ಪುಸ್ತಕ ಪರಿಚಯ
ಲೇಖಕರು: Ashwin Rao K P
June 29, 2022

'ಸುಡು ಬಯಲು' ಎನ್ನುವುದು ಒಂದು ಅಂಕಣ ಬರಹಗಳ ಸಂಗ್ರಹ. ೭೨ ಬರಹಗಳು ಈ ಪುಸ್ತಕದಲ್ಲಿವೆ. ಈ ಪುಸ್ತಕವು ಕೊರೊನಾ ಸಾಂಕ್ರಾಮಿಕದ ಸಮಯದ ಜನರ ತಲ್ಲಣಗಳು, ವೈದ್ಯರ ಶ್ರಮ, ಮಾಧ್ಯಮದವರ ಅತಿರೇಕ ಎಲ್ಲವುದರ ಕುರಿತು ಬೆಳಕು ಚೆಲ್ಲುತ್ತದೆ. ಅದಕ್ಕೇ ಮಣಿ ಅವರು ಪುಸ್ತಕದ ಮುಖಪುಟದಲ್ಲೇ 'ಸತ್ಯಾನ್ವೇಷಣೆಯ ಬೆನ್ನೇರಿ...' ಎಂದು ಮುದ್ರಿಸಿದ್ದಾರೆ. ಪತ್ರಕರ್ತರಾಗಿರುವ ಮಣಿ ಅವರು ಕೊರೊನಾ ಸಂದರ್ಭದ ವಾಸ್ತವಾಂಶಗಳನ್ನು ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.
ಬೆಂಗಳೂರಿನ ಹಿರಿಯ ಪತ್ರಕರ್ತರೂ,…
ಲೇಖಕರು: Ashwin Rao K P
June 28, 2022

ರೈತ ಹೋರಾಟಗಾರ ಹೆಚ್ ಆರ್ ಬಸವರಾಜಪ್ಪನವರ ಐದು ದಶಕಗಳ ಹೋರಾಟದ ಹಿನ್ನೋಟವೇ 'ಹಸಿರು ಹಾದಿಯ ಕಥನ' ಎಂಬ ಕೃತಿ. ಬಸವರಾಜಪ್ಪನವರ ಮಾತುಗಳನ್ನು ಗಿರೀಶ್ ತಾಳೀಕಟ್ಟೆ ಹಾಗೂ ಕೆ ಎಲ್ ಅಶೋಕ್ ಅವರು ಸೊಗಸಾಗಿ ನಿರೂಪಿಸುತ್ತಾ ಅಕ್ಷರರೂಪಕ್ಕೆ ಇಳಿಸಿದ್ದಾರೆ. ೮೦ರ ದಶಕದಲ್ಲಿ ಆರಂಭವಾದ ರೈತ ಚಳುವಳಿಯಲ್ಲಿ ಮುಂಚೂಣಿ ನಾಯಕತ್ವ ವಹಿಸಿದ್ದ ಬಸವರಾಜಪ್ಪನವರು ಇಂದಿಗೂ ಅಷ್ಟೇ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ರೈತರ ಮನೆ ಜಪ್ತಿಗೆ ಪ್ರತಿಯಾಗಿ ಬಸವರಾಜಪ್ಪನವರ ನೇತೃತ್ವದಲ್ಲಿ ಭದ್ರಾವತಿಯ ತಹಶೀಲ್ದಾರ್…
ಲೇಖಕರು: Ashwin Rao K P
June 25, 2022

ದೀಪಾ ಹಿರೇಗುತ್ತಿ ಇವರು ಬರೆದ ವ್ಯಕ್ತಿತ್ವ ವಿಕಸನದ ಬರಹಗಳೇ 'ಸೋಲೆಂಬ ಗೆಲುವು' ಈ ಪುಸ್ತಕವನ್ನು ಪ್ರಕಾಶಿಸಿದವರು ವೀರಲೋಕ ಪ್ರಕಾಶನ ಇವರು. ಇದರ ಮಾಲಕರಾದ ವೀರಕಲೋಕ ಶ್ರೀನಿವಾಸ ಇವರು ತಮ್ಮ ಬೆನ್ನುಡಿಯಲ್ಲಿ ಈ ಪುಸ್ತಕ ಪ್ರಕಾಶನದ ಹೇಳಿಕೊಂಡದ್ದು ಹೀಗೆ..." "ನಿಮ್ಮ ನಾಲಿಗೆ ಬಯಸುವ ಚಾಕೋಲೆಟೊಂದು ಸಲೀಸಾಗಿ ನಿಮ್ಮನ್ನು ತಲುಪುವಂತೆ, ನಿಮ್ಮ ಬುದ್ಧಿ ಇಷ್ಟ ಪಡುವ ಪುಸ್ತಕವೊಂದು ನಿಮ್ಮ ಗೂಡಿಗೆ ತಲುಪಿಸಲು ಹರಸಾಹಸ ಪಡಬೇಕಾದ ಸ್ಥಿತಿ ಕನ್ನಡದಲ್ಲಿದೆ. ಅದನ್ನು ಮನಗಂಡು ನೀವು ಇರುವಲ್ಲೇ, ನೀವು…
ಲೇಖಕರು: addoor
June 24, 2022

ಈ ಪುಸ್ತಕದ ಒಂದೊಂದೇ ಲೇಖನ ಓದುತ್ತ ಹೋದಂತೆ, ಪರಿಸರ ನಮ್ಮ ಬದುಕನ್ನು ತಟ್ಟುವ ವಿವಿಧ ಪರಿಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಊರಿಗೆ ಮಂಜೂರಾದ ಮೂರು ಟ್ಯೂಬ್‍ಲೈಟ್‍ಗಳನ್ನು ಗ್ರಾಮ ಪಂಚಾಯತಿಯ ಸದಸ್ಯರ ಮನೆ ಮುಂದೆಯೇ ಹಾಕಬೇಕೆಂದು ಕೆಇಬಿ ಲೈನ್‍ಮನ್‍ಗೆ ತಾಕೀತು ಮಾಡುವ ಒಬ್ಬ ಗ್ರಾಮ ಪಂಚಾಯತಿ ಸದಸ್ಯನ ಉದಾಹರಣೆಯೊಂದಿಗೆ ಪುಸ್ತಕದ "ಮುನ್ನುಡಿ"ಯನ್ನು ಆರಂಭಿಸುತ್ತಾರೆ ಸಂಪಾದಕರು.
"ಹಳ್ಳಿಗಳಲ್ಲಿನ ರಾಜಕೀಯ ಮತ್ತು ಇಂದಿನ ಪರಿಸ್ಠಿತಿಗಳ ಬಗ್ಗೆ ಗೊತ್ತಿರುವ ಯಾರೂ ಆ ಕಡೆ ಸುಳಿಯದಂಥ ವಾತಾವರಣ…
ಲೇಖಕರು: Ashwin Rao K P
June 23, 2022

ನವಕರ್ನಾಟಕ ಪ್ರಕಾಶನ ಇವರು ಹೊರತರುತ್ತಿರುವ 'ವಿಶ್ವ ಮಾನ್ಯರು' ಮಾಲಿಕೆಯಲ್ಲಿ ಹೊರಬಂದ ಕೃತಿಯೇ ನಕ್ಷತ್ರಗಳ ಭವಿಷ್ಯಕಾರ 'ಸುಬ್ರಹ್ಮಣ್ಯನ್ ಚಂದ್ರಶೇಖರ್'. ಈ ಮಾಲಿಕೆಯ ಸಂಪಾದಕರು ಖ್ಯಾತ ಸಾಹಿತಿ ಡಾ. ನಾ ಸೋಮೇಶ್ವರ ಹಾಗೂ ಕೃತಿಯ ಲೇಖಕರು ವಿಜ್ಞಾನ ಬರಹಗಾರರಾದ ರೋಹಿತ್ ಚಕ್ರತೀರ್ಥ ಇವರು. ರೋಹಿತ್ ಅವರು ಕನ್ನಡದಲ್ಲಿ ವಿಜ್ಞಾನ-ಗಣಿತ ಬರಹಗಾರರ ಸಂಖ್ಯೆ ಕಡಿಮೆ ಎಂಬ ಕೊರತೆಯನ್ನು ನೀಗಿಸಿದವರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರ ಹಲವಾರು ಪುಸ್ತಕಗಳನ್ನು ನವಕರ್ನಾಟಕ ಪ್ರಕಾಶನ ಹೊರ…
ಲೇಖಕರು: Ashwin Rao K P
June 21, 2022

ಸಾಮಾಜಿಕ ಕಳಕಳಿಯ ಧೀಮಂತ ವಿಜ್ಞಾನಿ 'ಸತೀಶ್ ಧವನ್' ಎಂಬ ಪುಸ್ತಕವನ್ನು 'ವಿಶ್ವಮಾನ್ಯರು' ಪ್ರಕಟಣೆಯ ಅಡಿಯಲ್ಲಿ ಮುದ್ರಿಸಿ ಹೊರತಂದಿದ್ದಾರೆ ಬೆಂಗಳೂರಿನ ನವಕರ್ನಾಟಕ ಪ್ರಕಾಶನ ಇವರು. ವಿಶ್ವಮಾನ್ಯರು ಸರಣಿಯ ಸಂಪಾದಕರು ಖ್ಯಾತ ಸಾಹಿತಿ ಡಾ. ನಾ ಸೋಮೇಶ್ವರ ಇವರು. ಸತೀಶ್ ಧವನ್ ಬಗ್ಗೆ ಸೊಗಸಾದ ಮಾಹಿತಿ ಬರೆದಿದ್ದಾರೆ ಡಾ ಬಿ ಆರ್ ಗುರುಪ್ರಸಾದ್ ಇವರು. ಬಾಹ್ಯಾಕಾಶ ಮತ್ತು ಖಗೋಳ ವಿಜ್ಞಾನದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿರುವ ಗುರುಪ್ರಸಾದ್ ಇವರು ೩೭ ವರ್ಷ ಇಸ್ರೋದಲ್ಲಿ ಸೇವೆ ಸಲ್ಲಿಸಿ…