ಮಗು-ನಗು

ಮಗು-ನಗು

ಹುಣ್ಣಿಮೆಯ  ನವ
ನೀತ  ನಗು !
ಕುಹಕವನರಿಯದ
ಮೋಹಕ ನಗು !
ನಿದ್ದೆಯಲೂ ಹಾಲುಗ
ಲ್ಲದ ಸೂಜಿಗಲ್ಲ ನಗು !
ಅಳುವ ಮರೆತು
ಕ್ಷಣದಿ ನಗುವ ಮಗು !
ನೋಡುಗರ ಮೊಗ
ಮೊಗದಲ್ಲೂ ಪ್ರತಿಫಲಿ
ಸುವ ಹೊನ್ನ ನಗು !
ಸಾಂಕ್ರಾಮಿಕವಾಗಲಿ
ನಿನ್ನ ಸ್ನಿಗ್ಧ ನಗು !
ಮರೆಯಾಗದಿರಲಿ
ಈ ಅಮೋಘ ನಗು !
ಮೆರೆಯಲಿ ಎಂದೂ
ಈ ಮುಗ್ಧ ನಗು !

Rating
No votes yet