ಪುಸ್ತಕ ಪರಿಚಯ
ಲೇಖಕರು: Ashwin Rao K P
February 04, 2023

ಕಥೆಗಾರ ಶಿವಕುಮಾರ ಮಾವಲಿ ಅವರು ‘ಪ್ರೇಮದ ಆಫೀಸು ಮತ್ತು ಅವಳು' ಎಂಬ ಕುತೂಹಲ ಭರಿತ ಶೀರ್ಷಿಕೆಯನ್ನು ಹೊಂದಿರುವ ಕಥಾ ಸಂಕಲನವನ್ನು ಹೊರತಂದಿದ್ದಾರೆ. "ಕೆಲವೊಮ್ಮೆ ನಾಟಕೀಯತೆ ಈ ಕತೆಗಳ ಸಂವಿಧಾನವೇನೋ ಅನ್ನಿಸುವಷ್ಟರಲ್ಲೇ, ಬದುಕಿನಲ್ಲಿರುವ ನಾಟಕೀಯತೆಯನ್ನು ಅವು ನೆನಪಿಸುತ್ತವೆ. 'ಕತೆ ಕಟ್ಟುವಿಕೆ' ಎಂಬುದನ್ನೇ ನಾನು ನಂಬುತ್ತೇನೆ. ಕೆಲವೇ ನಿಮಿಷಗಳಲ್ಲಿ ಓದಿ ಮುಗಿಸಬಹುದಾದ ಕತೆಯೊಂದು ಅನಂತರದಲ್ಲಿ ಓದುಗನಲ್ಲಿಯೂ ಮುಂದುವರೆಯಬಹುದು" ಎನ್ನುವುದು ಲೇಖಕರಾದ ಶಿವಕುಮಾರ ಮಾವಲಿ ಅವರ ಮಾತು . “…
ಲೇಖಕರು: Ashwin Rao K P
February 02, 2023

ಭಾರತದ ಪ್ರಥಮ ಮಹಿಳಾ ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆ ಅವರ ಬಗ್ಗೆ ನೀವು ಈಗಾಗಲೇ ಕೇಳಿರಬಹುದು. ಸಾವಿತ್ರಿಬಾಯಿಯವರ ಬದುಕಿನ ಹೋರಾಟದ ಕಥೆಯನ್ನು ನಾಟಕದ ಮೂಲಕ ಪ್ರಸ್ತುತ ಪಡಿಸಿದ್ದಾರೆ ವೈಜ್ಞಾನಿಕ ಬರಹಗಾರ, ಕವಿ ಕೆ ನಟರಾಜ್ ಅವರು. ತಮ್ಮ ಲೇಖಕರ ನುಡಿಯಲ್ಲಿ ಅವರು ಹೇಳಿದ್ದು
“ಸಾವಿತ್ರಿ ಬಾಯಿ ಫುಲೆ ಹಾಗೂ ಜ್ಯೋತಿರಾವ್ ಫುಲೆಯವರ ಹೆಸರು ಭಾರತದ ಇತಿಹಾಸದಲ್ಲಿ ಮರೆಯಲಾಗದ ಹೆಸರುಗಳು. ಕತ್ತಲೆಯ ಕೂಪದಂತಿದ್ದ ಭಾರತೀಯ ಸಮಾಜವನ್ನು ಬೆಳಕಿನಡೆಗೆ ಕೊಂಡೊಯ್ದವರು. ಭಾರತೀಯ ಸ್ತ್ರೀ ಸಮಾಜಕ್ಕೆ ಹೊಸ…
ಲೇಖಕರು: addoor
February 02, 2023

ಬಿ.ಎಸ್. ರುಕ್ಕಮ್ಮ ಅವರ ಈ ಮಕ್ಕಳ ಕತೆಗಳ ಸಂಕಲನದಲ್ಲಿ ಹತ್ತು ಮಕ್ಕಳ ಕತೆಗಳಿವೆ. ಇವೆಲ್ಲವೂ ವಿವಿಧ ಲೇಖಕರು ಬರೆದ ಮಕ್ಕಳ ಕುತೂಹಲ ಕೆರಳಿಸುವ ಕತೆಗಳು.
ಮೊದಲನೆಯ ಕತೆ “ಜಾಣರು ತೋಡಿದ ಬಾವಿ”. ಪರೋಪಕಾರಿ ಗಣಪತಿ ಮತ್ತು ಅವನ ಗೆಳೆಯ ಧನಪ್ಪನ ಕತೆ. ತನ್ನ ಹೊಲದಲ್ಲಿ ಬಾವಿ ತೋಡಲು ಹೊರಟ ಧನಪ್ಪನಿಗೆ ಗಣಪತಿಯ ಸಹಾಯ. ಇಬ್ಬರೂ ಹತ್ತಡಿ ಆಳದ ಬಾವಿ ತೋಡುತ್ತಾರೆ. ಅನಂತರ, ಮಳೆ ಬಂದರೆ ಬಾವಿಯಿಂದ ತೆಗೆದ ಮಣ್ಣೆಲ್ಲ ಕೊಚ್ಚಿ ಹೋಗುತ್ತದೆ ಎಂಬ ಆತಂಕ ಧನಪ್ಪನಿಗೆ. ಹಾಗಾಗಿ ಎರಡನೇ ಬಾವಿ ತೋಡಿ ಅದರಲ್ಲಿ…
ಲೇಖಕರು: Ashwin Rao K P
January 31, 2023

“ಕರ್ನಾಟಕದ ಒಂದು ಭಾಗದವರು ಇನ್ನೊಂದು ಭಾಗದ ಓದುಗರನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಅನುಭವ ಹಂಚಿಕೊಳ್ಳುವ ವಿನ್ಯಾಸವು ಕನ್ನಡದಲ್ಲಿ ಜನಪ್ರಿಯವಾಗಿದೆ. ಆದರೆ ಇಲ್ಲಿ ಅಧಿಕಾರ ಕೇಂದ್ರವಿರುವ ದಕ್ಷಿಣದ ಕರ್ನಾಟಕದ ಎದುರು, ಉತ್ತರ ಕರ್ನಾಟಕ ವಿಶಿಷ್ಟವಾದ ಭಾಷೆಯನ್ನಾಗಲಿ ಅನುಭವವನ್ನಾಗಲಿ ವೈಭವೀಕರಿಸುವುದಿಲ್ಲ ಇಲ್ಲವೇ ಕೀಳೀಕರಿಸುವುದಿಲ್ಲ. ತನ್ನ ಪಾಲಿಗೆ ಕನ್ನಡ ನಾಡಿನ ಬದುಕೆಲ್ಲ ಒಂದೇ ಎಂಬ ಸಮದರ್ಶಿಯಾದ ದೃಷ್ಟಿಕೋನವು ಇಲ್ಲಿ ಕೆಲಸ ಮಾಡುತ್ತದೆ,'' ಎನ್ನುತ್ತಾರೆ "ಮಿಲ್ಟ್ರಿ ಟ್ರಂಕು'…
ಲೇಖಕರು: ಬರಹಗಾರರ ಬಳಗ
January 29, 2023

“ಪ್ರೇಮ ಋತುಮಾನಗಳಾಗಿ, ಶತಮಾನದ ಭಾವಗಳಾಗಿ, ಯುಗ ಯುಗಗಳ ಬಂಧನಗಳಾಗಿ ಬೆಳೆದರೂ ಹಳತಾಗುವುದಿಲ್ಲ. ಅಳತೆಯ ಸೆಳೆತದಲ್ಲಿ ಸಿಲುಕಿ ನಲುಗುವ ಹಲವಾರು ಪಡ್ಡೆ ಹುಡುಗರನ್ನು ಇಬ್ಬನಿಯ ರೂಪಕದಲ್ಲಿ ವಿವರಿಸುವ ಪ್ರಯತ್ನ ಕೂಡ ಪ್ರಯಾಸದಿಂದ ಕೂಡಿದ್ದರೂ ಕೆಚ್ಚೆದೆಯಲ್ಲಿ ದೇಶಬಾಂದವರನ್ನು ಹಚ್ಚೆ ಹಾಕಿಸಿಕೊಳ್ಳಿ ಎನ್ನುವ 'ಮೌನರಾಗ' ಹೊಸತಲೆಮಾರಿನ ಹೋರಾಟಗಾರರಿಗೆ ಪರಿಚಯ ಮಾಡಿಸುತ್ತದೆ" ಷಕೀಬ್ ಎಸ್. ಕಣದ್ಮನೆ ನವಿಲೇಹಾಳ್ ಅವರ ʻಮೋಹದ ಮೋಡಗಳುʼ ಕವನ ಸಂಕಲನ. 72 ಪುಟಗಳ ಈ ಕವನ ಸಂಕಲನವು ಪುಟ್ಟದಾಗಿದ್ದರೂ…
ಲೇಖಕರು: Ashwin Rao K P
January 28, 2023

‘ಮೌನದ ಚಿಪ್ಪಿನೊಳಗೆ' -ಮನದ ಕಣಿವಿಗೆ ಆಶಾಕಿರಣ ಎಂಬ ಕೃತಿಯನ್ನು ರಚಿಸಿದ್ದಾರೆ ಧಾರಿಣ್ ಮಾಯಾ ಇವರು. ದಿನನಿತ್ಯದ ಮನಸ್ಸಿನ ಕೋಲಾಹಲ-ನೋವಿನೆಳೆಗಳು, ಬದುಕಿನ ಬವಣೆ-ಏರಿಳಿತಗಳು, ಕಗ್ಗಂಟು-ಮಜಲುಗಳನ್ನು ತನ್ನ ಮಡಿಲಲ್ಲೇ ಮುಚ್ಚಿಟ್ಟು, ಹೆಣ್ಣು ತನ್ನ ಜೀವನ ನಡೆಸುವ ಪರಿಯನ್ನು ಇಲ್ಲಿ ಅನಾವರಣಗೊಳಿಸಿದ್ದಾರೆ. ಪುರುಷನಿಂದ ಮಾನಸಿಕ ಹಾಗು ಲೈಂಗಿಕ ದೌರ್ಜನ್ಯಕ್ಕೊಳಗಾದ ಹೆಣ್ಣುಮಕ್ಕಳ ಬದುಕಿನ ಕರಾಳತೆಗೆ ಕನ್ನಡಿ ಹಿಡಿವ ಪ್ರಯತ್ನ ಮಾಡಿದ್ದಾರೆ ಲೇಖಕಿ ಧಾರಿಣಿ ಮಾಯಾ. ಅವರು ತಮ್ಮ ‘ಮೌನದ…