ಪುಸ್ತಕ ಪರಿಚಯ
ಲೇಖಕರು: Ashwin Rao K P
November 15, 2022

ಸಾವಯವ ಕೃಷಿಕ ಗ್ರಾಹಕ ಬಳಗ, ಮಂಗಳೂರು ಇವರ ‘ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ' ಮಾಲಿಕೆಯ ಎರಡನೇ ಪುಸ್ತಕವೇ ‘ವಿಷಮುಕ್ತ ಆಹಾರವೇ ಆರೋಗ್ಯದ ಮಂತ್ರ'. ಇದನ್ನು ಬರೆದಿದ್ದಾರೆ ಅಡ್ಡೂರು ಕೃಷ್ಣ ರಾವ್ ಇವರು. ಇವರು ನಿವೃತ್ತ ಬ್ಯಾಂಕ್ ಅಧಿಕಾರಿ, ಬಳಕೆದಾರರ ವೇದಿಕೆಯ ಸಂಚಾಲಕರು, ಸಾವಯಕ ಕೃಷಿಕ ಗ್ರಾಹಕ ಬಳಗದ ಗೌರವ ಅಧ್ಯಕ್ಷರು ಹಾಗೂ ಸ್ವತಃ ಕೃಷಿಕರು. ವಿಷಮುಕ್ತ ಆಹಾರವನ್ನು ನಾವು ನಮ್ಮ ದಿನಬಳಕೆಯಲ್ಲಿ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂದು ಈ ಪುಟ್ಟ ಪುಸ್ತಕದಲ್ಲಿ ಬಹಳ ಸೊಗಸಾಗಿ ಬರೆದಿದ್ದಾರೆ.…
ಲೇಖಕರು: Ashwin Rao K P
November 12, 2022

ಮೋಹನದಾಸ ಕರಮಚಂದ ಗಾಂಧಿ ಇವರನ್ನು ಜಗತ್ತು ಮಹಾತ್ಮ ಗಾಂಧೀಜಿ ಎನ್ನುವ ಹೆಸರಿನಿಂದ ಕರೆಯುತ್ತದೆ. ಮಹಾತ್ಮರು ಹೇಳಿದ ಅತ್ಯುತ್ತಮ ಮಾತುಗಳನ್ನು ಈ ಪುಟ್ಟ ಹೊತ್ತಗೆಯಲ್ಲಿ ಸಂಗ್ರಹಿಸಿ ಕರ್ನಾಟಕ ಸರಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಬಿಡುಗಡೆ ಮಾಡಿದೆ. ‘My Life is My Message’ ಎನ್ನುವ ಆಂಗ್ಲ ಭಾಷೆಯ ಮಾಹಿತಿಯನ್ನು ಕನ್ನಡದಲ್ಲಿ ‘ನನ್ನ ಜೀವನವೇ ನನ್ನ ಸಂದೇಶ’ ಎಂಬ ಹೆಸರಿನಲ್ಲಿ ಅನುವಾದಿಸಲಾಗಿದೆ. ೪೪ ಪುಟಗಳ ಪುಟ್ಟ ಪುಸ್ತಕದಲ್ಲಿರುವ ಮಹಾತ್ಮರ ಕೆಲವು ಆಯ್ದ ನುಡಿಗಳು…
ಲೇಖಕರು: Ashwin Rao K P
November 10, 2022

ವಿಶ್ವ ಮಾನವ ಕುವೆಂಪು ಪುಸ್ತಕವನ್ನು ಕರ್ನಾಟಕ ಸರಕಾರದ ಅಧೀನದಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರತಂದಿದೆ. ಪ್ರತೀ ವರ್ಷ ಕುವೆಂಪು ಅವರ ಜನ್ಮ ದಿನವನ್ನು ಕರ್ನಾಟಕ ಸರಕಾರ ‘ವಿಶ್ವ ಮಾನವ ದಿನಾಚರಣೆ' ಎಂದು ಆಚರಿಸುತ್ತದೆ. ಆ ಹಿನ್ನಲೆಯಲ್ಲಿ ಈ ಕಿರು ಹೊತ್ತಿಗೆಯನ್ನು ಹೊರತಂದಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರು ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಅವರ ಮುನ್ನುಡಿಯಲ್ಲಿ ಕಂಡ ನುಡಿಗಳು “…
ಲೇಖಕರು: addoor
November 10, 2022

ಕೈಯ್ಯಾರರ “ಶತಮಾನದ ಗಾನ” ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಕನ್ನಡದ 100 ಮೇರುಕೃತಿಗಳಲ್ಲೊಂದಾಗಿ ಆಯ್ಕೆಯಾಗಿ ಮರುಮುದ್ರಣವಾದ ಕವನ ಸಂಕಲನ. ಕೈಯ್ಯಾರರು ಕವಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ ಮತ್ತು ಈಗ ಕೇರಳದ ಭಾಗವಾಗಿರುವ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂಬ ಹೋರಾಟದ ನಾಯಕರಾಗಿ ಗುರುತಿಸಲ್ಪಟ್ಟವರು.
ಅವರ 111 ಕವನಗಳು ಈ ಸಂಪುಟದಲ್ಲಿವೆ. ಜೂನ್ 1986ರ ಇದರ ಮೊದಲ ಮುದ್ರಣದ ಪ್ರತಿಗಳು ಒಂದು ವರುಷದಲ್ಲಿಯೇ ಮುಗಿದು ಹೋಗಿದ್ದವು. ಮುನ್ನುಡಿಯಲ್ಲಿ ಕೈಯ್ಯಾರರು “ಇಲ್ಲಿ ನೂರಕ್ಕೂ…
ಲೇಖಕರು: Ashwin Rao K P
November 08, 2022

ದೂರದ ಅಮೇರಿಕಾ ದೇಶದಿಂದ ‘ವಿಶ್ವವಾಣಿ' ಪತ್ರಿಕೆಗೆ ಪ್ರತೀ ಭಾನುವಾರ ಹೊಸ ಹೊಸ ವಿಚಾರಗಳನ್ನು ಹೊತ್ತುಕೊಂಡು ಅಂಕಣವನ್ನು ಬರೆಯುವವರು ಶ್ರೀವತ್ಸ ಜೋಶಿ. ವಿಶ್ವವಾಣಿಗೂ ಮೊದಲು ವಿಜಯ ಕರ್ನಾಟಕ ಪತ್ರಿಕೆಗೆ ಬರೆಯುತ್ತಿದ್ದರು. ವಿಶ್ವವಾಣಿ ಪತ್ರಿಕೆಗೆ ಅಂಕಣ ಬರೆಯಲು ಶುರು ಮಾಡಿದ ಬಳಿಕ ಪರ್ಣಮಾಲೆ ೩ ಮತ್ತು ೪ ಪುಸ್ತಕಗಳು ಹೊರಬಂದವು. ಅದೇ ತಿಳಿರುತೋರಣ ಅಂಕಣ ಬರಹಗಳ ಸಂಗ್ರಹ ಸರಣಿಯಲ್ಲಿ ಪರ್ಣಮಾಲೆಯ ೫ನೇ ಭಾಗ ಪುಸ್ತಕವಾಗಿ ಪ್ರಕಟವಾಗಿದೆ.
ಈ ಪುಸ್ತಕದ ಬೆನ್ನುಡಿಯಲ್ಲಿ ಅಂಕಣಕಾರ, ಸಾಹಿತಿ…
ಲೇಖಕರು: Ashwin Rao K P
November 05, 2022

ತಮ್ಮ ಭಾವನಾತ್ಮಕ ಅಂಕಣ ಬರಹಗಳಿಗೆ ಹೆಸರುವಾಸಿಯಾದ ಲೇಖಕ ಎ ಆರ್ ಮಣಿಕಾಂತ್ ಆವರ ನೂತನ ಪುಸ್ತಕವೇ ‘ಮತ್ತೆ ಹಾಡಿತು ಕೋಗಿಲೆ'. ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖಕರ ಅಂಕಣ ಬರಹವು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ಪುಸ್ತಕದಲ್ಲಿರುವ ಪ್ರತಿಯೊಂದು ಅಧ್ಯಾಯವನ್ನು ಓದಿ ಮುಗಿಸುವಾಗ ನಿಮ್ಮ ಕಣ್ಣಂಚಿನಲ್ಲಿ ಖಂಡಿತಕ್ಕೂ ನೀರು ಜಿನುಗುತ್ತಿರುತ್ತದೆ. ಅಷ್ಟೊಂದು ಆಪ್ತವಾಗಿರುವ ಬರಹಗಳಿವೆ. ಇಲ್ಲಿ ಮುದ್ರಿತವಾಗಿರುವ ಬಹಳಷ್ಟು ಬರಹಗಳು ವ್ಯಕ್ತಿಯೊಬ್ಬರ ನಿಜ ಜೀವನಕ್ಕೆ ಸಂಬಂಧಿಸಿದವುಗಳೇ.…