ಪುಸ್ತಕ ಪರಿಚಯ

May 19, 2021
ಯಕ್ಷಗಾನದ ಆವರಣದಲ್ಲಿ ಸಿದ್ದಗೊಂಡ ಬೆರಳೆಣಿಕೆಯ ಕಾದಂಬರಿಗಳಲ್ಲಿ ಸಾಗರದ ಜಿ.ಎಸ್ ಭಟ್ಟರು ರಚಿಸಿರುವ ಮಂಜೀ ಮಹದೇವನ ಗಂಜೀ ಪುರಾಣ ಕಾದಂಬರಿಯೂ ಒಂದು. ಈ ಕಾದಂಬರಿಯ ಹೆಸರನ್ನು ಕೇಳುವಾಗಲೇ, ನಮಗೆ ಯಾವುದೋ ಒಂದು ಅವ್ಯಕ್ತ ಭಾವ ಒಡಮೂಡಿ, ಕುತೂಹಲವನ್ನು ಹೆಚ್ಚಿಸುತ್ತದೆ. ಇಲ್ಲಿ ಗಂಜೀ ಎನ್ನುವಾಗ ಮಹದೇವ ಎಂಬ ಯಕ್ಷಗಾನ ರಂಗಕರ್ಮಿಯ ಬದುಕಿಗಾಗಿ ನಡೆಸುವ ಹೋರಾಟವನ್ನು ತೆರೆದಿಟ್ಟು, ಅವನ ಜೀವನದ ಅನಿವಾರ್ಯತೆ ಮತ್ತು ತೀರ್ವತೆಯನ್ನು ಸಾದರಪಡಿಸುತ್ತದೆ. ತನ್ನ ಜನ್ಮಕ್ಕೆ ಕಾರಣನಾದ ಜಮೀನುದ್ದಾರ ಹಾಗೂ…
1
ಲೇಖಕರು: Ashwin Rao K P
May 18, 2021
ಬದುಕಿದ್ದ ಸಮಯದಲ್ಲೇ ದಂತಕತೆಯಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯನವರ ಆತ್ಮಕಥೆ ‘Memoirs of my working life’ ಅನ್ನು ಡಾ. ಗಜಾನನ ಶರ್ಮ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಸರ್ ಎಂವಿ ಅವರ ದೂರದೃಷ್ಟಿತ್ವದ ವ್ಯಕ್ತಿತ್ವ ಮತ್ತು ಸೃಜನಶೀಲತೆಯ ಪರಿಚಯ ಎಲ್ಲರಿಗೂ ಇದೆ. ಅವರ ಜೀವನದ ಬಗ್ಗೆ ಅವರದ್ದೇ ಮಾತುಗಳಲ್ಲಿ ಓದುವ ಬಯಕೆ ಇದ್ದರೆ ಈ ಪುಸ್ತಕವನ್ನು ಓದಬಹುದಾಗಿದೆ. ಸರ್ ಎಂವಿ ಅವರು ಈ ಪುಸ್ತಕವನ್ನು ಬರೆದದ್ದು ೧೯೫೧ರಲ್ಲಿ. ಅವರು ಆ ಸಮಯದಲ್ಲಿ ಪುಸ್ತಕ ಪ್ರಕಟಣೆಯ ಮೊದಲ ಮುದ್ರಣದ…
ಲೇಖಕರು: Ashwin Rao K P
May 15, 2021
ಪುರಾತನ ಕಾಲದಿಂದ ಚಾಲ್ತಿಯಲ್ಲಿರುವ ವೈದ್ಯಕೀಯ ಪದ್ಧತಿಯೆಂದರೆ ಆಯುರ್ವೇದ ವೈದ್ಯ ಪದ್ಧತಿ. ಋಷಿ ಮುನಿಗಳ ಕಾಲದಿಂದಲೂ ಆಯುರ್ವೇದ ನಮ್ಮ ಪರಂಪರೆಯ ಅಂಗವಾಗಿದೆ. ಡಾ. ರಾಜೀವ್ ಶರ್ಮ ಇವರು ಬರೆದ ಆಂಗ್ಲ ಭಾಷೆಯ ಪುಸ್ತಕವನ್ನು ಬಿ.ಕೆ.ಎಸ್. ಮೂರ್ತಿಯವರು ಕನ್ನಡಕ್ಕೆ ತಂದಿದ್ದಾರೆ. ಈ ಪುಸ್ತಕದ ಬೆನ್ನುಡಿಯಲ್ಲಿ ಬರೆದಂತೆ “ಪ್ರಕೃತಿ ತತ್ವದಲ್ಲಿನ ಪಂಚಭೂತಗಳ ಪ್ರಕ್ರಿಯೆಯಿಂದ ತ್ರಿದೋಷಗಳು ಉಂಟಾಗುತ್ತವೆ. ತ್ರಿದೋಷಗಳೆಂದರೆ ವಾತ, ಪಿತ್ತ, ಶ್ಲೇಷ ದೋಷವೆಂದರೆ ಇವುಗಳಲ್ಲಾಗುವ ಬದಲಾವಣೆ. ಈ ಮೂರು ದೋಷಗಳ…
ಲೇಖಕರು: Ashwin Rao K P
May 13, 2021
‘ಆಜಾದಿ' ಸ್ವದೇಶ ಚಳುವಳಿಯ ವಿಚಾರ ಧಾರೆ ಎಂಬ ಪುಸ್ತಕವು 'ಆಜಾದಿ ಬಚಾವೋ’ ಆಂದೋಲನದ ನೇತಾರ ರಾಜೀವ್ ದೀಕ್ಷಿತ್ ಅವರ ಬರಹಗಳ ಸಂಗ್ರಹ. ಇವರ ವಿಚಾರಧಾರೆಯನ್ನು ರಾಘವೇಂದ್ರ ಜೋಷಿಯವರು ಕನ್ನಡಕ್ಕೆ ಅನುವಾದ ಮಾಡಿ ‘ಹಾಯ್ ಬೆಂಗಳೂರು' ವಾರ ಪತ್ರಿಕೆಯಲ್ಲಿ ಪ್ರತೀ ವಾರ ಪ್ರಕಟ ಮಾಡುತ್ತಿದ್ದರು. ಹಾಯ್ ಬೆಂಗಳೂರು ಸಂಪಾದಕರಾದ ರವಿ ಬೆಳಗೆರೆಯವರು ತಮ್ಮ ಬೆನ್ನುಡಿಯಲ್ಲಿ ಪುಸ್ತಕದ ಬಗ್ಗೆ ಬರೆದದ್ದು ಹೀಗೆ..."ಈ ದೇಶದ ರೈತ ಬೆಳೆದ ಎಳನೀರು- ಅವನ ಶೃದ್ಧೆ, ಶ್ರಮ, ಬೆವರು, ರಕ್ತ, ಕನಸು, ಆಸೆಗಳ…
ಲೇಖಕರು: Ashwin Rao K P
May 11, 2021
ಪತ್ರಕರ್ತರಾದ ವಿಶ್ವೇಶ್ವರ ಭಟ್ ಇವರು ಬರೆದ ಬಿಡಿ ಬರಹಗಳ ಸಂಗ್ರಹವೇ ‘ಅಕ್ಷರಗಳೊಂದಿಗೆ ಅಕ್ಕರೆಯ ಯಾನ'. ಈ ಪುಸ್ತಕದಲ್ಲಿ ವಿಶ್ವೇಶ್ವರ ಭಟ್ ಅವರ ವಿವಿಧ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳು ಇವೆ. ಕೆಲವೊಂದು ಲೇಖನಗಳು ಈಗಲೂ ಪ್ರಸ್ತುತವೆನಿಸುತ್ತವೆ. ಸಾಹಿತಿ ಮನು ಬಳಿಗಾರ್ ಅವರು ತಮ್ಮ ಮುನ್ನುಡಿಯಾದ ‘ಎದೆಯಾಳದ ಎರಡು ಮಾತು' ಇದರಲ್ಲಿ ವಿಶ್ವೇಶ್ವರ ಭಟ್ ಹಾಗೂ ಅವರ ಬರಹಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದಾರೆ.  ಅವರು ಒಂದೆಡೆ ಬರೆಯುತ್ತಾರೆ “ಹಲವಾರು ರಾಷ್ಟ್ರಗಳನ್ನು ಸುತ್ತಾಡಿ…
ಲೇಖಕರು: Ashwin Rao K P
May 08, 2021
ನಾಗರಾಜ ವಸ್ತಾರೆ ಇವರು ಬರೆದ ವಿಭಿನ್ನ ಶೈಲಿಯ ಸಣ್ಣ ಕಥೆಗಳ, ಕವನಗಳ ಸಂಗ್ರಹವೇ ‘ಹಕೂನ ಮಟಾಟ' ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಆಗಿರುವ ಇವರನ್ನು ೨೦೦೨ರಲ್ಲಿ ದೇಶದ ಪ್ರತಿಭಾನ್ವಿತ ಹತ್ತು ಯುವ ವಿನ್ಯಾಸಕಾರರಲ್ಲಿ ಒಬ್ಬರು ಎಂದು ಗುರುತಿಸಿದ್ದರು. ಇವರು ಉತ್ತಮ ಕಥೆಗಾರರು. ಇವರ ಹಲವಾರು ಕಥೆ, ಕವನ ಹಾಗೂ ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಬೆಳಕು ಕಂಡಿದೆ.  ನಾಗರಾಜ ವಸ್ತಾರೆ ತಮ್ಮ ಮುನ್ನುಡಿಯಾದ ‘ನಮಸ್ಕಾರ' ಇಲ್ಲಿ ಬರೆದಂತೆ “ನಾನು ಬರಹದಲ್ಲಿ ತೊಡಗಿದ್ದು ಈ ಉದ್ಧಾಮ ಊರಿನಲ್ಲೊಂದು…