Tagged, Facebook,Twitter

Tagged, Facebook,Twitter

ಇತ್ತೀಚೆಗೆ  ನಾನು ಜಿ ಮೇಲ್ ನಲ್ಲಿ ನನ್ನ ಇನ್ ಬಾಕ್ಸ್ ತೆರೆದ ಕೂಡಲೇ ಕಣ್ಣಿಗೆ ಬೀಳೋದು ಅಂದ್ರೆ, Tagged, Facebook,Twitter ಇವುಗಳ ಮೇಲ್ ಗಳು. ಅದರಲ್ಲಿ ಇಂತವರು ನಿಮ್ಮ ಸ್ನೇಹ ಬಯಸ್ತಾರೆ, ಅನ್ನೋ ಮೆಸ್ಸೇಜ್. ಇದೆಲ್ಲಾಏನು? ಇವುಗಳಿಂದ  ಆಯಾ ಅಂತರ್ಜಾಲ ಪುಟವನ್ನು ಶುರು ಮಾಡಿದವರಿಗೆ ಏನು ಪ್ರಯೋಜನ? ನಾವು ಅವುಗಳಿಂದ ಚಾಟ್ ಮಾಡಬಹುದು, ಚಿತ್ರ ಅಪ್ ಲೋಡ್ ಮಾಡಬಹುದು, ಸಂದೇಶ ರವಾನಿಸ ಬಹುದು, ನಮಗೆಲ್ಲಾ ಪುಕ್ಕಟೆ. ಅವರಿಗೆ ಇದರಿಂದೇನು ಪ್ರಯೋಜನ? ಅವರ ದುಡಿಮೆ ಹೇಗಾಗುತ್ತೆ? ನಮ್ಮಿಂದ ಅವರಿಗೆ ಪ್ರಚಾರ ಸಿಕ್ಕುತ್ತದೆಯೇ? ಸಿಕ್ಕುವುದಾದರೂ ಹೇಗೆ? ಜೊತೆಗೆ ಅವುಗಳ ಸರಿಯಾದ ಉಪಯೋಗ ಪಡೆದುಕೊಳ್ಳುವುದು ಹೇಗೆ?

ನನಗಂತೂ ಇದರ ಗಂಧ ಗಾಳಿ ಗೊತ್ತಿಲ್ಲ. ಮೊದಲೇ ನಾನೊಬ್ಬ ಹಳ್ಳೀ ಹೈದ ಅಂತಾ ನಿಮಗೆಲ್ಲಾ ಗೊತ್ತು. ಅಂತರ್ಜಾಲದ ಬಗ್ಗೆ ಹೆಚ್ಚು ಮಾಹಿತಿ ಇರುವ ದೊಡ್ದ ಗುಂಪೇ ಸಂಪದದಲ್ಲಿದೆ. ಅಂತರ್ಜಾಲದ ಬಗ್ಗೆ ಏನೂ ಗೊತ್ತಿಲ್ಲದವರಿಗೆ  ಅರ್ಥವಾಗುವಂತೆ ಯಾರಾದರೂ ಬರೀತೀರಾ?

Rating
No votes yet

Comments