ಪುಸ್ತಕ ಪರಿಚಯ
ಲೇಖಕರು: Ashwin Rao K P
July 28, 2022

ಕಥೆಗಾರ, ಪತ್ರಕರ್ತ ರವೀಂದ್ರ ಶೆಟ್ಟಿ ಕುತ್ತೆತ್ತೂರು ಇವರ ಎರಡನೇ ಕಥಾ ಸಂಕಲನವೇ 'ಅಂತಿಮವಾದ'. ಕರ್ಮವೀರ, ಹೊಸದಿಗಂತ, ಕುಂದಪ್ರಭ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾದ ಹತ್ತು ಕಥೆಗಳು ಈ ಸಂಕಲನದಲ್ಲಿವೆ. ಈ ಕಥಾ ಸಂಕಲನದಲ್ಲಿ ಅಂತಿಮವಾದ, ದೊಡ್ಮನೆ ನಾಯಿ, ಆಧುನಿಕ ಭಸ್ಮಾಸುರ, ಸೀಮಾ, ತೀರಗಳು, ಕೊರಡು ಕೊನರುವುದೇ?, ಬಲಿ, ದಾರಿ ತೋರಿಸಿದಾಕೆ, ಭ್ರಮೆ, ಹೀಗೊಬ್ಬ ಕಥೆಗಾರ ಎಂಬ ಹತ್ತು ಕಥೆಗಳಿವೆ.
ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ ಖ್ಯಾತ ಸಾಹಿತಿ ಅಮೃತ ಸೋಮೇಶ್ವರ. ಇವರು ತಮ್ಮ ನುಡಿಯಲ್ಲಿ…
ಲೇಖಕರು: Ashwin Rao K P
July 26, 2022

ಜನರಲ್ ಬಿಪಿನ್ ರಾವತ್ ಅವರು ಭಾರತದ ಮೊದಲ ಸಿಡಿಎಸ್ (Chief of Defence Staff) ಆಗಿದ್ದರು. ಈ ಹುದ್ದೆಯಲ್ಲಿರುವಾಗಲೇ ಇವರು ಒಂದು ದುರ್ಘಟನೆಯಲ್ಲಿ ಹುತಾತ್ಮರಾದರು. ಇದಕ್ಕೂ ಮುನ್ನ ಇವರು ಭಾರತೀಯ ಸೇನೆಯ ಮುಖ್ಯಸ್ಥರಾಗಿಯೂ ಸೇವೆ (೩೧-೧೨-೨೦೧೬ ರಿಂದ ೩೧-೧೨-೨೦೧೯ರವರೆಗೆ) ಸಲ್ಲಿಸಿದ್ದರು. ಸಿಡಿಎಸ್ ಆಗಿದ್ದ ಸಂದರ್ಭದಲ್ಲಿ ಇವರು ತಮ್ಮ ಪತ್ನಿ ಮಧುಲಿಕ ರಾವತ್ ಹಾಗೂ ೧೨ ಸೇನಾ ಸಿಬ್ಬಂದಿಗಳ ಜತೆ ಹೆಲಿಕಾಪ್ಟರ್ ನಲ್ಲಿ ತಮಿಳುನಾಡಿನ ನೀಲಗಿರಿ ಪರ್ವತದ ಪ್ರದೇಶದಲ್ಲಿ ಸಂಚರಿಸುತ್ತಿರುವಾಗ…
ಲೇಖಕರು: Ashwin Rao K P
July 23, 2022

ಡಾ. ಸತ್ಯನಾರಾಯಣ ಭಟ್ ಅವರು ಬರೆದ 'ಹಳ್ಳಿ ಮರಗಳಲ್ಲಿ ಬೆಳ್ಳಿ ಬಂಗಾರ' ಎಂಬ ಸಸ್ಯಲೋಕದ ವೈದ್ಯಕೀಯ ಗುಣಲಕ್ಷಣಗಳುಳ್ಳ ಮರ ಗಿಡಗಳ ಸಚಿತ್ರ ಪರಿಚಯವನ್ನು ನೀಡುವ ಕೃತಿ. ಪುಸ್ತಕದ ಬಗ್ಗೆ ಪ್ರಾಥಮಿಕ ವಿವರಗಳನ್ನು ನೀಡಬಹುದಾದ ಯಾವುದೇ ಮುನ್ನುಡಿ, ಬೆನ್ನುಡಿಗಳು ಈ ಪುಸ್ತಕದಲ್ಲಿಲ್ಲ. ಲೇಖಕರ ಪರಿಚಯವೂ ಇಲ್ಲವಾದುದರಿಂದ ಈ ಪುಸ್ತಕದ ಹಿಂದಿನ ಕಥೆಗಳು ತಿಳಿದುಬರುತ್ತಿಲ್ಲ. ಆದರೆ ಪುಸ್ತಕದಲ್ಲಿ ೫೦ ಬಗೆಯ ವಿವಿಧ ಉಪಕಾರಿ ಸಸ್ಯಗಳ ಪರಿಚಯವನ್ನು ಬಹಳ ಸೊಗಸಾಗಿ ನೀಡಿದ್ದಾರೆ.
ಅಗಸೆ, ಅಣಿಲೆ, ಅಶ್ವತ್ಥ,…
ಲೇಖಕರು: Ashwin Rao K P
July 21, 2022

ನವಕರ್ನಾಟಕ ಪ್ರಕಾಶನ ಸಂಸ್ಥೆಯು ಹೊರತಂದಿರುವ ನವಕರ್ನಾಟಕ ಕಿರಿಯರ ಕಥಾ ಮಾಲೆಯ ಸರಣಿಯ ಪುಸ್ತಕವೇ 'ವಿನೋದ ಕಥೆಗಳು'. ಈ ಪುಸ್ತಕದಲ್ಲಿ ವಿವಿಧ ಲೇಖಕರ ಆಯ್ದ ಉತ್ತಮ ಕಥೆಗಳನ್ನು ಆರಿಸಿ ಪ್ರಕಟ ಮಾಡಿದ್ದಾರೆ. ಮಕ್ಕಳಿಗೆ ಓದಲು ಹಾಗೂ ಓದಿ ಹೇಳಲು ಅನುಕೂಲಕರವಾದ ಪುಸ್ತಕ ಇದು. ಈಗಾಗಲೇ ೧೧ ಮುದ್ರಣಗಳನ್ನು ಕಂಡಿದೆ.
ಪ್ರಕಾಶನದ ಪರವಾಗಿ ಆರ್ ಎಸ್ ರಾಜಾರಾಮ್ ಅವರು ತಮ್ಮ ನುಡಿಯಲ್ಲಿ " ಮಕ್ಕಳ ಓದುವ ಅಭಿರುಚಿಗೆ ಸಹಾಯಕವಾಗುವ ಉದ್ದೇಶದಿಂದ ಪ್ರಕಟವಾಗುತ್ತಿರುವ 'ವಿನೋದ ಕಥೆಗಳು' ಒಂದು ವಿಶಿಷ್ಟ…
ಲೇಖಕರು: Ashwin Rao K P
July 19, 2022

ದನಗಳ ಪಾಲನೆ, ರೋಗಗಳು, ಮುಂಜಾಗ್ರತೆ ಹಾಗೂ ಪ್ರಾಥಮಿಕ ಚಿಕಿತ್ಸೆ ಕುರಿತು ಜನಪ್ರಿಯ ಪಶುವೈದ್ಯಕೀಯ ಲೇಖನಗಳ ಸಂಗ್ರಹವೇ ‘ಪಶುವೈದ್ಯ ಸಮಾಲೋಕನ' ಎಂಬ ಪುಸ್ತಕ. ಧಾರವಾಡದ ಕೃಷಿ ವಿಶ್ವವಿದ್ಯಾನಿಲಯದ ಪಶು ವೈದ್ಯಕೀಯ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಕೆ ಆರ್ ಲಕ್ಷ್ಮಯ್ಯ ಇವರು ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ "ಪಶುವೈದ್ಯಕೀಯ ಅತ್ಯಂತ ಪವಿತ್ರ ವೃತ್ತಿ. ಮೂಕ ಪ್ರಾಣಿಗಳ ವೇದನೆ ಪರಿಹರಿಸುವಲ್ಲಿ ಮತ್ತು ಬಡ ಪಶುಪಾಲಕನ ಶ್ರೇಯೋಭಿವೃದ್ಧಿಯಲ್ಲಿ ಪಶುವೈದ್ಯ…
ಲೇಖಕರು: Ashwin Rao K P
July 16, 2022

“ಭಾರತದಲ್ಲಿ ವೆನಿಲ್ಲಾ ಬೆಳೆಯ ವಾಣಿಜ್ಯ ಕೃಷಿ ಈಗ್ಗೆ ಕೆಲವು ವರ್ಷಗಳಿಂದ ಮಾತ್ರ ನಡೆಯುತ್ತಿದೆ. ವೆನಿಲ್ಲಾ ಬೆಳೆಗಾರರಿಗೆ ಈ ಬೆಳೆಯ ಕೃಷಿಯ ಬಗ್ಗೆ ಉಪಯುಕ್ತ ತಾಂತ್ರಿಕ ಮಾಹಿತಿಯ ಕೊರತೆಯನ್ನು ಈ ಪುಸ್ತಕ ನಿವಾರಿಸಿದೆ. ವೆನಿಲ್ಲಾ ಕೃಷಿಯನ್ನು ಆರಂಭಿಸಲು ಆಸಕ್ತರಿರುವ ರೈತರಿಗೆ ಇದು ಒಂದು ಉತ್ತಮ ಕೈಪಿಡಿ. ವೆನಿಲ್ಲಾ ಕೃಷಿಗೆ ತಗಲುವ ವೆಚ್ಚ, ಅದರ ಲಾಭ ಮುಂತಾದ ಉಪಯುಕ್ತ ಮಾಹಿತಿಯಿರುವ ಈ ಪುಸ್ತಕ ವೆನಿಲ್ಲಾ ಬೆಳೆಗೆ ಸಾಲವ್ಯವಸ್ಥೆಯನ್ನು ಯೋಜಿಸಲು ಬ್ಯಾಂಕುಗಳಿಗೆ ಅತ್ಯವಶ್ಯ. ತಾಂತ್ರಿಕ ಸಲಹೆ…