ್ನಿ ತೊ ಪಾಠ್ ಶಾಲಾ!!

"Scienceಉತ್ಸವ" ಯೇ ಮೇರೆ ಪಾಠ್ ಶಾಲಾ ಅಪ್ನಿ ತೊ ಪಾಠ್ ಶಾಲಾ!!

Hi,

ನಾವು ಕೆಲವು ಸ್ನೇಹಿತರು ಸೇರಿ "Scienceಉತ್ಸವ" ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದೇವೆ. ಇದರಲ್ಲಿ ನಾವು ಈಗಿನ ಪೀಳಿಗೆಗೆ ಬೇಕಾದ ದಕ್ಷತೆ ಮತ್ತು ವಿಜ್ನಾನದ ಅರಿವನ್ನು ಬೆಳೆಸುವುದಕ್ಕಾಗಿ ಬೇಕಾದ  ವಿಶೇಷ ತರಬೇತಿಯನ್ನು ಕೊಡಲು  ನಿರ್ಧರಿಸಿದ್ದೇವೆ.

ಈ ತರಹದ ತರಬೇತಿಯಿಂದ ಅವರನ್ನು ಜಗತ್ತಿನ ಮುಂದೆ ತಮ್ಮ ಪ್ರೌಢಿಮೆಯನ್ನು ಮೆರೆದು ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಗುವಂತೆ ಮಾಡುವುದು ನಮ್ಮ ಉದ್ದೆಶ. ನಮ್ಮ ಪೂರ್ವಿಕರು ನಮಗಾಗಿ ಕೊಟ್ಟ ಸಂಸ್ಕಾರ ಯಾವ ರೀತಿಯದ್ದು ಅದನ್ನು ಮುಂದಿನವರಿಗೆ ವರ್ಗಾಯಿಸುವುದು ಹೇಗೆ ಎಂಬ ಅರಿವನ್ನು ಮೂಡಿಸಿ,  ಮತ್ತು ಅದನ್ನು ಈಗಿನ ಜನಜೀವನಕ್ಕನುಸಾರವಾಗಿ ತಕ್ಕಮಟ್ಟಿಗೆ ತಿದ್ದಿ ನಾವು ಮಾಡಿದ ತಪ್ಪನ್ನು ಅವರು ಮಾಡದಂತೆ ಸರಿಯಾಗಿಸಿ ಮುಂದಿನ ಪೀಳಿಗೆಗೆ ಕೊಡಿಗೆಯಾಗಿ ನೀಡುವುದು ನಮ್ಮ ಆದ್ಯ ಕರ್ತವ್ಯ.. 

ಅದಲ್ಲದೆ ವಿಜ್ನಾನದ ಅರಿವು ಮತ್ತು ಅದನ್ನು ದೈನಂದಿನ ಆಗು ಹೋಗುಗಳಿಗೆ ಹೇಗೆ ಅಳವಡಿಸುವುದು ಎಂಬುವುದನ್ನು ಚರ್ಚೆ ಮತ್ತು ಚಟುವಟಿಕೆಗಳ ಸಹಾಯದಿಂದ ಮಕ್ಕಳಿಗೆ ಕಲಿಸುವುದು ನಮ್ಮ ಇನ್ನೊಂದು ಗುರಿ.

ಈ ನಿಟ್ಟಿನಲ್ಲಿ ಕೆಲಸ ಮಾಡಲು ಇಚ್ಚೆ ಉಳ್ಳವರು ಈ ಕೆಳಕಂಡ ವಿಳಾಸಕ್ಕೆ (ಮಿಂಚೆಗೆ) ನಿಮ್ಮ ಅಭಿಪ್ರಾಯದೊಂದಿಗೆ ಸಂಪರ್ಕಿಸಿ.

harsha.scienceutsav@gmail.com or Contact me on my mobile no. 09945313269

www.scienceutsav.page.tl


ಧನ್ಯವಾದಗಳು

Scienceಉತ್ಸವ ತಂಡ

Rating
No votes yet