ಪುಸ್ತಕ ಪರಿಚಯ
ಲೇಖಕರು: Ashwin Rao K P
June 18, 2022

ರಮೇಶ್ ಅರವಿಂದ್ ಕನ್ನಡದ ಖ್ಯಾತ ಚಲನಚಿತ್ರ ನಟರು, ನಿರ್ದೇಶಕರು ಹಾಗೂ ಕಿರುತೆರೆಯ ಕಾರ್ಯಕ್ರಮ ನಿರೂಪಕರು ಎಂಬ ಸಂಗತಿ ನಿಮಗೆ ಗೊತ್ತೇ ಇದೆ. ಕಿರುತೆರೆಯಲ್ಲಿ 'ವೀಕೆಂಡ್ ವಿದ್ ರಮೇಶ್' ಹಾಗೂ 'ಪ್ರೀತಿಯಿಂದ ರಮೇಶ್' ಮೊದಲಾದ ಕಾರ್ಯಕ್ರಮಗಳನ್ನು ಬಹಳ ಸೊಗಸಾಗಿ ನಿರೂಪಿಸಿದ್ದಾರೆ. ರಮೇಶ್ ಅವರ ಲೇಖನಿಯಿಂದ ಮೂಡಿಬಂದ 'ಆರ್ಟ್ ಆಫ್ ಸಕ್ಸಸ್' ಪುಸ್ತಕವನ್ನು ವೀರಲೋಕ ಬುಕ್ಸ್ ಪ್ರಕಾಶನ ಸಂಸ್ಥೆಯವರು ಬಿಡುಗಡೆಗೊಳಿಸಿದ್ದಾರೆ. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ೧೬೦ ಟಿಪ್ಸ್ ಗಳು ಈ ಪುಸ್ತಕದಲ್ಲಿ…
ಲೇಖಕರು: addoor
June 17, 2022

"ಸುಬ್ಬರಾಯರು ನಮ್ಮೂರಿನ ಹಿರಿಯರು, ಶತಾಯುಷಿಗಳು. ಅವರಿಗೆ ಈಗ ೧೦೩ ವರ್ಷ. .... ನೂರರ ಮೇಲೆ ಮೂರಾದರೂ ಲವಲವಿಕೆಯಿಂದ ಓಡಾಡಿಕೊಂಡಿರುವ ಒಂದೇ ಕಾರಣದಿಂದ ಅವರು ನಮ್ಮೂರಿನ ಆಕರ್ಷಣೆಯ ಕೇಂದ್ರ" ಎಂದು ಆರಂಭವಾಗುತ್ತದೆ ಮೊದಲ ಅಧ್ಯಾಯ, "ಮರಗಳ ಒಡನಾಟ."
ಅದರ ಎರಡನೇ ಪಾರಾದಲ್ಲೇ ಈ ಪ್ರಶ್ನೆ ಎತ್ತುತ್ತಾರೆ, ಲೇಖಕರಾದ ಎಚ್. ಆರ್. ಕೃಷ್ಣಮೂರ್ತಿಯವರು, "ನೂರು ವಸಂತಗಳನ್ನು ಕಂಡ ಸುಬ್ಬರಾಯರೇ ಇಂತಹ ಆಕರ್ಷಣೆಯ ಕೇಂದ್ರವಾದರೆ, ನೂರಾರು ಸಾವಿರಾರು ವರ್ಷಗಳಾದರೂ ಆರೋಗ್ಯಪೂರ್ಣವಾಗಿ ಬದುಕುತ್ತಿರುವ…
ಲೇಖಕರು: Shreerama Diwana
June 17, 2022

ಮಗ - ಸೊಸೆ ಸಂಪಾದಿಸಿದ ಕೃತಿ "ಪದ್ಮನಾಭ ಪಾಹಿಮಾಂ: ಒಂದು ಸಂಸ್ಮರಣೆ"
"ಪದ್ಮನಾಭ ಪಾಹಿಮಾಂ: ಒಂದು ಸಂಸ್ಮರಣೆ", ದಿ | ಕೆ. ಎಸ್. ಪದ್ಮನಾಭ ಆಚಾರ್ಯ ಅವರ ಪುತ್ರ ಕಡಿಯಾಳಿ ಬಾಲಕೃಷ್ಣ ಆಚಾರ್ಯ ಹಾಗೂ ಸೊಸೆ ಶ್ರೀಮತಿ ವಾಣಿ ಬಿ. ಆಚಾರ್ಯ ಅವರು ಜಂಟಿಯಾಗಿ ಜವಾಬ್ದಾರಿ ವಹಿಸಿಕೊಂಡು ಸಂಪಾದಿಸಿ ತಮ್ಮದೇ ಆದ " ಸೌರಭ ಪ್ರಕಾಶನ, ಕೊರಂಗ್ರಪಾಡಿ, ಉಡುಪಿ" ಇದರ ಮೂಲಕ ಪ್ರಕಟಿಸಿದ ಕೃತಿ.
ಕಡಿಯಾಳಿ ಬಾಲಕೃಷ್ಣ ಆಚಾರ್ಯರು ಬಹುಮುಖ ಸಾಧಕರಾಗಿ ಪ್ರಸಿದ್ಧಿ ಪಡೆದವರು. ಇವರ ಪತ್ನಿ ವಾಣಿ ಬಿ. ಆಚಾರ್ಯ ಅವರು ಸಹ…
ಲೇಖಕರು: Ashwin Rao K P
June 16, 2022

"ನನ್ನ ಪುಸ್ತಕ ಹಿಡಿಸದಿದ್ದರೆ ನಿಮ್ಮ ಹಣ ಮರಳಿ ಪಡೆಯಿರಿ" ಎಂದು ವಿನಮ್ರಪೂರ್ವಕವಾಗಿ ಚಾಲೆಂಜ್ ಮಾಡಿದಾಗ ಪತ್ರಕರ್ತ, ಅಂಕಣಕಾರ ಸಂತೋಷಕುಮಾರ ಮೆಹಂದಳೆ ಅವರಿನ್ನೂ ಪುಸ್ತಕವನ್ನು ಬರೆದಿರಲಿಲ್ಲ. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ "... ವಿನಮ್ರ ಸವಾಲೆಸೆದು ಬರೆಯಲು ಕೂತ ಮೇಲೆ, ಅದನ್ನು ಹಿಂದೆಗೆದ ದಿನ ಪೆನ್ನು ಕೆಳಗಿಡುತ್ತೇನೆನ್ನುವ ಅಕ್ಷರ ವ್ಯಾಮೋಹಿ ನಾನು. ಇದರರ್ಥ ದುಡ್ಡು ಕೊಟ್ಟೇ ಓದಿರಿ ಎಂದಾದ ಮೇಲೆ ಓದಿಸಬಲ್ಲ ಪುಸ್ತಕಗಳನ್ನೇ ಕೊಡುತ್ತೇನೆನ್ನುವ ಬದ್ಧತೆಯೂ ಲೇಖಕನಿಗೆ ಇರಬೇಕಲ್ಲವೇ…
ಲೇಖಕರು: Ashwin Rao K P
June 15, 2022

ಡಾ. ಬಸವರಾಜ ಸಾದರ ಅವರ 'ನೋಯುವ ಹಲ್ಲಿಗೆ ಹೊರಳುವ ನಾಲಿಗೆ' ಕೃತಿಯಲ್ಲಿ ಒಟ್ಟು ನಲವತ್ನಾಲ್ಕು ಲೇಖನಗಳಿವೆ. ಕೃತಿಯ ಶೀರ್ಷಿಕೆಯೇ ರೂಪಕದಲ್ಲಿದೆ. ಹನ್ನೆರಡನೆಯ ಶತಮಾನದ ಶರಣರ ಕ್ರಾಂತಿ ಕನ್ನಡಿಗರ ಪ್ರಜ್ಞೆಯಾಳದಲ್ಲಿ ಸದಾ ಕಾಡುವ ನೋಯುವ ಹಲ್ಲಿನ ನೆನಪು. ಇದು ಕೇವಲ ನಾಸ್ಟಾಲ್ಜಿಯಾ ಮಾದರಿಯ ನೆನಪು ಅಲ್ಲ. ಶ್ರೇಣೀಕೃತ ಸಮಾಜದಲ್ಲಿ ಜಾತಿವ್ಯವಸ್ಥೆ ಇರುವವರೆಗೂ ಆ ನೋವು ತಪ್ಪಿದ್ದಲ್ಲ. ಹಾಗಾಗಿ ಆ ಕ್ರಾಂತಿಯ ನೆನಪು ನೇವರಿಕೆಯ ನಿವಾರಣೆಯ ಹಿತದ ನೆನಪಾಗಿ ಬಿಟ್ಟೆನೆಂದರೂ ಬಿಡದ ಅನುಬಂಧದ ಹೊರಳು…
ಲೇಖಕರು: ಬರಹಗಾರರ ಬಳಗ
June 14, 2022

ಈ 'ನಾ. ಕಾರಂತ' ಎಂಬ ಹೆಸರು ನೋಡಿದಾಗಲೆಲ್ಲ ನನಗೆ ನಾನೇ ಕೇಳಿಕೊಳ್ಳುವುದುಂಟು. ಇದೊಂದು ಯಾವ ನಮೂನೆಯ ಜನ ಮಾರಾಯ್ರೆ, ಅಂತ. ಹೇಳಿಕೇಳಿ ಪತ್ರಕರ್ತರು ಮತ್ತು ಯಕ್ಷಗಾನ ಕಲಾವಿದರು. ಯಾವಾಗ ನೋಡಿದರೂ ಯಾವುದೋ ಊರಿನ ಸುತ್ತಾಟದಲ್ಲಿರುತ್ತಾರೆ; ಯಾರೋ ಒಬ್ಬ ಪ್ರಯೋಗಶೀಲ ರೈತ ಅಥವಾ ಕಲಾವಿದರೊಡನೆ ಮಾತಾಡಿಕೊಂಡು ಕೂತಿರುತ್ತಾರೆ; ಇಲ್ಲವೇ ಯಾವುದೋ ಒಂದು ಆಟದಲ್ಲೋ ಕೂಟದಲ್ಲೋ ರಂಗದ ಮೇಲಿರುತ್ತಾರೆ. ಪತ್ರಿಕೆಗಳಲ್ಲಿ ತಿಂಗಳಿಗೆ ಐದಾರು ಬೈಲೈನು ಖಾಯಂ. ಇಂತಿಪ್ಪ ಕಾರಂತರ ಎರಡೋ ಮೂರೋ ಪುಸ್ತಕಗಳು ಪ್ರತೀ…