Sex - ಕಾಮ; ಅದರ ಮಹತ್ವ !

Sex - ಕಾಮ; ಅದರ ಮಹತ್ವ !

ಕರ್ನಾಟಕ ನಾಟಕ ಅಕಡಮಿ ಅಯೋಜಿಸಿದ್ದ "ಜ್ನಾನಪೀಠ ಪುರಸ್ಕ್ರುತರ ನಾಟಕ ಉತ್ಸವ" ನೆನ್ನೆ ಮುಗೀತು. ಜ್ನಾನಪೀಠ ಪ್ರಶಸ್ತಿ ಪಡೆದ ಕನ್ನಡ ಲೇಖಕರ ಕಾದಂಬರಿಗಳನ್ನ ನಾಟಕ ರೂಪ ಮಾಡಿ ಹಲವಾರು ನಾಟಕ ತಂಡದವ್ರು ಪ್ರದರ್ಶನ ಮಾಡುದ್ರು. ನಾನು ಎರಡು ನಾಟಕ ಮಾತ್ರ ನೋಡ್ದೆ. ಒಂದು ಕುವೆಂಪು ಅವರ "ಶ್ರಿ ರಾಮಾಯಣದರ್ಶನಂ" ಮೇಲೆ ತೆಗ್ದಿದ್ದ ನಾಟಕ "ರಾವಣನ ಕಣಸು". ಕನಸು ಅಲ್ಲ, ಕಣಸು. ಕಣಸು ಅಂದ್ರೆ Vision, ನನ್ಗೂ ಅಲ್ಗೆ ಒದ್ಮೇಲೇ ಗೊತ್ತಾಗಿದ್ದು. ಹಸ್ರು ಸಖತ್ತಾಗಿ ಇಟ್ಬಿಟ್ಟು, ನಾಟಕ ಮಾತ್ರ ತೀರ ಕಳಪೆ. ಕುವೆಂಪು ಅವ್ರ ಹೆಸರನ್ನ ಹಾಳ್ಮಾಡ್ಬಿಟ್ರು . ನಾನಂತೂ ತಲೆ ಚೆಚ್ಚಿಕೊಂಡು ಅರ್ದಕ್ಕೇ ಎದ್ದ್ ಬಂದೆ.

ಇನ್ನೊಂದು ನಾಟಕ ಶಿವರಾಂ ಕಾರಂತರ ಅವರ "ಮೈ ಮನಗಳ ಸುಳಿಯಲ್ಲಿ". ನಾಟಕ ಮಾಡ್ದವ್ರು "ರೂಪಾಂತರ" ತಂಡ , ಅವ್ರ್ ಇನ್ನೊಂದ್ ನಾಟಕ ನೋಡಿದ್ದೆ, ತುಂಬಾ ಚೆನ್ನಾಗಿತ್ತು. ಅದೇ Expectations ಇಟ್ಕೊಂಡೇ ಹೋದೆ. ಸದ್ಯ ನನ್ನ Expectations ಹುಸಿ ಮಾಡ್ಲಿಲ್ಲ - ನಾನ್ ನೋಡಿದ್ ಮೊದಲನೇ ನಾಟಕಕ್ಕಿಂತ ಚೆನ್ನಾಗೇ ಮಾಡುದ್ರು. ಅದರಲ್ಲೂ ನಾಟಕದ ಸಂಗೀತ - ನನ್ನನ್ನ ಇನ್ನೂ ಕಾಡ್ತಾ ಇದೆ. ಅಕ್ಕಮಹಾದೇವಿ ಅವ್ರ ಚೆನ್ನಮಲ್ಲಿಕಾರ್ಜುನ ಗೀತೆಗಳು ಇಷ್ಟು ಇಂಪಾಗಿರುತ್ತೆ ಅಂತ ಗೊತ್ತೇ ಇರ್ಲಿಲ್ಲ !

ಈ ನಾಟಕದ ತಿರುಳು - "ಮೈ ಮತ್ತು ಮನಸ್ಸು ಬೇರೆ ಬೇರೆ ಅಲ್ಲ, ಎರಡೂ ಒಂದೇ" ಅಂತ ನಾನ್ ಅರ್ಥ ಮಾಡ್ಕೊಂಡಿದ್ದು.

ಒಬ್ಬಳು ವೇಷ್ಯೆ ಇರ್ತಾಳೆ. ಅವಳ ಜೀವನದಲ್ಲಿ ಅವಳ ಆಸೆಗಳು, ನಡೆಯುವ ಘಟನೆಗಳು, ಅವಳು ಜೀವನದಲ್ಲಿ ಬಂದು ಹೋಗುವ ವ್ಯಕ್ತಿಗಳು, ಇದರ ಸುತ್ತ ನಾಟಕದ ಕಥೆ ಸಾಗುತ್ತೆ. ಕಾಮವನ್ನ ಕೆಟ್ಟ ದ್ರುಷ್ಟಿಯಿಂದ ನೋಡೋ ನಮ್ಮ ಸಮಾಜಕ್ಕೆ ಕಾಮ ಅಂದ್ರೇನು, ಅದರ ಮಹತ್ವ ಏನು ಅಂತ ತೋರ್ಸಿದಾರೆ ನಮ್ಮ ಕಾರಂತರು ಈ ನಾಟಕದ ಮೂಲಕ. ಮನಸ್ಸು ಗಟ್ಟಿ ಮಾಡಿ ಇಂದ್ರಿಯಗಳನ್ನ ನಿಗ್ರಹಿಸಬೇಕು ಅಂತೆಲ್ಲಾ ಹೇಳಿಸ್ಕೊಂಡು ಬೆಳೆದ ಒಬ್ಬ ಸ್ವಾಮೀಜಿ ಪಾತ್ರನೂ ಇದೆ - ಅದಂತೂ ತುಂಬಾ ಚೆನ್ನಾಗ್ ಮಾಡಿದ್ರು. ಒಂದೊಂದು ಪಾತ್ರ, ಒಂದೊಂದು ಸಂಬಾಷಣೆ ಎಲ್ಲ ಎಷ್ಟು Powerful ಆಗಿತ್ತಂದ್ರೆ, ನಿಜವಾಗ್ಲೂ ಕನ್ನಡದಲ್ಲಿ ಈ ರೀತಿಯ ವಿಚಾರಗಳನ್ನೆಲ್ಲಾ Express ಮಾಡ್ಬೊದಾ ಅಂತ ಆಶ್ಚರ್ಯ ಆಯ್ತು.

ನಿವೂ Chance ಸಿಕ್ಕಿದ್ರೆ, ನಾಟಕ ನೋಡಿ, ಇಲ್ಲಾಂದ್ರೆ ಪುಸ್ತಕವನ್ನಾದ್ರು ಓದಿ. ಏನಿಲ್ಲ ಅಂದ್ರು, ಹುಡುಗಿರ ಮನಸ್ಸು ಹೇಗಿರುತ್ತೇಂತ, ಸ್ವಲ್ಪ ಮಟ್ಟಿಗೆ ಅರ್ಥ ಮಾಡ್ಕೊಬೋದು ;-)

Rating
No votes yet

Comments