ಪುಸ್ತಕ ಪರಿಚಯ

ಲೇಖಕರು: Ashwin Rao K P
February 11, 2023
‘ಬುಗುರಿ’ ಕವನ ಸಂಕಲನವು ವಿಜಯ ಪದ್ಮಶಾಲಿಯವರ ಹೊಸ ಕವನ ಸಂಕಲನವಾಗಿದೆ. ಈ ಕವನ ಸಮಕಾಲೀನ ಸಂಕಲನದ ಕೌತುಕವಾಗಿದೆ ವಿಷಯ ವೈವಿಧ್ಯತೆ, ಸಂದರ್ಭದ ಅನೇಕ ವಿಷಯಗಳನ್ನು ಒಳಗೊಂಡು ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. “ಸಂಜೆಯೊಲವಿನ ರಂಗು" ಕವನದಲ್ಲಿ ಸಂಜೆಯೊಲವಿನ ರಂಗನ್ನು ಎಲ್ಲರ ನಯನಗಳಲ್ಲಿ ತುಂಬಿರುವ ಅವರ ಚಮತ್ಕಾರ ಮೆಚ್ಚುವಂತದ್ದು. “ಕುರುಡು ಕಂಚಾಣ” ಕವನದಲ್ಲಿ ಒಲಿಯದ ಕುರುಡು ಕಾಂಚಾಣದ ನಿರೀಕ್ಷೆಯಲ್ಲಿ ತಲ್ಲಣಗೊಂಡು ಕನಸುಗಳ ತೆಕ್ಕೆಯೊಳಡಗಿದೆ ಎನ್ನುವ ವಾಸ್ತವ ವಿವರಿಸಿದ್ದಾರೆ…
ಲೇಖಕರು: Kiran Kumar D
February 10, 2023
‘ಯುವಜನತೆಗೆ ಸ್ಪೂರ್ತಿ’ ಎಂಬ ಪುಸ್ತಕವನ್ನು ಬಾಲಚಂದ್ರ ಎಂ ರವರು ಬರೆದಿದ್ದಾರೆ. ಈ ಪುಸ್ತಕವನ್ನು ಈಗಿನ ಯುವಜನತೆಯಲ್ಲಿ ಕಾಣುತ್ತಿರುವ ಆತ್ಮವಿಶ್ವಾಸದ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಬರೆದಿದ್ದಾರೆ. ಯುವಮಂದಿಯಲ್ಲಿ ಆತ್ಮವಿಶ್ವಾಸವನ್ನು ಬಡಿದೆಚ್ಚರಿಸುವುದಕ್ಕೆ ಮತ್ತು ದುರ್ಬಲತೆಗಳನ್ನು ಶಕ್ತಿಯನ್ನಾಗಿ ಪರಿವರ್ತಿಸುವುದಕ್ಕೆ, ತಮ್ಮ ಈ ಪುಸ್ತಕದಲ್ಲಿ ೬೩ ಲೇಖನಗಳ ಮೂಲಕ ಯುವಮಂದಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡಿದ್ದಾರೆ. ಪ್ರತಿ ವರ್ಷ ಸಾವಿರಾರು ಯುವ ಮಂದಿ ಹಲವಾರು ಕಾರಣಗಳಿಗೆ ತಮ್ಮ…
ಲೇಖಕರು: addoor
February 09, 2023
ಕನ್ನಡದಲ್ಲಿ ಮಕ್ಕಳಿಗಾಗಿ ಸಾಹಿತ್ಯ ರಚನೆ ಮಾಡಿದ ಪ್ರಮುಖರಲ್ಲೊಬ್ಬರು ಹೊಯಿಸಳ ಕಾವ್ಯನಾಮದ ಅರಗ ಲಕ್ಷ್ಣಣರಾಯರು. (ಜನನ 2-5-1893) ಅವರು ಆರಂಭದ ಶಿಕ್ಷಣ ಪಡೆದದ್ದು ಹುಟ್ಟೂರು ನರಸಿಂಹರಾಜಪುರದಲ್ಲಿ. ಮೈಸೂರಿನಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ಮುಗಿಸಿದ ನಂತರ, ಮದನಪಲ್ಲಿಯ ನ್ಯಾಷನಲ್ ಕಾಲೇಜಿನಲ್ಲಿ ಕಲಿತು ಬಿ.ಎ. ಪದವೀಧರರಾದರು.  ತದನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಚನ್ನಪಟ್ಟಣದ ಪ್ರೌಢಶಾಲೆಯಲ್ಲಿ 1922ರಲ್ಲಿ ಅಧ್ಯಾಪಕರಾಗಿ ನೇಮಕವಾದ ಹೊಯಿಸಳರು ನಿವೃತ್ತಿಯ ವರೆಗೂ ಅದೇ…
ಲೇಖಕರು: Ashwin Rao K P
February 09, 2023
“ಜನ ಆಡಿಬಿಡುತ್ತಾರೆ” ಎಂಬ ಶೀರ್ಷಿಕೆಯ ಈ ಕವನ ಸಂಕಲನದ ವಸ್ತು ಚೈನಾ ದೇಶದ ಒಂದು ಕಾಲ ಮಾನದಲ್ಲಿ ಸಂದುಹೋದ ಸಾಮಾನ್ಯಜನರ ಬದುಕು-ಬವಣೆಗಳ ಹೋರಾಟ-ಬಿಡುಗಡೆಗಳ ಹೃದಯವಿದ್ರಾವಕ ಪರಿಣಾಮದಿಂದಾಗಿ ವಿಶೇಷವಾಗಿ ತೋರುವಂಥದು. ಬರೆದ ಕವಿ ಅಜ್ಞಾತನಿರಲಿ, ಜ್ಞಾತನೇ ಇರಲಿ, ಬರೆದದ್ದು ಕಪ್ಪು ಮಸಿಯಿಂದಲ್ಲ, ಎದೆಯಿಂದ ಬಸಿದ ಕೆನ್ನೆತ್ತರ ಗಸಿಯಿಂದ ಎನ್ನುವಂತೆ ಸಾಲುಗಳು ಮನಸ್ಸನ್ನು ಕಲಕುತ್ತವೆ ಎನ್ನುತ್ತಾರೆ ಸಂಶೋಧಕ, ಪ್ರಾಧ್ಯಾಪಕ ಟಿ.ವಿ. ವೆಂಕಟಾಚಲ ಶಾಸ್ತ್ರೀ. ಅವರು ಲೇಖಕ ನೈಷಧಂ ಎಸ್ಸೆ ಅವರ 'ಜನ…
ಲೇಖಕರು: Ashwin Rao K P
February 07, 2023
ಇತ್ತೀಚೆಗೆ ನಮ್ಮನ್ನು ಅಗಲಿದ ಸ್ವಾಮಿ ಸಿದ್ದೇಶ್ವರರು ತಮ್ಮ ಪ್ರಖರವಾದ ಪ್ರವಚನಗಳಿಗೆ ಬಹಳ ಖ್ಯಾತಿಯನ್ನು ಪಡೆದವರು. ಅವರ ಮಾತುಗಳನ್ನು ಆಲಿಸಲು ಬೆಳ್ಳಂಬೆಳಿಗ್ಗೆ ಜನರು ತಂಡೋಪತಂಡವಾಗಿ ಅವರ ಆಶ್ರಮಕ್ಕೆ ಬರುತ್ತಿದ್ದರು. ಅವರು ತಮ್ಮ ಪ್ರವಚನಗಳಲ್ಲಿ ಹೇಳಿದ ಹಲವಾರು ಕಥೆಗಳು, ವಿಷಯಗಳು ಮಕ್ಕಳಿಗೆ ದಾರಿದೀಪವಾಗುವಂಥವುಗಳು. ಅಂತಹ ೩೬ ಕಥೆಗಳನ್ನು ಲೇಖಕರಾದ ರೋಹಿತ್ ಚಕ್ರತೀರ್ಥ ಇವರು ಮಕ್ಕಳಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ನಿರೂಪಣೆ ಮಾಡಿ ‘ಮಕ್ಕಳಿಗಾಗಿ ಸ್ವಾಮಿ ಸಿದ್ಧೇಶ್ವರರ ಕಥೆಗಳು' ಎಂಬ…
February 05, 2023
“ಇಲ್ಲಿಯ ಕಥೆಗಳಲ್ಲಿ ಬಲಿಯಾಗುವ ಯಾರೊಬ್ಬರೂ ತಪ್ಪಿತಸ್ತರಲ್ಲ ಎನ್ನುವುದು ಕೇಡಿನ ಭೀಕರತೆಯನ್ನು ಹೆಚ್ಚು ಮಾಡುತ್ತದೆ. ಕತೆಗಾರ ಮಲ್ಲಿಕಾರ್ಜುನ ಅವರು ಸಹಜವಾಗಿ ಕಟ್ಟಿದ ಕಥೆಗಳು ನಮ್ಮ ಅಂತರಂಗಕ್ಕೆ ಇಳಿಯುತ್ತವೆ. ಆದರೆ ಕೆಲವು ಸಲ ಅವರು ಮಹತ್ವಾಕಾಂಕ್ಷಿಯಿಂದ ಕಥೆಗಳಲ್ಲಿ ಇಣುಕಿದಾಗ ಕಥೆ ಓದುಗರ ಪರಿಧಿಯಿಂದ ದೂರ ಹೋಗುತ್ತದೆ ಎನ್ನಿಸುತ್ತದೆ” ಲೇಖಕ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ದೀಡೆಕೆರೆ ಜಮೀನು ಪುಸ್ತಕಕ್ಕೆ ನಾನು ಬರೆದ ಮುನ್ನುಡಿ ನಿಮ್ಮ ಓದಿಗಾಗಿ... ಕನ್ನಡದಲ್ಲಿ ಗ್ರಾಮೀಣ ಸಂವೇದನೆಯ…