ಪುಸ್ತಕ ಪರಿಚಯ
ಲೇಖಕರು: Ashwin Rao K P
April 24, 2021

ಪತ್ರಕರ್ತ ಪ್ರತಾಪ್ ಸಿಂಹ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವೇ ಬೆತ್ತಲೆ ಜಗತ್ತು. ಈಗ ಇಲ್ಲಿರುವುದು ಅದರ ಎಂಟನೇ ಭಾಗ. ಪ್ರತಿ ಶನಿವಾರ ಪ್ರತಾಪ್ ಸಿಂಹ ಅವರ ಅಂಕಣವನ್ನು ಕಾಯುತ್ತಿದ್ದ ದೊಡ್ಡದಾದ ಓದುಗ ಸಮೂಹ ಇತ್ತೆಂದರೆ ಸುಳ್ಳಲ್ಲ. ತೀಕ್ಷ್ಣವಾಗಿ ಚಾಟಿ ಬೀಸುವಂತಹ ರಾಜಕೀಯ ಲೇಖನಗಳಿಂದ ಹಿಡಿದು. ಕ್ರೀಡೆ, ಸಾಹಿತ್ಯ, ಸಿನೆಮಾ ಮುಂತಾದ ಎಲ್ಲಾ ವಿಚಾರಗಳನ್ನು ಅಧ್ಯಯನ ಮಾಡಿ ಬರೆಯುತ್ತಿದ್ದರು. ಪ್ರತಿಯೊಂದು ಲೇಖನಗಳಿಗೆ ಸೂಕ್ತ ಆಧಾರ…
ಲೇಖಕರು: Shreerama Diwana
April 22, 2021

*ಮುದ್ದು ಮೂಡುಬೆಳ್ಳೆ ಹಾಗೂ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಇವರ "ನಮ್ಮ ಬೆಳ್ಳೆ - ಕಟ್ಟಿಂಗೇರಿ: ಪರಂಪರೆ, ಇತಿಹಾಸ"*
ಬೆಳ್ಳೆಯ ಸಾಹಿತ್ಯ ಸಂಸ್ಕೃತಿ ವೇದಿಕೆಯು (ಮಾತಾ ಕುಟೀರ, ಮೂಡುಬೆಳ್ಳೆ - 576120, ಕಾಪು ತಾಲೂಕು, ಉಡುಪಿ ಜಿಲ್ಲೆ) 2019 ರಲ್ಲಿ ಪ್ರಕಾಶಿಸಿದ ಕೃತಿ " ನಮ್ಮ ಬೆಳ್ಳೆ - ಕಟ್ಟಿಂಗೇರಿ: ಪರಂಪರೆ, ಇತಿಹಾಸ". 52 + 4 ಪುಟಗಳ, 70 ರೂಪಾಯಿ ಬೆಲೆಯ ಈ ಕೃತಿಯಲ್ಲಿ, ಲೇಖಕರ 'ಮೊದಲ ಮಾತು' ಮತ್ತು ಪರಿಚಯಗಳಿವೆ. ಲೇಖನಕ್ಕೆ ಸಂಬಂಧಿಸಿದಂತೆ ಕೆಲವು ಸ್ಥಳಗಳ ಮತ್ತು ವ್ಯಕ್ತಿಗಳ…
ಲೇಖಕರು: Ashwin Rao K P
April 20, 2021

ಬಿಟ್ ಕಾಯಿನ್ ಕುರಿತ 'ನಿಗೂಢ ನಾಣ್ಯ' ಎಂಬ ರೋಚಕ ಕಾದಂಬರಿ ಬರೆದ ವಿಠಲ ಶೆಣೈ ಅವರ ಕೃತಿಯೇ ‘ತಾಳಿಕೋಟೆಯ ಕದನದಲ್ಲಿ’. ಈ ಕಾದಂಬರಿಯಲ್ಲಿ ಹಂಪಿಯ ದೇಗುಲಗಳೂ ಇವೆ, ಕೆಲವೊಂದು ಚಾರಿತ್ರಿಕ ಪಾತ್ರಗಳೂ ಜೀವಂತವಾಗಿವೆ. ವೈಕುಂಠರಾವ್ ಎಂಬ ವ್ಯಕ್ತಿ ತನ್ನ ಆತ್ಮೀಯ ಗೆಳೆಯ ವಿಶ್ವನಾಥನನ್ನು ಆಗುಂಬೆ ಘಾಟಿಯಲ್ಲಿ ಕಾರ್ ಅಪಘಾತವಾಗುವಂತೆ ಮಾಡಿ ಕೊಂದು ಬಿಡುವಲ್ಲಿಂದ ಪ್ರಾರಂಭವಾಗುವ ಪುಸ್ತಕವು ಒಂದು ರೀತಿಯಲ್ಲಿ ಪತ್ತೇದಾರಿ ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ. ಅನಿರೀಕ್ಷಿತ ತಿರುವುಗಳು ನಮ್ಮನ್ನು…
ಲೇಖಕರು: Ashwin Rao K P
April 17, 2021

ಅಂಗಡಿಯಲ್ಲಿ ಕನ್ನಡ ನುಡಿ ಎಂಬುವುದು ಒಂದು ಪುಟ್ಟ ಪುಸ್ತಕ. ಆದರೆ ಬಹಳ ಮಾಹಿತಿ ಪೂರ್ಣವಾಗಿದೆ. ಕನ್ನಡಾಭಿಮಾನವನ್ನು ಸ್ವಲ್ಪಮಟ್ಟಿಗೆ ಬಡಿದೆಬ್ಬಿಸ ಬಲ್ಲ ಪುಸ್ತಕ ಇದು. ನಿಮ್ಮ ಕನ್ನಡ ಜ್ಞಾನವನ್ನು ವ್ಯವಹಾರಿಕವಾಗಿ ಎಲ್ಲೆಲ್ಲಾ ಬಳಸಬಹುದು ಎಂಬುವುದಾಗಿ ಈ ಪುಸ್ತಕ ಹೇಳುತ್ತದೆ. ಪುಸ್ತಕದ ಬೆನ್ನುಡಿಯಲ್ಲಿ ಬರೆದಂತೆ “ಗ್ರಾಹಕ ಹಕ್ಕುಗಳ ಬಗ್ಗೆ ನಾನಾ ರೀತಿಯ ಜಾಗೃತಿ ಅಭಿಯಾನಗಳು ಎಲ್ಲೆಡೆ ನಡೆಯುತ್ತಾ ಇರುತ್ತವೆ. ತೂಕ, ಅಳತೆ, ಪ್ರಮಾಣ, ಬೆಲೆ, ಗುಣಮಟ್ಟ, ಸೇವೆ ಇವೆಲ್ಲವುಗಳ ಬಗ್ಗೆ ಜನರಲ್ಲಿ…
ಲೇಖಕರು: Shreerama Diwana
April 15, 2021

ಬದರ್ ಎಂಬ ಪುಸ್ತಕದ ಮೂಲ ಲೇಖಕರು ಷೇಕ್ ಕರೀಮುಲ್ಲಾ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ವಿನುಕೊಂಡ ಪಟ್ಟಣದಲ್ಲಿ ಜೂನ್ 01, 1964ರಲ್ಲಿ ಜನಿಸಿದರು. ವೃತ್ತಿಯಿಂದ ಶಿಕ್ಷಕರಾಗಿದ್ದಾರೆ. ಕಾವ್ಯವೇ ಇವರ ಅಚ್ಚುಮೆಚ್ಚಿನ ಸಾಹಿತ್ಯ ಪ್ರಕಾರ. 2006ನೇ ಇಸವಿಯಲ್ಲಿ ಮುಸ್ಲಿಂ ಬರಹಗಾರರ ಸಂಘವನ್ನು ಸ್ಥಾಪಿಸಿ ವ್ಯವಸ್ಥಾಪಕರಾಗಿ ಮುಸ್ಲಿಂ ಸಾಹಿತಿಗಳನ್ನು ಒಂದೇ ವೇದಿಕೆಗೆ ಕರೆದುತರುವ ಮಹತ್ವವಾದ ಕಾರ್ಯಕ್ಕೆ ನಾಂದಿ ಹಾಡಿದರು. ಪ್ರಗತಿಪರ ಮುಸ್ಲಿಂ ಬರಹಗಾರರಾಗಿ ಇವರು ಜನಮಾನಸವನ್ನು ಸೂರೆಗೊಂಡಿದ್ದಾರೆ.…
ಲೇಖಕರು: Ashwin Rao K P
April 14, 2021

೮೦-೯೦ರ ದಶಕದಲ್ಲಿ ಬೆಂಗಳೂರನ್ನು ಆಳುತ್ತಿದ್ದ ಡಾನ್ ಗಳು ಮತ್ತು ರೌಡಿಗಳ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ಬರೆದು ‘ಕರ್ಮವೀರ’ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸಿದ ಕೀರ್ತಿ(?!) ರವಿ ಬೆಳಗೆರೆಯವರಿಗೆ ಸಲ್ಲಬೇಕು. ರೌಡಿಗಳನ್ನು ವೈಭವೀಕರಿಸಿ ಬರೆಯುತ್ತಾರೆ ಎಂಬುದು ರವಿ ಬೆಳಗೆರೆಯ ಮೇಲಿದ್ದ ಆಪಾದನೆ. ಭೂಗತ ಲೋಕದ ಆಗುಹೋಗುಗಳನ್ನು ಬಹಳ ಹತ್ತಿರದಿಂದ ನೋಡಿದವರು ಇವರು. ಈ ಪುಸ್ತಕದಲ್ಲಿ ನೀಡಲಾದ ಎಲ್ಲಾ ವ್ಯಕ್ತಿಗಳನ್ನು ಮುಖಃತ ಕಂಡು ಸಂದರ್ಶನ ಮಾಡಿ ಲೇಖನ ಬರೆದಿದ್ದಾರೆ. ಆದುದರಿಂದ ಈ…