ಪುಸ್ತಕ ಪರಿಚಯ

ಲೇಖಕರು: addoor
January 19, 2023
ಭಾರತದ 13 ಭಾಷೆಗಳ ಶ್ರೇಷ್ಠ ಮಕ್ಕಳ ಕತೆಗಳ ಸಂಕಲನ ಇದು. ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದೀ, ಕನ್ನಡ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳ ಕತೆಗಳು ಇದರಲ್ಲಿವೆ. ಇವನ್ನು ಎಲ್. ಎಸ್. ಶೇಷಗಿರಿರಾಯರು ಕನ್ನಡಕ್ಕೆ ಅನುವಾದಿಸಿದ್ದಾರೆ. ವಿಶೇಷ ಬಹುಮಾನ (ಅಸ್ಸಾಮಿ) ಕತೆ ವಿದ್ಯಾರ್ಥಿಯೊಬ್ಬ ತುಂಟನಂತೆ ಕಂಡರೂ ಅಂತಃಕರಣದ ಹುಡುಗ ಎಂಬುದನ್ನು ಪ್ರಸ್ತುತಪಡಿಸುತ್ತದೆ. ಆತನನ್ನು ಶಿಕ್ಷಿಸಿದ ಮುಖ್ಯೋಪಾಧ್ಯಾಯರೇ ಅವನ ಸನ್ನಡತೆ ಕಂಡಾಗ ಬೆನ್ನು…
1
ಲೇಖಕರು: Ashwin Rao K P
January 19, 2023
ಪದ್ಮಾಲಯ ನಾಗರಾಜ್ ಅವರ ಸಣ್ಣ ಕಥೆಗಳ ಸಂಕಲನವೇ “ಅಚಲ ಕಥಾಲೋಕ". ಈ ಕೃತಿಯಲ್ಲಿ ಸೊಗಸಾದ ಸಣ್ಣಸಣ್ಣ ಕತೆಗಳಿವೆ. ಸುಭಾಷಿತಗಳಂತಹ ಹೇಳಿಕೆಗಳಿವೆ. ಕವಿತೆಯಂತಹ ವಚನಗಳಿವೆ. ಘಟನೆಯ ನಿರೂಪಣೆಗಳಿವೆ. ಮಾತುಕತೆಯ ಭಾಗಗಳಿವೆ. ಇದೊಂದು ಬಹುನಿರೂಪಣ ವಿನ್ಯಾಸವುಳ್ಳ ದಾರ್ಶನಿಕ ಕೃತಿ ಎಂದಿದ್ದಾರೆ ಮುನ್ನುಡಿ ಬರೆದ  ಸಾಹಿತಿ ರಹಮತ್‌ ತರೀಕೆರೆ. ಆ ಮುನ್ನುಡಿಯಲ್ಲಿ... “ನಮಗೆ ನಮ್ಮೂರ ಬದಿಯಲ್ಲಿ ಹರಿವ ಹೊಳೆಗಳ ಪರಿಚಯ ವಿರುತ್ತದೆ. ಆದರೆ ಆ ಹೊಳೆಗಳ ಜಲಮೂಲವಾಗಿರುವ ಆಗಸದ ಮೋಡ, ಪರ್ವತದಗರ್ಭ, ದಟ್ಟಕಾಡು…
January 18, 2023
ಅಸಮಾನತೆ, ಅನ್ಯಾಯ, ಅಪಮಾನ, ಶೋಷಣೆಯ ಪರಿಣಾಮಗಳನ್ನು ಹೇಳುತ್ತಲೇ; ಸಮಾನತೆಯ ಸಮಾಜ ನಿರ್ಮಾಣಕ್ಕೆ ಹೋರಾಡಬೇಕಾದ ಛಲವನ್ನು ಇವು ಕಲಾತ್ಮಕವಾಗಿ ಅಭಿವ್ಯಕ್ತಿ ಮಾಡಿವೆ. ಹಾಡುಗಾರರಿಗೆ ಹಾಡುಗಳಾಗಿ, ಭಾಷಣಕಾರರಿಗೆ ವಿಚಾರಗಳಾಗಿ, ಹೋರಾಟ ನಿರತ ಜನರಿಗೆ ಹೋರಾಟದಲ್ಲಿ ತೊಡಗಲು ಮಾನಸಿಕ, ಭಾವನಾತ್ಮಕ ಪ್ರೇರಕ ಶಕ್ತಿಗಳಾಗಿ ಕ್ರಿಯಾಶೀಲವಾಗಿವೆ ಎನ್ನುತ್ತಾರೆ ಬಿ.ಎಂ. ಪುಟ್ಟಯ್ಯ . ಅವರು ಎಚ್. ವೆಂಕಟೇಶ್ ಹಾಗೂ ಜ್ಯೋತಿ .ಎಸ್‌ ಅವರ ಸಂಪಾದಿತ “ಹೋರಾಟದ ಹಾಡುಗಳು” ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ…
ಲೇಖಕರು: Ashwin Rao K P
January 17, 2023
ಗಾಯತ್ರಿ ರಾಜ್ ಅವರ ನೀಳ್ಗತೆ ‘ಟ್ರಾಯ್' ಎಂಬ ಕೃತಿ. ‘ಟ್ರಾಯ್‌ʼಯ ಎಲ್ಲ ಪಾತ್ರಗಳಲ್ಲೂ ನಮ್ಮ ಭಾರತೀಯ 'ಸೆಂಟಿಮೆಂಟ್' ಶೈಲಿಯನ್ನು ತಂದು ಕೊಟ್ಟು ಗಾಯತ್ರಿ ರಾಜ್ ಯಶಸ್ವಿಯಾಗಿದ್ದಾರೆ. ಅಲ್ಲಿಯ ಎಲ್ಲ ಪಾತ್ರಗಳು ದೂರದ ಯಾವುದೋ ದೇಶದ ಕಾಣದ ವ್ಯಕ್ತಿತ್ವಗಳೇ ಆಗಿದ್ದರೂ ಅವರು ಮಾತನಾಡುವಾಗ ನಮ್ಮವರೇ ಅನಿಸಿಬಿಡುತ್ತದೆ. ಇಷ್ಟವಾಗಿಬಿಡುತ್ತದೆ” ಎನ್ನುತ್ತಾರೆ ಮುನ್ನುಡಿಯನ್ನು ಬರೆದ ಎಂ.ಎಲ್. ಪ್ರಸನ್ನ. ಅವರು ಗಾಯತ್ರಿ ರಾಜ್ ಅವರ ʻಟ್ರಾಯ್ʼ ಪುಸ್ತಕದಲ್ಲಿ ಬರೆದ ಮುನ್ನುಡಿಯ ಸಾಲುಗಳು ನಿಮ್ಮ…
ಲೇಖಕರು: Ashwin Rao K P
January 14, 2023
‘ಫಾರೆಸ್ಟರ್ ಪೊನ್ನಪ್ಪʼ ಮಲೆನಾಡಿನಲ್ಲಿ ಬದಲಾದ ಮತ್ತು ಸಾಮಾಜಿಕ ವ್ಯವಸ್ಥೆಯ ಸುತ್ತಲೂ ಹೆಣೆದಿರುವ ಆರ್ಥಿಕ ಕಾದಂಬರಿ. ಇಲ್ಲೊಂದು ಜೀವನವಿದೆ, ಬದಲಾವಣೆ ಇದೆ ಮತ್ತು ಆ ಬದಲಾವಣೆಯನ್ನು ಜೀರ್ಣಿಸಿಕೊಳ್ಳಲು ಆಗದ ಆರ್ದ್ರತೆ ಇದೆ” ಎನ್ನುತ್ತಾರೆ ಲೇಖಕ ವಿನಯ್‌ ಮಾಧವ್.‌ ಲೇಖಕ ನೌಶಾದ್‌ ಜನ್ನತ್ತ್‌ ರವರ ʻಫಾರೆಸ್ಟರ್ ಪೊನ್ನಪ್ಪʼ ಪುಸ್ತಕಕ್ಕೆ ಅವರು ಬರೆದ ಮುನ್ನುಡಿಯ ಸಾಲುಗಳು ಇಲ್ಲಿವೆ... “ಮಲೆನಾಡಿನ ಜನರ ಬದುಕಿನಲ್ಲಿ ಮಹತ್ತರ ತಿರುವು ಬಂದಿದ್ದು ತೊಂಬತ್ತನೇ ದಶಕದ ಆದಿಯಲ್ಲಿ. ಕಾಫಿ ಬೋರ್ಡ್…
January 13, 2023
ಹಿರಿಯ ನಾಗರೀಕರ ಇಳಿಗಾಲದ ಬದುಕನ್ನು ಕುರಿತು ಹೇಳುವ ಈ ಕಾದಂಬರಿ, ಹೆತ್ತವರನ್ನು ಕಾಡಿಸಿ ಪೀಡಿಸಿ ಕಣ್ಣೀರು ಹಾಕಿಸುವ ಹಳೆಯ ಸಿನಿಮಾವಾಗಬಹುದಾದಂತಹ ಲಕ್ಷಣಗಳಿದ್ದರೂ ಅದನ್ನು ಹಾಗಾಗದಂತೆ ತಡೆಯಲು ಇಲ್ಲಿ ಹಲವಾರು ಅಂಶಗಳಿವೆ. ಮುಖ್ಯವಾಗಿ ಪ್ರೇಮಕಥೆ. ಅದು ಹದಿಹರೆಯದ್ದಲ್ಲ; ಪ್ರೌಢಾವಸ್ಥೆಯದ್ದು, ಗಾಢವಾದದ್ದು ಮತ್ತು ಕೊನೆಯಲ್ಲಿ ಬರುವ ಅನಿರೀಕ್ಷಿತ ತಿರುವು. ಈ ಎರಡು ಅಂಶಗಳು ಇಡೀ ಕಾದಂಬರಿಯ ಹೈಲೈಟ್ಸ್. ಕತೆಗಾರ್ತಿ ಪೂರ್ಣಿಮಾ ಮಾಳಗಿಮನಿಯವರ 'ಅಗಮ್ಯ' ಕಾದಂಬರಿಯ ಬಗ್ಗೆ ನನ್ನ ಅನಿಸಿಕೆ…