ಕಲಾ ಉಗಮ

ಕಲಾ ಉಗಮ

ಚಿತ್ರ

 

ಕಲ್ಪನೆ ಮತ್ತು ವಿವೇಕಗಳು

ಕಲೆಯ ಮೂಲ ವಸ್ತುಗಳು

ಶಕ್ತಿಶಾಲಿ ಕಲ್ಪನೆಯಿಂದ

ಮಾತ್ರ ಮರು ಸೃಷ್ಟಿ ಸಾಧ್ಯ

 

ಕಲಾವಿದನ

ಮಹೋನ್ನತಿಯಡಗಿರುವುದು

ಕಲ್ಪನಾ ಗ್ರಹಿಕೆಯಲ್ಲಿ

ಮುಗ್ಧ ಕಲಾರಸಿಕ

ವಶವರ್ತಿಯಾಗುವುದು

ಆತನ

ಕಲ್ಪನಾಶೀಲ ವೈಭವಕೆ

 

ಕಲ್ಪನೆ ಕಲೆಗಳೆರಡೂ ಶ್ರೇಷ್ಟ

ಕಲ್ಪನಾ ಸ್ಪರ್ಶದಿಂದಲೆ

ಮನೋ

ಸಂವೇದನಾಕಾರಗಳುಗಮ

ಆಗ ಹೊರ ಹೊಮ್ಮುವ ಕಲೆ

ಶ್ರೇಷ್ಟ ಕಲೆ

 

ಕಲ್ಪನೆ

ಕೇವಲ ಹಗಲುಗನಸಲ್ಲ

ಚಿಂತನೆಗೆ ಹಚ್ಚುವ ಸಾಧನ

ಕಲೆ

ಚಿಂತನೆ ಸಾಧನೆ

ಎರಡೂ ಹೌದು

     *

ಚಿತ್ರ  ಅಂತರ್ ಜಾಲದಿಂದ

Rating
No votes yet

Comments

Submitted by kavinagaraj Wed, 07/01/2015 - 14:55

ಕಲ್ಪನೆಯ ಕನಸು ನನಸಾಗಲು ಸಾಧನೆ ಅಗತ್ಯವೆಂದು ತಿಳಿಸಿರುವಿರಿ. ಸಾಧಕರಿಗೆ ಒಲಿಯದಿರುವುದು ಯಾವುದೂ ಇರಲಾರದು!!

Submitted by H A Patil 1 Wed, 07/01/2015 - 20:15

In reply to by kavinagaraj

ಕವಿ ನಾಗರಾಜರವರಿಗೆ ವಂದನೆಗಳು
ಬದುಕಿಗೆ ಕನಸುಗಳು ಬೇಕು ಅವು ಸಾಕಾರವಾಗಲು ಪರಶ್ರಮ ಬೇಕು ಅಂದರೆ ಮಾತ್ರ ಬದುಕು ಸಹನೀಯ ಎಂಬ ಯೋಚನೆ ಬಂದಾಗ ಹುಟ್ಟಿದ ಕವನ, ಪ್ರತಿಕ್ರಿಯೆಗೆ ಧನ್ಯವಾದಗಳು.