ಪುಸ್ತಕ ಪರಿಚಯ
ಲೇಖಕರು: Ashwin Rao K P
May 12, 2022

೧೯೭೩ರಲ್ಲಿ ಮೊದಲ ಮುದ್ರಣ ಕಂಡ ಡಿ.ವಿ.ಜಿ.ಯವರ ಕೃತಿ ‘ದೇವರು- ಒಂದು ವಿಚಾರ ಲಹರಿ'. ಅಂದಿನಿಂದ ಇಂದಿನವರೆಗೆ ಸುಮಾರು ೧೩ ಮುದ್ರಣಗಳನ್ನು ಕಂಡ ಅಪರೂಪದ ಮಾಹಿತಿಗಳನ್ನು ಒಳಗೊಂಡ ಪುಸ್ತಕವಿದು. ಈ ಪುಸ್ತಕವು “ದೇವರು ಇದ್ದಾನೆಯೇ? ದೇವರು ಎಂಬ ವಸ್ತು ನಿಜವಾಗಿ ಉಂಟೆ? ದೇವರು ಎಂದರೆ ಏನು? ಅದರ ಸ್ವರೂಪ ಎಂಥದು? ಅದರಿಂದ ನಮಗೆ ಆಗಬೇಕಾದ್ದೇನು? ಈ ಜಗತ್ತು ಏಕೆ ಸೃಷ್ಟಿಯಾಯಿತು? ಇದರ ವ್ಯವಸ್ಥೆಯ ತತ್ವವೇನು? ನಾನಾ ಮತಧರ್ಮಗಳ ಮೂಲತತ್ವವೇನು? ಇಂಥ ಪ್ರಶ್ನೆಗಳು ಸಾಮಾನ್ಯವಾಗಿ ಅನೇಕರ ಮನಸ್ಸಿನಲ್ಲಿ…
ಲೇಖಕರು: Ashwin Rao K P
May 10, 2022

ಸಚಿನ್ ತೆಂಡೂಲ್ಕರ್ ಎಂದೊಡನೆ ಕ್ರಿಕೆಟ್ ಪ್ರೇಮಿಗಳಲ್ಲಿ ಒಂಥರಾ ಪುಳಕ. ಹಲವಾರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಇವರನ್ನು ಸಾಕ್ಷಾತ್ ಕ್ರಿಕೆಟ್ ದೇವರು ಎಂದು ಕರೆಯುವವರೂ ಹಲವಾರು ಮಂದಿ ಇದ್ದಾರೆ. ಅವರ ಕ್ರೀಡಾ ಜೀವನವನ್ನು ಒಂದೆಡೆ ಕಟ್ಟಿಕೊಡುವುದು ಸಾಹಸದ ಪ್ರಯತ್ನವೇ ಸರಿ. ‘ಸಚಿನ್’ ಪುಸ್ತಕದ ಲೇಖಕರಾದ ಅರುಣ್ ಹಾಗೂ ಮೋಹನ್ ಅವರು ಇವರ ಕ್ರೀಡಾ ಬದುಕಿನ ಪ್ರಮುಖ ಘಟನೆಗಳನ್ನು ಬಹಳ ಆಪ್ತವಾಗಿ ಚಿತ್ರಿಸಿದ್ದಾರೆ. ಪುಸ್ತಕದ ಪ್ರಾರಂಭಿಕ ಪುಟಗಳಲ್ಲಿ ಸಚಿನ್ ಕ್ರಿಕೆಟ್ ಜೀವನ ಹಾಗೂ…
ಲೇಖಕರು: Ashwin Rao K P
May 07, 2022

‘ಭಾವಸಿಂಚನ’ ಎಂಬ Orkut ಕವಿತೆಗಳ ಸಂಗ್ರಹವನ್ನು 3K ಬಳಗದವರು ಹೊರತಂದಿದ್ದಾರೆ. ಈ ಪುಸ್ತಕದ ಎಲ್ಲೂ ಈ ಕವಿತೆಗಳನ್ನು ಸಂಪಾದನೆ ಮಾಡಿದವರ ಹೆಸರಿಲ್ಲ. ಅದರ ಬದಲಾಗಿ 3K ಕನ್ನಡ ಕವಿತೆ ಕವನ ಎಂದು ನಮೂದಿಸಿದ್ದಾರೆ. ತಮ್ಮದೇ ಆದ ಆರ್ಕುಟ್ ಬಳಗದಲ್ಲಿನ ಸದಸ್ಯರ ಕವನಗಳನ್ನು ಆಹ್ವಾನಿಸಿ ಉತ್ತಮ ಆಯ್ಕೆಗಾರರಿಂದ ಅವುಗಳನ್ನು ಆರಿಸಿ ಪುಸ್ತಕ ರೂಪದಲ್ಲಿ ಹೊರತಂದಿರುವುದು ಶ್ಲಾಘನೀಯ. ಲಾಭದ ದೃಷ್ಟಿಯಿಂದ ಈ ಕಾರ್ಯವನ್ನು ಮಾಡದೇ ಇರುವುದು ಇನ್ನಷ್ಟು ಅಚ್ಚರಿ ತರುತ್ತದೆ. ಏಕೆಂದರೆ ಇದರ ಬೆಲೆ : ‘…
ಲೇಖಕರು: addoor
May 05, 2022

ಇನ್ಫೋಸಿಸ್ ಪ್ರತಿಷ್ಠಾನದ ಸಮಾಜಮುಖಿ ಕೆಲಸಕಾರ್ಯಗಳಿಂದಾಗಿ ಸುಧಾ ಮೂರ್ತಿಯವರು ಒಳ್ಳೆಯ ಹೆಸರು ಗಳಿಸಿದ್ದಾರೆ. ತನ್ನ ಇತರ ಬರಹಗಳ ಜೊತೆಗೆ, ಅಲ್ಲಿನ ಕೆಲಸದ ಸಂದರ್ಭಗಳಲ್ಲಿ ತನಗಾದ ಅನುಭವಗಳನ್ನೂ ಬರಹಗಳಾಗಿಸಿ ಸಾಹಿತಿಯಾಗಿಯೂ ಹೆಸರು ಗಳಿಸಿದ್ದಾರೆ.
ಇದರಲ್ಲಿನ ಬಹುಪಾಲು ಬರಹಗಳು ಆ ಅನುಭವಗಳ ಆಧಾರಿತ. ಈ ಬರಹಗಳ ಬಗ್ಗೆ ಮುನ್ನುಡಿಯಲ್ಲಿ ಸುಧಾ ಮೂರ್ತಿಯವರ ನೇರಾನೇರ ಮಾತು ಹೀಗಿದೆ: “ಅನುಭವಗಳು ಎಲ್ಲರಿಗೂ ಆಗುತ್ತಲೇ ಇರುತ್ತವೆ. ಆದರೆ ನನ್ನ ಅನುಭವಗಳೇ ವಿಚಿತ್ರ. ಅದಕ್ಕೆ ನಾನು ಮಾಡುವ ಕೆಲಸವೇ…
ಲೇಖಕರು: Ashwin Rao K P
May 05, 2022

ಹಾಸ್ಯ ಬರಹಗಳು ಹಾಗೂ ನಗೆಹನಿಗಳ ರಚನೆಗೆ ಖ್ಯಾತಿ ಪಡೆದ ತೈರೊಳ್ಳಿ ಮಂಜುನಾಥ ಉಡುಪ ಇವರು ಅಗಲಿದ ತಮ್ಮ ಗೆಳತಿ ‘ಶೀಲಾ’ಳ ನೆನಪಿಗೆ ‘ಶೀಲಾಳ ಬೊಂಬಾಟ್ ಜೋಕ್ಸ್'ಗಳು ಪುಸ್ತಕವನ್ನು ಹೊರತಂದಿದ್ದಾರೆ. ಮಂಜುನಾಥ ಉಡುಪರು ತಮ್ಮ ‘ಮೊದಲ ಮಾತು' ಎಂಬ ಮುನ್ನುಡಿಯಲ್ಲಿ ಬರೆಯುವುದು ಹೀಗೆ “ನಮ್ಮ ಪ್ರಕಾಶನದ ಎಂಟನೆಯ ಕೃತಿ ತೀರಾ ಲೇಟಾಗಿ ಹೊರಬರುತ್ತಿದೆ. ಇತೀಚೆಗೆ ಈ ನನ್ನ ಸಾಹಿತ್ಯಮಿತ್ರರ ವಲಯದಲ್ಲಿ ಸ್ವಾರ್ಥಿಗಳೇ ಹೆಚ್ಚಾಗಿ ಕಾಣಸಿಗುತ್ತಿದ್ದಾರೆ. ಈ ಕೃತಿಯಲ್ಲಿ ತೀರಾ ಇತ್ತೀಚೆಗೆ ಪ್ರಕಟವಾದ ನನ್ನ ೫೨…
ಲೇಖಕರು: Ashwin Rao K P
May 03, 2022

‘ವಿಶ್ವವಾಣಿ' ಪತ್ರಿಕೆಯ ಪ್ರಾರಂಭದ ದಿನಗಳಿಂದ ‘ತಿಳಿರು ತೋರಣ' ಎಂಬ ವಿಶಿಷ್ಟ ಹೆಸರಿನ ಅಂಕಣ ಬರೆಯುತ್ತಿರುವವರು ಅಮೇರಿಕಾದಲ್ಲಿರುವ ಶ್ರೀವತ್ಸ ಜೋಶಿ. ಜೋಶಿಯವರು ಈ ಹಿಂದೆಯೇ ಒನ್ ಇಂಡಿಯಾ ಕನ್ನಡ ಡಾಟ್ ಕಾಮ್, ವಿಜಯ ಕರ್ನಾಟಕ ಪತ್ರಿಕೆಗಳಿಗೆಲ್ಲಾ ಅಂಕಣ ಬರೆದಿದ್ದಾರೆ. ಪ್ರತಿಯೊಂದು ಅಂಕಣದಲ್ಲೂ ಹೊಸ ವಿಚಾರಗಳನ್ನು ಅಥವಾ ಹಳೆಯ ವಿಚಾರಗಳನ್ನೇ ಹೊಸತನದಲ್ಲಿ ಮೂಡಿಸಿ ಜನವರಿ ೨೦೧೬ರಿಂದ ನಿರಂತರವಾಗಿ ವಿಶ್ವವಾಣಿಗೆ ಬರೆಯುತ್ತಿದ್ದಾರೆ. ಅವರ ಬರಹಗಳಿನ್ನೂ ತಾಜಾ ಆಗಿವೆ ಮತ್ತು ಬೋರ್ ಹೊಡೆಸಿಲ್ಲ…