ಪುಸ್ತಕ ಪರಿಚಯ
ಲೇಖಕರು: Ashwin Rao K P
September 08, 2022

ಸಾಹಿತಿ ಶೋಭಾ ರಾವ್ ಅವರು 'ಹನಿ ಕಡಿಯದ ಮಳೆ' ಎಂಬ ಪ್ರಬಂಧ ಮಾಲೆಯನ್ನು ರಚಿಸಿದ್ದಾರೆ. ಈ ಕೃತಿಗೆ ಮಾಲಿನಿ ಗುರುಪ್ರಸನ್ನ ಅವರು ಬೆನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಬೆನ್ನುಡಿಯಲ್ಲಿ "ಸಿಕ್ಕಿದ್ದನ್ನು ಸಿಕ್ಕ ಹಾಗೆಯೇ ಬಳಸಲಾಗದ ಕೆಸ, ಕಳಲೆ ಬದುಕಿನಲ್ಲಿ ಸಂಸ್ಕರಣದ ಅಗತ್ಯವನ್ನು ಎತ್ತಿಹಿಡಿಯುತ್ತಲೇ ಬಾಯಲ್ಲಿ ನೀರೂರಿಸುತ್ತದೆ. ಯಾರು ಪಳಗಿಸಿದರು ಮೊದಲು ಇವನ್ನು? ಮುಟ್ಟಿದರೆ ತುರಿಸುವ ಕೆಸು, ಬಾಯಿಗಿಡಲಾಗದಷ್ಟು ಕಪ್ಪಟೆ ಕಹಿ ಕಳಲೆಯನ್ನು ಇಷ್ಟು ರುಚಿಕಟ್ಟಾಗಿ ಉಣ್ಣಬಹುದು ಎಂದು…
ಲೇಖಕರು: Ashwin Rao K P
September 06, 2022

ಬಿ ಎಸ್ ಜಯಪ್ರಕಾಶ್ ನಾರಾಯಣ ಇವರು ತಮ್ಮ ಅಂತರಂಗದ ಅನನ್ಯರ ಬಗ್ಗೆ ಬರೆದ 'ಜೀವ ಜೀವದ ನಂಟು' ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಜಿ.ಬಿ.ಹರೀಶ್ ಇವರು. ತಮ್ಮ ಮುನ್ನುಡಿಯಲ್ಲಿ "ಸಮಾಜ ಎಂದರೆ ಮನುಷ್ಯರ ವಿಚಿತ್ರಗತಿಯ ಒಕ್ಕೂಟ. ಕಾಲ ಪ್ರವಾಹದಲ್ಲಿ ಅದು ಉಬ್ಬಿ, ಸಂಕೋಚಗೊಂಡು ಒಂದು ನದಿ ಹೇಗೆ ಯುಗಯುಗಗಳಿಗೆ ತನ್ನ ಪಾತ್ರ ಬದಲಿಸುತ್ತದೆಯೋ ಹಾಗೆ ಬದಲಾಗುತ್ತದೆ. ನಾನು ಮತ್ತು ಜೆ ಪಿ ಒಂದೇ ಜಿಲ್ಲೆಯವರು. ಅವರು ಬೆಳೆದದ್ದು ತೆಂಗಿನ ಸೀಮೆಯಲ್ಲಿ. ನಾನು ಬೆಳೆದದ್ದು ಅರೆಮಲೆನಾಡಿನ ಹಾಸನ…
ಲೇಖಕರು: Ashwin Rao K P
September 03, 2022

ವಿಜಯ ನಗರ ಸಾಮ್ರಾಜ್ಯದ ಬಗ್ಗೆ ಹಲವಾರು ಉತ್ತಮ ಪುಸ್ತಕಗಳು ಹೊರಬಂದಿವೆ. ಅದೇ ಸಾಲಿಗೆ ಸೇರುವ ಮತ್ತೊಂದು ಪುಸ್ತಕ ಖ್ಯಾತ ಸಾಹಿತಿ ಕೌಂಡಿನ್ಯ ಇವರು ಬರೆದ 'ಆ ವಿಜಯನಗರ'. ಇದೊಂದು ಐತಿಹಾಸಿಕ ಕಾದಂಬರಿ. ವಿಜಯನಗರದ ವೀರಪುತ್ರನ ಯಶೋಗಾಥೆಯನ್ನು ಹೇಳುವ ಕಾದಂಬರಿ ಎನ್ನುತ್ತಾರೆ ಲೇಖಕರು. ಯಾರು ವಿಜಯನಗರದ ವೀರಪುತ್ರ? ಎಂಬ ಕುತೂಹಲವೇ? ತಿಳಿಯಲು ಈ ಐತಿಹಾಸಿಕ ಕಾದಂಬರಿಯನ್ನು ಓದಿ.
ಪುಸ್ತಕದ ಬೆನ್ನುಡಿಯಲ್ಲಿ ಕಂಡ ಬರಹ "ಹಿಂದೂಗಳ, ಹಿಂದೂ ಧರ್ಮದ ರಕ್ಷಾ ಕವಚವಾಗಿ, ಸಾಮ್ರಾಜ್ಯ ವಿಸ್ತರಣೆ ಮತ್ತು…
ಲೇಖಕರು: Ashwin Rao K P
September 02, 2022

ಜಗದ್ವಿಖ್ಯಾತ ಸ್ತ್ರೀವಾದಿ ಚಿಂತಕಿ ಕೇಟ್ ಮಿಲೆಟ್ ಅವರ 'Sexual Politics’ ಕೃತಿಯ ಕನ್ನಡ ನಿರೂಪಣೆ ಶ್ರೀಮತಿ ಎಚ್ ಎಸ್ ಅವರಿಂದ ಮೊದಲ ಬಾರಿ ಕನ್ನಡಕ್ಕೆ ಅನುವಾದಗೊಂಡಿದೆ. ಇದು ಸ್ತ್ರೀವಾದ ಕ್ಷೇತ್ರದಲ್ಲಿ ಒಂದು ಕ್ರಾಂತಿಕಾರಿ ಕೃತಿ ಎಂದೇ ಹೇಳಬಹುದು. ಪುರುಷ ಪ್ರಧಾನತೆಯ ಹೆಣ್ಣನ್ನು ಲೈಂಗಿಕತೆಯ ಮೂಲಕ ಅಧೀನಗೊಳಿಸಿರುವುದನ್ನು ಕೂಲಂಕುಷವಾಗಿ ತೆರೆದಿಡುತ್ತದೆ. ಲೈಂಗಿಕತಾ ರಾಜಕಾರಣದ ಅನೇಕ ಆಯಾಮಗಳನ್ನು ಸಮರ್ಪಕವಾದ, ಖಚಿತವಾದ ನೆಲೆಯಲ್ಲಿ ಶೋಧಿಸಿದೆ. ಅಧಿಕಾರವು ಪುರುಷ ಪ್ರಧಾನತೆಯನ್ನು…
ಲೇಖಕರು: Ashwin Rao K P
August 30, 2022

"ಮಂಜೇಶ್ವರದ ಸಾರಸ್ವತ ಕೊಂಕಣಿ ಮನೆತನದ ಪುಟ್ಟ ಬಾಲೆ ಅಮ್ಮಣು ಆರೇಳರ ಹರೆಯದ ಬಾಲ್ಯದ ತನ್ನ ಅರಸುವ ಕಣ್ಗಳಿಂದ ಕಂಡ ಕಥನವಿದು ! ಒಂದೊಂದು ಅಧ್ಯಾಯವನ್ನು ಓದುತ್ತಿದ್ದಂತೆ ನಾನು ಆ ಬರಹದಲ್ಲಿ ಜಿನುಗುತ್ತಿದ್ದ ವಾತ್ಸಲ್ಯದ ಧಾರೆಯಲ್ಲಿ ತೊಯ್ದು ಹೋದೆ. ಎಂಬತ್ತು ವರ್ಷಗಳ ಹಿಂದೆ ನಿಧಾನವಾಗಿ ಸರಿದು ಹೋದ ಎಂಥ ಸುಂದರ ದಿನಗಳವು ! ಬಾಲ್ಯಕಾಲ ಬೀಸಿದ ಆ ತಂಬೆಲರ ಮಾಯಾಜಾಲದೊಳಗೆ ನಾನು ಕಳೆದೇ ಹೋದೆ.
ಸಾರಸ್ವತ ಕೊಂಕಣಿ ಸಮಾಜದ ಆಗಿನ ಕಾಲದ ಜನರ ಜೀವನದ ರೀತಿ, ನೀತಿಗಳು ಉತ್ತಮ ದಾಖಲಾತಿ ಕೃತಿಯುದ್ದಕ್ಕೂ…
ಲೇಖಕರು: Ashwin Rao K P
August 27, 2022

"ಕಿತ್ತೂರು ರಾಣಿ ಚೆನ್ನಮ್ಮಳ ಉನ್ನತೋನ್ನತ ಬಹುಮುಖಿ ವ್ಯಕ್ತಿತ್ವದ ಆಯಾಮವನ್ನು ಬಿಂಬಿಸುವ ಕಥೆ, ಕಾದಂಬರಿ, ಕವನ, ಲೇಖನ, ಸಂಶೋಧನ ಗ್ರಂಥ ಸಾಕಷ್ಟು ಬಂದಿದೆ. ಅವುಗಳಿಗೆ ಮುಡಿಯ ಮಾಣಿಕ್ಯವಾಗಿ 'ಸ್ವಾತಂತ್ರ್ಯದ ಕಿಚ್ಚು ಕಿತ್ತೂರು ರಾಣಿ ಚೆನ್ನಮ್ಮ' ಎಂಬ ಬೃಹತ್ ಚಾರಿತ್ರಿಕ ಕಾದಂಬರಿಯನ್ನು ತಂಗಿ ವಿಜಯಲಕ್ಷ್ಮಿ ಶಿವಕುಮಾರ ಕೌಟಗೆ ರಚಿಸಿದ್ದಾರೆ.
ದಾನಚಿಂತಾಮಣಿ ಅತ್ತಿಮಬ್ಬೆ, ಪಟ್ಟ ಮಹಿಷಿ ಶಾಂತಲಾ ದೇವಿ, ತಪಸ್ವಿನಿ ಅಕ್ಕಮಹಾದೇವಿ, ತೇಜಸ್ವಿನಿ ಕೆಳದಿ ಚೆನ್ನಮ್ಮ ಮೊದಲಾದವರ ಉದಾತ್ತ…