ಪುಸ್ತಕ ಪರಿಚಯ
ಲೇಖಕರು: Ashwin Rao K P
October 13, 2022

‘ಪುರಾಣ ಕನ್ಯೆ' ಕಾದಂಬರಿಯು ಇಂತದ್ದೊಂದು ಅನನ್ಯವೂ ವಿಶಿಷ್ಟವೂ ಆದ ಸಾಂಸ್ಕೃತಿಕ ಲೋಕವನ್ನು ಸ್ಥಳೀಯ ಭಾಷೆಯಲ್ಲಿ ಕಟ್ಟಿಕೊಡುತ್ತಾ ಜನರ ದೈವವೊಂದರ ಕಲ್ಪನೆ ಇನ್ನಷ್ಟು ಸ್ಪುಟಗೊಳ್ಳುವಂತೆ ಮಾಡುತ್ತದೆ. ಈ ದೈವಗಳು ಹಿಂದೂ ಮುಸ್ಲಿಂ ವ್ಯತ್ಯಾಸ ಮಾಡುವುದಿಲ್ಲ ಎನ್ನುತ್ತಾರೆ ಲೇಖಕ ಪುರುಷೋತ್ತಮ ಬಿಳಿಮಲೆ. ಅವರು ಕಾ.ತ ಚಿಕ್ಕಣ್ಣ ಅವರ ‘ಪುರಾಣ ಕನ್ಯೆ’ ಕೃತಿಗೆ ಬರೆದಿರುವ ಮುನ್ನುಡಿ ನಿಮ್ಮ ಓದಿಗಾಗಿ
“ಒಂದು ರೀತಿಯಿಂದ, “ಪುರಾಣ ಕನ್ಯೆ” ಹೆಸರಿನ ಈ ಕಾದಂಬರಿಯು ಚಿಕ್ಕಣ್ಣನವರ ‘ನಿಶಬುದೆಡೆಗೆ”…
ಲೇಖಕರು: addoor
October 13, 2022

ಎಚ್. ಎಸ್. ವೆಂಕಟೇಶಮೂರ್ತಿಯವರ ಆತ್ಮಕಥನಾತ್ಮಕವಾದ ಆಪ್ತ ಪ್ರಬಂಧಗಳ ಸಂಪುಟ "ಅನಾತ್ಮ ಕಥನ.” ಇವನ್ನು ಓದುತ್ತಿದ್ದಂತೆ, ಇವು ನಮ್ಮದೇ ಅನುಭವ ಅನಿಸುತ್ತದೆ. ಹಾಗಿದೆ ಎಚ್.ಎಸ್. ವಿ. ಅವರ ಮನಮುಟ್ಟುವ ಮತ್ತು ಹೃದಯಕ್ಕೇ ಇಳಿಯುವ ಶೈಲಿ. ಜೊತೆಗೆ ಈ ಬರಹಗಳಿಗಾಗಿ ಅವರು ತಮ್ಮ ಅನುಭವದಿಂದ ಆಯ್ದುಕೊಂಡ ಸಂಗತಿಗಳೂ ಅಂಥವೇ.
ಕನ್ನಡಿಗರ ಮೆಚ್ಚಿನ ಕವಿಗಳಲ್ಲಿ ಒಬ್ಬರಾಗಿರುವ ಎಚ್.ಎಸ್.ವಿ. ಅವರು ಜನಿಸಿದ್ದು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೋದಿಗ್ಗೆರೆಯಲ್ಲಿ. ಆರಂಭದ ಮೂವತ್ತು ವರುಷ ಅವರು…
ಲೇಖಕರು: Ashwin Rao K P
October 11, 2022

ಡಾ. ಅಜಿತ್ ಹರೀಶಿ ಹಾಗೂ ವಿಠಲ್ ಶೆಣೈ ಅವರು ತಮ್ಮಂತೆ ಕತೆಗಳನ್ನು ಬರೆಯುವ ಇಪ್ಪತ್ತೆಂಟು ಮಂದಿ ಕಥೆಗಾರರ ಕಥೆಗಳನ್ನು ಸಂಗ್ರಹಿಸಿ 'ಕಥಾಭರಣ' ಮಾಡಿದ್ದಾರೆ. ಪುಸ್ತಕಕ್ಕೆ ಖ್ಯಾತ ಕಾದಂಬರಿಕಾರ ವಸುಧೇಂದ್ರ ಇವರು ಮುನ್ನುಡಿ ಬರೆದಿದ್ದಾರೆ. ಇವರು ತಮ್ಮ ಮಾತುಗಳಲ್ಲಿ “ ಬಹುತೇಕ ಹಳ್ಳಿಗಳಲ್ಲಿ ಸುಗ್ಗಿ ಹಬ್ಬ ಮಾಡುತ್ತಾರೆ. ಹೊಸ ಬೆಳೆ ಮನೆಗೆ ಬಂದ ತಕ್ಷಣ, ಅದರಲ್ಲಿ ಮೊದಲ ಭಾಗವಾಗಿ ತಮ್ಮ ಯೋಗ್ಯತೆಗೆ ತಕ್ಕಂತೆ ಒಂದಿಷ್ಟು ಅನ್ನವನ್ನು ಊರ ದೇವರಿಗೆ ಅರ್ಪಿಸುತ್ತಾರೆ. ಬಡವ, ಬಲ್ಲಿದ, ಮೇಲು, ಕೀಳು…
ಲೇಖಕರು: Ashwin Rao K P
October 07, 2022

ಜೈವಿಕ ಮಹಾಯುದ್ಧ ಮುಂದೇನು...? ಇದು ಕೆ. ನಟರಾಜ್ ಅವರ ಹದಿಮೂರನೆಯ ಪುಸ್ತಕ. ಈ ಪುಸ್ತಕ ಇಂದಿನ ರಾಷ್ಟ್ರ-ರಾಷ್ಟ್ರಗಳ ವಿನಾಶದ ತೊಳಲಾಟವನ್ನು ಪ್ರತಿಬಿಂಬಿಸುತ್ತದೆ. ಮನುಷ್ಯ ನಾಗರೀಕತೆಯ ಹೊಸ್ತಿಲಲ್ಲಿ ಹೆಜ್ಜೆ ಇಟ್ಟಾಗಿನಿಂದ ಆತನ ವಿಲಕ್ಷಣ ಮನಸ್ಸು ವಿನಾಶದ ಕಡೆಗೇ ತುಡಿಯುತ್ತಿರುವುದು ಇತಿಹಾಸ ಕಂಡುಕೊಂಡ ಸತ್ಯ. ಮಾನವನ ಅಭ್ಯುದಯಕ್ಕೆ ವಿಜ್ಞಾನ ಆವಿಷ್ಕಾರಗೊಳ್ಳುತ್ತಿರುವಂತೆಯೇ ಅದರ ಇನ್ನೊಂದು ವಿನಾಶದ, ವಿಧ್ವಂಸದ ಮಜಲು ತೆರೆದುಕೊಳ್ಳುತ್ತಿರುವುದನ್ನು ಇತಿಹಾಸದ ಪುಟ ಪುಟಗಳಲ್ಲಿ ಕಾಣಬಹುದು…
ಲೇಖಕರು: addoor
October 06, 2022

ಪ್ರಾಚೀನ ಭಾರತದ ಸಾಧನೆಯನ್ನು ತಿಳಿಸುವ ಲೇಖನಗಳ ಸಂಗ್ರಹ ಈ ಕೃತಿ. ಇದರ ಪ್ರಕಟಣೆಗೆ ಸಹಕಾರ ನೀಡಿದವರು ಸುರತ್ಕಲ್‌ನ ಶ್ರೀ ಶಾರದಾ ಮಹೋತ್ಸವ ಸಮಿತಿ. 2016ರಲ್ಲಿ ಅದರ 42ನೇ ಶಾರದೋತ್ಸವ ಸಂದರ್ಭದಲ್ಲಿ ಇದನ್ನು ಪ್ರಕಟಿಸಲಾಯಿತು.
ಶಾರದೋತ್ಸವದಲ್ಲಿ ಭಕ್ತರು ಶಾರದೆಯನ್ನು ಪೂಜಿಸಿ, ಪ್ರಸಾದವನ್ನು ಕೊಂಡೊಯ್ಯುವುದರ ಜೊತೆಗೆ, ಸಂಸ್ಕಾರ ನೀಡುವ ಕೃತಿಯೊಂದನ್ನು ಪ್ರಸಾದರೂಪವಾಗಿ ಒಯ್ದು ಮನೆಮಂದಿಗೆ ಸಂಸ್ಕಾರದ ಸುಗಂಧವನ್ನೂ ನೀಡುವಂತಾಗಬೇಕೆಂಬುದು ಸಮಿತಿಯ ಆಶಯ. ಅದಕ್ಕಾಗಿ, ಸಂಸ್ಕಾರಪೂರ್ಣ…
ಲೇಖಕರು: Ashwin Rao K P
October 05, 2022

ಮಾನಸಗಂಗೋತ್ರಿ, ಮೈಸೂರು ಇದರ ಪ್ರಸಾರಾಂಗ ವಿಭಾಗದವರು ‘ಪ್ರಚಾರ ಪುಸ್ತಕ ಮಾಲೆ' ಎಂಬ ಹೆಸರಿನಲ್ಲಿ ಉತ್ತಮ, ಮಾಹಿತಿದಾಯಕ ಸರಣಿ ಪುಸ್ತಕಗಳನ್ನು ಹೊರತರುತ್ತಿದ್ದರು. ಈ ಮಾಲೆಯ ೧೧ ನೇ ಪ್ರಕಟಣೆಯೇ ಎ. ನಾರಾಯಣ ರಾವ್ ಅವರು ಬರೆದ ‘ಪ್ರಾಣಿ ಜೀವನ' ಎಂಬ ಪುಸ್ತಕ. ಪುಸ್ತಕ ಸುಮಾರು ೪ ದಶಕಗಳಷ್ಟು ಹಿಂದಿನದಾದರೂ ಬಹಳಷ್ಟು ಉತ್ತಮ ಮಾಹಿತಿಗಳನ್ನು ಒಳಗೊಂಡಿದೆ.
ಮೈಸೂರು ವಿಶ್ವವಿದ್ಯಾನಿಲಯದ ಅಂದಿನ ಉಪಕುಲಪತಿಗಳಾದ ಇ ಜಿ ಮೆಕಾಲ್ಪೈನ್ ಅವರು ತಮ್ಮ ಮುನ್ನುಡಿಯಲ್ಲಿ ಈ ರೀತಿಯಾಗಿ ಅಭಿಪ್ರಾಯಗಳನ್ನು…