ಪುಸ್ತಕ ಪರಿಚಯ

ಲೇಖಕರು: Ashwin Rao K P
October 01, 2022
ಅಮರ ಸುಳ್ಯ ೧೮೩೪-೩೭ರ ಜನತಾ ಬಂಡಾಯದ ಖ್ಯಾತಿಯ ‘ಸಂಘಟನಾ ಚತುರ ಕೆದಂಬಾಡಿ ರಾಮಗೌಡ' ಬಗ್ಗೆ ಡಾ.ಪೂವಪ್ಪ ಕಣಿಯೂರು ಇವರು ಒಂದು ಪುಸ್ತಕವನ್ನು ಬರೆದಿದ್ದಾರೆ. ಈ ಕೃತಿಯನ್ನು ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯವು ಪ್ರಕಾಶಿಸಿದೆ. ಪುಸ್ತಕದ ಬೆನ್ನುಡಿಯಲ್ಲಿ ಕಂಡು ಬಂದ ಬರಹ ಹೀಗಿದೆ- “ ಅಖಂಡ ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆ ಹುಟ್ಟಿಕೊಳ್ಳುವ ೧೮೮೫ಕ್ಕಿಂತ ಪೂರ್ವದಲ್ಲಿ ವಸಾಹತುಶಾಹಿ ಬ್ರಿಟೀಷರ ವಿರುದ್ಧ ನಡೆದ ಪ್ರತಿರೋಧಗಳು ಪ್ರಾದೇಶಿಕ ಮಿತಿಯಲ್ಲಿ ಮತ್ತು ರಾಜಪ್ರಭುತ್ವದ…
ಲೇಖಕರು: Ashwin Rao K P
September 29, 2022
ಡಾ॥ ಬಿ.ಎಸ್.ಶೈಲಜಾ ಇವರ ಸಂಪಾದಕತ್ವದಲ್ಲಿ ನವಕರ್ನಾಟಕ ಪ್ರಕಾಶನ ಇವರು ಹೊರತಂದಿರುವ ಆಕಾಶ ವೀಕ್ಷಣೆಗೆ ಮಾರ್ಗದರ್ಶಿ ಪುಸ್ತಕವೇ ‘ಬಾನಿಗೊಂದು ಕೈಪಿಡಿ'. ಈ ಪುಸ್ತಕದ ಬೆನ್ನುಡಿಯಲ್ಲಿ "ಹೊಸತು ಪತ್ರಿಕೆಯ ವಿವಿಧ ಸಂಚಿಕೆಗಳಲ್ಲಿ ಪ್ರಕಟವಾಗಿರುವ ಹಲವಾರು ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ವಿಷಯವಾರಾಗಿ ವಿಂಗಡಿಸಿ 'ಹೊಸತು ವಾಚಿಕೆ' ರೂಪದಲ್ಲಿ ಓದುಗರಿಗೆ ನೀಡುತ್ತಿದ್ದೇವೆ. ಯಾವುದೇ ವಿಷಯಕ್ಕೆ ಸಂಬಂಧಿಸಿದ ಲೇಖನಗಳು ಒಂದೆಡೆ ದೊರೆತರೆ ಬೌದ್ಧಿಕ ಮತ್ತು ಕ್ರಿಯಾತ್ಮಕ ಚರ್ಚೆಗೆ ಅನುವು…
ಲೇಖಕರು: addoor
September 28, 2022
ಹಿಂದು ಧರ್ಮದ ಬಗ್ಗೆ ಎಲ್ಲ ಅವಶ್ಯ ಮಾಹಿತಿಯನ್ನು ಎಲ್ಲರಿಗೂ ಅರ್ಥವಾಗುವಂತೆ ವಿವರಿಸುವ ಪುಸ್ತಕ ಇದು. ಲೇಖಕರು 1939ರಲ್ಲಿ ಆಗಿನ ಮದ್ರಾಸಿನ ಪಚ್ಚೆಯಪ್ಪಾ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದಾಗ, ಆ ಸಂಸ್ಥೆಯಲ್ಲಿ ಧಾರ್ಮಿಕ ಶಿಕ್ಷಣವನ್ನು ಪ್ರಸ್ತುತಗೊಳಿಸಲಿಕ್ಕಾಗಿ ಬರೆದ ಪುಸ್ತಕ. ಇದನ್ನು ಎನ್. ಪಿ. ಶಂಕರನಾರಾಯಣ ರಾವ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಇಂಗ್ಲಿಷಿನಲ್ಲಿ “ವಾಟ್ ಈಸ್ ಹಿಂದುಯಿಸಂ" ಎಂಬ ಶೀರ್ಷಿಕೆಯ ಈ ಪುಸ್ತಕ ಹಲವಾರು ಬಾರಿ ಮರುಮುದ್ರಣಗೊಂಡಿದೆ. ಇದು ಅದರ ತಿದ್ದಿದ ಆವೃತ್ತಿ…
1
ಲೇಖಕರು: Ashwin Rao K P
September 27, 2022
ಈಗಾಗಲೇ ‘ಕೂರ್ಗ್ ರೆಜಿಮೆಂಟ್' ಎಂಬ ಕಥಾ ಸಂಕಲನದ ಮೂಲಕ ಪರಿಚಯವಾಗಿರುವ ಮೇಜರ್ ಕುಶ್ವಂತ್ ಕೋಳಿಬೈಲು ಅವರ ಮತ್ತೊಂದು ಕಥಾ ಸಂಕಲನ ಬಿಡುಗಡೆಯಾಗಿದೆ. ಈ ಪುಸ್ತಕದ ಕಥೆಗಳೂ ಮಡಿಕೇರಿಯ ಪರಿಸರದಲ್ಲೇ ನಡೆದಿರುವುದರಿಂದ ಇದಕ್ಕೆ ‘ಕಾವೇರಿ ತೀರದ ಕಥೆಗಳು' ಎಂದು ಹೆಸರಿಸಿದ್ದಾರೆ. ಕುಶ್ವಂತ್ ಕೋಳಿಬೈಲು ಅವರ ಬರವಣಿಗೆಯ ಶೈಲಿ ಬಹಳ ಆಪ್ತವಾಗುತ್ತದೆ ಮತ್ತು ಸೊಗಸಾಗಿ ಓದಿಸಿಕೊಂಡು ಹೋಗುತ್ತದೆ. ಕಥೆಗಳು ನಮ್ಮ ಸುತ್ತಮುತ್ತಲಿನಲ್ಲೆಲ್ಲೋ ನಡೆದಿದೆ ಎಂದು ಭಾಸವಾಗುತ್ತದೆ. ಲೇಖಕರು ಭಾರತೀಯ ಸೈನ್ಯದಲ್ಲಿ…
ಲೇಖಕರು: Ashwin Rao K P
September 24, 2022
ಹಿರಿಯ ಪತ್ರಕರ್ತ ಹಾಗೂ ‘ವಿಶ್ವವಾಣಿ’ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಬಗ್ಗೆ ಅವರ ಅಭಿಮಾನಿಯೂ, ಆ ಪತ್ರಿಕೆಯ ಅಂಕಣಕಾರರೂ, ಬಹ್ರೈನ್ ನಿವಾಸಿಯೂ ಆಗಿರುವ ಕಿರಣ್ ಉಪಾಧ್ಯಾಯ ಇವರು ಬರೆದ ಪುಸ್ತಕವೇ ‘ವಿಶ್ವತೋಮುಖ'. ಪುಸ್ತಕ ಎಷ್ಟು ಸೊಗಸಾಗಿ ಮುದ್ರಿತವಾಗಿದೆ ಎಂದರೆ ನೋಡಿದ ಕೂಡಲೇ ಕೈಯಲ್ಲಿ ಹಿಡಿದು ಮುಟ್ಟಿ ಮುಟ್ಟಿ ನೋಡುವ ಆಸೆಯಾಗುತ್ತದೆ. ಬಹಳ ಸುಂದರ ಮುದ್ರಣ ಹಾಗೂ ಮುದ್ರಣಕ್ಕೆ ಬಳಸಿದ ಪೇಪರ್. ಈ ವಿಷಯವನ್ನು ಪುಸ್ತಕಕ್ಕೆ ‘ಶ್ರೀ ನುಡಿ' ಗಳನ್ನು ಬರೆದ ಸುತ್ತೂರು ಮಠಾಧೀಶರಾದ…
ಲೇಖಕರು: Ashwin Rao K P
September 22, 2022
ರವಿಕುಮಾರ ಅಜ್ಜೀಪುರ ಇವರ ಸಂಪಾದಕತ್ವದಲ್ಲಿ ನವಕರ್ನಾಟಕ ಪ್ರಕಾಶನ ಇವರು ಹೊರತಂದಿರುವ ಸಣ್ಣ ಕಥೆಗಳ ಸಂಗ್ರಹವೇ 'ಕಥಾಕುಂಜ'. ಈ ಪುಸ್ತಕದ ಬೆನ್ನುಡಿಯಲ್ಲಿ "ಹೊಸತು ಪತ್ರಿಕೆಯ ವಿವಿಧ ಸಂಚಿಕೆಗಳಲ್ಲಿ ಪ್ರಕಟವಾಗಿರುವ ಹಲವಾರು ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ವಿಷಯವಾರಾಗಿ ವಿಂಗಡಿಸಿ 'ಹೊಸತು ವಾಚಿಕೆ' ರೂಪದಲ್ಲಿ ಓದುಗರಿಗೆ ನೀಡುತ್ತಿದ್ದೇವೆ. ಯಾವುದೇ ವಿಷಯಕ್ಕೆ ಸಂಬಂಧಿಸಿದ ಲೇಖನಗಳು ಒಂದೆಡೆ ದೊರೆತರೆ ಬೌದ್ಧಿಕ ಮತ್ತು ಕ್ರಿಯಾತ್ಮಕ ಚರ್ಚೆಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂಬುದು ಈ…