ಪುಸ್ತಕ ಪರಿಚಯ
ಲೇಖಕರು: addoor
January 05, 2023

ಆಫ್ರಿಕಾದ ಮೂಲನಿವಾಸಿಗಳಿಂದ ಸಂಗ್ರಹಿಸಿದ 30 ಕತೆಗಳನ್ನು ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ ನಿಕ್ ಗ್ರೀವ್ಸ್. ಇಂಗ್ಲೆಂಡಿನಲ್ಲಿ ಜನಿಸಿದ ಅವರು ಕಾಲೇಜು ಶಿಕ್ಷಣ ಪಡೆದದ್ದು ಭೂಗರ್ಭಶಾಸ್ತ್ರ ಮತ್ತು ಪರಿಸರ ವಿಜ್ನಾನದಲ್ಲಿ. ಅನಂತರ ದಕ್ಷಿಣ ಆಫ್ರಿಕಾದ ದೊಡ್ಡ ಗಣಿಪ್ರದೇಶದಲ್ಲಿ ದುಡಿಯಲು ಹೋದರು. ತಮ್ಮ ಉದ್ಯೋಗದ ಸಲುವಾಗಿ ಅವರು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ಬೊಟ್ಸ್-ವಾನಾ ಹಾಗೂ ನೈಋತ್ಯ ಆಫ್ರಿಕಾದ ಕುಗ್ರಾಮಗಳಿಗೆ ಹೋಗಬೇಕಾಯಿತು.
ಈ ಅವಧಿಯಲ್ಲಿ ಅವರು ವನ್ಯಜೀವಿಗಳ ವೈವಿಧ್ಯತೆ ಮತ್ತು…
ಲೇಖಕರು: Ashwin Rao K P
January 03, 2023

ಉದಯೋನ್ಮುಖ ಲೇಖಕಿ ರಜನಿ ಭಟ್ ಕಲ್ಮಡ್ಕ ಇವರ ಮೊದಲ ಪ್ರಕಟಿತ ಕಾದಂಬರಿಯೇ ಸಂಧ್ಯಾದೀಪ. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿ ಓದಿಸಿಕೊಂಡು ಹೋಗುವ ಈ ಕಾದಂಬರಿ ಮುಗಿದದ್ದೇ ಗೊತ್ತಾಗುವುದಿಲ್ಲ. ಲೇಖಕರೇ ತಮ್ಮ ಮುನ್ನುಡಿಯಲ್ಲಿ ಹೇಳಿದಂತೆ “ ನನಗೆ ಬಹಳಷ್ಟು ಕಾಡಿದ ಮನೆಯೆಂದರೆ ಉಪ್ಪರಿಗೆ ಮನೆ. ಚಿಕ್ಕಂದಿನಲ್ಲಿ ನನ್ನ ಅಜ್ಜನ ಮನೆಯಲ್ಲಿ ಕಣ್ಣಾಮುಚ್ಚಾಲೆ ಆಡುವಾಗ ನಾವು ಅಡಗುತ್ತಿದ್ದುದು ಇದೇ ಉಪ್ಪರಿಗೆಯಲ್ಲಿ. ಅಲ್ಲಿ ಅಡಿಕೆ ಮಿಶ್ರಿತ ವಾತಾವರಣದ ಪರಿಮಳ, ತುಂಬಿದ ಭತ್ತದ ಚೀಲಗಳ ಪರಿಮಳ. ಮಳೆ ಬಂದರೆ…
ಲೇಖಕರು: Ashwin Rao K P
December 31, 2022

ಮುಂಬಯಿ ಬದುಕಿನ ಒಳಜಗತ್ತನ್ನು ಮಾರ್ಮಿಕವಾಗಿ ಚಿತ್ರಿಸುವ "ವಡಪಾವ್ ಕಟಿಂಗ್ ಚಾಯ್", "ಅನಾಥನಾಥ" ಹಾಗೂ "ಮುಂಬಯಿ ನಮ್ದೇ" ಕಥೆಗಳಿಗೆ ಮುಖಾಮುಖಿಯಾಗುವ ಊರಿನ "ಸೌದಾಮಿನಿ ಪ್ರಸಂಗ", "ಬದುಕು ಜಟಕಾ ಬಂಡಿ", "ಅವಲಂಬ", "ಭ್ರಾಂತ", "ಅಪರಾಧಿ" ಮೊದಲಾದ ಕಥೆಗಳು ಒಟ್ಟೂ ಬದುಕಿನ ಕಠೋರ ಸತ್ಯಗಳನ್ನು ಅನಾವರಣಗೊಳಿಸುವ ರೀತಿ ಅನನ್ಯವಾಗಿದೆ ಎನ್ನುತ್ತಾರೆ ಕವಿ ಸುಬ್ರಾಯ ಚೊಕ್ಕಾಡಿ. ಲೇಖಕ ಕುಮಾರಸ್ವಾಮಿ ತೆಕ್ಕುಂಜಯವರ ‘ವಡಾಪಾವ್ ಕಟಿಂಗ್ ಚಾಯ್’ ಕೃತಿಯಲ್ಲಿ ಅವರು ಬರೆದ ಬೆನ್ನುಡಿ ನಿಮ್ಮ ಓದಿಗಾಗಿ..
“…
ಲೇಖಕರು: ಬರಹಗಾರರ ಬಳಗ
December 30, 2022

ನಾಡಿನ ಖ್ಯಾತ ವಿಮರ್ಶಕರಾದ ನಟರಾಜ್ ಹುಳಿಯಾರ್ ಬರೆದ ಕಾಮನ ಹುಣ್ಣಿಮೆ ಎನ್ನುವ ಕಾದಂಬರಿ ಓದಿ ಮುಗಿಸಿದೆ. ಕಾದಂಬರಿ ಒಳ್ಳೆಯ ರೀತಿಯಿಂದ ಅದ್ಭುತವಾಗಿ ಹೊರಬಂದಿದೆ. ಓದುತ್ತಾ ಹೋದಂತೆ ಇನ್ನೂ ಮುಂದೆ ಏನಿದೆ ಎಂಬ ಕುತೂಹಲ ಹುಟ್ಟುತ್ತದೆ.
ಕಾದಂಬರಿ ಸೂತ್ರಧಾರಿಯಾದ ಚಂದ್ರಣ್ಣ ಮಿಂಟ್ರಿಯವನ ಮಗ. ಆದರೆ ಮಿಂಟ್ರಿಗೆ ಹೋದ ತಂದೆ ಮರಳಿ ಊರಿಗೆ ಬರದಿದ್ದದ್ದು ಒಂದು ಆಘಾತಕಾರಿಯ ಸುದ್ದಿ. ಆದರೂ ತಾಯಿ ಶಾಂತಮ್ಮ ತನ್ನ ಮಗ ಚಂದ್ರಣ್ಣನನ್ನು ಕಣ್ಣು ರೆಪ್ಪೆಯಂತೆ ನೋಡಿಕೊಂಡು ಮಗನಿಗೆ ಸರಿಯಾಗಿ ಓದಿಸುತ್ತಾಳೆ…
ಲೇಖಕರು: Ashwin Rao K P
December 29, 2022

“ಸಮಾಜದ ಅನಿಷ್ಟಗಳಿಗೆ ಪ್ರಸ್ತುತ ವ್ಯವಸ್ಥೆ ಯಾವುದೇ ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂಬುದು ಸುಸ್ಪಷ್ಟ" ಎಂದು ಹೇಳುವ ಕೋಬಾಡ್ ಗಾಂಧಿಯವರು “ಒಳಿತಿನ ಮತ್ತು ಭರವಸೆಯ ಬೀಜಗಳು ಮಾನವಕುಲದಲ್ಲಿ ಅಂತರ್ಗತವಾಗಿದೆ. ಒಂದಲ್ಲ ಒಂದು ದಿನ ಅವು ಹೂವಾಗಿ ಅರಳುತ್ತವೆ” ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸುವುದನ್ನು ಕಾಣಬಹುದು ಎಂದು ಅನುವಾದಕಿ ಜ್ಯೋತಿ. ಎ ಅವರು ‘ಅತಂತ್ರ ಸ್ವಾತಂತ್ಯ್ರ’ ಕೃತಿಗೆ ಬರೆದ ಅನುವಾದಕರ ನುಡಿ ನಿಮ್ಮ ಓದಿಗಾಗಿ ನೀಡಲಾಗಿದೆ.
“ಕೆಲವು ವರ್ಷಗಳಿಂದೀಚೆಗೆ ನಮ್ಮ ದೇಶದಲ್ಲಿ…
ಲೇಖಕರು: addoor
December 29, 2022

ಈಗಿನ ಜಗತ್ತನ್ನೂ ನಮ್ಮ ಬದುಕನ್ನೂ ಗಮನಿಸಿದರೆ ನಾವು ಹಲವಾರು ಅನುಕೂಲಗಳನ್ನು ಅನುಭವಿಸುತ್ತಿರುವುದು ನಮ್ಮ ಅರಿವಿಗೆ ಬರುತ್ತದೆ. ಉದಾಹರಣೆಗೆ ವೇಗದ ಪ್ರಯಾಣ, ಪತ್ರಿಕೆ ಮತ್ತು ಪುಸ್ತಕಗಳ ಮೂಲಕ ಸುಲಭ ಲಭ್ಯ ಮಾಹಿತಿ, ಕೊರೊನಾ ವೈರಸಿನಂತಹ ಅಪಾಯಕಾರಿ ಸೂಕ್ಷ್ಮಜೀವಿಯನ್ನೂ ನಿಯಂತ್ರಿಸಿದ ವೈದ್ಯಕೀಯ ಬೆಳವಣಿಗೆಗಳು ಇತ್ಯಾದಿ.
ಇವುಗಳಲ್ಲಿ ಏನೇನೂ ವಿಶೇಷವಿಲ್ಲ; ಇವೆಲ್ಲ ದಿನನಿತ್ಯದ ಬದುಕಿನ ಅವಿಭಾಜ್ಯ ಅಂಗ ಎಂದು ನಮಗೆ ಅನಿಸುತ್ತದೆ. ಆದರೆ, ಐದಾರು ಶತಮಾನಗಳ ಮುಂಚೆ ಪರಿಸ್ಥಿತಿ ಹೇಗಿದ್ದಿರಬಹುದು?…