ಪುಸ್ತಕ ಪರಿಚಯ
ಲೇಖಕರು: Ashwin Rao K P
June 03, 2022

ಖ್ಯಾತ ಪತ್ರಕರ್ತ ದಿ.ರವಿ ಬೆಳಗೆರೆ ಅವರ ಹಿಂದಿನ ಕಾದಂಬರಿಗಳಾದ ‘ಮಾಟಗಾತಿ' ಮತ್ತು ‘ಸರ್ಪ ಸಂಬಂಧ' ಇದರ ಮುಂದುವರಿದ ಭಾಗವೇ ‘ಪ್ರದೋಷ'. ಆದರೆ ದುರದೃಷ್ಟವಷಾತ್ ರವಿ ಬೆಳಗೆರೆ ಅವರ ಅಕಾಲ ನಿಧನದಿಂದಾಗಿ ಈ ಕಾದಂಬರಿಯು ಪೂರ್ಣಗೊಂಡಿಲ್ಲ. ಅಪೂರ್ಣವಾಗಿರುವ ಕಾದಂಬರಿಯನ್ನೇ ಪುಸ್ತಕ ರೂಪದಲ್ಲಿ ನೀಡಿದ್ದಾರೆ.
ರವಿ ಬೆಳಗೆರೆ ಅವರು ತಮ್ಮ ಬೆನ್ನುಡಿಯಲ್ಲಿ “ಅದು ಪ್ರದೋಷ ಕಾಲ! ಭಗವಂತ ಇದ್ದಾನಾ? ಗೊತ್ತಿಲ್ಲ. ಪ್ರೇತಾತ್ಮವಿದೆಯಾ? ತಿಳಿದಿಲ್ಲ. ಹೇಗೆ ಭಗವಂತನ ಸುತ್ತ ಗುಡಿ, ಗೋಪುರ, ಕಳಶ, ಮಂತ್ರ,…
ಲೇಖಕರು: addoor
June 02, 2022

ಯಕ್ಷಗಾನದ ಪ್ರಸಿದ್ಧ ಅರ್ಥಧಾರಿಗಳಾದ ಪೊಳಲಿ ನಿತ್ಯಾನಂದ ಕಾರಂತರು ಸುಮಾರು ೨೦ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ ಎಂಬ ಸಂಗತಿ ಹಲವರಿಗೆ ತಿಳಿದಿಲ್ಲ. ಅದಕ್ಕೆ ಒಂದು ಕಾರಣ ಅವು ಪುಸ್ತಕ ರೂಪದಲ್ಲಿ ಪ್ರಕಟವಾಗಿರಲಿಲ್ಲ. ಇದೀಗ “ಯಕ್ಷಗಾನ ಪ್ರಸಂಗ ಸಂಪುಟ”ದಲ್ಲಿ ಅವರು ರಚಿಸಿದ ಆರು ಯಕ್ಷಗಾನ ಪ್ರಸಂಗಗಳು ಪ್ರಕಟವಾಗಿರುವ ಕಾರಣ ಮುಂದಿನ ತಲೆಮಾರುಗಳಿಗೆ ಅವು ಲಭ್ಯವಾಗಿವೆ.
ಈ ಸಂಪುಟದಲ್ಲಿರುವ ಆರು ಯಕ್ಷಗಾನ ಪ್ರಸಂಗಗಳು: ಸತ್ಯದಪ್ಪೆ ಚೆನ್ನಮ್ಮ, ನಾಡ ಕೇದಗೆ, ಕಾಂತು ಕಬೇದಿ, ಸಾಮ್ರಾಟ್…
ಲೇಖಕರು: Ashwin Rao K P
May 31, 2022

ಟೈಟಾನಿಕ್ ಎಂಬ ಐಷಾರಾಮಿ ಹಡಗಿನ ಬಗ್ಗೆ ಎಷ್ಟೊಂದು ಪುಸ್ತಕಗಳು, ಚಲನಚಿತ್ರಗಳು ಬಂದಿದ್ದರೂ, ಆ ಹಡಗಿನ ಬಗ್ಗೆ, ಅದು ಮುಳುಗಡೆಯಾದ ಬಗ್ಗೆ, ಅದರಲ್ಲಿ ಬದುಕುಳಿದ ಪ್ರಯಾಣಿಕರ ಬಗ್ಗೆ ಕುತೂಹಲಕಾರಿ ಸಂಗತಿಗಳು ಹೊರ ಬರುತ್ತಲೇ ಇವೆ. ಇದೇ ವಿಷಯದ ಬಗ್ಗೆ ಹೊರಬಂದಿರುವ ಹೊಸ ಪುಸ್ತಕ ‘ಮುಳುಗಿದ ಸ್ವರ್ಗ ಟೈಟಾನಿಕ್'. ಲೇಖಕರಾದ ಕೆ ನಟರಾಜ್ ಅವರು ಸಾಗರ ಸುಂದರಿ ಟೈಟಾನಿಕ್ ಮುಳುಗಿದ ಕಥೆ-ವ್ಯಥೆಯನ್ನು ಹೇಳಲು ಹೊರಟಿದ್ದಾರೆ.
ಕೆ.ನಟರಾಜ್ ಅವರು ವಿಜ್ಞಾನ ಮತ್ತು ಇತಿಹಾಸದ ಲೇಖಕರು. ಉತ್ತಮ ಕವಿಯೂ ಹೌದು.…
ಲೇಖಕರು: Ashwin Rao K P
May 27, 2022

ಬಹಳಷ್ಟು ಬರಹಗಾರರಿಗೆ ಪತ್ರಿಕೆಗಳಿಗೆ ಯಾವ ರೀತಿಯ ಬರಹಗಳನ್ನು ಬರೆದು ಕಳಿಸಬೇಕು ಎನ್ನುವ ಗೊಂದಲ ಇರುತ್ತದೆ. ಹಲವಾರು ಲೇಖಕರು ಸೊಗಸಾಗಿ ಬರೆಯುತ್ತಾರೆ, ಆದರೆ ಅವರ ಲೇಖನಗಳು ಯಾವುದೇ ಪತ್ರಿಕೆಯ ಪುಟಗಳಿಗೆ ಸರಿಹೊಂದುವುದಿಲ್ಲ. ಯಾವ ರೀತಿಯ ಬರಹ, ಯಾವ ಪತ್ರಿಕೆಯ ಯಾವ ಪುರವಣಿಗೆ ಸೂಕ್ತ ಎನ್ನುವ ಸಾಮಾನ್ಯ ಜ್ಞಾನವನ್ನು ಪ್ರತಿಯೊಬ್ಬ ಲೇಖಕರು ಹೊಂದಿರುವುದು ಅಗತ್ಯ. ಇದರ ಜೊತೆಗೆ ಲೇಖನಗಳಲ್ಲಿನ ಪದಗಳ ಮಿತಿಯನ್ನು ಗಮನಿಸುವುದು ಅತ್ಯಂತ ಅಗತ್ಯ. ಬಹಳಷ್ಟು ಬರಹಗಾರರು ಹೊಂದಿರುವ ಹಲವಾರು…
ಲೇಖಕರು: addoor
May 26, 2022

ದೇಶದ ಆರ್ಥಿಕತೆ, ಬಡತನ - ಶ್ರೀಮಂತಿಕೆ, ಜನಸಾಮಾನ್ಯರ ಬದುಕಿನ ಮೇಲೆ ಸರಕಾರದ ನೀತಿಗಳ ಪರಿಣಾಮಗಳು - ಇಂತಹ ವಿಷಯಗಳ ಬಗ್ಗೆ ಕನ್ನಡದಲ್ಲಿ ಪುಸ್ತಕಗಳು ವಿರಳ. ಅದರಲ್ಲೂ ಇಂತಹ ವಿಷಯಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ, ಪಾರಿಭಾಷಿಕ ಪದಗಳ ಉಸಿರುಗಟ್ಟಿಸುವ ಗೊಂದಲವಿಲ್ಲದ ಪುಸ್ತಕಗಳು ವಿರಳಾತಿ ವಿರಳ. ಆದ್ದರಿಂದಲೇ ಎಂ. ಎಸ್. ಶ್ರೀರಾಮರ “ಶನಿವಾರ ಸಂತೆ" ಪುಸ್ತಕ ಮುಖ್ಯವಾಗುತ್ತದೆ. ಅಂದ ಹಾಗೆ ಇದು ಅವರು “ಉದಯವಾಣಿ"ಯಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ.
“ಒಳಿತು, ಲಾಭ,…
ಲೇಖಕರು: Ashwin Rao K P
May 24, 2022

ಖ್ಯಾತ ಪತ್ರಕರ್ತ ವೈಯೆನ್ಕೆ ಅವರ ‘ವಂಡರ್ ಕಣ್ಣು' ಬಹಳ ಜನಪ್ರಿಯ ಅಂಕಣವಾಗಿತ್ತು. ‘ಕೊನೆ ಸಿಡಿ' ಯೊಂದಿಗೆ ಅದು ಕೊನೆಗೊಳ್ಳುತ್ತಿತ್ತು. ಬಹುತೇಕ ಓದುಗರು ‘ಕೊನೆ ಸಿಡಿ' ಯಿಂದಲೇ ಆ ಅಂಕಣವನ್ನು ಆರಂಭ ಮಾಡುತ್ತಿದ್ದರು. ಅದು ‘ಕೊನೆ ಸಿಡಿ' ಯ ಆಕರ್ಷಣೆ. ಪನ್, ಸಿದ್ಧ ಚಾಟೂಕ್ತಿ ಹಾಗೂ ಥಟ್ ಉತ್ತರಕ್ಕೆ ಸಿದ್ಧಹಸ್ತರಾಗಿದ್ದ ವೈಯೆನ್ಕೆ ಜತೆಯಲ್ಲಿ ಮಾತಾಡುತ್ತಿದ್ದರೆ ‘ಕೊನೆ ಸಿಡಿ'ಗಳು ಒಂದೇ ಸಮನೆ ಸಿಡಿಯುತ್ತಿದ್ದವು. ಹತ್ತಾರು ವರ್ಷ ಅವರು ಬರೆದ ‘ಕೊನೆ ಸಿಡಿ' ಗಳನ್ನು ಸಂಗ್ರಹಿಸಿ, ಆ ಪೈಕಿ…