ಪುಸ್ತಕ ಪರಿಚಯ
ಲೇಖಕರು: Ashwin Rao K P
December 07, 2022

ತಾವು ಬದುಕಿದ ಅಲ್ಪ ಕಾಲದಲ್ಲೇ ಮರೆಯಲಾಗದ ಛಾಪನ್ನು ಮೂಡಿಸಿ ನಮ್ಮಿಂದ ಅಗಲಿದ ಮಹನೀಯರನ್ನು ಪರಿಚಯಿಸುವ ‘ಅಲ್ಪಾಯುಷಿ ಮಹಾನ್ ಸಾಧಕರು' ಮಾಲಿಕೆಯ ದ್ವಿತೀಯ ಭಾಗ ಈ ಕೃತಿ. ಈ ಕೃತಿಯಲ್ಲಿ ತಮ್ಮ ಅಲ್ಪಾಯುಷ್ಯಲ್ಲೇ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ೨೫ ಮಹನೀಯರ ಪರಿಚಯವನ್ನು ಈ ಪುಸ್ತಕದಲ್ಲಿ ಮಾಡಿಕೊಡಲಾಗಿದೆ.
‘ಅನನ್ಯ’ ಬಳಗದ ಮ್ಯಾನೇಜಿಂಗ್ ಟ್ರಸ್ಟಿಯಾದ ಡಾ. ಆರ್ ವಿ ರಾಘವೇಂದ್ರ ಇವರು ಪುಸ್ತಕದ ಬೆನ್ನುಡಿ ಬರೆದಿದ್ದಾರೆ. ಅವರು ತಮ್ಮ ನುಡಿಯಾದ ‘ಅಪರೂಪದ ದಾಖಲಾತಿ'ಯಲ್ಲಿ ಹೇಳುವುದು ಹೀಗೆ…
ಲೇಖಕರು: ಬರಹಗಾರರ ಬಳಗ
December 06, 2022

"ವಂಶೀ ಸಂದೇಶ" ಎಂಬ ರಸಾನುಭೂತಿ - ಶತಾವಧಾನಿ ಡಾ. ಆರ್ ಗಣೇಶರ ಕಾವ್ಯಾನುಸಂಧಾನ(ಯಥಾಮತಿ)
ವಾಲ್ಮೀಕಿಯ ಶೋಕ ರಾಮಾಯಣ ಮಹಾಕಾವ್ಯಕ್ಕೆ ಕಾರಣವಾಯಿತು. ಆ ಶೋಕಭಾವ ವಿಶುದ್ದ ಕರುಣರಸಕ್ಕೇರಿ ಅತ್ಯಪೂರ್ವ ಆದಿಕಾವ್ಯವನ್ನು ಸೃಜಿಸುವಲ್ಲಿ ಆದಿಕವಿಯ ಕಲಾಶ್ರೀಮಂತಿಕೆ, ಅಭಿಜ್ಞತೆ ಕಾರಣವೆಂದು ಅರಿವಾಗುತ್ತದೆ. ಸತ್ಕವಿಯಲ್ಲಿ ಮೂಡಿದ ಯಾವುದೇ ಭಾವ ವ್ಯರ್ಥವಾಗದು; ಅವು ರಸದ ತುದಿಗೆ ತಲುಪಿ ಅಲ್ಲಿಂದ ಮತ್ತೊಂದು ಕಲಾಸೃಷ್ಟಿಯಾಗುತ್ತದೆ. ಅದೇ ರೀತಿಯ ಮನೋಹರ, ರಸಾರ್ದ್ರ ಕಾವ್ಯಸೃಷ್ಟಿ ಡಾ| ಶತಾವಧಾನಿ ಆರ್.…
ಲೇಖಕರು: ಬರಹಗಾರರ ಬಳಗ
December 04, 2022

ಸುರೇಶ ದೇಸಾಯಿ ಅವರ ʼ ಬೇಸಾಯದ ಕಲೆ- ಸಮೃದ್ಧ ಕೃಷಿ ಪ್ರಯೋಗಗಳುʼ ಸಾಧಕನೊಬ್ಬ, ಪ್ರಯೋಗ- ಅನುಭವದ ಮೂಲಕ ಕಂಡುಕೊಂಡ ಕೃಷಿ ಆವಿಷ್ಕಾರಗಳ ದಾಖಲೆ. ದಶಕಗಳ ಆಳ ಆನುಭವ ಇಲ್ಲಿ ಫಲರೂಪಿಯಾಗಿ ಅನಾವರಣಗೊಂಡಿದೆ. ಕರ್ನಾಟಕದಲ್ಲಿ ನಾರಾಯಣ ರೆಡ್ಡಿ, ಭರಮಗೌಡರಷ್ಟೇ ಧೀಮಂತ ಸ್ಥಾನ ಸುರೇಶ ದೇಸಾಯಿ (ಹಾಗೂ ಸೋಮನಾಥ ರೆಡ್ಡಿ ಪೂರ್ಮಾ) ಅವರಿಗಿದೆ.
ಕರ್ನಾಟಕದ ಸೀಸನಲ್ ಬೆಳೆ ಬೆಳೆಯುವ ಪ್ರದೇಶಗಳ ಬೆಳೆಗಳಲ್ಲಿ ಸುಸ್ಥಿರ ಕೃಷಿ/ ಕೃಷಿ ಪರಿಸರ ವಿಧಾನಗಳ ಬಗ್ಗೆ ರೈತರಿಗೆ ಒಗ್ಗುವ ರೀತಿಯಲ್ಲಿ ಹೇಳುವ ವಿವರಗಳೇ…
ಲೇಖಕರು: Ashwin Rao K P
December 03, 2022

“ಚಾಣಕ್ಯ ಒಬ್ಬ ಮಹಾನ್ ಕನಸುಗಾರ. ಒಂದು ರಾಜ್ಯ ಮತ್ತು ಸಂಸಾರದಲ್ಲಿ ಸನ್ಮಾರ್ಗ ಮತ್ತು ಸಂತೋಷದ ವಿಜಯವನ್ನು ನಿರೂಪಿಸುವ ಮಹಾಕಾವ್ಯ ಮಹಾಭಾರತ. ಒಂದು ಆಶ್ಚರ್ಯಕರ ಸೂತ್ರ ನೀಡುತ್ತದೆ. “ ಸಂತೋಷದ ಮೂಲ ಧರ್ಮ". ಚಾಣಕ್ಯ ಇದನ್ನೇ ಅನುಸರಿಸಿದ್ದಾನೆ.
ಚಾಣಕ್ಯನ ಬೋಧನೆಗಳು ಜೀವನಕ್ಕೆ ಸಂಪದ್ಭರಿತವಾಗಿವೆ. ಶತಮಾನಗಳೇ ಕಳೆದರೂ, ಸ್ವಾಭಾವಿಕ ಅನಾಹುತಗಳು ಈ ಗ್ರಹದ ರೂಪ ರೇಷೆಗಳನ್ನೇ ಬದಲಾಯಿಸಿದರೂ, ಅವು ಜೀವಂತ, ಅತ್ಯಾವಶ್ಯಕ ಮತ್ತು ವಿನೂತನವಾಗಿರುತ್ತವೆ. ಅಂತಹ ಬೋಧನೆಗಳು ಎಂದೂ ನಾಶವಾಗುವುದಿಲ್ಲ;…
ಲೇಖಕರು: ಬರಹಗಾರರ ಬಳಗ
December 02, 2022

ಕತೆಗಾರ ತಮ್ಮಣ್ಣ ಬೀಗಾರ ಅವರು 1959 ನವೆಂಬರ 22 ರಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರ ಗ್ರಾಮದಲ್ಲಿ ಜನಿಸಿದರು. ಸ್ನಾತಕೋತ್ತರ ಪದವೀಧರರು. ವೃತ್ತಿಯಿಂದ ಶಿಕ್ಷಕರು. ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಬಿದ್ರಕಾನ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಪ್ರಸ್ತುತ ನಿವೃತ್ತಿ ಹೊಂದಿದ್ದಾರೆ. ಗುಬ್ಬಚ್ಚಿ ಗೂಡು, ಚಿಂವ್ ಚಿಂವ್, ಜೀಕ್ ಜೀಕ್, ಪುಟಾಣಿ ಪುಡಿಕೆ, ಸೊನ್ನೆ ರಾಶಿ ಸೊನ್ನೆ, ತೆರೆಯಿರಿ ಕಣ್ಣು ಖುಷಿಯ ಬೀಜ ಹಾಗೂ ಹಾಡಿನ…
ಲೇಖಕರು: addoor
December 02, 2022

ಶಾಂತಾ ರಂಗಾಚಾರಿ ಮಕ್ಕಳಿಗಾಗಿ ಇಂಗ್ಲಿಷಿನಲ್ಲಿ ಬರೆದ ಐದು ಪೌರಾಣಿಕ ಕತೆಗಳ ಸಂಕಲನ ಇದು. ಇವನ್ನು ಕನ್ನಡಕ್ಕೆ ಅನುವಾದಿಸಿದವರು ಕೆ.ವಿ. ಸುಬ್ಬಣ್ಣ. ಚಂದದ ಚಿತ್ರಗಳನ್ನು ಬರೆದವರು ಪಿ. ಖೇಮರಾಜ್. ಇದರಲ್ಲಿರುವ ಕತೆಗಳು:
ಸಾವಿನ ಜತೆಗೆ ಸಂಭಾಷಣೆ (ಸಾವಿತ್ರಿ - ಸತ್ಯವಾನ)
ಏಳು ದಿನಗಳ ಕಾವಲು (ಪರೀಕ್ಷಿತ ರಾಜ - ತಕ್ಷಕ ಸರ್ಪ)
ಉಪಮನ್ಯು ಕಲಿತ ಪಾಠ (ಗುರು ಧೌಮ್ಯ ಆಚಾರ್ಯ - ಶಿಷ್ಯ ಉಪಮನ್ಯು)
ಭೀಮ ಕೊಂದ ಬಕಾಸುರ
ಖಾಂಡವ ದಹನ (ಅಗ್ನಿಯ ಖಾಂಡವ ವನ ದಹನಕ್ಕೆ ಅರ್ಜುನನ ರಕ್ಷಣೆ)
ಇವೆಲ್ಲ ನಮ್ಮಲ್ಲಿ…