ಸುವರ್ಣ ಸಂಭ್ರಮದಲ್ಲಿ ‘ವಂಶವೃಕ್ಷ’ ಮತ್ತು ‘ಸಂಸ್ಕಾರ’ (ಭಾಗ-2)

ಸುವರ್ಣ ಸಂಭ್ರಮದಲ್ಲಿ ‘ವಂಶವೃಕ್ಷ’ ಮತ್ತು ‘ಸಂಸ್ಕಾರ’ (ಭಾಗ-2)

        ಸಾಹಿತ್ಯ ಸರಳವಾಗಬೇಕು ಸಹಜವಾಗಬೇಕು ಎನ್ನುವುದು ಒಟ್ಟಾರೆಯಾಗಿ ಒಂದು ಆಶಯ. 1960-70ರ ಕಾಲದಲ್ಲಿ ಕಾದಂಬರಿಗಳು ಜನಪ್ರಿಯವಾಗುತ್ತಿದ್ದಂತೆ ಅವುಗಳಲ್ಲಿ ಕೆಲವು ಸಿನೆಮಾ ರೂಪ ಪಡೆಯಲು ಪ್ರಾರಂಭಿಸಿದವು. ಸಂಸ್ಕಾರ ಮತ್ತು ವಂಶವೃಕ್ಷ ಕಾದಂಬರಿಗಳು ಚಿತ್ರಗಳಾಗಿ ಹೊಸ ಅಲೆಯ ಚಿತ್ರಗಳ ಸೃಷ್ಟಿ ಕನ್ನಡ ಚಲನಚಿತ್ರ ರಂಗದಲ್ಲಿ ಪ್ರಾರಂಭವಾಯಿತು. ಈ ಚಿತ್ರಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ ಹೊಸ ಅಲೆಯನ್ನು ಸೃಷ್ಟಿಸಿದವು. ಈ ಕೃತಿಗಳಿಂದ ಪ್ರಭಾವಿತರಾಗಿ ಸಿನೆಮಾಗಳನ್ನು ನೋಡಿದಂತೆ ಈ ಚಿತ್ರಗಳಿಂದ ಪ್ರಭಾವಿತರಾಗಿ ಕಾದಂಬರಿಗಳನ್ನು ಓದಿದವರೂ ಆಗ ಇದ್ದರು. ಈಗ್ಗೆ ಐವತ್ತು ವರ್ಷಗಳ ಹಿಂದೆ ಕಾದಂಬರಿಗಳ ಓದು ಸಮಯ ಕಳೆಯುವ ಒಂದು ಹವ್ಯಾಸ ಸಹ ಆಗಿತ್ತು. ಆ ಕಾಲದಲ್ಲಿ ಅನಂತಮೂರ್ತಿಯವರು ಸಂಸ್ಕಾರದ ನಾರಾಯಣಪ್ಪನೋ ಇಲ್ಲ ಪ್ರಾಣೇಶಾಚಾರ್ಯರೋ ಅಂದು ಸಮೀಕರಿಸಿ ನೋಡಿದವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದರು. ಈ ಕಾದಂಬರಿಯನ್ನು ಅನಂತಮೂರ್ತಿಯವರು ಯಾಕೆ ಬರೆದರು ಎನ್ನುವ ಜಿಜ್ಞಾಶೆ ನಡೆದ್ದೂ ಉಂಟು. ಬಹುಶಃ ಇಂಗ್ಲೀಷ್ ಪ್ರಾಧ್ಯಾಪಕ, ವಿದೇಶದಲ್ಲಿ ಓದಿದವರು ಮತ್ತು ಪಾಶ್ಚಾತ್ಯ ಸಾಹಿತ್ಯದೆಡೆಗೆ ಆಕರ್ಷಿಸಲ್ಪಟ್ಟ ಅವರು ಮಾನವ ಸಹಜ ಚಪಲ ಮತ್ತು ಕಾಮನೆಗಳನ್ನು ಕುರಿತು ಬರೆಯುವ ಅಗತ್ಯ ಆ ಕಾಲಕ್ಕೆ ಇತ್ತೋ ಏನೋ. 

     ಪ್ಲೇಗ್ ಕಾಯಿಲೆ ಬಂದು ಸತ್ತ ನಾರಾಯಣಪ್ಪನ ಹೆಣದ ನಿರೂಪಣೆಯ ಮೂಲಕ ‘ಸಂಸ್ಕಾರ’ ಕಾದಂಬರಿಯ ಪುಟ ತೆರೆದು ಕೊಳ್ಳುತ್ತ ಸಾಗುತ್ತದೆ. ಈ ಕಾದಂಬರಿಯ ಕಥಾ ನಾಯಕ ಪ್ರಾಣೇಶಾಚಾರ್ಯ ಸ್ವಾತಂತ್ರ ಪೂರ್ವದ ಅಗ್ರಹಾರವೊಂದರ ವೇದ ಶಾಸ್ತ್ರ ಪಾರಂಗತ ವೈದಿಕ ಪರಂಪರೆಯ ನಾಯಕ. ಇದಕ್ಕೆ ತದ್ವಿರುದ್ಧವಾಗಿ ನಾರಾಯಣಪ್ಪ ಪರಂಪರೆಯ ವಿರೋಧಿ ಪ್ರತಿ ನಾಯಕ ಎನ್ನಬಹುದಾದಂತಹ ವ್ಯಕ್ತಿತ್ವದವನು. ಈ ಕಾದಂಬರಿ ತನ್ನ ರೂಪಕ ಶಕ್ತಿಯ ಮೂಲಕ ಓದುಗನನ್ನು ವೈಚಾರಿಕತೆಯ ಕಡೆಗೆ ಹೊರಳಿಕೊಳ್ಳುವಂತೆ ಮಾಡುತ್ತದೆ. ಅಗ್ರಹಾರವೊಂದರ ಈ ಕಥೆ ಓದುಗನನ್ನು ತಟ್ಟುವುದು ಕಥಾವಸ್ತುವಿನ ಗಟ್ಟಿತನ ದಿಂದಾಗಿ ಹೀಗಾಗಿ ಲೇಖಕನಿಗೆ ಸಾವಿಲ್ಲ. ಈ ಕೃತಿಗೆ ಬಂದಷ್ಟು ಪರ ವಿರೋಧ ವಿಮರ್ಶೆ ಬೇರಾವ ಕನ್ನಡ ಕೃತಿಗೆ ಈ ವರೆಗೂ ಬಂದಿಲ್ಲ. ಭಾರತೀಯ ಮೂಲದ ಖ್ಯಾತ ವಿದೇಶಿ ಬರಹಗಾರ ವಿ.ಎಸ್.ನಯಪಾಲ್ ಈ ಕೃತಿ ಕುರಿತು ಬರೆಯುತ್ತ ಇದು ಹಿಂದೂ ಸಂಸ್ಕøತಿಯ ಅವನತಿಯನ್ನು ಬಿಂಬಿಸುತ್ತದೆ ಎನ್ನುತ್ತಾನೆ. ಇನ್ನೊಬ್ಬ ಖ್ಯಾತ ಮನ ಶಾಸ್ತ್ರಜ್ಞ ಎರಿಕ್ ಎರಿಕ್ಸನ್ ಭಾರತದ ಮಧ್ಯ ಕಾಲದ ತಾಕಲಾಟಗಳನ್ನು ಈ ಕೃತಿ ಸಮರ್ಥವಾಗಿ ಪ್ರತಿಪಾದಿಸುತ್ತದೆ ಎನ್ನುತ್ತಾನೆ. ಅಸ್ವಸ್ಥ ಮನಸ್ಥಿತಿಯಿಂದ ಸ್ವಾಸ್ಥ್ಯದ ಕಡೆಗೆ ಸಾಗಬೇಕು ಈ ಚಲನಶೀಲತೆ ಈ ಕೃತಿಗೆ ಇದೆ ಮತ್ತು ಕಾದಂಬರಿಕಾರರ ಬರವಣಿಗೆಗೆ ಒಂದು ಕಾವ್ಯದ ಗುಣವಿದೆ. ಅದು ಈ ಕೃತಿಯ ಓದಿನುದ್ದಕ್ಕೂ ಗೋಚರಿಸುತ್ತ ಹೋಗುತ್ತದೆ. 

     ಈ ಕಾದಂಬರಿಯ ಪ್ರತಿನಾಯಕ ನಾರಾಯಣಪ್ಪ ಅಗಾಧ ಜೀವನ ಪ್ರೇಮದ ವ್ಯಕ್ತಿ ಜೊತೆಗೆ ಪರಂಪರಾಗತ ಜಡ್ಡುಗಟ್ಟಿದ ಮೌಲ್ಯಗಳ ಕಟ್ಟಾ ವಿರೋಧಿ. ಆತನಿಗೆ ಮದುವೆಯಾಗಿದೆ ಆದರೆ ಹೆಂಡತಿಯೆಡೆಗೆ ಆತನ ಒಲವಿಲ್ಲ, ಆದರೆ ತುಂಬು ಮೈಯ ಚೆಲುವೆ ಚಂದ್ರಿ ಆತನನ್ನು ಆಕರ್ಷಿಸಿದ್ದಾಳೆ. ಆತ ವಾಸಿಸುವ ಅಗ್ರಹಾರದಲ್ಲಿ ಜಾತಿ ವ್ಯವಸ್ಥೆ ಎನ್ನುವುದು ಒಂದು ಸಂಕೀರ್ಣ ಕಟ್ಟೆಳೆಯಾಗಿ ಜೀವನದ ಓಟಕ್ಕೆ ತೊಡಕಾಗಿದೆ. ಅಗ್ರಹಾರದ ಗುರುರಾಜಾಚಾರ್ಯರ ಮಗ ಮಿಲಿಟರಿಗೆ ಹೋಗಿದ್ದಾನೆ ಅದಕ್ಕೆ ಕಾರಣ ನಾರಾಯಣಪ್ಪ ಎಂಬ ಗುಮಾನಿ ಇದೆ. ಅದೇ ರೀತಿ ನಾರಾಯಣಪ್ಪ ತನ್ನ ಹೆಂಡತಿಯ ಜೊತೆಗೆ ಸಂಸಾರ ಮಾಡುತ್ತಿಲ್ಲ ಚಂದ್ರಿಯ ಜೊತೆಗೆ ಇದ್ದಾನೆ. ಜೀವನವನ್ನು ಯಾವುದೆ ಕಟ್ಟೆಳೆÉಗಳ ಹಂಗಿಲ್ಲದೆ ಅನುಭವಿಸಬೇಕು ಎನ್ನುವ ಧೋರಣೆ ಆತನದು. ಕೆಲ ಹುಡುಗರು ಆತನನ್ನು ಮೆಚ್ಚಿದ್ದು ಅವನ ಅನುಯಾಯಿಗಳಾಗಿದ್ದಾರೆ ಇದು ಅಗ್ರಹಾರದ ಹಿರಿಯ ತಲೆಗಳಿಗೆ ಅರಗಿಸಿ ಕೊಳ್ಳಲಾಗದ ಸತ್ಯ ಹೀಗಾಗಿ ಆತ ಅಗ್ರಹಾರದ ಹುಡುಗರನ್ನು ಕೆಡಿಸುತ್ತಿದ್ದಾನೆ ಎಂಬ ಎಲ್ಲರ ಒಟ್ಟಾರೆಯಾದ ಅಭಿಪ್ರಾಯ. ಒಂದು ಸಲ ಪ್ರಾಣೇಶಾಚಾರ್ಯರು ಆತನಿಗೆ ಬುದ್ಧಿ ಹೇಳಲು ಹೊಗಿ ಅದು ಯಶಸ್ವಿಯಾಗದೆ ಮರಳಿ ಬಂದಿದ್ದಾರೆ. ಇವೆಲ್ಲ ಪ್ರಾಣೇಶಾಚಾರ್ಯರ ಮನದಲ್ಲಿ ಬಿಚ್ಚಿ ಕೊಳ್ಳುತ್ತ ಹೋಗುತ್ತಿವೆ. ಹೀಗಾಗಿ ಮೃತ ನಾರಾಯಣಪ್ಪ ಅಗ್ರಹಾರದ ಕಟ್ಟು ಪಾಡುಗಳು ನಿಯಮಗಳ ಅಡಿಯಲ್ಲಿ ಬದುಕಿಲ್ಲ ಹೀಗಾಗಿ ಆತನ ಅಂತ್ಯ ಸಂಸ್ಕಾರದ ಸಮಸ್ಯೆ ತಲೆದೋರಿದೆ. ನಾರಾಯಣಪ್ಪನ ಸಾವು ಆತನ ಸಂಬಂಧಿಕರ ವಲಯದಲ್ಲಿ ಭಿನ್ನ ಬಿನ್ನ ರೀತಿಯಲ್ಲಿ ಆತನ ವ್ಯಕ್ತಿತ್ವ ನಡೆದದು ಕೊಂಡ ರೀತಿಗಳ ಕುರಿತು ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಪ್ರಾಣೇಶಾಚಾರ್ಯರ ಮನೆಗೆ ಅಗ್ರಹಾರದ ಅನೇಕರು ನಾರಾಯಣಪ್ಪ£ ಶವ ಸಂಸ್ಕಾರದ ಕುರಿತು ಸಲಹೆ ಕೇಳಲು ಬಂದಿದ್ದಾರೆ. ಅವರರಿಗೂ ಈ ಸಾವು ಸಮಸ್ಯೆಯಾಗಿ ಕಾಡುತ್ತಿದೆ. ಶವ ಸಂಸ್ಕಾರವಾಗುವ ವರೆಗೂ ಯಾರೂ ಊಟ ತಿಂಡಿ ಏನೂ ಮಾಡುವಂತಿಲ್ಲ. ಅವರೆಲ್ಲರಿಗೂ ಪ್ರಾಣೇಶಾಚಾರ್ಯರು ತಾನು ಧರ್ಮ ಗ್ರಂಥಗಳಲ್ಲಿ ಇದಕ್ಕೆ ಪರಿಹಾರ ನೋಡುವುದಾಗಿ ಆಶ್ವಾಸನೆ ನೀಡಿ ಕಳಿಸಿ ಕೊಟ್ಟಿದ್ದಾರೆ. 

      ಬೆಳಗಿನ ವರೆಗೂ ಹುಡುಕಿದರೂ ಯಾವ ಪರಿಹಾರವೂ ದೊರೆಯಲಿಲ್ಲ. ಮತ್ತೆ ಬಂದ ಅಗ್ರಹಾರದ ಜನಕ್ಕೆ ತಮಗೆ ಪರಿಹಾರ ಕಂಡು ಹಿಡಿಯಲಾಗಿಲ್ಲವೆಂದೂ ಗ್ರಾಮದ ದೇವರು ಮಾರುತಿಯಲ್ಲಿ ಪ್ರಸಾದ ಕೇಳಲು ಹೋಗುತ್ತಾರೆ. ಆದರೆ ಎಷ್ಟು ಸಮಯ ಕಾದರೂ ಪ್ರಸಾದ ಆಗುವುದಿಲ್ಲ. ಅಗ್ರಹಾರದ ಪ್ರಮುಖರಿಗೆ ಶ್ರೀ ಮಠದ ಸ್ವಾಮಿಗಳಲ್ಲಿಗೆ ಹೋಗಿ ಈ ಬಗೆಗೆ ಸಲಹೆ ಕೇಳಲು ಕಳಿಸುತ್ತಾರೆ. ತಮ್ಮ ಹೆಂಡತಿ ಕಾಯಿಲೆಯ ಹೆಣ್ಣು ಮಗಳಾಗಿದ್ದು ಆಕೆಯ ಆರೈಕೆ ಮಾಡಲು ತಾವು ಅಗ್ರಹರದಲ್ಲಿ ಉಳಿದಿದರುವುದಾಗಿ ಸ್ವಾಮಿಗಳಲ್ಲಿ ಬಿನ್ನವಿಸುವಂತೆ ಹೇಳಿ ಕಳಿಸಿದ್ದಾರೆ. ಇತ್ತ ಒಂದು ವಿಚಿತರ್ರಕರ ಸನ್ನಿವೇಶದಲ್ಲಿ ಪ್ರಾಣೇಶಾಚಾರ್ಯರು ಚಂದ್ರಿ ಸಂಬಂಧ ಬೆಳೆಸುತ್ತಾರೆ. ಅವರ ದಾರ್ಮಿಕ ನಂಬಿಕೆಗಳು ಸಡಿಲವಾಗುತ್ತ ಸಾಗುತ್ತವೆ. ಮನೆಗೆ ಬಂದು ನೋಡಿದರೆ ಅವರ ಹೆಂಡತಿ ಭಾಗೀರಥಿ ಮೃತ ಪಟ್ಟಿರುತ್ತಾಳೆ. ಚಕ್ಕಡಿಯಲ್ಲಿ ಆಕೆಯ ಶವವನ್ನು ಒಯ್ದು ಅಂತ್ಯ ಸಂಸ್ಕಾರ ಜರುಗಿಸಿ ಪ್ರಾಣೇಶಾಚಾರ್ಯರು ಅಗ್ರಹಾರ ತೊರೆಯುತ್ತಾರೆ. ಗೊತ್ತು ಗುರಿಯಿಲ್ಲದ ಅವರ ಪಯಣದಲ್ಲಿ ಮಾತುಗಾರ ಮತ್ತು ನೇರ ನಡೆ ನುಡಿಯ ಸಹೃದಯಿ ಮಾಲೇರ ಪುಟ್ಟ ದೊರೆಯುತ್ತಾನೆ. ಮರವನ್ನೂ ಸಹ ಮಾತನಾÀಡಿಸಬಲ್ಲ ಆತನ ಜೊತೆ ಅವರ ಮೌನ ಕೆಲಸ ಮಾಡುವುದಿಲ್ಲ. ಅವರನ್ನು ಪುಟ್ಟ ಪೂರ್ತಿಯಾಗಿ ತನ್ನ ವಶವರ್ತಿಯನ್ನಾಗಿ ಮಾಡಿಕೊಂಡು ಬಿಡುತ್ತಾನೆ. ಅಗ್ರಹಾರ ಬಿಟ್ಟು ಹೊರ ಜಗತ್ತಿನ ಪರಿಚಯವಿಲ್ಲದ ಅವರಿಗೆ ಪುಟ್ಟನ ಸಾಂಗತ್ಯದಲ್ಲಿ ಹೊರ ಜಗತ್ತಿನ ದರ್ಶನವಾಗುತ್ತ ಸಾಗುತ್ತದೆ. ಅವರಿಗೆ ದಾರಿಯಲ್ಲಿ ಅಡ್ಡಲಾಗಿ ಅಕಸ್ಮಾತ ಒಂದು ನಾಗರ ಹಾವು ಕಾಣಿಸಿಕೊಳ್ಳುತ್ತದೆ. ಅದು ವಿಷ ಜಂತು ಯಾರಿಗಾದರೂ ಕಚ್ಚಿ ಅನಾಹುತವಾಗಬÀಹುದು ಅದನ್ನು ಪುಟ್ಟ ಒಂದು ಬಡಿಕೆಯನ್ನು ಹುಡುಕಿ ಅದರಿಂದ ಬಡಿದು ಆ ಹಾವನ್ನು ಸಾಯಿಸಿ ಕಟ್ಟಿಗೆಯನ್ನು ಒಟ್ಟು ಮಾಡಿ ಅದನ್ನು ಸುಟ್ಟು ಸಂಸ್ಕಾರ ಮಾಡಿ ಮುಂದೆ ಸಾಗುತ್ತಾನೆ. ಪ್ರಾಣೇಶಾಚಾರ್ಯರಿಗೆ ಆತನ ನಿಲುವು ನಿರ್ಧಾರಗಳು ಅಚ್ಚರಿ ಮೂಡಿಸುತ್ತವೆ. ತಮ್ಮ ನಡುವೆ ಬಾಳಿ ಸತ್ತು ಹೊದ ಒಬ್ಬ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಲಗದ ತಾವೆಲ್ಲಿ ಸಂಸ್ಕಾರ ಕ್ರಿಯೆಯನ್ನು ಎಷಷ್ಟು ಸರಳವಾಗಿ ಪುಟ್ಟ ಬಗೆಹರಿಸಿದ ಎಂದು ಅವರು ಆಶ್ಚರ್ಯ ಚಕಿತರಾಗುತ್ತಾರೆ. 

     ಹೋಗುವ ಮಾರ್ಗ ಮಧ್ಯದಲ್ಲಿ ಒಂದು ತೊರೆಯ ಹತ್ತಿರ ಸ್ನಾನ ಮಾಡುತ್ತಿರುತ್ತಾಳೆ, ಪ್ರಾಣೇಶಾಚಾರ್ಯರ ಗಮನ ಕೆಲ ಕ್ಷಣ ಆಕೆಯ ಕಡೆಗೆ ಹರಿಯುತ್ತದೆ. ಒಂದು ಕ್ಷಣ ಅದನ್ನು ಗಮನಿಸಿದ ಪುಟ್ಟ ಅದನ್ನು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಂಡು ಅವರನ್ನು ಪದ್ಮಾವತಿಯ ಮನೆಗೆ ಕರೆದೊಯ್ಯುತ್ತಾನೆ. ಅದನ್ನು ಸೂಕ್ಷ್ಮ ರೀತಿಯಲ್ಲಿ ಗಮನಿಸಿದ ಪ್ರಾಣೇಶಾ ಚಾರ್ಯರು ಆ ಸ್ಥಳದ ಮುಜುಗರದಿಂದ ತಪ್ಪಿಸಿಕೊಳ್ಳು ಅಲ್ಲಿಂದ ಹೊರಟು ಬಂದು ಬಿಡುತ್ತಾರೆ, ಅವರು ಎಲ್ಲಿಗೆ ಹೋದರು ದೂರ್ವಾಸಪುದರದ ಅಗ್ರಹಾರಕ್ಕೆ ಹೋದರೆ, ಕುಂದಾಪುರದ ಚಂದ್ರಿಯನ್ನು ಹುಡುಕಿಕೊಂಡು ಹೋದರೆ ಅದು ಓದುಗನ ಗ್ರಹಿಕೆಗೆ ಬಿಟ್ಟದ್ದು. ವ್ಯಕ್ತಿ ನಿಷ್ಟೆ ಬದಲಾವಣೆಯ ಜೊತೆಗೆ ಮನುಷ್ಯನ ಒಳ ಹೊರಗನ್ನು ಶೋಧಿಸಿದವರು ಅನಂತಮೂರ್ತಿ ಆ ಕಾರಣಕ್ಕಾಗಿ ಈ ಕೃತಿ ಶ್ರೇಷ್ಟವಾದುದು. ಈ ಮೊದಲು ಚಂದ್ರಿ ಬೇರೆ ತನಗೆ ಪರಿಷಿತರ ಸಹಯದಿಂದ ನಾರಾಯಣಪ್ಪನ ಶವ ಸಂಸ್ಕಾರ ನೆರವೇರಿಸಿ ಆತನ ಋಣ ತೀರಿಸಿದ ನಿಷ್ಟಳು ಆಕೆ. 

     ಅನಂತ ಮೂರ್ತಿಯವರು ಅಲ್ಲಲ್ಲಿ ಚುಕ್ಕಿಗಳನ್ನಿಟ್ಟು ರಂಗೋಲಿಯ ಹಂದರ ನಿರ್ಮಿಸಿದ್ದಾರೆ, ಎಳೆಗಳನ್ನು ಓದುಗರೆ ಎಳೆಯಬೇಕು ಈ ಮಾತು ಭೈರಪ್ಪನವರ ವಂಶವೃಕ್ಷಕ್ಕೂ ಅನ್ವಯಿಸುತ್ತದೆ. ರಂಗೋಲಿಯ ಹಂದರ ಹಾಗೆಯೆ ಉಳಿದಿದೆ. ಈ ಐವತ್ತು ವರ್ಷಗಳ ದೀóರ್ಘ ಕಾಲಾವಧಿಯಲ್ಲಿ ಓದುಗರು ತಮಗೆ ತೋÀಚಿದ ರೀತಿಯಲ್ಲಿ ಎಳೆಗಳನ್ನು ಎಳೆಯುತ್ತ ಅವುಗಳನ್ನು ಅರ್ಥೈಸುತ್ತ ಬಂದಿದ್ದಾರೆ. ರಂಗೋಲಿಯ ಹಂದರ ಹಾಗೆಯೆ ಇದೆ ಮುಂದೆಯೂ ಇರುತ್ತದೆ, ಮುಂದೆ ಬರುವ ಹೊಸ ಹೊಸ ಪೀಳಿಗೆಯ ಓದುಗರು ಆ ಚುಕ್ಕಿಗಳ ಜೊತೆಗೆ ಆಟವಾಡುತ್ತ ಅವರವರಿಗೆ ತೋಚಿದಂತೆ ಎಳೆಗಳನು ಎಳೆಯುತ್ತ ರಂಗೋಲಿಯನ್ನು ಬೆರಗಿನಿಂದ ನೋಡುತ್ತ ಆಸ್ವಾದಿಸುತ್ತ ಅರ್ಥೈಸುತ್ತ ಸಾಗುತ್ತಾರೆ. ಕಾದಂಬರಿಕಾರರು ತಮ್ಮ ಕೃತಿ ಗಳಲ್ಲಿ ಎತ್ತಿದ ತಾತ್ವಿಕ ಪ್ರಶ್ನೆಗಳು ಸಾರ್ವಕಾಲಿಕ. ಹೀಗಾಗಿ ಅವುಗಳು ಕಾಲದ ಒಟದಲ್ಲಿ ಇಲ್ಲವಾಗದೆ ಎಲ್ಲ ಕಾಲಕ್ಕೂ ಪ್ರಸ್ತುತವಾಗಿ ಉಳಿಯುವಂತಹವು. ಇನ್ನು ಐವತ್ತು ವರ್ಷಗಳ ನಂತರ ಆ ಕೃತಿಗಳು ಶತಮಾನೋತ್ಸವ ಆಚರಿಸ ಬಹುದು ಆ ಗಟ್ಟಿತನ ಕೃತಿಗಳಿಗಿದೆ. 

                                                              (ಮುಗಿಯಿತು)

                                   *

 

Rating
No votes yet

Comments

Submitted by nageshamysore Wed, 09/30/2015 - 01:17

ಪಾಟೀಲರಿಗೆ ನಮಸ್ಕಾರ. ಮೊದಲ ಕಂತಿನ ಹಾಗೆ ವಿಶಿಷ್ಠ ಮಾಹಿತಿಯನ್ನು ಒಂದೆಡೆ ಕಲೆಹಾಕಿ ಅದನ್ನು ಕಥಾಸಾರದ ಜೊತೆ ಬಡಿಸಿದ ರೀತಿ ಮನನೀಯ. ಸಾರದಲ್ಲಿ ಓದುತ್ತಿದ್ದರೆ ಹಿಂದೆ ಓದಿದ್ದ ಪೂರ್ಣ ಕಥಾನಕದ ನೆನಪಿನ ತುಣುಕುಗಳು ಮರುಕಳಿಸಿ, ಮತ್ತೆ ಆ ಪಾತ್ರ, ಸನ್ನಿವೇಶಗಳನ್ನು ಕಣ್ಮುಂದೆ ಕಟ್ಟಿ ತಂದು ನಿಲ್ಲಿಸಿಬಿಟ್ಟವು. ಮತ್ತೆ ಸೊಗಸಾದ ಸಾರ ಲೇಖನಕ್ಕೆ ಧನ್ಯವಾದಗಳು.

ನಾಗೇಶ ಮೈಸೂರುರವರಿಗೆ ವಂದನೆಗಳು ಬರಹದ ಮೆಚ್ಚುಗೆಗೆ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by swara kamath Mon, 10/05/2015 - 20:06

ಶ್ರೀಯುತ ಪಾಟೀಲರೆ ನಮಸ್ಕಾರಗಳು.
ಸುವರ್ಣ ಸಂಭ್ರಮ ಆಚರಿಸಿಕೊಳ್ಳುತ್ತಿರುವ ಖ್ಯಾತ ಲೇಖಕರ ಈ ಎರಡು ಕೃತಿಗಳು ನೀವಂದಂತೆ ಮುಂದೆ ಬರುವ ಹೊಸ ಹೊಸ ಪೀಳಿಗೆಯ ಓದುಗರು ಲೇಖಕರು ನಿರ್ಮಿಸಿದ ಈ ಕೃತಿಗಳ ಚುಕ್ಕಿಗಳ ರಂಗೋಲಿಯ ಹಂದರ ಜೊತೆಗೆ ಆಟವಾಡುತ್ತ ಅವರವರಿಗೆ ತೋಚಿದಂತೆ ಎಳೆಗಳನು ಎಳೆಯುತ್ತ ರಂಗೋಲಿಯನ್ನು ಬೆರಗಿನಿಂದ ನೋಡುತ್ತ ಆಸ್ವಾದಿಸುತ್ತ ಅರ್ಥೈಸುತ್ತ ಸಾಗುವುದಂತು ಖಂಡಿತ.ತಮ್ಮ ಈ ಸಕಾಲಿಕ ಲೇಖನದ ಭಾಗಗಳಲ್ಲಿ ಚಿಕ್ಕದಾಗಿ ಚೊಕ್ಕವಾಗಿ ಪಾತ್ರಗಳನ್ನ ವಿಮರ್ಶಿಸುತ್ತಾ ಸಾಗುವಾಗ ನನ್ನ ಮನಃಪಟಲದಲ್ಲಿ ಎರಡು ಕಾದಂಬರಿಗಳನ್ನು ಓದಿದ ಹಾಗು ಅವುಗಳ ಚಿತ್ರಗಳನ್ನು ಸಹ ನೋಡಿದ ನೆನಪು ಹಾದುಹೋಯಿತು.
ವಂದನೆಗಳು.

ರಮೇಶ ಕಾಮತರಿಗೆ ವಂದನೆಗಳು
ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆ ಓದಿ ಸಂತಸವಾಯಿತು ಅದಕ್ಕೂ ಮಿಗಿಲಾಗಿ ಸಂಪದಕ್ಕೆ ಮರಳಿದ್ದು ಹೆಚ್ಚು ಖುಷಿ ನೀಡಿತು,ಹೀಗೆಯೆ ತಮ್ಮ ಸಂಪದ ಬೇಟಿ ಮುಂದುವರಿಯಲಿ ತಮ್ಮ ಓದು ಮತ್ತು ಪ್ರತಿಕ್ರಿಯಿಸುವ ರೀತಿ ಓದುಗರಿಗೆ ಒಂದು ರೀತಿಯ ಟಾನಿಕ್‌ ಇದ್ದಂತೆ,ಧನ್ಯವಾದಗಳು.

Submitted by lpitnal Tue, 10/06/2015 - 22:17

ಆತ್ಮೀಯ ಪಾಟೀಲ್ ಸರ್, ತಮ್ಮ ಸಂಸ್ಕಾರ ಹಾಗೂ ವಂಶವೃಕ್ಷಗಳ ತುಲನಾತ್ಮಕ ವಿಮರ್ಶಾ ಲೇಖನಗಳು ಅದ್ಭುತವಾಗಿ ಬಂದಿವೆ. ನಮಗೆಲ್ಲ ಅವುಗಳ ಸ್ಥೂಲ ಪರಿಚಯದೊಂದಿಗೆ ಅಂದಿನ ಕಾಲದ ಒಳಾತ್ಮಗಳ ದರ್ಶನಗೈದಿದ್ದೀರಿ. ಚುಕ್ಕೆಗಳ ರಂಗೋಲಿಗಳಲ್ಲಿ ನಮಗೆ ಬೇಕಾದಂತೆ ಗೆಳೆ, ಎಳೆಗಳನ್ನು ಜೋಡಿಸಿ, ಆನಂದಪಡುತ್ತ ನಮಗೆ ತೋಚಿದ ದಿಶೆಗಳಲ್ಲಿ ಯೋಚನೆಗೆ ಹಚ್ಚುವ ಬಗೆಗೆ ಬರೆದ ಸಾಲುಗಳು ತುಂಬ ಮೆಚ್ಚುಗೆಯಾದವು. ತುಂಬ ಸಶಕ್ತ ವಿಶ್ಲೇಷಣಾತ್ಮಕ ಬರಹಗಳು. ಬರೀ ಮೆಚ್ಚುಗೆಯಾಯಿತು ಎನ್ನುವುದು ಕ್ಲೀಷೆ ಪದವಾಗುತ್ತದೆ, ಉತ್ಕೃಷ್ಟ ಬರಹ. ಸಂಪದಕ್ಕೆ ಇಂತಹ ಲೇಖನ, ಲೇಖಕರು ಕಳಸಪ್ರಾಯ. ವಂದನೆಗಳು.

ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
ಅನಾರೋಗ್ಯದ ಕಾರಣದಿಂದಾಗಿ ಸಂಪದಕ್ಕ ಬರಲಾಗಿರಲಿಲ್ಲ ಇಂದು ತಮ್ಮ ಪ್ರತಿಕ್ರಿಯೆ ಓದಿದೆ ಸ್ತೂಲವಾಗಿ ಆ ಕಾದಂಬರಿಗಳನ್ನು ಕುರಿತು ಬರೆದ ಲೇಖನ ಅದನ್ನು ಮೆಚ್ಚಿದ್ದೀರಿ ಇನ್ನೂ ಬರೆಯಬಹುದಿತ್ತೇನೋ ಅದರೆ ಎಂದಿನ ಸೋಮಾರಿತನದಿಂದಾಗಿ ಮೇಲ್ಮಟ್ಟದ ಗ್ರಹಿಕೆಯಲ್ಲಿಯೆ ಲೇಖನ ಬಂದಿದೆ, ಮೆಚ್ಚುಗೆಗೆ ಧನ್ಯವಾದಗಳು.

Submitted by kavinagaraj Thu, 10/08/2015 - 20:51

ನಮಸ್ತೆ, ಪಾಟೀಲರೇ. ನಿಮ್ಮ ಲೇಖನದ ಎರಡು ಕಂತುಗಳನ್ನೂ ಇಂದು ಓದಿದೆ. ಮತ್ತೊಮ್ಮೆ ಸಂಸ್ಕಾರ ಮತ್ತು ವಂಶವೃಕ್ಷಗಳನ್ನು ನೆನಪಿಸಿಕೊಳ್ಳುವಂತೆ ಮತ್ತು ಮರೆಯಲಾಗದಂತೆ ಕಥೆಯ ಎಳೆಗಳನ್ನು ನಮ್ಮ ಮುಂದಿರಿಸಿ ಒಳ್ಳೆಯ ಕೆಲಸ ಮಾಡಿರುವಿರಿ. ನಿರೂಪಣೆ ಉತ್ತಮ ಮಟ್ಟದ್ದಾಗಿದ್ದು ನಿಮ್ಮ ಶ್ರಮ ಅಭಿನಂದನೀಯ.

ಕವಿ ನಾಗರಾಜರವರಿಗೆ ವಂದನೆಗಳು
ವಂಶವೃಕ್ಷ ಮತ್ತು ಸಂಸ್ಕಾರ ನನ್ನನ್ನು ಬಹಳ ಕಾಡಿದ ಕಾದಂಬರಿಗಳು ಮತ್ತು ಗಂಭೀರ ಓದಿಗೆ ನನ್ನನ್ನು ಪ್ರೇರೇಪಿಸಿದ ಕೃತಿಗಳು. ಅವು ಪ್ರಕಟಗೊಂಡು ಅರ್ದ ಶತಮಾನ ಪೂರೈಸಿರುವ ಈ ಸಂಧರ್ಭದಲ್ಲಿ ಅವುಗಲ ಕುರಿತು ಸಂಪದದಲ್ಲಿ ಬರೆಯ ಬೇಕೆನಿಸಿತು ಆ ಸಂಧರ್ಭದಲ್ಲಿ ಮೂಡಿ ಬಂದ ಲೇಖನ ಮೆಚ್ಚುಗೆಗೆ ಧನ್ಯವಾದಗಳು.