ಹೊಸ ನಗೆಹನಿ- ೫೩ ನೇ ಕಂತು

ಹೊಸ ನಗೆಹನಿ- ೫೩ ನೇ ಕಂತು

ಒಬ್ಬ ವಿಜ್ಞಾನಿ ಮತ್ತು ಒಬ್ಬ ತತ್ವಜ್ಞಾನಿಗಳನ್ನು ಒಂದು ಸಿಂಹ ಬೆನ್ನು ಹತ್ತಿತ್ತು . ವಿಜ್ಞಾನಿ ಹಿಂತಿರುಗಿ ನೋಡಿ ಬೇಗ ಬೇಗ ಲೆಕ್ಕ ಹಾಕಿ ತತ್ವಜ್ಞಾನಿಗೆ ಹೇಳಿದ - ನಾವು ಸಿಂಹವನ್ನು ಹಿಂದೆ ಹಾಕಲು ಸಾಧ್ಯವಿಲ್ಲ.
ತತ್ವಜ್ಞಾನಿ ಹೇಳಿದ- ನಾನು ಹಿಂದೆ ಹಾಕಲು ಪ್ರಯತ್ನಿಸ್ತಿ ರೋದು ಸಿಂಹವನ್ನಲ್ಲ , ನಿನ್ನನ್ನು !

*****

ಅವರಿವರ ಬಗ್ಗೆ ಆಡಿಕೊಳ್ಳುವ ಅವಳು ಅವನ ಬಗ್ಗೆ ಹೇಳಿದಳು - ಅವನು ಮಹಾ ಕುಡುಕ , ಅವನ ಕಾರು ಸೆರೆಯಂಗಡಿಯ ಮುಂದೆ ನಿನ್ನೆ ಇಡೀ ದಿನ ನಿಂತಿತ್ತು.
ಅವನ ಕಿವಿಗೆ ಇದು ಬಿತ್ತು. ಅವಳತ್ತ ದುರುಗುಟ್ಟಿ ನೋಡಿದ.
ಅವತ್ತು ರಾತ್ರಿ ತನ್ನ ಕಾರನ್ನು ಅವಳ ಮನೆ ಮುಂದೆ ನಿಲ್ಲಿಸಿ ಹೋಗಿ ಬಿಟ್ಟ!!

*****

ನಾಣ್ಯ ಹಾಕಿದಾಗ ಬಂದ ತೂಕ ಮತ್ತು ಭವಿಷ್ಯದ ಕಾರ್ಡ್ ತೋರಿಸಿ ಗಂಡ ಹೇಳಿದ - ನೋಡೇ , ಇಲ್ಲಿ ಏನು ಬರೆದಿದೆ ಅಂತ? ನೀವು ಶೂರರು, ಧೀರರು , ಸಜ್ಜನರು ಮತ್ತು ಪ್ರಾಮಾಣಿಕರು.
ಹೆಂಡತಿ - ರೀ , ಅದು ತೂಕವನ್ನು ಕೂಡ ತಪ್ಪು ತೋರಿಸ್ತಿದೆ!

*****

" ಈ ದಿನ ನನ್ನ ಜೀವನದಲ್ಲಿ ತುಂಬ ಮಹತ್ವದ್ದು , ಸರಿಯಾಗಿ ಎರಡು ವರ್ಷಗಳ ಹಿಂದೆ ಇದೇ ದಿನ ನಾನು ನನ್ನ ಹೆಂಡತಿಯನ್ನು ಕಳಕೊಂಡೆ, ಆ ಜೂಜಿನ ಆಟವನ್ನು ಎಂದೂ ಮರೆಯಲಾರೆ " - ಯಾರೋ ಹೇಳಿದ್ದು!

Rating
No votes yet