ಕಾಲದ ಕನ್ನಡಿ- ಬುಧ್ಧನ ಕ೦ಡಿರಾ?

ಕಾಲದ ಕನ್ನಡಿ- ಬುಧ್ಧನ ಕ೦ಡಿರಾ?

ಬರಹ

 ಬುಧ್ಧನ ಕ೦ಡಿರಾ?


 


ತನ್ನದೆಲ್ಲವ ಬಿಟ್ಟು ನಡೆದ ನಡುರಾತ್ರಿಯಲಿ,


ಅರಮನೆ,ನೆರೆಮನೆ,ವಜ್ರ-ವೈಢೂರ್ಯ-ಅಷ್ಟೈಶ್ವರ್ಯ


ಬಿಟ್ಟು ನಡೆದ ಸತಿ-ಸುತರ ನಡು ನೀರಿನೊಳು


ಸ೦ಸಾರದೊಳು ಮುಳುಗೆದ್ದ  ಸ೦ಸಾರಿ ಸನ್ಯಾಸಿ!


ಕ೦ಡನವ ಚೆನ್ನನೊಳು ತನ್ನ ಮಹಾಗುರುವ.


ಹೆಳವ,ಹೆಣದೊಳು ಜೀವನದ ಮರ್ಮವ.


ವಾದ-ಚರ್ಚೆಗಳು ನೀಡಲಿಲ್ಲ ಬೆಳಕವಗೆ!


ದ೦ಡಿಸಿದ ದೇಹವನು, ಖ೦ಡಿಸಿದ ಆಸೆಯನು,


ಮನವ ನೂಕಿದನು ಧ್ಯಾನದೊಳು


ಜ್ನಾನಸೂರ್ಯನ ಕ೦ಡನವ ಭೋಧಿ ವೃಕ್ಷದಡಿಯೊಳು.


 


ಸಾವಿಲ್ಲದಾ ಮನೆಯ ಸಾಸಿವೆಯ ತಾ ಎ೦ದನವ!


ಮರುಳ ಮನುಜರ ಕ೦ಡು ಮನದೊಳಗೇ ನಕ್ಕನವ.


ನವಜಾತ ಶಿಶುವಿನದಾವುದು ಜಾತಿ?


ಮೊದಲು ಮನುಜನಾಗು!


ನೀನು,ನಿನ್ನವರೆನ್ನದೆ ಎಲ್ಲರನು ಪ್ರೀತಿಸು,


ಬಡವ-ಬಲ್ಲಿದ, ದಲಿತ-ಹಾರುವ


ಯಾರನೂ ಅವ ಕರೆಯಲಿಲ್ಲ,ಎಲ್ಲರೂ ಬ೦ದರು!


ಕರೆದರು ಅವ ಬುಧ್ಧ!ಅವ ಬುಧ್ಧ!ಬುಧ್ಧನವ ಬುಧ್ಧ!


 


ಕ೦ಡಿರೇ ಬುಧ್ಧನನು?


ನಮ್ಮ-ನಿಮ್ಮೊಳಗೆ?


ಕ೦ಡಿತೇನು? ಜ್ನಾನದ ಕಿ೦ಡಿ?


ಹಚ್ಚಬೇಡಿ ಜಾತಿ-ಬೆ೦ಕಿಯ ಕಿಡಿ,


ಆರಿಸಿ ಕೋಮು ದ್ವೇಷದ ಬೆ೦ಕಿ.


ಬಿಡದೆ ತೆಗೆಯಿರಿ ಹಿ೦ಸೆಯ ಮೂಲವನು,


ನೆಟ್ಟು ಪೋಷಿಸಿ, ಅಹಿ೦ಸೆಯ ಬೇರನ್ನು.


ಪರರ ಹಿ೦ಸಿಸಿವುದಲ್ಲ ನಮ್ಮ-ನಿಮ್ಮ ಕಾರ್ಯ


ಅದೇ ಸ೦ಘ ಜೀವನದ ಮರ್ಮ.


ಹುಡುಕಬೇಡಿ ಬುಧ್ಧನನು ಅವರಿವರೊಳಗೆ!


ನಮ್ಮ-ನಿಮ್ಮೊಳಗೇ ಇರಬಹುದು ಮತ್ತೊಬ್ಬ ಬುಧ್ಧ.