೨೬, ನವೆಂಬರ್, ೨೦೧೮ ರ ಕಂತಿನ ಟೀ ಏನ್. ಸೀತಾರಾಂ ವಿರಚಿತ, "ಮಗಳು ಜಾನಕಿ ಧಾರಾವಾಹಿ"ಯ ವರದಿ :

೨೬, ನವೆಂಬರ್, ೨೦೧೮ ರ ಕಂತಿನ ಟೀ ಏನ್. ಸೀತಾರಾಂ ವಿರಚಿತ, "ಮಗಳು ಜಾನಕಿ ಧಾರಾವಾಹಿ"ಯ ವರದಿ :

 
ಕರ್ನಾಟಕದ ಮನೆಮನೆಯಲ್ಲಿ ಮನೆಯಮಾತಾಗಿರುವ  ಟೆಲಿವಿಷನ್ ನ ಕನ್ನಡ ಸೀರಿಯಲ್, "ಮಗಳು ಜಾನಕಿ"ಯ ೨೬, ನವೆಂಬರ್, ೨೦೧೮ ರ ಸೋಮವಾರದ ಎಪಿಸೋಡನ್ನು ನೋಡಲು ಕಾತುರರಾದ ನೂರಾರು, ಸಾವಿರಾರು ವೀಕ್ಷಕರಲ್ಲಿ ನಾನೂ ಒಬ್ಬ.
 
ಬಾರ್ಗಿಯವರ ಮನೆಯಲ್ಲಿ ರಾತ್ರಿ ಊಟದ ಡೈನಿಂಗ್ ಟೇಬಲ್ ಬಳಿ ಊಟಕ್ಕೆ ಎಲ್ಲರೂ ಕೂತಿದ್ದಾರೆ (ಜಾನಕಿ ಚಂಚಲ ರಷ್ಮಿಯರು) ಊಟ  ಮಾಡುವ ಸಮಯ. ಈಗಾಗಲೇ ಗಡಿಯಾರ ೯-೧೫ ತೋರಿಸ್ತಾ ಇದೆ. ಮಗಳು ಚಂಚಲೆ "ಪಪ್ಪಾ ಊಟಕ್ಕೆ ಬನ್ನಿ"  ಅಂತ ಮಹಡಿಯಮೇಲಿರುವ ತಂದೆ ಬಾರ್ಗಿಯವರನ್ನು ಕೂಗಿ ಕರೆಯುತ್ತಿದ್ದಾಳೆ.
 
ಮಹಡಿಯ ಮೇಲೆ :
 
ಬಾರ್ಗಿ ತಮ್ಮ ಪಿ ಎ, ಮೀರಾ ರವರ ಜೊತೆ ನಿರಂಜನನ  ವಿಷಯ ಏನಾಯಿತು ಅಂತ ಸಮಾಲೋಚಿಸುತ್ತಿದ್ದಾರೆ. ಅಷ್ಟರಲ್ಲೇ ದೂತ ಚರಣಮೂರ್ತಿ ಓಡಿಬಂದು ಬಾಸ್ ಗೆ ವರದಿ ಒಪ್ಪಿಸುತ್ತಾನೆ.  ನಿರಂಜನ ಅಂಗಡಿಹತ್ರ ಬಂದಿಲ್ಲ. ಗ್ಯಾಂಗ್ ನವರು ಕಾದು ,ನಿಂತಿದಾರೆ  ಗಾಡಿ ನಿಲ್ಲಿಸಿ ಕಾಯ್ತಾ ಇದ್ದಾರೆ. ನಿರಂಜನ ತನ್ನ ಫೋನ್ ಸ್ವಿಚ್ ಆಪ್ ಮಾಡಿದಾನೆ   ನಿರಂಜನ ಪತ್ತೆ ಇಲ್ಲ. ಟೆನ್ಷನ್ ಹೆಚ್ತಾ ಇದೆ
 
ಸರಿ,  ಬಾರ್ಗಿ,ಮಿರಾ ಗೊಂದಲಕ್ಕೆ ಈಡಾಗುತ್ತಾರೆ. ಒಂದೂ  ಅರ್ಥ ಆಗ್ತಿಲ್ಲ ಭಾರ್ಗಿ ಮೀರರನ್ನು ತಮ್ಮ ಜೊತೆ ಊಟಮಾಡಲು ಕರಕೊಂಡು ಬರ್ತಾರೆ. ಬಾರ್ಗಿ ತಮ್ಮ ಉದ್ವಿಗ್ನತೆಯನ್ನು ಬದಿಗೊತ್ತಿ, ನಗುಮುಖವಾಡವನ್ನು ಹಾಕಿಕೊಂಡು   ೯ ಗಂಟೆಗೆ ನಿರಂಜನ್ ಬರ್ತೀನಿ ಅಂತ ಹೇಳಿದ್ರು ಒಂಬತ್ತೂ ಕಾಲು ಆದರೂ ಬರ್ಲೆ ಇಲ್ಲ, ಅಂತ ಮಕ್ಕಳನ್ನು ಕೇಳ್ತಾರೆ.
 
ನಿಧಾನವಾಗಿ ಬಾಗಿಲು ತೆಗೆಯುತ್ತೆ. ಎಲ್ಲರೂ  ಬಾಗಿಲಿನ ಕಡೆ ನೋಡುತ್ತಿರುವಾಗ ನಿರಂಜನನ ಎಂಟ್ರಿ ಆಗುತ್ತೆ. 
 
ಶೇವ್ ಮಾಡಿಕೊಳ್ಳದ ಉದ್ವಿಗ್ನ ಮನಸ್ಸಿನ ಪರಿಸ್ಥಿತಿಯ ನಿರಂಜನನ ಬರುವಿಕೆ ಅಲ್ಲಿ ಊಟಕ್ಕೆ ಕೂತ ಮನೆಯ ಸದಸ್ಯರಿಗೆ ಮತ್ತು ಬಾರ್ಗಿ-ಮೀರಾರನ್ನು ದಿಗ್ಭ್ರಮೆಗೊಳಿಸುತ್ತೆ.   ಜಾನಕಿ ಮತ್ತು ತಂಗಿ, ಈಗ  ನಿರಂಜನ್ ತಮ್ಮ ಅನಿವಾರ್ಯತೆಗಳ ಬಗ್ಗೆ ಸತ್ಯ ಬಯಲಿಗೆ ತೆಗೆಯುತ್ತಾರೆ ಎನ್ನುವ ಆಸಕ್ತಿಯಾದರೆ, ಬಾರ್ಗಿ-ಮೀರಾಗೆ ಈಗಾಗಲೇ ಬದಲಾಗಿರೋ ನಿರಂಜನ್  ಎಲ್ಲಿ ತಮ್ಮ  ಗುಟ್ಟುಗಳನ್ನು ಒದರಿ, ಬಾರ್ಗಿಯವರಿಗೆ  ಜೈಲಿಗೆ ಹೋಗೋಹಂಗೆ ಮಾಡ್ತಾನೋ ಎನ್ನುವ ಆತಂಕ.  ಫೋನ್ ಎತ್ತತಾನೆ ಇಲ್ಲ ನೀವು  ? ಅಂದಾಗ, ಫೋನ್ ನಲ್ಲಿ ಚಾರ್ಜ್ ಇರ್ಲಿಲ್ಲ ಅದಕ್ಕೆ ಸ್ವಿಚ್ ಆಪ್ ಆಗಿತ್ತು. 
 
ಲೇಟಾಗಿ ಬರಲು ಕಾರಣ : ತನ್ನ ಗೆಳೆಯ ಚಿಕ್ಕ ಟೀ ಅಂಗಡಿ ಮಾಲೀಕ ಅರುಣ್ ಅಂಜನಪ್ಪನನ್ನು ಹೇಗೆ ಕಿಡ್ನ್ಯಾಪರ್ಸ್ ಕೈಲಿಂದ ಬಚಾವ್ ಮಾಡಿ, ಕಾಂ ಫೌಂಡ್  ಹಾರಿ ಒಳಗೆ ಬರಬೇಕಾಯಿತು  ಅನ್ನೋ ವಿಚಾರ ವಿವರಿಸುತ್ತಾನೆ. ಹೊರಗೆ ಬೀದಿಯಲ್ಲಿ  ಕೆಲವು ಕಿಡಿಗೇಡಿಗಳು ಕಾರ್ ನಲ್ಲಿ ಬಂದು  ಅರುಣನನ್ನು  ಕಿಡ್ ನ್ಯಾಪ್ ಮಾಡಲು ಕಾಯ್ತಿದ್ರು. ಇದನ್ನೆಲ್ಲಾ ಅವನ  ಹೆಣ್ ಕೊಟ್ಟ ಮಾವನೇ ಮಾಡಿಸ್ತಿದಾನೆ. ಟಿ ಅಂಗಡಿ ಮಾಲೀಕ ಸಾವ್ಕಾರ.  ಮೋಸದ ಮದುವೆ  ಮಾಡಿಸಿದ.  ತುಂಬಾ ಗೊಂದಲಗಳ ಬಳಿಕ ಅಂಜನಪ್ಪ ಮದುವೆಯಾದ ಹುಡುಗಿಯನ್ನು  ಡಿವೋರ್ಸ್ ಮಾಡಿಕೊಂಡಿದ್ದಾನೆ. ಪರಿಚಯದೋನು, ಆದರೆ, ಅವನ ಮಾವ  ೩೭ ಲಕ್ಷ ಸಹಾಯ ಮಾಡ್ದೆ ಅಂತ ಸುಳ್ಳು ಲೆಕ್ಕ ಹೇಳ್ತಿದ್ದ. 
 
ಈ ವಿಚಾರಗಳು ಬಾರ್ಗಿಯವರಿಗೆ ಹಿಡಿಸಲಿಲ್ಲ. ಊಟದ ಮನೆಯಿಂದ   ಬಾರ್ಗಿ ಹೊರಗೆ ಹೋಗಲು ಸಿದ್ಧನಾಗುತ್ತಿದ್ದಾಗ  ೨ ನಿಮಿಷ ತಾಳಿ  ಸರ್ ನನ್ನ ಎರಡು ಲೈನ್ ಕೇಳಿಸ್ಕೊಳ್ಳಿ ಅಂತ ನಿರಂಜನ್ ರಿಕ್ವೆಸ್ಟ್ ಮಾಡಿಕೊಂಡ.  ಆ ಅರುಣನ ಹೆಸರೇ ನಿರಂಜನ ಅಂತ-ನಾನು !  ನನ್ನ ಮಾವ ನೀವೇ  ೧೧ ಲಕ್ಷ ಕೊಟ್ಟು ೩೭ ಲಕ್ಷರೂಪಾಯಿ  ಕೊಟ್ಟಿದೀನಿ  ಅಂತ ಸುಳ್ಳು ಹೇಳ್ತಿರೊ ಆ ಮಾವ,  ನೀವೇ  ಬಾರ್ಗಿಯವರು !
 
ನನಗೆ, "ನೀನು ಐ ಎ ಎಸ್ ಅಂತ ಹೇಳು" ಅಂತ ಸುಳ್ಳು ಹೇಳಿಸಿ, ಮದುವೆ ಮಾಡಿಸಿದೋರು ಬಾರ್ಗಿಯವರು. ಈ ಮಾತು ಕೇಳಿದಾಗ  ಬಾರ್ಗಿಯವರು  ನಿರಂಜನನಿಗೆ ಕಪಾಳಕ್ಕೆ  ಹೊಡೀತಾರೆ. ಎಂಚಲ ಹೊಡಿಬೇಡಿ ಅಂತ ಹೇಳ್ತಾಳೆ.  ಅಪ್ಪ ಹೊಡಿಬೇಡಿ ಅವರು ನನ್ನ ಗಂಡ ನನಗೆ ಹರ್ಟ್ ಆಗುತ್ತೆ ಎಂದು ಜಾನಕಿಯೇ  ಹೇಳಿದಾಗ ಎಲ್ಲರೂ  ಸ್ತಬ್ಧರಾಗುತ್ತಾರೆ. ನಿರಂಜನ  ಬಾರ್ಗಿಯವರ ಪಿ. ಎ. ಮೀರಾ ಕಡೆ ತಿರುಗಿ ನೀವು ಕೊಟ್ಟಿದ್ದು ೩ ಲಕ್ಷ ಅಲ್ವ, ಮೀರಾ ಭೂಪತಿಯವರೇ ? ನಿಜ ಹೇಳಿ  ಅಂತ ಕೇಳ್ತಾನೆ. ನಮ್ಮಿಬ್ಬರ  ಈ ಎಲ್ಲಾ ಮಾತುಕತೆಗಳನ್ನೂ  ನಾನು  ರಿಕಾರ್ಡ್ ಮಾಡಿದೀನಿ, ಅದು ಈಗಾಗಲೇ ಅಭಂಜನನಿಗೆ ಕಳ್ಸಿಯೂ  ಆಯಿತು  ಅವನು ಎಲ್ಲ ರೆಕಾರ್ಡೆಡ್ ಮೆಸೇಜನ್ನೂ ಪೊಲೀಸ್ ಸ್ಟೇಷನ್ ಗು ಕಳ್ಸಿರ್ತ್ತಾನೆ. 
 
ಕತೆಯಲ್ಲಿ ಈ ಅದ್ಭುತ ತಿರುವಿನ  ಹೊಸ ಬದಲಾವಣೆ, ರಸಿಕರ ಅನಿಸಿಕೆಗಳನ್ನು  ಗಾಳಿಗೆ ತೂರಿ  ಅಲ್ಲೋಲ ಕಲ್ಲೋಲ ಮಾಡಿತು. ಮನೆಯ ಸದಸ್ಯರೆಲ್ಲ ಮೌನ ವಿಸ್ಮಿತರಾದದ್ದು ಸರಿಯೇ, ಆದ್ರೆ ಸಾವಿರಾರು ಜನ ಟೆಲಿವಿಷನ್  ಬಳಿ ಕಾದು  ಕುಳಿತು ನೋಡುತ್ತಿರುವ  ರಸಿಕ ವೀಕ್ಷಕರು ಸಹಿತ   ! ಈ ಕಂತಿನ ಸೀರಿಯಲ್  ನಾನು ೨೭, ಮಂಗಳವಾರ ವೀಕ್ಷಿಸಿದೆ. 
 
ರಸಿಕನಾದ ನನ್ನ ಅಭಿಪ್ರಾಯಗಳನ್ನು ಕೊಡುವುದು ಅನಿವಾರ್ಯವಾಗಿದೆ.  ಏಕೆಂದರೆ ಫೇಸ್ಬುಕ್ ನಲ್ಲಿ ಅದಕ್ಕೆ ಮೀಸಲಾದ ಒಂದು ಪುಟವಿದೆ. ಅಲ್ಲಿ ಎಲ್ಲ ವರ್ಗದ ವೀಕ್ಷಕರೂ ತಮ್ಮ ತಮ್ಮ ಅನಿಸಿಕೆಗಳನ್ನು ದಾಖಲಿಸಲು ಅವಕಾಶಮಾಡಿಕೊಡಲಾಗಿದೆ.
 
ಸಾಮನ್ಯವಾಗಿ ನಮಗೆ ಕಾಣಿಸುವುದು ಹೀಗೆ. ಆದರೆ ನಮ್ಮ ಸೀತಾರಾಂ ಯೋಚಿಸುವ ಮಟ್ಟ ಎತ್ತರದ್ದು :
 
೧. ಒಂದು ವಿಧದಲ್ಲಿ ಮಗಳು ಜಾನಕಿ ಕಥೆ ಮುಗಿದ ಹಾಗೆಯೇ ! ಬಾರ್ಗಿಯವರು ತಮ್ಮ ಹೆಂಡತಿ ಮಕ್ಕಳ ಕಣ್ಣಿನಲ್ಲಿ ಬಹಳ ಚೀಪಾಗಿ ಕಾಣಿಸಿಕೊಳ್ಳುತ್ತಾರೆ. ಪಿ. ಎ. ಮೀರಾ  ಸಹಿತ ಇಂತಹ ಧೂರ್ತ ರಾಜಕಾರಣಿಗೆ ಸಹಾಯಮಾಡಿದೆನಲ್ಲ ಎಂದು ಬೇಸರಿಸಿಕೊಂಡು ಕೆಲಸಕ್ಕೆ ರಾಜೀನಾಮೆ ಕೊಡುತ್ತಾಳೆ.ಸ್ವಲ್ಪ ಮುಂದೆ ಹೋದರೆ ಈ ಪ್ರಸಂಗವನ್ನು ಬಳಸಿಕೊಂಡು ಸಿ.ಎಸ್ ಪಿ. ಮತ್ತೆ ಬಾರ್ಗಿಯವರನ್ನು ಜೈಲಿಗೆ ಕಳಿಸುತ್ತಾರೆ. 
 
೨. ನಿಧಾನವಾಗಿ ರಶ್ಮಿಯವರ ಎರಡನೇ ಮದುವೆ ಗುಟ್ಟು, ಬಾರ್ಗಿಯವರ ಜೊತೆ ಆದ ಸಂಗತಿ. ತಾನು ಸಿ. ಎಸ್. ಪಿ ಯವರ ಮಗಳು ಎನ್ನುವ ವಿಚಾರ, ಸ್ವಲ್ಪ ಚೇತರಿಸಿಕೊಳ್ಳುತ್ತಿರುವ ಜಾನಕಿಯನ್ನು  ಮತ್ತೆ ಕೋಮಾಕ್ಕೆ ತಳ್ಳಬಹುದು ಚಂಚಲ, ರಶ್ಮಿಯವರ  ಸ್ಥಿತಿ ಬಹಳ ಶೋಚನೀಯವಾಗುತ್ತದೆ.  
 
೩. ನಿರಂಜನ ತಮ್ಮನ ಜೊತೆ ಕೆಲಸಕ್ಕೆ ಸೇರುತ್ತಾನೆ ನಿರಂಜನನ ತಂದೆ ತಾಯಿ ನೆಮ್ಮದಿಯಿಂದ ಒಂದು ಕಡೆ ಸೇರುತ್ತಾರೆ. ಸ್ವಲ್ಪ ಸಮಯದ ಬಳಿಕ  ಮಕ್ಕಳ ಮನೆಗೆ ಬರಬಹುದು. ಸೀರಿಯಲ್ ಮಂಗಳ ಹಾಡುತ್ತದೆ. 
 
೪. ಮೇಲಿನ ಸಾಧ್ಯತೆಗಳು ಆಗುವುದು  ಸ್ವಲ್ಪ ಕಷ್ಟ. 
 
ಕತೆಹೇಳುವುದರಲ್ಲಿ ಚಾಣಾಕ್ಷರಾದ ಟಿ. ಏನ್. ಸೀತಾರಾಮ್ ಮನಸ್ಸಿನಲ್ಲಿ ಏನಿದೆಯೋ ನಮಗೆ ತಿಳಿಯುವುದು ಕಷ್ಟ ನನ್ನ ದೃಷ್ಟಿಯಲ್ಲಿ ಅವರು ಕನ್ನಡದ ಆಲ್ಫ್ರೆಡ್ ಹಿಚ್ ಕಾಕ್ ನ ತರಹದ ಮೇಧಾವಿ ಕಿರುತೆರೆ  ನಿರ್ಮಾಪಕ ನಿರ್ದೇಶಕ. ಬಹಳ ಅನುಭವಿ ವ್ಯಕ್ತಿ 
 
ಸೋಮವಾರದ ಕಂತಿನ ಧಾರಾವಾಹಿ ಒಂದು ಕನಸಿನ ತರಹ/ಬಾರ್ಗಿಯವರ ವಿಚಲಿತ ಮನಸ್ಸಿನಲ್ಲಾದ ಗೊಂದಲಗಳನ್ನು ಕುರಿತಾದದ್ದು ಎಂದು ಹೇಳಿ ವೀಕ್ಷಕರನ್ನು  ರಂಜಿಸಿ ಮತ್ತೆ ಕತೆಯ ಜಾಡನ್ನು ಬದಲಾಯಿಸಿ ಹೊಸ ತಿರುವನ್ನು ಸೃಷ್ಟಿಸಬಹುದು 
 
ದೃಶ್ಯ ಮಾದ್ಯಮದಲ್ಲಿ ಇದು  ಸಾಧ್ಯ 
 
ಇಂಗ್ಲಿಷ್ ನಲ್ಲಿ ಹೇಳ್ತಾರಲ್ಲ  'Let us wait our fingers crossed' ಎಂಬುದಾಗಿ.  ಕಾದು ನೋಡೋಣ !
 
 
 

Rating
No votes yet