ಪುಸ್ತಕ ಪರಿಚಯ
ಲೇಖಕರು: Ashwin Rao K P
December 01, 2022

೧೯೪೪ರಲ್ಲಿ ಪ್ರಥಮ ಮುದ್ರಣ ಕಂಡ, ಮಕ್ಕಳ ಸಾಹಿತಿ ಎಂದೇ ಖ್ಯಾತ ಪಡೆದ ಜಿ.ಪಿ.ರಾಜರತ್ನಂ ಅವರ ಕೃತಿಯೇ “ವೈಣಿಕನ ವೀಣೆ". ಡೆನ್ಮಾರ್ಕ್ ದೇಶದ ಕಿನ್ನರ ಕಥೆಗಾರ ಹಾನ್ಸ್ ಕ್ರಿಸ್ಟಿಯನ್ ಆಂಡರ್ ಸನ್ ಅವರು ಬರೆದ ಆರು ಕತೆಗಳನ್ನು ರಾಜರತ್ನಂ ಅವರು ರೂಪಾಂತರ ಮಾಡಿಕೊಟ್ಟಿದ್ದಾರೆ. ನಮ್ಮ ಜೀವನಕ್ಕೆ ಹೊಂದಿಕೊಳ್ಳುವಂತೆ ರೂಪಾಂತರ ಮಾಡಿದ್ದೇನೆ ಎಂದು ರಾಜರತ್ನಂ ಅವರೇ ತಮ್ಮ ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ. ಇದರಲ್ಲಿರುವ ಆರು ಕತೆಗಳೆಂದರೆ, ಕಡ್ಡಿ ಬುಡ್ಡಿ ಜಗಳ, ಬಲು ಚೆಲುವು ಗುಲಾಬಿ, ಒಬ್ಬ ತಾಯಿಯ…
ಲೇಖಕರು: Ashwin Rao K P
November 29, 2022

ಕನ್ನಡದ ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರು ೧೯೫೯-೭೧ರ ಅವಧಿಯಲ್ಲಿ ಬರೆದ ಅಮೂಲ್ಯ ಕವನಗಳ ಸಂಕಲನವೇ ‘ವರ್ಧಮಾನ'. ಇದೊಂದು ಹತ್ತು ಕವನಗಳನ್ನೊಳಗೊಂಡ ಪುಟ್ಟ ಪುಸ್ತಕ. ಈ ಪುಸ್ತಕಕ್ಕೆ ಪ್ರಸ್ತಾವನೆ ಬರೆದಿದ್ದಾರೆ ಖ್ಯಾತ ಸಾಹಿತಿಗಳಾದ ಸುಮತೀಂದ್ರ ನಾಡಿಗರು. ಇವರು ತಮ್ಮ ‘ಪ್ರಸ್ತಾವನೆ' ಯಲ್ಲಿ ಬರೆದ ಕೆಲವೊಂದು ಸಾಲುಗಳು ಇಲ್ಲಿವೆ.
“ಭಾರತಕ್ಕೆ ಬರಬಹುದಾದ ಅನಿಷ್ಟ, ನಮಗೆ ಬೇಕಾದ ಆದರ್ಶ ನಾಯಕರು, ತಲೆಮಾರುಗಳ ಸಂಬಂಧ ಮತ್ತು ಕ್ರಿಯಾಶಕ್ತಿಯ ಸ್ವರೂಪ- ಇವು 'ವರ್ಧಮಾನ' ಸಂಗ್ರಹದ ಕಾವ್ಯ ವಸ್ತುಗಳು.…
ಲೇಖಕರು: ಬರಹಗಾರರ ಬಳಗ
November 27, 2022

ಮಾಕೋನಹಳ್ಳಿ ವಿನಯ್ ಮಾಧವ್ ಅವರು ಹುಟ್ಟಿದ್ದು ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿಯವರು. ೧೯೯೬ರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಇಂಗ್ಲಿಷ್ ಪತ್ರಕರ್ತನಾಗಿ ಕೆಲಸ ಆರಂಭಿಸಿದರು. ೨೫ ವರ್ಷಗಳಿಂದ ಹುಟ್ಟೂರಿಗೆ ಹೋಗಿ ಕಾಫೀ ಪ್ಲಾಂಟರ್ ಆಗಿ ಕಾರ್ಯನಿರ್ವಹಿಸುವ ಕನಸು ಕಾಣುತ್ತಿದ್ದಾರೆ.
ಮಾಕೋನಹಳ್ಳಿ ವಿನಯ್ ಮಾಧವ್ ಅವರ ಕಾದಂಬರಿ ‘ಸಿಕೆಜಿ ಸ್ಪೋರ್ಟ್ಸ್ ಕ್ಲಬ್ ಮಾಕೋನಹಳ್ಳಿ’. ಒಕ್ಕಲೊಂದರ ಆತ್ಮಕಥೆಯೆಂಬ…
ಲೇಖಕರು: ಬರಹಗಾರರ ಬಳಗ
November 26, 2022

ಮೊದಲೆಲ್ಲ ಹೆಚ್ಚೆಚ್ಚು ಪತ್ತೇದಾರಿ ಕಾದಂಬರಿ ಓದುತ್ತಿದ್ದೆ. ಅದೊಮ್ಮೆ ಅಪ್ಪ ಆತನ ಪರಿಚಯದವರಿಂದ ಎನ್.ನರಸಿಂಹಯ್ಯ ಅವರು ಬರೆದ 'ಕುಂಟ,ಕುರುಡ,ಕುರೂಪಿ' ಅಂಬುದೊಂದು ಪತ್ತೇದಾರಿ ಕಾದಂಬರಿ ಕಡ ತಂದಿದ್ದರು. ಒಮ್ಮೆ ಹಿಡಿದರೆ ಓದುವವರೆಗೆ ಬಿಡದಷ್ಟು ರೋಮಾಂಚನಕಾರಿ ಕಥಾವಸ್ತು ಅದು.ಆಮೇಲೆ ಅದೇ ಅಭ್ಯಾಸವಾಗಿ ಅಪ್ಪನಿಗೆ ದುಂಬಾಲು ಬಿದ್ದು, ಆತನ ಗೆಳೆಯರ ಮನೆಯವರೆಗೂ ಹೋಗಿ ಬೆಳೆಗೆರೆಯ 'ಒಮಾರ್ಟಾ' ಭೈರಪ್ಪರ 'ವಂಶವೃಕ್ಷ' ಐದಾರು ಕಾದಂಬರಿ ತಂದು ಬಿಡದೆ ಓದಿದೆ. ಆಗಿನ ಕಾಲಕ್ಕೆ ಮಯೂರದಲ್ಲಿ…
ಲೇಖಕರು: ಬರಹಗಾರರ ಬಳಗ
November 25, 2022

ಕಸ್ತೂರ್ ಬಾ ರ ಅಂತಿಮ ಸಂಸ್ಕಾರದೊಂದಿಗೆ ಆರಂಭಗೊಳ್ಳುವ ಕಾದಂಬರಿ flashback ತಂತ್ರದ ಮೂಲಕ ಕಸ್ತೂರ್ ಬಾ ಹಾಗೂ ಗಾಂಧಿಯವರ ಬಾಲ್ಯದ ಸುಂದರ ಸನ್ನಿವೇಶಗಳನ್ನು ಚಿತ್ರಿಸುತ್ತಾ, ಮದುವೆ, ಮಕ್ಕಳು, ವೃತ್ತಿ, ಹೋರಾಟಗಳ ಹಾದಿ ತುಳಿಯುತ್ತಾ ಕ್ರಮೇಣ ಗಂಭೀರವಾಗುತ್ತಾ ಸಾಗುತ್ತದೆ. ಹೆಸರಿಗೆ ತಕ್ಕಂತೆ ಕಾದಂಬರಿಯುದ್ದಕ್ಕೂ ಪತಿ-ಪತ್ನಿಯರ ಸಂವಾದವೇ ಪ್ರಧಾನವಾಗಿ, ಅದರ ಮೂಲಕವೇ ಅವರಿಬ್ಬರ ನಡುವಿನ ಸಂಬಂಧದ ಆಳ ಅಗಲಗಳನ್ನೂ ಅನಾವರಣಗೊಳಿಸಲಾಗಿದೆ.
ಪೀಠಿಕೆಯ ಭಾಗದಲ್ಲಿ ಲೇಖಕರು ಕೆಲವು ಅಂಶಗಳನ್ನು…
ಲೇಖಕರು: addoor
November 25, 2022

ಹೆಸರುವಾಸಿ ಕವಿ ಸು.ರಂ. ಎಕ್ಕುಂಡಿಯವರ “ಕಥನ ಕವನ” ವಿಶ್ವಕನ್ನಡ ಸಮ್ಮೇಳನ ಸಾಹಿತ್ಯಮಾಲೆಯಲ್ಲಿ ಮರುಮುದ್ರಣವಾದ ಸಂಪುಟ. ಆ ಮಾಲೆಗೆ ಆಯ್ಕೆಯಾದ 100 ಮೇರುಕೃತಿಗಳಲ್ಲೊಂದು.
ಇದರಲ್ಲಿವೆ 53 ಕಥನ ಕವನಗಳು. ಕೆಲವು ಸರಳ ಕವನಗಳು. ಉದಾಹರಣೆಗೆ “ಪಾರಿವಾಳಗಳು" ಕವನ ಇಲ್ಲಿದೆ:
ದಟ್ಟಕಾಡಿನಲೊಂದು ಹೆಮ್ಮರದ ಹೊದರಿನಲಿ ಇರುತ್ತಿತ್ತು ಪುಟ್ಟ ಸಂಸಾರ ಹೂಡಿ
ಮುದ್ದು ಬಿಳಿಪಾರಿವಾಳಗಳ ಜೋಡಿ (1)
ಹಗಲಿರುಳು ಜತೆಗೂಡಿ ಬಾಳಿದವು ಈ ಜೋಡಿ ಎಂದಿಗೂ ಅಗಲಿರವು ಒಂದನೊಂದು
ಹಿಗ್ಗು ತುಂಬಿತು ಹೊದರಿನಲ್ಲಿ ಬಂದು (2…
1