ಅಲ್ಲಿ ರಾಷ್ಟ್ರಪತಿ ತವರಿನಲ್ಲಿ ಅತ್ಯಾಚಾರ ಇಲ್ಲಿ ಶಾಸಕರಿಂದಲೇ ಬಹಿಷ್ಕಾರ...

ಅಲ್ಲಿ ರಾಷ್ಟ್ರಪತಿ ತವರಿನಲ್ಲಿ ಅತ್ಯಾಚಾರ ಇಲ್ಲಿ ಶಾಸಕರಿಂದಲೇ ಬಹಿಷ್ಕಾರ...

ಚಿತ್ರ

ಇಂದು ಪ್ರತಿಯೊಂದು ವ್ಯವಸ್ಥೆಯಲ್ಲಿಯೂ ಜಾತಿ ಪ್ರತಿಷ್ಠೆಗಳು ಹೆಚ್ಚಾಗುತ್ತಿವಿಯೆ ಹೊರತು ಕಡಿಮೆಯಾಗಿಲ್ಲ, ಆದರೆ ಪ್ರೇಮಿಸುವ ಭಾವನಾತ್ಮಕ ವಿಚಾರ ಬಂದಾಗ ಅದು ಜಾತಿಯನ್ನು ಮೀರಿ ನಿಲ್ಲುತ್ತದೆ. ಇಡೀ ವ್ಯವಸ್ಥೆಯನ್ನು  ಧಿಕ್ಕರಿಸುವ ಶಕ್ತಿ ಇರುವುದು ಅದೊಂದಕ್ಕೆ ಆಗಾಗಿಯೆ ಇತ್ತೀಚಿನ ಯುವ ಪೀಳಿಗೆ ತೀರ ಸಂಕಷ್ಟಕ್ಕೀಡಾಗುತ್ತಿರುವುದು.

ನಮ್ಮ ದೇಶದ ಪ್ರಥಮ ಪ್ರಜೆಗಳಾದ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ತವರು ಕ್ಷೇತ್ರವಾದ ಪಶ್ವಿಮ ಬಂಗಾಳದ ಬೀರ್‍ ಭೂಮ್ ಜಿಲ್ಲೆಯ ಲಾಬ್ ಪುರ್‍ ಎಂಬ ಹಳ್ಳಿಯಲ್ಲಿ ಎಸ್ಟಿ ಸಮುದಾಯಕ್ಕೆ ೨೦ ವರ್ಷದ ಯುವತಿಯೊಬ್ಬಳು ಬೇರೊಂದು ಸಮುದಾಯಕ್ಕೆ ಸೇರಿದ ಯುವಕನನ್ನು ಪ್ರೀತಿಸುತ್ತಿದ್ದಳು. ಅದಕ್ಕೆ ಆ ಹಳ್ಳಿಯ ಪಂಚಾಯ್ತಿಯ ವಿರೋಧವಿತ್ತು. ನೀನು ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಯ ಅದು ಸೂಕ್ತವಲ್ಲ, ನಮ್ಮ ಜಾತಿಯ ಯಜಮಾನಿಕೆ ಒಪ್ಪುವುದಿಲ್ಲ ಎಂದು ತಾಕೀತು ನೀಡಿದ್ದರು, ಬೆದರಿಕೆಯನ್ನು ಒಡ್ಡಿದ್ದರು. ಆದರೆ ಆ ಯುವತಿ ಪಂಚಾಯ್ತಿಯ ಯಜಮಾನಿಕೆಯನ್ನು ಮೀರಿ ಅದೇ ಹಾದಿಯಲ್ಲಿ ಮುಂದುವರಿದು ಹೊದುದ್ದರಿಂದ ಎಸ್ಟಿ ಸಮುದಾಯದ ಪಂಚಾಯ್ತಿಯ ಯಜಮಾನಿಕೆ ಆಕೆಗೆ ೫೦ ಸಾವಿರ ದಂಡ, ಪ್ರಿಯಕರನಿಗೆ ೨೫ ಸಾವಿರ ದಂಡ ವಿಧಿಸಲಾಗಿದೆ. ಇವತ್ತಿನ ಪರಿಸ್ಥಿತಿಯಲ್ಲಿ ಅಷ್ಟು ದಿಡ್ಡ ಮೊತ್ತದ ಹಣವನ್ನು ಎಲ್ಲಿ ತರಲು ಸಾಧ್ಯ ಹೇಳಿ. ಹಾಗಾಗಿ ಆಕೆಯಿಂದ ದಂಡ ಕಟ್ಟಲು ಸಾಧ್ಯವಾಗದೇ ಹೋದುದ್ದರಿಂದ, ಆ ಜಾತಿಗೆ ಸೀಮಿತಗೊಂಡ ಯಜಮಾನ, ಊರಿನ ಪಡ್ಡೆ ಹುಡುಗರಿಗೆ ಅತ್ಯಾಚಾರವೆಸಗಲು ಆದೇಶ ನಿಡಿದ್ದಾನೆ. ಅನಂತರ ಆಕೆ ಕೂಡಿ ಹಾಕಿದ ಮನೆಯಿಂದ ತಪ್ಪಿಸಿಕೊಂಡು ತೀರ ರಕ್ತಸ್ರಾವ ತಾಳಲಾರದೆ ಆಸ್ಪತ್ರೆ ಸೇರಿದಳು. ಅವಳ ಪರಿಸ್ಥಿತಿ ಹೇಗಾಗಿತೆಂದರೆ ಅತ್ಯಾಚಾರವೆಸಗಿದವರನ್ನು ಎಣಿಸಿ ಹೇಳುವುದು ಕೂಡ ದುಸಾದ್ಯವಾಯಿತು ಅಂತಹ ಗಂಭೀರ ಪರಿಸ್ಥಿತಿಯನ್ನು ಎದುರಿಸಿದಳು. ಛೇ... ಇದೆಂತಹ ಹೀನ ಸಂಸ್ಕೃತಿ ಸಮಾಜ ನಮ್ಮದು ಅಲ್ಲವೇ?

ನಾವು ಇಂದಿಗೂ ಕೂಡ ಬದುಕುತ್ತಿರುವುದು ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿಯೋ? ಅಥವಾ ನಿರಂಕುಶ ಪ್ರಭುತ್ವದಡಿಯಲ್ಲಿಯೋ? ಎಂದು ನಮ್ಮನ್ನು ನಾನೆ ಪ್ರಶ್ನಿಸಿಕೊಳ್ಳುವಂತಾಗಿದೆ. ಭಾರತದ ಉದ್ದಗಲಕ್ಕೂ  ಹಳ್ಳಿಗಳೇ ಮಹಾಪೂರ ಪ್ರತಿಯೊಂದು ಹಳ್ಳಿಯಲ್ಲಿಯೂ ಹಲವಾರು ಜಾತಿಗಳಿಂದ ಕೂಡಿವೆ. ಒಂದೊಂದು ಜಾತಿಗೂ ಅದರದೇ ಆದ ಪಂಚಾಯ್ತಿ ಯಜಮಾನಿಕೆ ಇದೆ. ಹಳೆಯ ತಲೆಮಾರಿನವರು ಒಂದಷ್ಟು ಜನ ಸೇರಿ  ಅವರೇ ತೀಮಾರ್ನ ತೆಗೆದುಕೊಳ್ಳುತ್ತಾರೆ. ಅದಕ್ಕೆ ಜಾತಿಯ ಜನರೆಲ್ಲ ಬದ್ದರಾಗಿರಬೇಕು. ಇದೇ ಅಲ್ಲಿನ ನಿಯಮ. ಆ ನಿಯಮವನ್ನು ಯಾರಾದರು ಮೀರಿದರೆ ದಂಡ ತೆತ್ತಬೇಕಾಗುತ್ತದೆ. ಇದು ಪ್ರಜಾ ಪ್ರಭುತ್ವ ವ್ಯವಸ್ಥೆ ಇದ್ದಾಗಿಯೂ ಚಾಲ್ತಿಯಲ್ಲಿದೆ ಎಂದರೆ ನಾವೆಷ್ಟು ಅನಾಗರೀಕರು ಎಂದು ನಮ್ಮ ಬಿಂಬ ನಮಗೆ ಉಗಿಯುವಂತಾಗಿದೆ. ನಮ್ಮಲ್ಲಿ ಪೋಲೀಸ್ ಇದೆ, ನ್ಯಾಯಾಲಯವಿದೆ, ಯಾವುದು ಸರಿ ಯಾವುದು ತಪ್ಪು ಎಂದು ಹೇಳುವುದಕ್ಕೆ ಕಾನೂನಿದೆ ಇಷ್ಟೆಲ್ಲಾ ಇದ್ದಾಗಿಯೂ ಪಂಚಾಯ್ತಿಯ ಯಜಮಾನಿಕೆಯೆ ಮುಂದುವರಿತ್ತಿದೆಯಲ್ಲ ಆಗಾದರೆ ನಾವೆಷ್ಟು ಮೂರ್ಖರು ಅಲ್ಲವೆ? ನಾವು ಪಂಚಾಯ್ತಿಯ ಯಜಮಾನಿಕೆಯನ್ನು ಎಲ್ಲಿಯವರೆಗೂ ಬೆಂಬಲಿಸುತ್ತೀವೊ ಅಲ್ಲಿಯವರೆವಿಗೂ ನಾವು ಬಂಧಿತ ವ್ಯಕ್ತಿಗಳಾಗಿ ಉಳಿದುಕೊಳ್ಳೂತ್ತೀವಿ. ರಾಷ್ಟ್ರಪತಿಯವರ ತವರಿನಲ್ಲಿಯೆ ಇಂತಹ ಘಟನೆ ನಡೆದಿದೆ ಎಂದರೆ ದೇಶದ ಬೇರೆ ಪ್ರದೇಶಗಳ ಗತಿ ಏನು? ಇದನ್ನು ಗಂಬೀರವಾಗಿ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಇಡೀ ವ್ಯವಸ್ಥೆಯನ್ನು ಇಂತಹ ಪೈಶಾಚಿಕೆ ವಿಷಯಗಳು ನುಂಗುವುದರಲ್ಲಿ ಸಂದೇಹವೆ ಇಲ್ಲ.

ಅಲ್ಲಃ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿಯವರ ತವರಿನಲ್ಲಿಯೆ ಅತ್ಯಾಚಾರ ನಡೆದಿದೆ, ನಮ್ಮ ಕರ್ನಾಟಕದಲ್ಲಿ ವಿಧಾನ ಸಭೆ ಶಾಸಕರಿಂದಲೆ ಮತ್ತೊಂದು ದುರ್ಘಟನೆ ನಡೆದಿದೆ. ಹೇಳಲು ಅಸಹ್ಯವಾಗುತ್ತದೆ ಆದರೂ ಹೇಳದೆ ಇರಲಾಗದು. ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ವೈ.ಕೆ.ಮೋಳೆಯ ಬಿಲ್ ಕಲೆಕ್ಟರ್‍ ನಾಗರಾಜ್ ಎಂಬಾತನು ಭ್ರಷ್ಟಾಚಾರಕ್ಕೆ ಸಿಲುಕಿಗೊಂಡಿದ್ದು, ಅದನ್ನು ಅದೇ ಗ್ರಾಮದ ಶಿವಣ್ಣ ಎಂಬುವರು ಲೋಕಾಯುಕ್ತ ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಿದ್ದರ ಪರಿಣಾಮವಾಗಿ ಅದೇ ಊರಿನಿಂದ ಬಿಹಿಷ್ಕಾರಕ್ಕೆ ಒಳಗಾಗಬೇಕಾಯಿತು. ಬಹಿಷ್ಕಾರಕ್ಕೆ ಒಳಗಾದ ಶಿವಣ್ಣ ಎಂಬುವರು ಉಪ್ಪಾರ ಸಮುದಾಯಕ್ಕೆ ಸೇರಿದವರಾಗಿದ್ದು ಅದೇ ಸಮುದಾಯದ ಪಂಚಾಯ್ತಿಯ ಯಜಮಾನರು ಈ ರೀತಿ ಮಾಡಿದ್ದಾರೆ. ಈ ಅನಾಹುತಕ್ಕೆ ಕಾರಣರಾಗಿರುವವರೆ ಚಾಮರಾಜನಗರ ಶಾಸಕರಾದ ಸಿ.ಪುಟ್ಟರಂಗ ಶೆಟ್ಟಿಯವರು. ಒಬ್ಬ ಪ್ರಜಾ ಪ್ರತಿನಿಧಿಯಾಗಿದ್ದುಕೊಂಡು ಇಂತಹ ವಿಚಾರಗಳಿಗೆ ಕುಮ್ಮಕ್ಕು ನೀಡಿದರೆ ಮುಂದೆ ಸಮಾಜದ ಗತಿಯೇನು?

ಶಿವಣ್ಣನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವುದರಿಂದ ಗ್ರಾಮದಲ್ಲಿ ಯಾರು ಸಹಃ ಅವರ ಕುಟುಂಬವನ್ನು ಮಾತನಾಡಿಸುವಂತಿಲ್ಲ, ಮಕ್ಕಳನ್ನು ಶಾಲೆಗೆ ಸೇರಿಸುವಂತಿಲ್ಲ, ಗ್ರಾಮದಲ್ಲಿ ಯಾರು ಕೂಡ ಅವರನ್ನು ಕೆಲಸಕ್ಕೂ ಕರೆಯುವಂತಿಲ್ಲ. ಶಿವಣ್ಣನವರ ಜಮೀನಿನ ಕೆಲಸಕ್ಕೂ ಬೆರೆಯವರು ಬರುತ್ತಿಲ್ಲ, ಅವರ ನೆಮ್ಮದಿಯೇ ಆಳಾಗಿ ಹೋಗಿದೆ. ಆ ಗ್ರಾಮದಲ್ಲಿ ಅಪ್ಪಿ ತಪ್ಪಿ ಯಾರಾದರು ಶಿವಣ್ಣನವರ ಕುಟುಂಬದವರನ್ನು ಮಾತನಾಡಿಸಿ ಬಿಟ್ಟರೆ ಪಂಚಾಯ್ತಿವತಿಯಿಂದ ೨೫ ಸಾವಿರ ದಂಡ ವಿಧಿಸಲಾಗುವುದು ಎಂದು ಹಾಣಿ ಕಟ್ಟಿದ್ದಾರೆ. ಆದರೆ ಶಿವಣ್ಣನವರು ಅಷ್ಟಕ್ಕೆ ಸುಮ್ಮನಾಗಿಲ್ಲ ಕಾನೂನಿನಾತ್ಮಕ ತಮ್ಮ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬೇಕೆಂದು ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಿದ್ದಾರೆ. ಅವರು ದೂರನ್ನು ದಾಖಲಿಸಿಕೊಂಡು ತನಿಕೆಗೆ ಆದೇಶಿಸಿದ್ದಾರೆ.

ಎಂಥಹ ಹೀನ ಸ್ಥಿತಿಯಲ್ಲಿ ನಾವು ಬದುಕುಬೇಕಾಗಿದೆ ಅಲ್ಲವೆ? ಪಂಚಾಯ್ತಿ ಯಜಮಾನಿಕೆಗಳು ಯುವ ಪೀಳಿಗೆಯನ್ನು ಹೇಗೆ ದಿಕ್ಕು ತಪ್ಪಿಸುತ್ತಿವೆ? ಗ್ರಾಮಗಳ ಯಜಮಾನರುಗಳೆ ದೇವರು ಅವರೆ ಕಾನೂನು, ಅವರು ಹೇಳಿದ್ದೆ ವೇದ ವಾಕ್ಯ ಎಂದು ನಂಬಿರುವ ಜನರುಗಳಿಂದಲೆ ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗುತ್ತಿರುವುದು. ಇದಕ್ಕೆ ಆಡಳಿತ ಯಂತ್ರಾಂಗಗಳ ಕುಸಿತ ಮತ್ತು ಕಾನೂನಿನ ಅರಿವಿನ ಕೊರತೆಯೂ ಕೂಡ.  ಒಂದು ಕಡೆ ರಾಷ್ಟ್ರಪತಿಯವರ ತವರಲ್ಲಿ ಯುವತಿಯ ಅತ್ಯಾಚಾರವಾಗಿದೆ ಮತ್ತೊಂದು ಕಡೆ ಶಾಸಕರಿಂದಲೆ ಸಾಮಾಜಿಕ ಬಹಿಷ್ಕಾರವಂತೆ, ಸಮಾಜಕ್ಕಿರುವ ರೋಗಕ್ಕೆ ಮದ್ದಾಗಬೇಕಾದವರು ಯಾರು? ಯುವ ಸಂಘಟನೆಗಳು, ಮಹಿಳಾಪರ ಚಳವಳಿಗಳು ಮೌನವಹಿಸಿವೆ. ಯುವ ಮನಸ್ಕರಲ್ಲಿ ಸಾಮಾಜಿಕ ಪ್ರಜ್ಞೆ ನಾಶವಾಗುತ್ತಿದೆ. ಆದ್ದರಿಂದಲೇ ಇಂತಹ ಅವಿವೇಕತನಕ್ಕೆ ದಾರಿಯಾಗಿತ್ತಿರುವುದು. ಇನ್ನು ಮುಂದಾದರು ಜಾಗೃತಿವಹಿಸಬೇಕಾಗಿದೆ, ಸಂಘಟಿತರಾಗುವ ಮೂಲಕ ನೊಂದವರಿಗೆ ಅನ್ಯಾಯವಾದವರಿಗೆ ಒಂದು ಧ್ವನಿ ಜೊತೆಗೂಡಿದರೆ ಮಾತ್ರ ಕಂಡು ಬರುವ ಸಮಸ್ಯೆಗಳಿಗೆ ಮುಕ್ತಿ ಕಾಣಿಸಬಹುದು. ಇಲ್ಲವಾದಲ್ಲಿ ಯುವ ಪೀಳಿಗೆ ಮುಂದಿನ ದಿನಗಳಲ್ಲಿ ಸ್ವಾಭಿಮಾನ ರಹಿತವಾಗಿ ಬದುಕಬೇಕಾಗುತ್ತದೆ.

 

- ಹಾರೋಹಳ್ಳಿ ರವೀಂದ್ರ

Rating
No votes yet