ಪುಸ್ತಕ ಪರಿಚಯ

ಲೇಖಕರು: Ashwin Rao K P
March 13, 2021
ರಂಗಮ್ಮ ಹೊದೇಕಲ್ ವೃತ್ತಿಯಲ್ಲಿ ಶಿಕ್ಷಕಿ. ಮನೆಯಲ್ಲಿನ ಬಡತನ, ಅಸಹಾಯಕತೆ, ಒಂಟಿತನ, ಬದುಕಿನ ಪ್ರತಿ ಹೆಜ್ಜೆಯೂ ಒಂದು ನೋವಿನ ‘ಕ್ರಿಯೆ’ಯಾಗಿ ಈ ಹುಡುಗಿಯನ್ನು ಕಾಡಿ ಕಾಡಿ, ಈ ಹೊತ್ತು ‘ಕವಿ'ಯನ್ನಾಗಿಸಿರುವುದು ಸುಳ್ಳಲ್ಲ. ರಂಗಮ್ಮ ಹೊದೇಕಲ್ ಆರ್ದ್ಯ ಹೃದಯದ ‘ಹೂ’ ಹುಡುಗಿ! ಎಂದು ಬರೆಯುತ್ತಾರೆ ತುಮಕೂರು ಜಿಲ್ಲಾ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಬಿ.ಸಿ.ಶೈಲಾ ನಾಗರಾಜ್. ಶೈಲಾ ನಾಗರಾಜ್ ಅವರು ರಂಗಮ್ಮ ಅವರ ಶಕ್ತಿ ಎಂದರೆ ತಪ್ಪಾಗಲಾರದು. ಶೈಲಾ ನಾಗರಾಜ್ ಅವರ ಹೆಸರಿನಲ್ಲೇ ‘…
ಲೇಖಕರು: Shreerama Diwana
March 11, 2021
*ಡಾ. ವಿಠ್ಠಲ ಭಂಡಾರಿ ಹಾಗೂ ಯಮುನಾ ಗಾಂವ್ಕರ್ ಅವರ   "ಜೋಯ್ಡಾ: ಕಾಡೊಳಗಿನ ಒಡಲು"* "ಜೋಯ್ಡಾ: ಕಾಡೊಳಗಿನ ಒಡಲು" (ಮಾನವ ವಸತಿಯ ನಕಾಶೆಯಲ್ಲಿ ಜೋಯ್ಡಾ ಉಳಿಸೋಣ) ಕೃತಿಯನ್ನು ಡಾ. ವಿಠ್ಠಲ ಭಂಡಾರಿ ಹಾಗೂ ಯಮುನಾ ಗಾಂವ್ಕರ್ ದಂಪತಿಗಳು ಜಂಟಿಯಾಗಿ ರಚಿಸಿದ್ದಾರೆ. 184 + 4 ಪುಟಗಳ, 140 ರೂಪಾಯಿ ಬೆಲೆಯ ಕೃತಿಯನ್ನು 2017ರಲ್ಲಿ ಆರ್. ವಿ. ಭಂಡಾರಿ ನೆನಪಿನ 32ನೇ ಪುಸ್ತಕ ಮಾಲೆಯಾಗಿ ಬಂಡಾಯ ಪ್ರಕಾಶನ (ಅರೇಅಂಗಡಿ, ಹೊನ್ನಾವರ - 581 334, ಉತ್ತರ ಕನ್ನಡ ಜಿಲ್ಲೆ) ಪ್ರಕಟಿಸಿದೆ. ಬಂಡಾಯ ಪ್ರಕಾಶನದ…
ಲೇಖಕರು: Ashwin Rao K P
March 09, 2021
‘ನಮ್ಮ ವೃತ್ತಪತ್ರಿಕೆಗಳ ಕಥೆ’ ಎಂಬ ಪುಟ್ಟ ಪುಸ್ತಕವು ಹಳೆಯ ಕಾಲದ ಪತ್ರಿಕೆಗಳ ಬಗ್ಗೆ ಕೊಂಚ ಮಾಹಿತಿ ನೀಡುತ್ತದೆ. ಇದು ಕನ್ನಡಕ್ಕೆ ಅನುವಾದ ಮಾಡಿದ ಪುಸ್ತಕವಾದುದರಿಂದ ಭಾಷೆ ಸ್ವಲ್ಪ ಕಗ್ಗಂಟಾಗಿಯೇ ಇದೆ. ೧೯೯೨ರಲ್ಲಿ ಮೊದಲ ಮುದ್ರಣ ಕಂಡ ಈ ಪುಸ್ತಕವು ೨೦೦೪ರಲ್ಲಿ ನಾಲ್ಕನೇ ಮುದ್ರಣವಾಗಿದೆ.   ಈ ಪುಸ್ತಕದಲ್ಲಿ ಪತ್ರಿಕೆಗಳ ಪ್ರಾರಂಭದ ದಿನಗಳನ್ನು ತಿಳಿಸಲಾಗಿದೆ. ಒಂದೆಡೆ ಬರೆಯುತ್ತಾರೆ ‘ ಇಂದಿನ ವೃತ್ತಪತ್ರಿಕೆಗಳ ಜನನ ಮೂಲವನ್ನು ನಾವು ಕಾಣಬೇಕಿದ್ದಲ್ಲಿ ಜೂಲಿಯಸ್ ಸೀಸರನ ರೋಮನ್ ಕಾಲಕ್ಕೆ…
ಲೇಖಕರು: Ashwin Rao K P
March 06, 2021
ಧರ್ಮ, ತತ್ತ್ವ ದರ್ಶನ ಹಾಗೂ ಪುರಾಣ ಈ ವಿಚಾರಗಳನ್ನು ಒಳಗೊಂಡ ಮಾಹಿತಿಯನ್ನು ಪುಸ್ತಕದ ಮೂಲಕ ಹಂಚಿಕೊಂಡಿದ್ದಾರೆ ಈ ಕೃತಿಯ ಲೇಖಕರಾದ ಡಾ. ಎಂ.ಪ್ರಭಾಕರ ಜೋಶಿಯವರು. ಇವರು ನಿವೃತ್ತ ಪ್ರಾಂಶುಪಾಲರು, ಹಿರಿಯ ಸಂಸ್ಕೃತಿ ತಜ್ಞ, ಅಗ್ರಪಂಕ್ತಿಯ ಅರ್ಥದಾರಿ, ಕಲಾವಿಮರ್ಶಕ, ಸಂಶೋಧಕ, ಕವಿ, ಅಂಕಣಕಾರ, ಕಲಾ ಕಾರ್ಯಕರ್ತ ಹಾಗೂ ನಾಡಿನ ಬಹುಶ್ರುತ ವಿಧ್ವಾಂಸರಲ್ಲೊಬ್ಬರು. ಇವರು ಈ ಪುಸ್ತಕದಲ್ಲಿ ಭಾರತೀಯ ದರ್ಶನ ಶಾಸ್ತ್ರ, ಚಿಂತನ ವಿಧಾನ, ಪುರಾಣ ವಿಚಾರಗಳನ್ನು ಪಂಥೀಯ ಅತಿವಾದಗಳಿಲ್ಲದ, ಒಂದು ಉದಾರ…
ಲೇಖಕರು: Ashwin Rao K P
March 04, 2021
ರವಿ ಬೆಳಗೆರೆಯವರ ನಿಧನದ ಬಳಿಕ ಹೊರ ಬಂದ ಪುಸ್ತಕಗಳಲ್ಲಿ ಇದು ಒಂದು. ಬಹಳ ಹಿಂದೆ ‘ಒಟ್ಟಾರೆ ಕಥೆಗಳು' ಹೆಸರಿನಲ್ಲಿ ಹಲವಾರು ಕಥೆಗಳು ಪ್ರಕಟವಾದುದ್ದಿದೆ. ಆ ಪುಸ್ತಕದ ಪ್ರತಿಗಳು ಮುಗಿದಿದ್ದವು. ಅವೇ ಕಥೆಗಳಿಗೆ ಇನ್ನಷ್ಟು ಕಥೆಗಳನ್ನು ಸೇರಿಸಿ ರವಿ ಬೆಳಗೆರೆಯವರ ಸಮಗ್ರ ಕಥೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ಒಂದು ರೀತಿಯಲ್ಲಿ ಈ ಪುಸ್ತಕವನ್ನು ಓದಿದರೆ ರವಿ ಬೆಳಗೆರೆಯವರ ಎಲ್ಲಾ ಕಥೆಗಳನ್ನು ಒಂದೇ ಗುಕ್ಕಿನಲ್ಲಿ ಓದಿದಂತೆ ಆಗುತ್ತದೆ. ಬೆಳಗೆರೆಯವರ ಕಥೆಗೆಗಳಿಗೆ ತಮ್ಮದೇ ಆದ ಶೈಲಿ ಇದೆ…
ಲೇಖಕರು: Ashwin Rao K P
March 01, 2021
ಸಪ್ನ ಬುಕ್ ಹೌಸ್ ಅವರು ಪ್ರಕಾಶಿಸಿದ ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು ಪುಸ್ತಕವು ವಾಲ್ಮೀಕಿಯಿಂದ ರಾಜೀವ್ ಗಾಂಧಿವರೆಗಿನ ೩೦೪ ಸ್ತ್ರೀ-ಪುರುಷರ ಜೀವನ - ಸಾಧನೆಗಳ ಮೂಲಕ ಪ್ರಪಂಚದ ಇತಿಹಾಸದ ಒಂದು ಇಣುಕುನೋಟವನ್ನು ತೋರಿಸಲು ಲೇಖಕರು ಹೊರಟಿದ್ದಾರೆ. ತಾಯಿನಾಡಿಗಾಗಿ ದುಡಿದವರ ಬಗ್ಗೆ ಯುವಜನರಿಗೆ ಪರಿಚಯ ಮಾಡಿಕೊಟ್ಟು, ಅವರು ಸಮಾಜದ ಹಿರಿಯರ ಸದ್ಗುಣಗಳಿಂದ ಸ್ಪೂರ್ತಿ ಪಡೆದು, ತ್ಯಾಗ ಮಾಡಬಲ್ಲವರಾಗಿ, ಸಿದ್ಧಿ ಪಡೆಯುವಂತೆ ಮಾಡಬೇಕು. ವಿವಿಧ ಯುಗದ, ವಿವಿಧ ಕ್ಷೇತ್ರಗಳ, ಅನೇಕ ಹಿರಿಯ ಚೇತನಗಳ ಹಾಗೂ…