ಪುಸ್ತಕ ಪರಿಚಯ

ಲೇಖಕರು: Ashwin Rao K P
February 13, 2021
ಹುಚ್ಚಾಟದ ಹುಲಿ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ ಬದುಕಿ…
ಲೇಖಕರು: Ashwin Rao K P
February 12, 2021
‘ಪನ್ನೀರು' ಹನಿಗವಿತೆಗಳ ಪುಸ್ತಕವನ್ನು ರಚಿಸಿದವರು ಶಿಕ್ಷಕರಾದ ಪರಮೇಶ್ವರಪ್ಪ ಕುದರಿಯವರು. ಇವರ ಬಗ್ಗೆ ಬೆಂಗಳೂರಿನ ಸಾಹಿತಿ ವೈ.ಬಿ.ಎಚ್. ಜಯದೇವ್ ಅವರು ತಮ್ಮ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ- “ ಕನ್ನಡ ಸಾರಸ್ವತ ಲೋಕದಲ್ಲಿ ಸುಮಾರು ಮೂರು ದಶಕಗಳಿಂದಲೂ ಕವಿಯಾಗಿ, ಸಾಹಿತಿಯಾಗಿ ತಮ್ಮನ್ನು ಗುರುತಿಸಿಕೊಂಡಿರುವ ಶ್ರೀ ಪರಮೇಶ್ವರಪ್ಪ ಕುದರಿ ಅವರು ಹಳ್ಳಿಯ ಬಡನೆಂಟನಂತಹಾ ಸ್ನೇಹ ಜೀವಿ. ಕಲಾವಿದನಾಗಿ, ಹಾಡುಗಾರರಾಗಿ, ಉತ್ತಮ ಸಂಘಟಕರಾಗಿ, ಪ್ರಕಾಶಕರಾಗಿ ಹೀಗೆ ಬಹುಶ್ರುತ ವ್ಯಕ್ತ್ವಿತ್ವದ ಈ…
ಲೇಖಕರು: Ashwin Rao K P
February 09, 2021
ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರ ನಿಧನದ ಬಳಿಕ ಹೊರ ಬಂದ ಪುಸ್ತಕವಿದು. ಬಹಳ ಹಿಂದೊಮ್ಮೆ ಪ್ರಕಟವಾಗಿದ್ದರೂ, ಪ್ರತಿಗಳು ಈಗ ಮುಗಿದಿವೆ ಎಂದು ರವಿ ಬೆಳಗೆರೆಯವರು ಬರೆದಿದ್ದರು. ‘ಹಿಮಗಿರಿಯ ಗರ್ಭದಲ್ಲಿ' ಪುಸ್ತಕವು ಒಂದು ಪ್ರವಾಸ ಕಥನ. ರವಿ ಬೆಳಗೆರೆಯವರು ತಮ್ಮ ಅರುಣಾಚಲ ಪ್ರದೇಶದ ಪ್ರವಾಸದ ಅನುಭವಗಳನ್ನು ತಮ್ಮದೇ ಆದ ಶೈಲಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಅರುಣಾಚಲ ಪ್ರದೇಶಕ್ಕೆ ಹೋಗುವುದು ಅಷ್ಟೊಂದು ಸುಲಭವಿಲ್ಲ.  ಲೇಖಕರೇ ಬರೆದಂತೆ “.... ಈ ಮುಂಚೆ ನಾನು ಅರುಣಾಚಲವನ್ನು…
ಲೇಖಕರು: Ashwin Rao K P
February 06, 2021
ಸ್ವರಾಜ್ಯ ಎಂಬುದು ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯರ ಸಮಗ್ರ ಕೃತಿ ಸಂಪುಟ. ಸ್ವಾತಂತ್ರ್ಯ ಹೋರಾಟಕ್ಕೆ ಕಾವ್ಯವನ್ನು ಮಹತ್ವದ ಮಾಧ್ಯಮವಾಗಿ ದುಡಿಸಿಕೊಂಡ ಕವಿ ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯರು. ಇವರ ಬದುಕಿನ ಮೇಲೂ ಬರವಣಿಗೆಯ ಮೇಲೂ ಗಾಂಧೀತತ್ವದ ಗಾಢ ಪ್ರಭಾವವಿದೆ. ಭಾರತೀಯ ಆರ್ಷ ಚಿಂತನೆಯೊಂದಿಗೆ, ಸುಧಾರಣಾವಾದಿ ನಿಲುವುಗಳೂ ಸೇರಿಕೊಂಡು ಅವರೊಬ್ಬ ಪ್ರಾಮಾಣೀಕ ದೇಶ ಭಕ್ತ ಕವಿಯಾಗಿ ರೂಪುಗೊಂಡವರು. ಬರೆದರು, ಬರೆದಂತೆ ಬದುಕಿದರು. ಮದುವೆ ಹಾಡುಗಳಲ್ಲೂ ಸ್ವಾತಂತ್ರ್ಯದ…
ಲೇಖಕರು: Shreerama Diwana
February 04, 2021
*ಕೆ. ಪಿ. ಅಶ್ವಿನ್ ರಾವ್ ಅವರ "ಡಿಸೆಂಬರ್ 31- ಯಾಕೋ ನೆನಪಾಯ್ತು...!"* " ಡಿಸೆಂಬರ್ 31- ಯಾಕೋ ನೆನಪಾಯ್ತು...!" , ಕೆ. ಪಿ. ಅಶ್ವಿನ್ ರಾವ್ ಅವರ ಮೊದಲ ಲೇಖನಗಳ ಸಂಕಲನ. 84 + 8 + 4 ಪುಟಗಳ, ಹತ್ತು ರೂಪಾಯಿ ಬೆಲೆ (ಸಾಂಕೇತಿಕ) ಯ ಸಂಕಲನ 2014ರಲ್ಲಿ ಪ್ರಕಟವಾಗಿದೆ. ಸ್ಟೆಲ್ಲಾ ಮನೋಜ್ ರವರು ವಿನ್ಯಾಸಗೊಳಿಸಿದ ಆಕರ್ಷಕ ಮುಖಪುಟದ ಸಂಕಲನವನ್ನು ಲೇಖಕರೇ (ಕೆ. ಪಿ. ಅಶ್ವಿನ್ ರಾವ್, ಪದವಿನಂಗಡಿ, ಅಂಚೆ: ಬೊಂದೇಲ್, ಮಂಗಳೂರು- 575008, ದ. ಕ. ಜಿಲ್ಲೆ, ಮೊಬೈಲ್: 9448253815)…
ಲೇಖಕರು: Ashwin Rao K P
February 03, 2021
ಮೈಸೂರು ವಿಶ್ವವಿದ್ಯಾನಿಲಯದ ‘ಪ್ರಸಾರಾಂಗ' ವಿಭಾಗದಿಂದ ೧೯೮೦ರಲ್ಲಿ ಪ್ರಕಟವಾದ ಪುಸ್ತಕವೇ ‘ಸುವರ್ಣ ಸಂಪುಟ' ಕನ್ನಡದ ಖ್ಯಾತ ಕವಿಗಳ ಕನ್ನಡ ಭಾವಗೀತೆಗಳ ಸಂಕಲನವಿದು. ಪು.ತಿ.ನ., ದೇ, ಜವರೇಗೌಡ, ಚೆನ್ನವೀರ ಕಣವಿ, ಹಾ ಮಾ ನಾಯಕ ಹಾಗೂ ಪ್ರಭುಶಂಕರ ಮುಂತಾದ ಪ್ರಸಿದ್ಧ ವ್ಯಕ್ತಿಗಳು ಸಂಪಾದಿಸಿದ ಅಮೂಲ್ಯ ಪುಸ್ತಕವಿದು. ಈ ಪುಸ್ತಕ ಮತ್ತೆ ಮರು ಮುದ್ರಣ ಕಂಡಿದೆಯೋ ತಿಳಿದಿಲ್ಲ. ಇದೊಂದು ಸಂಗ್ರಹ ಯೋಗ್ಯ ಕೃತಿ. ಹಲವಾರು ಮಹಾನ್ ಕವಿಗಳ ಅತ್ಯಮೂಲ್ಯ ಕವನಗಳು ಈ ಪುಸ್ತಕದಲ್ಲಿವೆ.  ಇಲ್ಲಿರುವ ಕವಿಗಳ…