ಪುಸ್ತಕ ಪರಿಚಯ

January 26, 2023
ಎಚ್.ಎಸ್. ಸತ್ಯನಾರಾಯಣರವರು ತಮ್ಮ ವೈಯಕ್ತಿಕ ಬದುಕಿನ ಅನುಭವಗಳನ್ನು, ಅವರು ಅನುಭವಿಸಿದ ಕಷ್ಟಕೋಟಲೆಗಳನ್ನು ಯಾವುದೇ ಸಂಕೋಚಕ್ಕೆ ಒಳಗಾಗದೇ ನಿರ್ಭೀತಿಯಿಂದ, ಪ್ರಾಮಾಣಿಕವಾಗಿ ಓದುಗರ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುವ ಮೂಲಕ ಅವರ ಬಗ್ಗೆ ಮತ್ತಷ್ಟು ಗೌರವ ಭಾವ ಹುಟ್ಟುವಂತೆ ಪ್ರಬಂಧ ರಚಿಸಿದ್ದಾರೆ. ಹಾಸ್ಯ ಬರಹಗಳಲ್ಲಿ ಲಲಿತ ಪ್ರಬಂಧಗಳು ಬಹಳ ಮುಂಚೂಣಿಯಲ್ಲಿರುವ ಸಶಕ್ತವಾದ ಪ್ರಕಾರವೆನ್ನಬಹುದು. ಯಾರು ಸಹನೆ ಮತ್ತು ತಾಳ್ಮೆಯ ಗುಣವನ್ನು ಹೊಂದಿದ್ದು ಗಂಭೀರ ವಿಷಯವನ್ನೂ ಕೂಡ ಸಕಾರಾತ್ಮಕ…
ಲೇಖಕರು: addoor
January 25, 2023
ಬುದ್ಧನ ಎರಡು ಜಾತಕ ಕತೆಗಳು ಈ ಮಕ್ಕಳ ಪುಸ್ತಕದಲ್ಲಿವೆ. ಇವುಗಳ ಮೂಲ ಲೇಖಕರಾದ ಕೃಷ್ಣ ಚೈತನ್ಯರು ಬರೆದ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದವರು ಹೆಚ್.ಕೆ. ರಾಮಕೃಷ್ಣ. ಸಿದ್ಧಾರ್ಥನು ಜ್ನಾನೋದಯ ಪಡೆದು ಬುದ್ಧನಾಗಿ, ಜೀವನದ ಅರ್ಥ ತಿಳಿದುಕೊಂಡ. ಸುಖಶಾಂತಿಗಳ ಗಳಿಕೆಗಾಗಿ ಮನುಷ್ಯರು ಹೇಗೆ ಬದುಕಬೇಕೆಂಬ ಸಂದೇಶ ನೀಡಿದ. ಅದಕ್ಕಾಗಿ ಮಾನವರು ನಿಸ್ವಾರ್ಥಿಗಳಾಗಿ, ಕರುಣಾಳುಗಳಾಗಿ ಬಾಳಬೇಕೆಂಬುದೇ ಅವನು ತೋರಿದ ಪಥ. ತನ್ನ ಸಹಜೀವಿಗಳ ನೆರವಿಗಾಗಿ ಬುದ್ಧನು ಅನೇಕ ಪುನರ್ಜನ್ಮ ತಳೆದನೆಂದು ಪ್ರತೀತಿ.…
ಲೇಖಕರು: Ashwin Rao K P
January 24, 2023
‘ಬಾ ಇಲ್ಲಿ ಸಂಭವಿಸು..' ಎನ್ನುವುದು ರಾಷ್ಟ್ರಕವಿ ಕುವೆಂಪು ಅವರ ಜನಪ್ರಿಯ ಕವಿತೆಯ ಸಾಲು. ಲೇಖಕರಾದ ಕೆ. ನಟರಾಜ್ ಅವರು ತಮ್ಮ ದ್ವಿತೀಯ ಕವನ ಸಂಕಲನಕ್ಕೆ ಇದೇ ಹೆಸರನ್ನು ಇರಿಸಿದ್ದಾರೆ. ಈ ಕವನ ಸಂಕಲನದಲ್ಲಿ ೧೦೪ ಪುಟ್ಟ ಕವನಗಳಿವೆ. ಕೆ ನಟರಾಜ್ ಅವರು ತಮ್ಮ ಮಾತಿನಲ್ಲಿ ಅಭಿಪ್ರಾಯ ವ್ಯಕ್ತ ಪಡಿಸುವುದು ಹೀಗೆ- “ ‘ಬಾ ಇಲ್ಲಿ ಸಂಭವಿಸು...' ಎಂದರೆ ನಮ್ಮ ಸತ್ಯಾತ್ಮವನ್ನು ನಾವು ಕರೆಯುವ ಪರಿ. ಜೀವನದ ಈ ತೊಳಲಾಟದಲ್ಲಿ, ಹೋರಾಟದಲ್ಲಿ ಕೊನೆಗೂ ಸತ್ಯಕ್ಕೆ ಶರಣಾಗುವ ಸಾಲುಗಳು. ಬಹುಷಃ ಈ ಮನದಾಳದ…
January 23, 2023
ಎಂ ಸುಬ್ರಮಣ್ಯರಾಜೇ ಅರಸ್ ಅಥವಾ ಚದುರಂಗ ಅವರ ಖ್ಯಾತ ಕಾದಂಬರಿ ‘ಸರ್ವಮಂಗಳ'. ಚದುರಂಗ ಅವರು ತಮ್ಮ ಹಿಂದಿನ ಎರಡು ಕಾದಂಬರಿಗಳಲ್ಲಿ ಹೆಣ್ಣಿನ ಭಾವನೆಗಳನ್ನು ಬಹಳ ಚೆನ್ನಾಗಿ ಬರೆದಿದ್ದರು. ಇದರಲ್ಲಿಯೂ ಅವರ ಬರವಣಿಗೆ ಅಷ್ಟೇ ಚೆನ್ನಾಗಿದೆ, ಜೊತೆಗೆ ಗ್ರಾಮೀಣ ಭಾಷೆಯ ಊಪಯೋಗವೂ ಸುಂದರವಾಗಿದೆ. ಲೇಖಕ ಚದುರಂಗ ಅವರ ʻಸರ್ವಮಂಗಳʼ ಕೃತಿಯನ್ನು ಓದಿದ ಬಳಿಕ ನನಗೆ ಅನಿಸಿದ್ದು.... “ಸರ್ವಮಂಗಳ- ಚದುರಂಗ ಅವರ ಮತ್ತೊಂದು ಒಳ್ಳೆಯ ಕಾದಂಬರಿ. 1930ರ ಆಸುಪಾಸಿನಲ್ಲಿ ನಡೆಯುವ ಈ ಪುಸ್ತಕದ ಘಟನಾವಳಿಗಳು ಬಹಳ…
ಲೇಖಕರು: Ashwin Rao K P
January 21, 2023
‘ಬಣ್ಣದ ಕಾರು' ಪುಟಾಣಿ ಮಕ್ಕಳಿಗೆ ಇಷ್ಟವಾಗುವಂತಹ ಕೃತಿ. ಬಹಳ ಸರಳ ಪದಗಳ ಸಣ್ಣ ಸಣ್ಣ ಸಾಲುಗಳ ಗೀತೆಗಳ ಗುಚ್ಚ. ಮಕ್ಕಳಲ್ಲಿ ಪರಿಸರದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ರಚಿಸಿದ ಗೀತೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಆರಂಭದ ಗೀತೆ 'ಮಕ್ಕಳ ಲೋಕ'ದಲ್ಲಿ ಜೇನು, ಬಾನು, ಗಾಳಿ, ಬೇವಿನ ಮರ ಬರುತ್ತವೆ. ಎರಡನೇ ಗೀತೆ 'ಹಸಿರು', ಸಂಪೂರ್ಣವಾಗಿ ಪರಿಸರದ ಕುರಿತದ್ದಾಗಿದೆ. ನಂತರದ ಗೀತೆ 'ಬಣ್ಣದ ಕಾರು', ಇದರಲ್ಲಿಯೂ ಸಹ ಪರಿಸರದ ಅಂಶಗಳು ತುಂಬಿಕೊಂಡಿವೆ ಎನ್ನುತ್ತಾರೆ ಈ ಕೃತಿಗೆ ಮುನ್ನುಡಿಯನ್ನು…
January 20, 2023
“ಸರಳವೂ ಅಲ್ಲದ, ಜೊತೆಗೆ ಕ್ಲಿಷ್ಟತೆಯು ಇಲ್ಲದೆ ನೇರವಾಗಿ ಕವಿತೆಯ ಜೊತೆ ಮತ್ತೆ ಮತ್ತೆ ಕೇಳಿ ಮಾತಾಡುವಂತೆ ಇಲ್ಲಿನ ಬರಹಗಳು ಭಾಸವಾಗುತ್ತವೆ. ಲೋಕದ ಅಸಂಖ್ಯ ಸಂಗತಿಗಳು ಮೂವತ್ತೊಂದು ಕವಿತೆಗಳಲ್ಲಿ ವೈವಿಧ್ಯಮಯವಾಗಿ ತೆರೆದುಕೊಂಡಿದೆ” ಎನ್ನುವುದು ನನ್ನ ಅಭಿಪ್ರಾಯ. ದೇವು ಮಾಕೊಂಡ ಅವರ ʻಗಾಳಿಗೆ ತೊಟ್ಟಿಲ ಕಟ್ಟಿʼ ಪುಸ್ತಕದ ಬಗ್ಗೆ ಬರೆದ ನಾ ಬರೆದ ವಿಮರ್ಶೆ ನಿಮ್ಮ ಓದಿಗಾಗಿ ಇಲ್ಲಿದೆ... “ಗಾಳಿಗೆ ತೊಟ್ಟಿಲು ಕಟ್ಟಲು ಸಾಧ್ಯವೇ? ಅಸಾಧ್ಯವೇ? ಕಾವ್ಯ ನೇಯುವ ಸೃಜನಶೀಲತೆಯಿಂದ ಇವೆರಡನ್ನೂ…