ಪುಸ್ತಕ ಪರಿಚಯ
ಲೇಖಕರು: Ashwin Rao K P
March 27, 2021

ಜೋಗಿ ಅಂದರೆ ಗಿರೀಶ್ ಹತ್ವಾರ್ ನಮ್ಮ ನಡುವಿನ ಅದ್ಭುತ ಬರಹಗಾರರು. ಇವರ ಸಣ್ಣ ಕಥೆ ತುಂಬಾನೇ ಸೊಗಸಾಗಿರುತ್ತದೆ. ‘ಜರಾಸಂಧ' ಕಥಾ ಸಂಕಲನವು ಬರೆಯದೇ ಉಳಿದ ಕಥೆಗಳು ಎಂದು ಅವರೇ ಹೇಳಿಕೊಂಡಿದ್ದಾರೆ. ತಮ್ಮ ಮುನ್ನುಡಿ ‘ಕತೆ ಕತೆ ಕಾರಣ'ದಲ್ಲಿ ಬರೆಯುತ್ತಾರೆ ‘...ಎಂದಿನಂತೆ ಇವುಗಳ ಪೈಕಿ ಹೆಚ್ಚಿನ ಕತೆಗಳನ್ನು ಗೆಳೆಯ ರವಿ ಬೆಳಗೆರೆ ತಮ್ಮ ‘ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಒಂದು ಕಥೆ ‘ದೇಶಕಾಲ' ಪತ್ರಿಕೆಯಲ್ಲೂ, ಮತ್ತೊಂದು ತರಂಗ ವಿಶೇಷಾಂಕದಲ್ಲೂ ಪ್ರಕಟವಾಗಿದೆ. ಉಳಿದೆಲ್ಲಾ…
ಲೇಖಕರು: Shreerama Diwana
March 25, 2021

ಡಾ. ಪಿ. ಶ್ರೀಕೃಷ್ಣ ಭಟ್ ಅವರು ಬರೆದ "ಕಾಸರಗೋಡಿನ ಕಣ್ಮಣಿ ಕಳ್ಳಿಗೆ ಮಹಾಬಲ ಭಂಡಾರಿ
ಕಾಂತಾವರ ಕನ್ನಡ ಸಂಘ (ರಿ)ದ 'ನಾಡಿಗೆ ನಮಸ್ಕಾರ' ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 80ನೆಯ ಕುಸುಮವೇ "ಕಾಸರಗೋಡಿನ ಕಣ್ಮಣಿ ಕಳ್ಳಿಗೆ ಮಹಾಬಲ ಭಂಡಾರಿ" (ಲೇಖಕರು: ಡಾ. ಪಿ. ಶ್ರೀಕೃಷ್ಣ ಭಟ್). 52 ಪುಟಗಳ, 33 ರೂಪಾಯಿ ಬೆಲೆಯ ಕೃತಿಯನ್ನು 2013ರಲ್ಲಿ ಕನ್ನಡ ಸಂಘ (ಕಾಂತಾವರ - 574129, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ) ಪ್ರಕಟಿಸಿದೆ.
ಕೃತಿಯ ಆರಂಭದಲ್ಲಿ, ಪ್ರಧಾನ ಸಂಪಾದಕರಾದ ಡಾ. ನಾ.…
ಲೇಖಕರು: Ashwin Rao K P
March 23, 2021

ಪತ್ರಕರ್ತ ಪ್ರತಾಪ್ ಸಿಂಹ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವೇ ಬೆತ್ತಲೆ ಜಗತ್ತು. ಈಗ ಇಲ್ಲಿರುವುದು ಅದರ ಹದಿನಾರನೇ ಭಾಗ. ಪ್ರತಿ ಶನಿವಾರ ಪ್ರತಾಪ್ ಸಿಂಹ ಅವರ ಅಂಕಣವನ್ನು ಕಾಯುತ್ತಿದ್ದ ದೊಡ್ಡದಾದ ಓದುಗ ಸಮೂಹ ಇತ್ತೆಂದರೆ ಸುಳ್ಳಲ್ಲ. ತೀಕ್ಷ್ಣವಾಗಿ ಚಾಟಿ ಬೀಸುವಂತಹ ರಾಜಕೀಯ ಲೇಖನಗಳಿಂದ ಹಿಡಿದು. ಕ್ರೀಡೆ, ಸಾಹಿತ್ಯ, ಸಿನೆಮಾ ಮುಂತಾದ ಎಲ್ಲಾ ವಿಚಾರಗಳನ್ನು ಅಧ್ಯಯನ ಮಾಡಿ ಬರೆಯುತ್ತಿದ್ದರು. ಪ್ರತಿಯೊಂದು ಲೇಖನಗಳಿಗೆ ಸೂಕ್ತ ಆಧಾರ…
ಲೇಖಕರು: Ashwin Rao K P
March 20, 2021

ಇದೊಂದು ಪುಟ್ಟ ಪುಸ್ತಕದಲ್ಲಿ ಒಂದು ಕಾಲಕ್ಕೆ ಇಡೀ ರಾಷ್ಟ್ರದ ಕುತೂಹಲ ಕೆರಳಿಸಿದ ಆರುಷಿ ಹತ್ಯಾ ಪ್ರಕರಣದ ವಿವರಗಳಿವೆ. ರವಿ ಬೆಳಗೆರೆಯವರು ಕ್ರೈಂ ಸಾಹಿತ್ಯವನ್ನು ಬಹಳ ಸೊಗಸಾಗಿ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಬರೆಯುತ್ತಾರೆ. ಆದರೆ ಈ ಆರುಷಿ ಹತ್ಯೆಯ ಪುಸ್ತಕವನ್ನು ಸ್ವಲ್ಪ ಗಡಿಬಿಡಿಯಲ್ಲಿ ಬರೆದು ಮುದ್ರಿಸಿದಂತೆ ತೋರುತ್ತದೆ. ಕೆಲವೆಡೆ ಕಥೆ ಓದುತ್ತಾ ಓದುತ್ತಾ ಬೇರೆ ಕಡೆಗೆ ತಿರುಗುತ್ತದೆ. ಆದರೂ ಈ ಪುಸ್ತಕ ಬರೆಯಲು ಅವರು ತೆಗೆದುಕೊಂಡ ಶ್ರಮ ಅಭಿನಂದನೀಯ. ಏಕೆಂದರೆ ಎಲ್ಲೂ ದೊರೆಯದ…
ಲೇಖಕರು: Ashwin Rao K P
March 18, 2021

ನಾತಲೀಲೆ ಇದು ಕಥೆಗಾರ ಎಸ್.ಸುರೇಂದ್ರನಾಥ್ ಅವರ ಮೊದಲ ಕಥಾ ಸಂಕಲನ. ಈ ಸಂಕಲನದಲ್ಲಿ ಎಂಟು ಕಥೆಗಳಿವೆ. ನಟ, ನಿರ್ದೇಶಕ ಟಿ.ಎನ್.ಸೀತಾರಾಮ್ ಹಾಗೂ ಕಥೆಗಾರ ವಿವೇಕ್ ಶಾನಭಾಗ ಇವರ ಮಾತುಗಳು ಬೆನ್ನುಡಿಯಲ್ಲಿ ಅಚ್ಚಾಗಿವೆ. ‘ನಮ್ಮ ಬದುಕಿನ ಬೆಳಕಿನ ಭಾಗಗಳಲ್ಲಿ ನಮ್ಮನ್ನು ವಿಚಿತ್ರ ರೀತಿಯಲ್ಲಿ ಬೆರಗುಗೊಳಿಸುವ ಮಾರ್ಕ್ವೈಜ್ ಮತ್ತು ನಮ್ಮ ಎದೆಯ ಕತ್ತಲ ಭಾಗಗಳನ್ನು ಪೋಲೀಸ್ ನಂತೆ ತಟ್ಟುವ ಕಾಫ್ಕಾ ನನ್ನ ಇಷ್ಟದ ಕಥೆಗಾರರು. ಅವರಿಬ್ಬರೂ ಒಟ್ಟಿಗೆ ಸೇರುವುದು ಕಷ್ಟ. ಅವರಿಬ್ಬರೂ ಒಂದೇ ಪಾತಳಿಯಲ್ಲಿ…
ಲೇಖಕರು: Ashwin Rao K P
March 16, 2021

ಓಶೋ ಅವರ ಚಿಂತನೆಗಳು ಬಹಳ ಪ್ರಭಾವಶಾಲಿ. ಇವರ ಪ್ರವಚನಗಳ ಕುರಿತಾದ ಪುಸ್ತಕಗಳು ಹಾಟ್ ಸೇಲ್ ಆಗುತ್ತವೆ. ಓಶೋ ಅವರೇ ಹೇಳುವಂತೆ “ಪ್ರತಿಯೊಬ್ಬರೂ ಪ್ರೇಮದ ಬಾಗಿಲ ಬಳಿಯೇ ಹೋಗುತ್ತಿರುವರು. ವೇಶ್ಯೆಯ ಬಳಿ ಹೋಗುತ್ತಿರಲಿ, ದೇವಸ್ಥಾನಕ್ಕೆ ಹೋಗುತ್ತಿರಲಿ, ಹೋಗುತ್ತಿರುವುದು ಮಾತ್ರ ಪ್ರೇಮದ ದ್ವಾರದ ಬಳಿಗೇ. ಆಯ್ಕೆ ತಪ್ಪಾಗಿರಬಹುದಾದರೂ, ಆಕಾಂಕ್ಷೆ ಪ್ರೇಮದ್ದೇ. ಪ್ರೇಮದ ಅಮೃತವರ್ಷ ಸುರಿಯಲೆಂದು ನೀವು ಬಯಸುವಿರಾದರೆ ನಿಮ್ಮ ಪಾತ್ರೆ ಅಮೃತವನ್ನು ಸಂಬಾಳಿಸಲು ಯೋಗ್ಯವಾಗಿರುವುದಿಲ್ಲ. ಆದ್ದರಿಂದಲೇ…