ಪುಸ್ತಕ ಪರಿಚಯ
ಲೇಖಕರು: Ashwin Rao K P
June 11, 2022

ದುಂಡಿರಾಜರ ಹನಿಗವನ ಎಂದರೆ ಮುಖದಲ್ಲಿ ಮಂದಹಾಸ ಮೂಡುತ್ತದೆ. ನಾಲ್ಕೈದು ಸಾಲುಗಳಲ್ಲೇ ಪಂಚ್ ನೀಡಿ ಮುದಗೊಳಿಸುವ ಹನಿಗವನ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ದುಂಡಿರಾಜ್ ಅವರು ಈ ಹನಿಗವನಗಳನ್ನು ಹೇಗೆ ರಚನೆ ಮಾಡುತ್ತಾರೆ ಎಂಬ ಬಗ್ಗೆ ಆಲೋಚನೆ ಮಾಡಿದ್ದೀರಾ? ಹನಿಗವನದ ಬಗ್ಗೆ ನಿಮಗಿರುವ ಸಂಶಯವನ್ನು ನಿವಾರಣೆ ಮಾಡಲು ಅಂಕಿತ ಪುಸ್ತಕ ಪ್ರಕಾಶನದವರು ನಿಮಗಾಗಿ ದುಂಡಿರಾಜ್ ಅವರ 'ಹನಿಗವನ ಏನು? ಏಕೆ? ಹೇಗೆ?' ಎಂಬ ಪುಸ್ತಕವನ್ನು ಹೊರತಂದಿದ್ದಾರೆ.
ಕೃತಿಕಾರರಾದ ಎಚ್ ದುಂಡಿರಾಜ್ ಅವರು ತಮ್ಮ…
ಲೇಖಕರು: Ashwin Rao K P
June 10, 2022

ಖ್ಯಾತ ಸಾಹಿತಿ ಖಲೀಲ್ ಗಿಬ್ರಾನ್ ಬರೆದ ಹಲವಾರು ಪುಸ್ತಕಗಳನ್ನು ನೀವು ಓದಿರಬಹುದು. ಆದರೆ ಖಲೀಲ್ ಗಿಬ್ರಾನ್ ಅವರ ಗೆಳತಿ ಬಾರ್ಬರಾ ಯಂಗ್ ಅವರ ಕಂಗಳಲ್ಲಿ ಕಂಡು ಬಂದ ಗಿಬ್ರಾನ್ ಬಗ್ಗೆ ಓದಿರುವಿರಾ? ಇಲ್ಲವೆಂದಾದರೆ 'ಇವ ಲೆಬನಾನಿನವ' ಮೂಲಕ ಕನ್ನಡ ಭಾಷೆಗೆ ಅನುವಾದಗೊಂಡ ಈ ಪುಸ್ತಕ ಓದಲೇ ಬೇಕು. ಅನುವಾದಕರು ಎನ್ ಸಂಧ್ಯಾರಾಣಿ. ಕವಿ ಹಾಗೂ ಅನುವಾದಕರಾದ ಚಿದಂಬರ ನರೇಂದ್ರ ಅವರು ತಮ್ಮ ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ ಅಭಿಪ್ರಾಯ ಹೀಗಿದೆ…
"ಕನ್ನಡಕ್ಕೂ ಲೆಬನಾನ್ ನ ಮಹಾಕವಿ ಖಲೀಲ್ ಗಿಬ್ರಾನ್…
ಲೇಖಕರು: Ashwin Rao K P
June 09, 2022

"ದಯವಿಟ್ಟು ನಂತರ ಪ್ರಯತ್ನಿಸಿ..." ಇದೊಂದು ರಾಜಕೀಯ ಕಾದಂಬರಿ, ಆಧುನಿಕತೆಯಲ್ಲಿ ಇಂದಿನ ರಾಜಕೀಯ ರಂಗಿನಾಟಗಳ ಸ್ಪಷ್ಟ ಚಿತ್ರಣವನ್ನು ಕೊಡಲು ಇಲ್ಲಿ ಪ್ರಯತ್ನಿಸಿರುವೆ. ಹಾಗೆಯೇ ಸಾಮಾಂಜಿಕವಾಗಿ ಹೆಣ್ಣು ಹೇಗೆ ಶೋಷಣೆಗೆ ಗುರಿಯಾಗುತ್ತಾಳೆ? ಹೆಣ್ಣು, ಹೆಣ್ಣಿಗೆ ಸಹಾಯ ಮಾಡಿದರೇ, ಆಕೆಯ ಬದುಕನ್ನು ಬದಲಿಸಬಹುದು ಎನ್ನುವುದಕ್ಕೆ ಈ ಕಾದಂಬರಿ ಸಾಕ್ಷಿಯಾಗುತ್ತದೆ. ಅಲ್ಲದೇ ಮನಸ್ಸು ಮಾಡಿದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ! ತನ್ನ ಗುರಿಯನ್ನು ಮುಟ್ಟಬಹುದು ! ಕುಟುಂಬ, ಸಮುದಾಯ ಮತ್ತು ಸಮಾಜ…
ಲೇಖಕರು: addoor
June 09, 2022

"ಸಸ್ಯ ಪ್ರಪಂಚ" ಒಂದು ಅಪೂರ್ವ ಪುಸ್ತಕ. ಸಸ್ಯಗಳ ಬಗ್ಗೆ ಡಾ. ಕೃಷ್ಣಾನಂದ ಕಾಮತರ ಆಳವಾದ ಅಧ್ಯಯನವನ್ನು ತೆರೆದಿಡುವ ಪುಸ್ತಕ. "....ನಾವು ಇನ್ನೂ ನಿಸರ್ಗಪ್ರೇಮಿಗಳಾಗಲಿಲ್ಲ. ದೇವದತ್ತವಾಗಿ ಬಂದ ಪರಿಸರವನ್ನು ಕಂಡು ಆನಂದಿಸುವ ಕಲೆಯನ್ನು ನಾವಿನ್ನೂ ಕರಗತ ಮಾಡಿಕೊಂಡಿಲ್ಲ .....ಕಾಡು, ನಮ್ಮ ಉಪಯೋಗಕ್ಕಾಗಿಯೇ ನಿರ್ಮಿತವಾದ ಧನರಾಶಿಯೆಂದು ನಾವೂ ಸರಕಾರವೂ ಕೂಡಿಯೇ ಭಾವಿಸಿದ್ದೇವೆಯೇ ಹೊರತು ಈ ಸಂಪತ್ತು ಬೆಳೆಸಲು ನಾವೇನು ಮಾಡಬೇಕು? ಎಂದು ಯೋಚಿಸುವ ಗೋಜಿಗೇ ಹೋಗಿಲ್ಲ" ಎಂಬ ನೇರ ಮಾತುಗಳೊಂದಿಗೆ…
ಲೇಖಕರು: Ashwin Rao K P
June 07, 2022

ಜಾಣಗೆರೆ ವೆಂಕಟರಾಮಯ್ಯ ಅವರ ಹೊಸ ಕಾದಂಬರಿ ‘ಭೂಮ್ತಾಯಿ' ಈ ಕಾದಂಬರಿಯ ಬಗ್ಗೆ ಪತ್ರಕರ್ತರಾದ ರಘುನಾಥ ಚ ಹ. ಇವರು ತಮ್ಮ ಅಭಿಪ್ರಾಯವನ್ನು ಪುಸ್ತಕದ ಬೆನ್ನುಡಿಯಲ್ಲಿ ಬರೆದಿದ್ದಾರೆ. ಅವರ ಪ್ರಕಾರ “ ಹೃದಯದಲ್ಲಿ ಪ್ರಾಮಾಣಿಕತೆ ತುಂಬಿದ್ದರೆ ನಿನ್ನ ಶತ್ರು ಮಾತ್ರವಲ್ಲ ಇಡೀ ಪ್ರಪಂಚ ನಿನ್ನೆದುರು ಆಯುಧವನ್ನು ಕೆಳಗಿಡುತ್ತದೆ ಎನ್ನುವ ಸ್ಮಾಮಿ ವಿವೇಕಾನಂದರ ಮಾತಿನೊಂದಿಗೆ ಆರಂಭಗೊಳ್ಳುವ ‘ಭೂಮ್ತಾಯಿ' ಕಾದಂಬರಿ, ಮನುಷ್ಯನ ಒಳ್ಳೆಯತನಕ್ಕೆ ಇರುವ ಶಕ್ತಿಯನ್ನು ನಿರೂಪಿಸುವಂತೆ ರೂಪುಗೊಂಡಿದೆ. ಮನುಷ್ಯನ…
ಲೇಖಕರು: Ashwin Rao K P
June 04, 2022

ಮಹಾಭಾರತದ ಒಂದು ಪ್ರಮುಖ ಪಾತ್ರವಾದ ಕರ್ಣನಿಗೆ ರಾಧೇಯ ಎಂಬ ಹೆಸರೂ ಇದೆ. ಈ ಹೆಸರಿನಲ್ಲೇ ಡಾ. ವೆಂಕೋಬರಾವ್ ಎಂ. ಹೊಸಕೋಟೆ ಇವರು ಒಂದು ಕೃತಿಯನ್ನು ಹೊರ ತಂದಿದ್ದಾರೆ. ಇದು ಕರ್ಣನ ಆರಂಭ, ಅಂತ್ಯ ಹಾಗೂ ಅನಂತ ಎಂದು ಬರೆದುಕೊಂಡಿದ್ದಾರೆ. ಪುಸ್ತಕದ ಬೆನ್ನುಡಿಯಲ್ಲಿ ವೆಂಕೋಬರಾವ್ ಅವರು ಹೀಗೆ ಬರೆಯುತ್ತಾರೆ.
“ಭೀಷ್ಮ, ದ್ರೋಣ, ಅಶ್ವತ್ಥಾಮ ಮತ್ತು ಶಲ್ಯ ಮೊದಲಾದವರು ಕರ್ಣನು ಕುಲಹೀನನೆಂದು ತಿರಸ್ಕರಿಸುತ್ತಾರೆ. ಕರ್ಣನಿಗೆ ಇವರೆಲ್ಲರ ಸೊಕ್ಕನ್ನು ಕಂಡು ರೋಷ; ದುರ್ಯೋಧನನ ಅನ್ನವನ್ನುಂಡು ಅವನಿಗೆ…