ಪುಸ್ತಕ ಪರಿಚಯ
ಲೇಖಕರು: Ashwin Rao K P
June 01, 2021

'ಪಂಚಮಗಳ ನಡುವೆ' ಎಂಬ ಈ ಸತ್ಯಕಾಮರ ಕೃತಿಯ ವಿಷಯ ಬಹು ಚರ್ಚಿತ. ಸತ್ಯಕಾಮರೇ ತಮ್ಮ ಮುನ್ನುಡಿಯಲ್ಲಿ ಬರೆದ ಮಾತುಗಳನ್ನು ಓದಿದರೆ ನಿಮಗೆ ನಿಜಕ್ಕೂ ಕೃತಿಯ ಬಗ್ಗೆ ಕುತೂಹಲ ಮೂಡತೊಡಗುತ್ತದೆ. ‘ಅನುಭವಗಳು ತರಂಗಗಳಂತೆ ಚಲನೆ ನೇರ ನಿಟ್ಟಿನಲ್ಲಲ್ಲ' ಎಂದು ತಮ್ಮ ಮುನ್ನುಡಿಯನ್ನು ಪ್ರಾರಂಭಿಸುವ ಇವರು ಮುಂದುವರೆದು ಬರೆಯುತ್ತಾರೆ..."ನೀವು ಪುಟಗಳನ್ನು ತೆರೆದು ಓದುತ್ತಿರುವುದು ಒಂದು ಬದುಕನ್ನು. ಆ ಬದುಕಿನ ಹಿಂದೆ ಒಂದು ಪ್ರಾಮಾಣಿಕವಾದ ಅನುಭವ ಮಾತ್ರ ಇಲ್ಲ ; ಸಶಕ್ತವಾದ ವೈಜ್ಞಾನಿಕ ನೆಲಗಟ್ಟೂ ಇದೆ…
ಲೇಖಕರು: Ashwin Rao K P
May 29, 2021

ಸ್ಮಶಾನ ಭೈರಾಗಿ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ ಬದುಕಿ…
ಲೇಖಕರು: Ashwin Rao K P
May 27, 2021

ಮಲೆನಾಡಿನ ರೋಚಕ ಕತೆಗಳು ಸರಣಿಯ ೯ನೇ ಭಾಗವೇ ‘ಹೇಮಾವತಿ ತೀರದ ಕೌತುಕ ಕತೆಗಳು' ಎಂಬ ಕಥಾ ಸಂಕಲನ. ಹೇಮಾವತಿ ನದಿಗೆ ಹೊಂದಿಕೊಂಡು ಬರೆದ ಕತೆಗಳು ಇವು. ಹಿಂದಿನ ಕತೆಗಳಂತೆಯೇ ನೈಜ ಪರಿಸರದ ಚಿತ್ರಣ ಇಲ್ಲಿದೆ. ಕಾಡು- ಮೇಡು, ಬೆಟ್ಟ -ಗುಡ್ಡ, ನದಿ -ತೊರೆ, ಕಾಡು ಪ್ರಾಣಿಗಳು, ಹಾವು- ಚೇಳು, ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು, ದನ, ಎಮ್ಮೆ, ಕಾಫಿ-ಕಾಳುಮೆಣಸು ಎಲ್ಲವೂ ಈ ಪುಸ್ತಕದ ಕತೆಗಳಲ್ಲಿ ಇವೆ. ಗಿರಿಮನೆ ಶ್ಯಾಮರಾವ್ ಅವರು ಬರೆದ ಬೆನ್ನುಡಿಯನ್ನು ಗಮನಿಸಿದರೆ ನಿಮಗೆ ಪುಸ್ತಕ ಓದ ಬೇಕೆಂಬ…
ಲೇಖಕರು: Ashwin Rao K P
May 25, 2021

ಸೂತ್ರಧಾರ ಮತ್ತು ಇತರ ಕಥೆಗಳು ಶೈಲಜಾ ಸುರೇಶ್ ರಾವ್ ನಾಯಕ್ ಅವರ ಪ್ರಥಮ ಕಥಾ ಸಂಕಲನ. ಈ ಕಥಾ ಸಂಕಲನದಲ್ಲಿ ಒಟ್ಟು ಹದಿಮೂರು ಕಥೆಗಳಿವೆ. ಆ ಹದಿಮೂರು ಕಥೆಗಳಲ್ಲಿ ಎರಡು ಕಥೆಗಳನ್ನು ಶೈಲಜಾ ಅವರ ಮಗಳಾದ ಅಶ್ವಿನಿಯವರು ಬರೆದಿದ್ದಾರೆ. ಅಮ್ಮ-ಮಗಳು ಸೇರಿ ಜೊತೆಯಾಗಿ ಕಥಾ ಸಂಕಲನ ರಚನೆ ಮಾಡಿದ್ದಾರೆ. ಶೈಲಜಾ ಅವರು ಬರೆದ ಕಥೆಗಳು ಚಿಕ್ಕದಾಗಿದ್ದು, ನಮ್ಮ-ನಿಮ್ಮೆಲ್ಲರ ಮನೆಯ ಕಥೆಗಳಂತೆಯೇ ಇವೆ. ಈ ಕಥೆಗಳು ನಮ್ಮ ನೆರೆಹೊರೆಯಲ್ಲೇ ನಡೆದಷ್ಟು ಆಪ್ತವಾಗಿವೆ. ಪ್ರತಿಯೊಂದು ಕಥೆ ಭಾವನಾತ್ಮಕವಾಗಿದೆ.…
ಲೇಖಕರು: Ashwin Rao K P
May 22, 2021

ಕಥೆಗಾರ, ಸಾಹಿತಿ, ಕಾದಂಬರಿಗಾರ ಜೋಗಿ (ಗಿರೀಶ್ ಹತ್ವಾರ್) ಇವರು ಬರೆದ ಸಣ್ಣ ಕಥೆಗಳ ಸಂಗ್ರಹವಿದು. ಮುಖಪುಟದಲ್ಲೇ ‘ನಾನಿದನ್ನು ಬರೆಯಬಾರದಿತ್ತು ಅಂದುಕೊಳ್ಳುತ್ತಿರುವ ಹೊತ್ತಿಗೇ, ನೀವಿದನ್ನು ಓದುತ್ತಾ ಇದ್ದೀರಿ!' ಎಂದು ಪ್ರಕಟಿಸಿ ನಮ್ಮ ಓದುವ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ ಜೋಗಿ. ಈ ಕಥೆಗಳು ‘ಖಾಸಾ ಪತ್ರದ ಹಾಗೆ ನಿಮ್ಮನ್ನು ತಲುಪಲಿ' ಎಂದು ಮುನ್ನುಡಿ ಬರೆದಿದ್ದಾರೆ ಜೋಗಿಯವರು. 'ಇಲ್ಲಿರುವ ಇಪ್ಪತ್ತೂ ಮತ್ತೊಂದು ಕತೆಗಳ ಬಗ್ಗೆ ಹೇಳುವಂಥದ್ದೇನಿಲ್ಲ. ಕತೆ ಬರೆಯುವುದು ಮಹಾನ್…
ಲೇಖಕರು: Ashwin Rao K P
May 20, 2021

ಪತ್ರಕರ್ತ, ಬರಹಗಾರ, ಕವಿ, ವಿಮರ್ಶಕ ಎಂ.ನಾ.ಚಂಬಲ್ತಿಮಾರ್ ಇವರದ್ದು ಬಹುಮುಖ ಪ್ರತಿಭೆ. ಪ್ರಸ್ತುತ ‘ಕಣಿಪುರ' ಎಂಬ ಯಕ್ಷಗಾನ ಕಲೆಗೆ ಸಂಬಂಧಿಸಿದ ಪತ್ರಿಕೆಯ ಸಂಪಾದಕರಾಗಿರುವ ಇವರು ಈ ಹಿಂದೆ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಬರೆದ ಲೇಖನ ಹಾಗೂ ಅಂಕಣ ಬರಹಗಳ ಸಂಗ್ರಹವೇ ‘ಗಡಿನಾಡ ದಡದಿಂದ...' ಎಂಬ ಪುಸ್ತಕ.
‘ಕನ್ನಡ ಕೈರಳಿ’ ಎಂಬ ಪತ್ರಿಕೆಯ ಪ್ರಕಾಶಕರೂ ಹಾಗೂ ಸಂಪಾದಕರೂ ಆಗಿರುವ ಅಬ್ದುಲ್ ರಹಿಮಾನ್ ಸುಬ್ಬಯ್ಯಕಟ್ಟೆ ಇವರು ತಮ್ಮ ಕೈರಳಿ ಪ್ರಕಾಶನದ ಮೂಲಕ ಈ ಪುಸ್ತಕವನ್ನು ಹೊರತಂದಿದ್ದಾರೆ. ಅವರು…