ಪುಸ್ತಕ ಪರಿಚಯ
ಲೇಖಕರು: Ashwin Rao K P
August 11, 2022

ಪತ್ರಕರ್ತ ಗಣೇಶ್ ಕಾಸರಗೋಡು ಇವರ ' ಬೆಳ್ಳಿ ತೆರೆಯ ಬಂಗಾರದ ಗೆರೆ' ಪುಸ್ತಕವು ಸಿನೆಮಾ ರಂಗದ ಅಪರೂಪದ ಕಥೆಗಳನ್ನು ನಮ್ಮ ಮುಂದೆ ಹರಡುತ್ತದೆ. ಬಹಳ ಮುದ್ದಾದ ಮುಖಪುಟದೊಂದಿಗೆ ಮೂಡಿ ಬಂದಿರುವ ಪುಸ್ತಕವು ಅತ್ಯಂತ ಸುಂದರವಾಗಿ ಕನ್ನಡ ಚಿತ್ರರಂಗದ ಅಂತರಾಳವನ್ನು ಬಿಚ್ಚಿಡುತ್ತಾಹೋಗುತ್ತದೆ. ಪತ್ರಕರ್ತರಾದ ಡಾ। ಶರಣು ಹುಲ್ಲೂರು ಇವರು ಬೆನ್ನುಡಿಯನ್ನು ಬರೆದಿದ್ದಾರೆ. ತಮ್ಮ ನುಡಿಯಲ್ಲಿ ಅವರು "ದೂರದಿಂದ ಇವರು ಸಂಜೆ ಆಕಾಶ. ಹಲವು ರೀತಿಯ ಆಕಾರ. ಆಕರ, ಚಿತ್ತಾರ. ಕೆಲವರಿಗೆ ಉರಿವ ಜಮದಗ್ನಿ.…
ಲೇಖಕರು: Ashwin Rao K P
August 09, 2022

ಕೃಷಿ ಪತ್ರಕರ್ತರಾದ ರಾಧಾಕೃಷ್ಣ ಹೊಳ್ಳ ಇವರು ತಾವು ಬಾಳೆ ಬೆಳೆಯ ಬಗ್ಗೆ ಬರೆದ ಲೇಖನಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಇವರ ಈ ಪ್ರಯತ್ನಕ್ಕೆ ಸಹಕಾರ ನೀಡಿದ್ದಾರೆ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರಾದ ಪಿ ವಿ ಹೇರಳೆ ಇವರು. ಬಾಳೆ ಬೆಳೆಯ ಬಗ್ಗೆ ಸಮಗ್ರವಾದ ವಿಷಯವನ್ನು ತಿಳಿಸಿಕೊಡುವ ಒಂದು ಕೈಪಿಡಿ ಈ ಪುಸ್ತಕ ಎಂದರೆ ತಪ್ಪಾಗಲಾರದು.
ಬಾಳೆ ಬೆಳೆಯ ಪರಿಚಯದಿಂದ ಪ್ರಾರಂಭಿಸಿ ಅದರ ತಳಿ ವೈವಿಧ್ಯಗಳು, ಬೇಸಾಯ ಕ್ರಮ, ನೆಡು ಸಾಮಾಗ್ರಿ, ಅಧಿಕ ಇಳುವರಿಗೆ ಗೊಬ್ಬರಗಳ…
ಲೇಖಕರು: Ashwin Rao K P
August 06, 2022

ವಿಶಿಷ್ಟ, ವಿನೂತನ ಪುಸ್ತಕಗಳ ಸರಮಾಲೆಗಳನ್ನು ಹೊರತರುತ್ತಿರುವ ಅಯೋಧ್ಯಾ ಪ್ರಕಾಶನವು ರೋಹಿತ್ ಚಕ್ರತೀರ್ಥ ಅವರ 'ನೂರಾರು ಯಹೂದಿ ಕಥೆಗಳು' ಎಂಬ ಪುಟ್ಟ ಪುಸ್ತಕವನ್ನು ಹೊರತಂದಿದೆ. ಯಹೂದಿ ಕಥೆಗಳನ್ನು ನೀವು ಅಲ್ಲೊಂದು ಇಲ್ಲೊಂದು ಓದಿರಬಹುದು. ಆದರೆ ಒಂದೇ ಗುಕ್ಕಿಗೆ ಇಷ್ಟೊಂದು ಕಥೆಗಳನ್ನು ಓದುವ ಅವಕಾಶ ಸಿಗುವುದು ಅಪರೂಪ. ನೂರ ಆರು ಕಥೆಗಳನ್ನು 'ಮಂದಹಾಸ ಮಿನುಗಿಸುವ ನಗೆಮಿಂಚುಗಳು' ಎಂದು ಲೇಖಕರು ಕರೆದಿದ್ದಾರೆ.
ರೋಹಿತ್ ಚಕ್ರತೀರ್ಥ ಇವರು ತಮ್ಮ ಮುನ್ನುಡಿಯಲ್ಲಿ ಯಹೂದ್ಯರ ಜನಪದ ಕತೆಗಳ…
ಲೇಖಕರು: Ashwin Rao K P
August 05, 2022

ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಹಲವಾರು ಪುಸ್ತಕಗಳು ಈಗಾಗಲೇ ಹೊರಬಂದಿವೆ. ಆದರೆ 'ಕ್ಷತ್ರಿಯ ಕುಲಾವತಂಸ' ಎಂಬ ಈ ಹೊಸ ಕೃತಿ ಶಿವಾಜಿಯ ಭಿನ್ನ ವ್ಯಕ್ತಿತ್ವವನ್ನು ವಿಭಿನ್ನ ದೃಷ್ಟಿಕೋನದಿಂದ ಬಿಂಬಿಸುತ್ತದೆ. ಲೇಖಕಿ ಶೋಭಾ ರಾವ್ ಅವರು ಈ ಕೃತಿಯನ್ನು ಹುಲಿಯ ಹೆಜ್ಜೆಯ ಗುರುತು... ಎಂದು ಹೆಸರಿಸಿದ್ದಾರೆ. ಖ್ಯಾತ ಲೇಖಕ ಸೇತುರಾಮ್ ಅವರು ತಮ್ಮ ಮುನ್ನುಡಿಯಲ್ಲಿ ".... ಸಹಜವಾಗಿ ಇಲ್ಲಿಯ ಜನ ಸಮುದಾಯ ದಾಸ್ಯ ಮನಸ್ಥಿತಿಯಲ್ಲಿಯೇ ಮುಂದುವರೆದಿದೆ. ಆಳುವವರಿಗೆ ಅವಶ್ಯಕತೆ ಕಂಡಿಲ್ಲ. ಹಾಗಾಗಿ…
ಲೇಖಕರು: Ashwin Rao K P
August 02, 2022

'ಭಾರತೀಯ ವೈದ್ಯ ವಿದ್ಯೆಯ ಪಿತಾಮಹ ಸುಶ್ರುತ' ಎಂಬ ಸೊಗಸಾದ ಮಾಹಿತಿಪೂರ್ಣ ಪುಸ್ತಕವನ್ನು ಬರೆದಿದ್ದಾರೆ ಬೆಂಗಳೂರಿನ ಮೀರಾ ಬಿ ಕೆ ಇವರು. "ರೋಗಿಗೆ ದ್ರಾಕ್ಷಾ ರಸ ಕುಡಿಸಿ ಪ್ರಜ್ಞೆ ತಪ್ಪಿಸಿ, ಆತನ ಕೆನ್ನೆಯ ಭಾಗವನ್ನೇ ಕೊಯ್ದು ತೆಗೆದು, ಹರಿದ ಮೂಗಿನ ಮೇಲಿಟ್ಟು, ಯಶಸ್ವಿಯಾಗಿ 'ಸುರೂಪ ಶಸ್ತ್ರಚಿಕಿತ್ಸೆ' ಮಾಡಿ, 'ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸೆಯ ಪಿತಾಮಹ' ನೆಂದೇ ಹೆಸರಾದ ಮಹಾವೈದ್ಯ ಸುಶ್ರುತ. ಎರಡುವರೆ ಸಾವಿರ ವರ್ಷಗಳಿಗೆ ಹಿಂದೆಯೇ ವೈದ್ಯಶಾಸ್ತ್ರದ ಇಂತಹ ಅದ್ಭುತವನ್ನು ಮಾಡಿತೋರಿಸಿದ ಈತ…
ಲೇಖಕರು: Ashwin Rao K P
July 30, 2022

ಸೋದೆ ಸದಾಶಿವರಾಯರ ನಿಗೂಢ ಆತ್ಮಕಥನವಾದ 'ಅನುರಾಯ ಶಾಲ್ಮಲೆ' ಇದರ ಲೇಖಕರು ಖ್ಯಾತ ಇತಿಹಾಸಕಾರರೂ, ವಾಗ್ಮಿಗಳೂ ಆದ ಡಾ. ಲಕ್ಷ್ಮೀಶ್ ಹೆಗಡೆ ಸೋಂದಾ ಇವರು. ಇವರು ಕಳೆದ ೧೫ ವರ್ಷಗಳಿಂದ ಇತಿಹಾಸ ಶೋಧನೆಯಲ್ಲಿ ಸಕ್ರಿಯರಾಗಿ ಹಲವಾರು ಶಾಸನಗಳು, ವೀರಗಲ್ಲುಗಳು, ಐತಿಹಾಸಿಕ ಕುರುಹುಗಳನ್ನು ಸಂಶೋಧಿಸಿ ಅವುಗಳನ್ನು ಅಭ್ಯಸಿಸಿ ಸಮಾಜಕ್ಕೆ ಪರಿಚಯಿಸಿದ್ದಾರೆ.
"'ಅನುರಾಯ ಶಾಲ್ಮಲೆ' ಎಂಬ ಈ ಐತಿಹಾಸಿಕ ಕಾದಂಬರಿಯ ಮೂಲವಸ್ತು ಸದಾಶಿವರಾಯ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋದೆ ಎಂಬ ಪ್ರದೇಶವನ್ನು…