ಪುಸ್ತಕ ಪರಿಚಯ
ಲೇಖಕರು: Ashwin Rao K P
January 19, 2021

ಪತ್ರಕರ್ತ, ಲೇಖಕರಾದ ವಿಶ್ವೇಶ್ವರ ಭಟ್ ಅವರು ಬರೆದ ಪತ್ರಿಕೋದ್ಯಮದ ಕುರಿತಾದ ಅಪರೂಪದ ಪುಸ್ತಕ. ಅವರೇ ತಮ್ಮ ಬೆನ್ನುಡಿಯಲ್ಲಿ ಹೇಳುವಂತೆ ‘ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಪುಸ್ತಕಗಳು ನಮ್ಮಲ್ಲಿ ಹೆಚ್ಚಿಲ್ಲ. ಅದರಲ್ಲೂ ಕನ್ನಡದಲ್ಲಿ ಇರುವ ಪುಸ್ತಕಗಳು ಕೆಲವೇ ಕೆಲವು. ಇಂಗ್ಲೀಷ್ ಪುಸ್ತಕಗಳಲ್ಲಿ ವಿದೇಶಿ ಸರಕುಗಳೇ ಹೆಚ್ಚು. ಭಾರತದ ಸಂದರ್ಭದಲ್ಲಿ ಬರೆದ ಕೃತಿಗಳೂ ಹೆಚ್ಚಿಲ್ಲ. ಇದು ಪತ್ರಿಕೋದ್ಯಮದ ಮೇಷ್ಟು-ವಿದ್ಯಾರ್ಥಿಗಳಿಗೆ ಕೊರತೆಯೇ. ಈ ಸಂಗತಿಯನ್ನು ಗಮನದಲ್ಲಿರಿಸಿಕೊಂಡು ರೂಪಿಸಿದ ಕೃತಿಯಿದು…
ಲೇಖಕರು: Ashwin Rao K P
January 16, 2021

೧೯೯೪ರಲ್ಲಿ ಮುದ್ರಿತವಾದ ‘ಪಾಲ್ಗಡಲ ಮುತ್ತುಗಳು' ಎಂಬ ಹನಿ ಕವನಗಳ ಸಂಗ್ರಹ ಪುಸ್ತಕದಲ್ಲಿ ಹನಿಗವನಗಳನ್ನು ರಚಿಸಿರುವ ಹಲವಾರು ಕವಿಗಳು ಈಗ ಬಹಳಷ್ಟು ಖ್ಯಾತನಾಮರಾಗಿದ್ದಾರೆ. ಈ ಪುಸ್ತಕವನ್ನು ತಮ್ಮದೇ ಆದ ನವೀನ ಪ್ರಕಾಶನದಿಂದ ಸಂಪಾದನೆ ಮಾಡಿರುವ ಧನಂಜಯ ಕುಂಬ್ಳೆಯವರೂ ಈಗ ಉತ್ತಮ ಕವಿ, ಉಪನ್ಯಾಸಕರಾಗಿದ್ದಾರೆ. ‘ನವೀನ' ಎಂಬ ಅಂಚೆ ಕಾರ್ಡು ಮಾಸಿಕವನ್ನು ಬಹಳ ಹಿಂದೆ ಅವರು ಪ್ರಕಟಿಸುತ್ತಿದ್ದ ನೆನಪು ನನಗೆ ಈಗಲೂ ಇದೆ.
ಸಂಪಾದಕರ ಮಾತು ಇದರಲ್ಲಿ ಧನಂಜಯ ಕುಂಬ್ಳೆಯವರು ಬರೆಯುತ್ತಾರೆ ‘ ಹನಿಗವನವು…
ಲೇಖಕರು: Ashwin Rao K P
January 14, 2021

ಆಂಗ್ಲ ಬರಹಗಾರ ಪಾಲ್ ಕೊಯೆಲ್ಹೋ ಬರೆದ ದಿ ಆಲ್ ಕೆಮಿಸ್ಟ್ ಎಂಬ ಇಂಗ್ಲೀಷ್ ಪುಸ್ತಕದ ಮಾಹಿತಿಯನ್ನು ‘ಸಂಪದ’ದಲ್ಲಿ ಬಹಳ ಹಿಂದೆ ನೀವು ಗಮನಿಸಿರಬಹುದು. ಈ ಪುಸ್ತಕ ಅದರದ್ದೇ ಕನ್ನಡ ಅನುವಾದ. ಕನ್ನಡ ಮಾತ್ರ ಬಲ್ಲವರಿಗೆ ಅರ್ಥವಾಗುವಂತೆ ಸರಳವಾಗಿ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ ಕಿರಣ್ ಕುಮಾರ್ ಅವರು.
ಈ ಪುಸ್ತಕದ ಬೆನ್ನುಡಿಯಲ್ಲಿ ಲೇಖಕರು ಬರೆಯುತ್ತಾರೆ. ‘ಓದುಗರ ಜೀವನವನ್ನು ಶಾಶ್ವತವಾಗಿ ಬದಲಾಯಿಸುವಂತಹ ಪುಸ್ತಕಗಳು ದಶಕಗಳಲ್ಲಿ ಒಮ್ಮೆ ಪ್ರಕಟಗೊಳ್ಳುತ್ತವೆ. ಪಾಲೋ ಕೊಯೆಲ್ಹೋರವರ ‘ದ…
ಲೇಖಕರು: Ashwin Rao K P
January 12, 2021

ಪತ್ರಕರ್ತ ಲೇಖಕ ಶ್ರೀರಾಮ ದಿವಾಣರ ಮೊದಲ ಪ್ರಕಟಿತ ಲೇಖನಗಳ ಸಂಗ್ರಹ ಪುಸ್ತಕ ಇದು. ‘ಬರೆದದ್ದನ್ನೆಲ್ಲ ಪ್ರಕಟಿಸಬಾರದು, ಮುದ್ರಿಸಬಾರದು. ಆದರೆ ಆಯ್ದ ಲೇಖನಗಳನ್ನಾದರೂ ಪ್ರಕಟಿಸಬಹುದಲ್ವಾ?’ ಎಂಬ ಮಾತುಗಳನ್ನು ಹೇಳಿದವರು ನೇರ ನಡೆ-ನುಡಿಯ ನಿರ್ಭೀತ ಸಾಹಿತಿ, ಬೆಂಗಳೂರಿನ ‘ಪುಸ್ತಕ ಮನೆ'ಯ ಶ್ರೀ ಹರಿಹರ ಪ್ರಿಯರು. ಇವರ ಈ ಮಾತಿನಿಂದ ಪ್ರೇರಣೆಗೊಂಡು ಶ್ರೀರಾಮ ದಿವಾಣರು ‘ಕೃಷ್ಣಾರ್ಪಣ' ಎಂಬ ಕೃತಿಯನ್ನು ಹೊರ ತಂದಿದ್ದಾರೆ.
ಎಪ್ಪತ್ತೆರಡು ಪುಟಗಳ ಈ ಪುಸ್ತಕದಲ್ಲಿ ಒಟ್ಟು ೩೧ ಲೇಖನಗಳಿವೆ. ಆರಂಭದ…
ಲೇಖಕರು: Ashwin Rao K P
January 09, 2021

ವಿಶ್ವೇಶ್ವರ ಭಟ್ ಅವರು ವಿಜಯ ಕರ್ನಾಟಕ ದಿನ ಪತ್ರಿಕೆಯ ಸಂಪಾದಕರಾಗಿದ್ದ ಸಮಯದಲ್ಲಿ ಬರೆದ ಅಂಕಣ ಬರಹಗಳ ಸಂಗ್ರಹವೇ ‘ನೂರೆಂಟು ಮಾತು'. ಈ ಪುಸ್ತಕವು ಎರಡನೇ ಭಾಗವಾಗಿದೆ. ವಿಶ್ವೇಶ್ವರ ಭಟ್ ಅವರ ಬರವಣಿಗೆಯ ಶೈಲಿಯ ಪ್ಲಸ್ ಪಾಯಿಂಟ್ ಎಂದರೆ ಅವರ ಬರಹಗಳಲ್ಲಿ ವಿವಿಧತೆ ಇದೆ ಮತ್ತು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಅವರು ಬರೆಯುವ ಬರಹಗಳಿಗೆ ಸೂಕ್ತ ದಾಖಲೆಗಳನ್ನೂ ಕೊಡುತ್ತಾರೆ. ಐದು ವರ್ಷಗಳಲ್ಲಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆದ ಅಂಕಣ ಬರಹಗಳನ್ನು ಬೇರೆ ಬೇರೆ ಭಾಗಗಳಾಗಿ ಓದುಗರ…
ಲೇಖಕರು: Shreerama Diwana
January 07, 2021

*ರಾಜಗೋಪಾಲ್ ಎಂ. ಅವರ "ಧ್ಯಾನ, ಮಾತು ಮತ್ತು ಧ್ವನಿ"*
ಕರ್ನಾಟಕ ಸಂಘ (ಪುತ್ತೂರು- 574201, ದಕ್ಷಿಣ ಕನ್ನಡ ಜಿಲ್ಲೆ)ವು 2002ರಲ್ಲಿ ಪ್ರಕಾಶಿಸಿದ ಉಡುಪಿ ಹಿರಿಯಡಕದ ರಾಜಗೋಪಾಲ ಎಂ. ಅವರ " ಧ್ಯಾನ, ಮಾತು ಮತ್ತು ಧ್ವನಿ" , "ಹಿಮಾಲಯ - ಯಾತ್ರೆ - ಒಂದು ದರ್ಶನ" ಹಾಗೂ "ರಂಗಾಯಣದ ಗಾಂಧಿ" ಎಂಬ ಮೂರು ಲೇಖನಗಳ ಸಂಕಲನ, " ಧ್ಯಾನ, ಮಾತು ಮತ್ತು ಧ್ವನಿ". 4 + 60 ಪುಟಗಳ ಕೃತಿಯ ಬೆಲೆ 36 ರೂಪಾಯಿ.
"ಧ್ಯಾನವೆಂದರೆ, ಏಕಾಂತದಲ್ಲಿ ಕುಳಿತು, ಕಣ್ಣು ಮುಚ್ಚಿ ಏಕಾಗ್ರತೆಯಿಂದ ಯಾವುದೋ ಅಕ್ಷರವನ್ನೋ,…