೧೮ ನೆಯ ತಾ. ೨೦೧೮ ರಂದು ಪ್ರಸಾರವಾದ (೧೨೨ ನೆಯ ಎಪಿಸೋಡ್) ಮಗಳು ಜಾನಕಿಯ ಸಾರಾಂಶ :

೧೮ ನೆಯ ತಾ. ೨೦೧೮ ರಂದು ಪ್ರಸಾರವಾದ (೧೨೨ ನೆಯ ಎಪಿಸೋಡ್) ಮಗಳು ಜಾನಕಿಯ ಸಾರಾಂಶ :

 
(ಇದು ನನಗೆ ತಿಳಿದಂತೆ, ಯಾವಪೂರ್ವಗ್ರಹವೂ ಇಲ್ಲದೆ  ಬರೆದದ್ದು)
 
ಕೇವಲ ೧೦ ಸಾ. ರೂಗಳಿಗೆ ಸಿಕ್ಕ ಬಂಗಲೆ/ಬಾಡಿಗೆ ಮನೆಯನ್ನು ನೋಡಿ ಪರಿವಾರದವರು ಸಂತೋಷಡುತ್ತಾರೆ. ಮೊದಲನೆಯ ದಿನ, ಹಾಲುಕ್ಕಿಸಿದ ಶಾಸ್ತ್ರ ಮಾಡಿ ಮನೆಗೆ ಇಳಿದುಕೊಳ್ಳುವ ಶಾಸ್ತ್ರ ಚೆನ್ನಾಗಿ ಬಂದಿದೆ. ಅನಂತಮಾವ ಎಂತಹ ವ್ಯಕ್ತಿ ಎನ್ನುವುದು ತಿಳಿಯುತ್ತದೆ. 
 
ಮುಂದಿನ ದಿನಗಳಲ್ಲಿ ಪ್ರಭಂಜನ ಬಂಕಾಪಟ್ಣ ಅನ್ನೋ ಹಳ್ಳಿಯಲ್ಲಿ ಅವರ ಸೈಟ್ ನಲ್ಲಿ ಕೆಲಸಮಾಡಬೇಕಾಗುತ್ತೆ. ಮನೆಗೆ ಬರಲೂ ಸಾಧ್ಯವಾಗದಷ್ಟು ಸಮಯ ವಿಲ್ಲದಂತಹ ಕೆಲಸ. ಪ್ರಭಂಜನ ಅಮ್ಮನಿಗೆ ಹಣದ ಸಹಾಯ ಮಾಡುತ್ತಾನೆ. ನಿರಂಜನನೂ ಸಹಾಯ ಮಾಡಬಹುದು.
 
ದೇವಘಟ್ಟದಲ್ಲಿ ಶಂಕರದೇವಘಟ್ಟ ರವರ ಅಫೀಸ್ : 
 
ಬಾರ್ಗಿ, ಸುಹಾಸ್ ದೇವಘಟ್ಟ, ಮತ್ತು ಶಂ ದೇವಘಟ್ಟ, ಪಿ. ಎ ಜಾನಕಿ ಕುಳಿತಿದ್ದಾರೆ. ಬಾರ್ಗಿ ಮತ್ತು ಸುಹಾಸ್ ೨ ದಿನಗಳ ಹಿಂದೆ ನಡೆದ ಮೀಟಿಂಗ್ ನಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ತಂದೆ, ಶಂಕರ ದೇವಘಟ್ಟರಿಗೆ ಮನವರಿಕೆ ಮಾಡಿಸುತ್ತಿದ್ದಾರೆ. 
ಚಂದು ಬಾರ್ಗಿ ಉಪಾಯವಾಗಿ ತಮ್ಮ ಕಡೆಯಿಂದ ಇಬ್ಬರು ಟ್ರಸ್ಟಿಗಳನ್ನು ನೇಮಿಸುತ್ತಾರೆ. ಹಳೆಯ ೩ ಜನ ಟ್ರಸ್ಟಿಗಳನ್ನು ಲಂಚ ಕೊಟ್ಟು ರಾಜೀನಾಮೆ ಮೊದಲು ಪ್ರೇರಣೆ ಮಾಡಿದ್ದಾರೆ. ಸುಹಾಸ್ ಜೊತೆಯಲ್ಲಿ ಸೇರಿಕೊಂಡಿದ್ದಾರೆ. ಅವರು ಮಾಡಿಕೊಂಡ ನಿರ್ಧಾರದ ಪ್ರಕಾರ, ಮ್ಯಾನೇಜಿಂಗ್ ಟ್ರಸ್ಟಿಯಾಗಿ ಚಂದು ಬಾರ್ಗಿಯವರು ನೇಮಕವಾಗಿದ್ದಾರೆ. ಶಂಕರ ದೇವಘಟ್ಟರು ಟ್ರಸ್ಟಿ ಚೇರ್ಮನ್ ಮಾತ್ರ. ಸ್ಕೂಲಿನ ಆಡಳಿತದ ಎಲ್ಲಾನಿರ್ಧಾರಗಳೂ ಬಾರ್ಗಿ ಮತ್ತು ಸುಹಾಸ್ ರವರ ಕೈನಲ್ಲಿ !
 
ಅಲ್ಲೇ ಕುಳಿತು ಸ್ಕೂಲಿನ ಹೊಸ ಬೆಳವಣಿಗೆಗಳನ್ನು ಸೂಕ್ಶ್ಮವಾಗಿ ಅವಲೋಕಿಸುತ್ತಿದ್ದ ಜಾನಕಿ ಸಿಡಿದೇಳುತ್ತಾಳೆ ಕಾರಣ :
 
ಹಿಂದೆ ೨ ದಶಕಗಳಿಗೂ ಮೀರಿ ಶಂಕರದೇವಘಟ್ಟ ಹಾಗೂ ಅವರ ಪತ್ನಿಇಂದುಮತಿಯವರು ಯವರು ಸೇರಿ ಪರಿಶ್ರಮದಿಮ ಕಟ್ಟಿ ಬೆಳಸಿದ ಶಿಕ್ಷಣ ಸಂಸ್ಥೆಯಲ್ಲಿ ಚಂದು ಬಾರ್ಗಿಯವರ  ವಂಚನೆಯಿಂದ ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾರೆ. ಇದನ್ನು ಅರಿತಿದ್ದ ಜಾನಕಿಯ ಮನಸ್ಸಿಗೆ  ಬಹಳ ಖೇದವಾಗುತ್ತದೆ. ಶಂಕರ ದೇವಘಟ್ಟರ ಕಡೆ ತಿರುಗಿ "ದಯಮಾಡಿ ಸೈನ್ ಮಾಡಬೇಡಿ" ಎಂದು ಬೇಡಿಕೊಳ್ಳುತ್ತಾಳೆ. ಬಹುಮತ ಇರುವ ಪ್ರಜಾಪ್ರಭುತ್ವದಲ್ಲಿ ಆಕೆಯಮಾತಿಗೆ ಬೆಲೆ ಎಲ್ಲಿದೆ ?
 
ಬಾರ್ಗಿಯವರು  ಕೋಪದಿಂದ ಮಗಳನ್ನು "ನೀನೊಬ್ಬ ಪಿ. ಏ ಅಷ್ಟೇ. ಇಲ್ಲಿ ನಿನ್ನ ಬಾಯಿ ಹಾಕಬಾರದು; ನಿನ್ನ ಉದ್ಧಟ ತಾಣ ತೋರಿಸಬೇಡ "ಎಂದು ಬಯ್ಯುತ್ತಾರೆ. 
 
ಹೊರಗೆ ಬಂದಮೇಲೆ ಬಾರ್ಗಿ ಮಗಳನ್ನು ಸಂತೈಸಲು ಮಾಡುವ ಪ್ರೀತಿಯ  ನಾಟಕದ ಪ್ರಯತ್ನಕ್ಕೆ ಜಾನಕಿ ತಕ್ಕ ಜವಾಬು ಹೇಳುತ್ತಾಳೆ !
 
ಅವಳ ದಿಟ್ಟ ನಿರ್ಧಾರ, ಮತ್ತು ಅವತ್ತಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಆಡಿದ ಮಾತುಗಳು ಅವಳ ಒಳ್ಳೆಯತನವನ್ನು ಆರಾಧಿಸುವ, ಹಾಗೂ  ಅವನ್ನು ಬೆಂಬಲಿಸುವ ಮಾತುಗಳು ಬಾರ್ಗಿಯವರನ್ನು ದಿಕ್ಕುಗೆಡಿಸುತ್ತದೆ. ಆತ ಮಗಳನ್ನು ತನ್ನ ಬಗ್ಗೆ ಇನ್ನೂ ಕೋಪ ಇಳಿದಿಲ್ಲವಲ್ಲ ?  ಅಂದಾಗ ಜಾನಕಿ ಕೊಡುವ ಜವಾಬು," ಕೋಪವಲ್ಲ; ನಿಮ್ಮ ಬಗ್ಗೆ ಕೋಪ, ಹಾಗೂ  ತಿರಸ್ಕಾರಗಳು  ಇನ್ನೂ ಹೆಚ್ಚಾಗ್ತಿದೆ ಅಪ್ಪ" ಎನ್ನುವ ಆಕೆಯ ಮಾತುಗಳು ಧಾರಾವಾಹಿಯ ಇದುವರೆಗಿನ ಬೆಳವಣಿಗೆಗಳಿಗೆ ಒಂದು ಹೊಸ ತಿರುವನ್ನು ಕೊಟ್ಟು, ಅನೇಕ ಸಾಧ್ಯತಗಳಿಗೆ ಇಂಬು ಕೊಡುತ್ತದೆ. 
 
ಜೈ ಶ್ರೀರಾಮ್, ಜೈ ರಾಜಾರಾಮ್ ಜೈ ಸೀತಾರಾಮ್ 
 
 Serial ratings  :  ಅತ್ಯುತ್ತಮ ಎಪಿಸೋಡ್ ಗಳಲ್ಲೊಂದು . ***
 
 
 

Rating
No votes yet

Comments

'ಪೂರ್ವಗ್ರಹ' ಎನ್ನುವ ಪದವನ್ನು 'ಪೂರ್ವಾಗ್ರಹ' ಎಂದು ಓದಿಕೊಳ್ಳಿ