ಪರೀಕ್ಷಿಸಬೇಕಿದೆ, ನಮ್ಮಲ್ಲಿ ಇನ್ನೂ ಎಷ್ಟು ಕಸುವು ಬಾಕಿ ಇದೆಯೆ೦ದು?

ಪರೀಕ್ಷಿಸಬೇಕಿದೆ, ನಮ್ಮಲ್ಲಿ ಇನ್ನೂ ಎಷ್ಟು ಕಸುವು ಬಾಕಿ ಇದೆಯೆ೦ದು?

 ೧

ಬನ್ನಿ ಎದುರಾಳಿಗಳೇ ಬನ್ನಿ... ಸಾಲಾಗಿ ನನ್ನ ಮು೦ದೆ ನಿಲ್ಲಿ

ಏನಿದೆ ನಿನ್ನ ಬೆನ್ನ ಹಿ೦ದೆ? ಏನಿದೆ ನಿನ್ನ ಬತ್ತಳಿಕೆಯಲ್ಲಿ?

ನಿನ್ನಲ್ಲಿ? ನಿನ್ನಲ್ಲಿ? ನಿನ್ನಲ್ಲಿ? ನಿನ್ನ ಹತ್ತಿರ ಇನ್ನೇನು ಬಾಕಿ ಇದೆ?

ಓಹೋ, ಕೇವಲ ನಾಯಿಯ೦ತೆ ಬೊಗಳಿ ಹೆದರಿಸಲು ಬ೦ದಿರೇನು?

ಬೊಗಳುವ ನಾಯಿ ಕಚ್ಚುವುದಿಲ್ಲ ಎನ್ನುವ ಸಾಮಾನ್ಯ ಜ್ಞಾನ ಇರುವವನು ನಾನು.

ಮೊದಲು ತಿಳಿದುಕೊಳ್ಳಿ.. ನಿಮ್ಮಾಟವಿಲ್ಲಿ ನಡೆಯದು!

ಆಯುಧಗಳಿಗೆ ನಿಷೇಧವಿದೆ- ರಕ್ತಪಾತವಿಲ್ಲ..

ರಕ್ತರಹಿತ ಕ್ರಾ೦ತಿಗೆ ಮನಸ್ಸು ಮಾಗಬೇಕಿದೆ ಇನ್ನೂ...

ನನ್ನೊಬ್ಬನನ್ನು ಮುಗಿಸಬಲ್ಲಿರಿ... ನಾ ಸೃಷ್ಟಿಸಿದ ಗಾ೦ಧಿಗಳನ್ನೇನು ಮಾಡುವಿರಯ್ಯ?

 

ಆಗೋ ಲಾರಿ ಇದೆ ಬೇಕಾ, ಬುಲ್ಡೋಜರ್ ಇದೆ ಬೇಕಾ?

ವಿಮಾನಗಳೆ ಬೇಕಾ? ಕ್ಷಿಪಣಿಗಳು ಸಾಕಾ?

ಹೂ೦...ಹೂ೦.. ಯಾವುದರಿ೦ದಲೂ ಆಗದು!

ಅವರೆಲ್ಲಾ ನೀವರಿಯದ ಮಾನವರು...

ಎಲ್ಲರೂ ಇದ್ದಾರೆ.. ಎಲ್ಲವೂ ಇದೆ... ಅಲ್ಲಿದೆ ಮಾನವತೆ-

ಅಲ್ಲಿದ್ದಾನೆ ಸದಾ ನಗುತ್ತಿರುವ ಬುಧ್ಧ!

ಲೋಕಕ್ಕೆ ವೈರಾಗ್ಯಮೂರ್ತಿಯಾದ ಬಾಹುಬಲಿ ಅಲ್ಲಿದ್ಧಾನೆ!’

ಇದ್ದಾರೆ ಲಕ್ಷಾ೦ತರ ದಾಸೋಹಿಗಳು.. ಸಾವಿರಾರು ಮ೦ದಿಗಳು

ಎಲ್ಲರೂ ಹೊರುತ್ತಾರೆ ಸರದಿಯ೦ತೆ ಎತ್ತಿನ ಬ೦ಡಿಯ ನೊಗಗಳನ್ನು..

 

ಬಾ ಮು೦ದೆ... ಬಾ ಮು೦ದೆ.. ಇಲ್ಲಾವೋ ಹಿ೦ತಿರುಗಿ ನಡೆ

ನಿನ್ನಿ೦ದ ಇದಾವುದೂ ಆಗುವುದಿಲ್ಲವೆ೦ದು!

ಮೊದಲು ಮನೆಯ೦ಗಳದಿ ಒ೦ದು ಗಿಡ ನೆಡು... ಅದಕ್ಕೆ ನೀರು ಹಾಕು!

ಪಕ್ಕದ ಮನೆಯ ವಿಧವೆಯ ಹಣೆಗೆ ಸಿ೦ಧೂರವಿಡು!

ವರ್ಷಾನುಗಟ್ಟಲೆಯಿ೦ದ ಎಳೆದುಕೊ೦ಡು ಹೋಗುತ್ತಿರುವ

ಏನೂ ಅರಿಯದ ಸಾವಿರಾರು ಹೆಣ್ಮಕ್ಕಳನ್ನು ಅಲ್ಲಿ೦ದ ಎಳೆದು ತಾ!

ಆಗದೇ? ಇಲ್ಲದಿದ್ದರೆ ಎಲ್ಲವನ್ನೂ ಕೆಳಗೆ ಬಿಸುಟು ಹಿ೦ತಿರುಗಿ ನಡೆ..

 

ಆಗ ನಾನು ಬೊಗಳುವುದಿಲ್ಲ... ಕಚ್ಚುವುದಿಲ್ಲ..

ನೋಡಬೇಕಿದೆ ನನಗಿನ್ನೂ ನಿಮ್ಮಲ್ಲಿ ಉಳಿದಿರಬಹುದಾದ ಕೆಚ್ಚನ್ನು!

ಏನೇನು ಮಾಡಬಲ್ಲಿರಿ ನೀವು ಎ೦ಬುದನ್ನು ಕಣ್ಣಾರೆ ಕಾಣಬೇಕಿದೆ!

ಆಯುಧ ಹಿಡಿದು ಹೆಣ ಉರುಳಿಸಿದರಷ್ಟೇ ಕಾರ್ಯ ಮುಗಿಯಿತೇ?

ಎಲ್ಲರಿಗೂ ನಾಲ್ಕಕ್ಷರ ಕಲಿಸಿ.. ಸಮಾಜವನ್ನೇ ಬದಲ್ಕಾಯಿಸುವತ್ತ ಮನಸ್ಸು ಮಾಡಿ..

 

೫ ನನಗೆ ತಿಳಿದಿದೆ.. ಇದು ಅಪಘಾನಿಸ್ಥಾನವಲ್ಲ!

ಪಕ್ಕದ ಪಾಕೀಸ್ಥಾನವೂ ಅಲ್ಲ! ದೂರ ಪ್ರಾಚ್ಯದ ಯಹೂದಿ ರಾಷ್ಟ್ರವಲ್ಲ!

ಉ೦ಡ ಮನೆಯ ಪಕ್ಕಾಸುಗಳನ್ನೆಣಿಸುವ ಚೀನಾವೂ ಅಲ್ಲ...

ನಾವು ಬಾರತೀಯರು.. ಪುರಾತನರು... ಇನ್ನೂ ಏನೂ ಆಗಿಲ್ಲ...

ಹಳೆಯ ಕಸುವಿಗೆ ಗರ ಹಿಡಿದಿದೆ! ಅದಕ್ಕೆ ಅರ ಹಾಕಿ ಉಜ್ಜಬೇಕಿದೆ!

ಬೊಗಳುವುದು ಬೇಡ.. ಮೊದಲು ಗರ ಬಿಡಿಸುವ ಬೆತ್ತದ ಕೋಲನ್ನು ಹುಡುಕಿ!

ಅರವನ್ನು ತನ್ನಿ.. ಸಾಧನಾ ಪಥಗಳನ್ನು ಕ೦ಡುಹಿಡಿದ ಮೇಲೆ ನನ್ಮು೦ದೆ ಬನ್ನಿ

ನನಗಿನ್ನೂಪರೀಕ್ಷಿಸಬೇಕಿದೆ ನಮ್ಮಲ್ಲಿ ಇನ್ನೂ ಎಷ್ಟು ಕಸುವು ಬಾಕಿ ಇದೆಯೆ೦ದು ?

Rating
No votes yet

Comments

Submitted by kavinagaraj Fri, 05/29/2015 - 08:37

ಸಜ್ಜನಶಕ್ತಿಯನ್ನು ಸಂಘಟಿಸುವುದು ಸುಲಭವಲ್ಲ, ಆದರೆ ಇದು ಆಗಲೇಬೇಕಾದ ತುರ್ತು ಕೆಲಸ! ಇದನ್ನು ನೆನಪಿಸುವ ನಿಮ್ಮ ಬರಹ ಸಕಾಲಿಕ.