ಹೀಗೊಂದು ಸುಪ್ರಭಾತ

ಹೀಗೊಂದು ಸುಪ್ರಭಾತ

ಹೀಗೊಂದು ಸುಪ್ರಭಾತ

ಅದು ಹೃದಯ ಬಡಿತದಂತೆ
ನಿಂತರೆ ಕತೆ ಮುಗಿದಂತೆ|

ನನ್ನೊಳಗೇ ಇರುವ 
ನಿನ್ನ ನೆನಪಲ್ಲೇ ಇರುವ ನನಗೆ
ಬೇರೆ ಪೂಜೆ ಬೇಕೆ?
ಮಲಗದೇ ಇರುವವನ
ಎಚ್ಚರಿಸಬೇಕೇ?

ಎಲ್ಲೆಡೆಯೂ ಇರುವ ನೀನು
ಎನ್ನೆದೆಯ ಗುಡಿಯಲ್ಲಿ
ಜಾಗ ಪಡೆಯಲಾರೆ ಏನು
ನಿನ್ನ ಹೇಗೆ ಮರೆಯಲಿ ನಾನು?

ದಿನಕ್ಕೊಮ್ಮೆ ಧ್ಯಾನಿಸುವವರು
ಹೇಳಿಕೊಳ್ಳಲಿ ಸುಪ್ರಭಾತ
ಮಲಗದ ನಿನ್ನನ್ನು ಎಚ್ಚರಿಸಲಾರೆ ನಾನು||

ನಿನಗೆಲ್ಲಿ ಹಸಿವು
ಆದರೂ ನೀಡುವೆವು ನೈವೇದ್ಯ ನಾವು
ನಿತ್ಯಶುದ್ಧನ ಮೈತೊಳೆಯುವೆವು ನಾವು|

ಇರುವ ಒಬ್ಬನ 
ಸಾವಿರ ಹೆಸರಲಿ ಕರೆಯುವೆವು ನಾವು|
ಆದರೂ ನೀನು " ಓ" ಎನ್ನಲೇ ಇಲ್ಲ
ಅನ್ನ ಬೇಕಿಲ್ಲ|
ನೀನಂದರೂ ನಮಗೆ ಕೇಳುವ ಸಾಮರ್ಥ್ಯವಿಲ್ಲ||

ನಿನ್ನ ಬೆಳಕಲೇ ಇದ್ದು
ಬೆಳಕ ತೋರಿಸುವೆವು ನಿನಗೆ
ನೀ ಕೊಟ್ಟಿದ್ದನ್ನೇ ನಿನ್ನ ಮುಂದಿಟ್ಟು
ಹರಕೆ ತೀರಿಸುವೆವು||

ಇದು ನಮ್ಮಾಟವೋ
ನಿನ್ನಾಟವೋ
ಅಂತೂ ಮಕ್ಕಳಾಟವ
ಆಡಿಸುತ್ತಿರುವೆಯಲ್ಲಾ ನೀನು|

Rating
No votes yet