ಹೊಸ ನಗೆಹನಿ- ೫೨ ನೇ ಕಂತು

ಹೊಸ ನಗೆಹನಿ- ೫೨ ನೇ ಕಂತು

- ಇವರೆಲ್ಲ ನಿನ್ನ ರಕ್ತ ಸಂಬಂಧಿಗಳಲ್ಲವೇ?
- ಹೌದು , ಹಾಗಂತಲೇ ಇವರೆಲ್ಲ ನನ್ನ ರಕ್ತ ಹೀರುತ್ತಿರೋರು.

******

- ಚಿನ್ನ, ನನ್ನ ಅಪ್ಪ ನನಗೆ ಆಸ್ತಿ ಬಿಟ್ಟಿರದಿದ್ದರೆ ನನ್ನನ್ನ ಮದುವೆ ಆಗುತ್ತಿದ್ದೆಯ?
- ಖಂಡಿತ, ರೀ, ಯಾರೇ ನಿಮಗೆ ಆಸ್ತಿ ಬಿಟ್ಟು ಕೊಟ್ಟಿದ್ದರೂ ನಿಮ್ಮನ್ನ ಮದುವೆ ಆಗುತ್ತಿದ್ದೆ!

******

- ನಾನು ಮತ್ತು ನನ್ನ ಹೆಂಡತಿ ಇಪ್ಪತ್ತು ವರುಷ ಸುಖವಾಗೇ ಇದ್ದೆವು.
- ಆಮೇಲೆ ?
- ನಾವು ಮದುವೆ ಆದೆವು!

******

- ಒಬ್ಬ ಮೂರ್ಖನನ್ನು ಸಸ್ಪೆನ್ಸಿನಲ್ಲಿಡೋದು ಹೇಗೆ ?
- ಅದನ್ನ ಆ ಮೇಲೆ ಹೇಳುತ್ತೀನಿ.

Rating
No votes yet