ಪುಸ್ತಕ ಪರಿಚಯ
ಲೇಖಕರು: Ashwin Rao K P
August 25, 2022

ತೆಲುಗು ಭಾಷೆಯಲ್ಲಿ ಕರುಣಾಕರ್ ಸುಗ್ಗುನ ಬರೆದಿರುವ 'ಲೋಕ ಮೆರುಗನಿ ಏಸು ಮರೋರೂಪಂ' (Other side of Jesus) ಪುಸ್ತಕವನ್ನು ಕನ್ನಡಕ್ಕೆ ತಂದಿದ್ದಾರೆ ಬೆಂಗಳೂರಿನ ಎಸ್. ಅಶ್ವತ್ಥ ನಾರಾಯಣ ಇವರು. ವಿಶ್ವ ಹಿಂದು ಪರಿಷದ್ ಇದರ ಧರ್ಮ ಪ್ರಸಾರ ವಿಭಾಗದ ಕೃಷ್ಣಮೂರ್ತಿ ಇವರು ಪುಸ್ತಕದ ಮೊದಲ ಮಾತು ಬರೆದಿದ್ದಾರೆ. ಅದರಲ್ಲಿ ಅವರು "ಕ್ರೈಸ್ತ ಮತ ವಿಚಾರಗಳಲ್ಲಿನ ಅಸಂಬದ್ಧತೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಿದವರು ಕರುಣಾಕರ ಸುಗ್ಗುನರವರು. ತೆಲುಗು ಭಾಷೆಯ ಓದುಗರಿಗೆ ಅವರು ಪರಿಚಿತರು, ಅಷ್ಟೇ ಅಲ್ಲ…
ಲೇಖಕರು: Ashwin Rao K P
August 23, 2022

'ಫ್ಲವರ್ಸ್ ಆಫ್ ಹಿರೋಶಿಮಾ' ಕಾದಂಬರಿಯ ಮೂಲಕ ಜಗತ್ತಿನ ೩೯ ಭಾಷೆಗಳಿಗೆ ಅನುವಾದವಾಗಿರುವ ಈ ಕಾದಂಬರಿಯು, ಕನ್ನಡಕ್ಕೆ ಬಹಳ ತಡವಾಗಿಯಾದರೂ ಡಾ. ವಿಜಯ್ ನಾಗ್ ಅವರಿಂದ ಬರುತ್ತಿರುವುದು ಬಹಳ ಸಂತೋಷದ ವಿಷಯ. ಅಣುದಾಳಿ, ವಿಕಿರಣದ ಪರಿಣಾಮದಿಂದ ಉಂಟಾದ ನೋವು, ಹತಾಷೆಗಳನ್ನೇ ಕೇಂದ್ರವಾಗಿಟ್ಟುಕೊಂಡು ರಚನೆಯಾದ ಕಾದಂಬರಿಗಳ ಪಟ್ಟಿ ಹೇಗೆ ದೊಡ್ಡದಿದೆಯೋ, ಹಾಗೆಯೇ ಮನುಷ್ಯ ಪ್ರಕೃತಿಯ ಮೇಲೆ, ಕೊನೆಗೆ ತನ್ನೊಡನೆ ಇರುವ ಮನುಷ್ಯನ ಮೇಲೆಯೇ ಏಕಸ್ವಾಮ್ಯತೆಯನ್ನು ಸ್ಥಾಪಿಸಲು ಹವಣಿಸಿ ಮಾಡಿಕೊಂಡ ಅಪಾಯಗಳ…
ಲೇಖಕರು: Ashwin Rao K P
August 20, 2022

ಡಾ. ಗೀತಾ ವಸಂತ ಇವರು 'ಅವಳ ಅರಿವು' ಎಂಬ ಲೋಕಾಂತ ಮತ್ತು ಏಕಾಂತದ ಟಿಪ್ಪಣಿಗಳನ್ನು ಬರೆದು ಕೃತಿಯಾಗಿ ಹೊರತಂದಿದ್ದಾರೆ. ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದು ಲೇಖಕಿಯನ್ನು ಹುರಿದುಂಬಿಸಿದ್ದಾರೆ ಸಾಹಿತಿ ಬರಗೂರು ರಾಮಚಂದ್ರಪ್ಪ ಇವರು. ಬರಗೂರು ಇವರು ತಮ್ಮ ಬೆನ್ನುಡಿಯಲ್ಲಿ " ಡಾ. ಗೀತಾ ವಸಂತ ಇವರು ಸಮಕಾಲೀನ ಕನ್ನಡ ಸಾಹಿತ್ಯ ಸಂದರ್ಭದ ಒಬ್ಬ ಗಂಭೀರ ವಿಶ್ಲೇಷಕಿ ಮತ್ತು ಕವಿಯಾಗಿ ಸಾಕಷ್ಟು ಗಮನೀಯರಾಗಿದ್ದಾರೆ. ಅವರು ಕವಿತೆ ಬರೆಯಲಿ ಅಥವಾ ಗದ್ಯ ಬರಹ ರಚಿಸಲಿ ಅಲ್ಲಿ ಅವರದೇ ಆದ ಒಂದು ವಿಶಿಷ್ಟ…
ಲೇಖಕರು: Ashwin Rao K P
August 18, 2022

'ಸಾರಮತಿ' ಪುಸ್ತಕವು ಸಂಗೀತಕ್ಕೆ ಸಂಬಂಧಿಸಿದ ಕೃತಿ. ಇದರ ಬೆನ್ನುಡಿಯಲ್ಲಿ "ಕಲಾವಿದರಲ್ಲಿ ಶೋಧಿಸುದಕ್ಕಿರುವ ತುಡಿತದ ಕಾರಣವೇನು? ಸಂಪ್ರದಾಯ ಎನ್ನುವಂಥದ್ದು ಕೇವಲ ಅನುಕರಣೆಯಾದಾಗ ಆಗುವ ಸಮಸ್ಯೆ ಎಂಥದ್ದು? ಸೃಷ್ಟಿಶೀಲಮನಸ್ಸುಳ್ಳ, ಪ್ರತಿಭೆಯುಳ್ಳ ಕಲಾವಿದನಲ್ಲಿ ಏಕೆ ಅದು ಪ್ರಶ್ನೆಗಳನ್ನು ಎಬ್ಬಿಸುತ್ತದೆ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಕಳೆದ ಶತಮಾನ ಕಂಡ ಶ್ರೇಷ್ಟ ಸಂಗೀತಗಾರರಲ್ಲಿ ಒಬ್ಬರು ಆಂಧ್ರದ ವೋಲೇಟಿ ವೆಂಕಟೇಶ್ವರಲು, ನಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಂಪ್ರದಾಯಕ್ಕೊಂದು…
ಲೇಖಕರು: Ashwin Rao K P
August 16, 2022

ಒಂದು ಸಮಯದಲ್ಲಿ ಪತ್ತೇದಾರಿ ಕಾದಂಬರಿಯನ್ನು ಬರೆಯುವವರ ಸಂಖ್ಯೆ ಬಹಳವಿತ್ತು. ಅವುಗಳನ್ನು ಪ್ರಕಾಶಿಸಲು ಹಾಗೂ ಪ್ರಕಟವಾದ ಬಳಿಕ ಖರೀದಿಸಿ ಓದಲು, ಓದುಗರ ಸಂಖ್ಯೆಯೂ ಸಾಕಷ್ಟಿತ್ತು. ಪತ್ತೇದಾರಿ ಕಾದಂಬರಿಗಳನ್ನು ಪ್ರಕಟ ಮಾಡಲೆಂದೇ ಹಲವಾರು ಮಾಸ ಪತ್ರಿಕೆಗಳಿದ್ದವು, ಕ್ರೈಂ ಕಾದಂಬರಿ, ಸ್ಪೈ, ಡಿಟೆಕ್ಟಿವ್ ಥ್ರಿಲ್ಲರ್ ಮೊದಲಾದ ಪುಸ್ತಕಗಳಿಗೆ ಬಹಳ ಬೇಡಿಕೆ ಇತ್ತು. ಕಾಲಕ್ರಮೇಣ ಮೊಬೈಲ್ ಪ್ರತಿಯೊಬ್ಬರ ಕೈಗೆ ಬಂದಾಗ ಈ ಓದುವ ಹವ್ಯಾಸ ಕಡಿಮೆಯಾಗತೊಡಗಿತು. ಈಗಂತೂ ಮಾರುಕಟ್ಟೆಯಲ್ಲಿ ಒಂದೇ ಒಂದು…
ಲೇಖಕರು: Ashwin Rao K P
August 13, 2022

ತೆಲುಗು ಭಾಷೆಯಿಂದ ಅನುವಾದಗೊಂಡಿರುವ ಈ 'ಮೌನಸಾಕ್ಷಿ' ಕಥಾ ಸಂಕಲನದಲ್ಲಿ ಹನ್ನೊಂದು ವೈವಿಧ್ಯಮಯ ಬದುಕಿನ ಕಥೆಗಳಿವೆ. ಇಲ್ಲಿ ಜಟಿಲವಾದ ಘಟ್ಟದಲ್ಲಿ ಮಧ್ಯಮ ವರ್ಗದ ಹೆಣ್ಣೊಬ್ಬಳು ತನ್ನ ಜೀವನದ ಗಮ್ಯವನ್ನು ರೂಪಿಸಿಕೊಳ್ಳುವ ಗಟ್ಟಿನಿಲುವಿನ ಕಥೆ, ಒಂದು ಸಾಮಾಜಿಕ ಧ್ಯೇಯ ಸಾಧನೆಗೆ ಹೋರಾಡುವ ನಿಸ್ವಾರ್ಥ ಮತ್ತು ಸ್ವಾರ್ಥ ಹೋರಾಟಗಾರರ ಭಿನ್ನ ನಿಲುವುಗಳನ್ನು ಅನಾವರಣಗೊಳಿಸುವ, ಮಕ್ಕಳ ಭವಿಷ್ಯತ್ತಿಗಾಗಿ ಭಾರತೀಯ ಮತ್ತು ಅನಿವಾಸಿ ಭಾರತೀಯ ಪೋಷಕರ ಚಿಂತನೆಗೆ ಕನ್ನಡಿ ಹಿಡಿಯುವ, ನಾಗರಿಕತೆ ಮತ್ತು…