ದೀನ ಎಂಬುದಕ್ಕೆ ವಿರುದ್ಧ ಪದ ಯಾವುದು!

ದೀನ ಎಂಬುದಕ್ಕೆ ವಿರುದ್ಧ ಪದ ಯಾವುದು!

ಬರಹ

ನಿನ್ನೆ ರಾತ್ರಿ ನನ್ನ ತಂಗಿ ಫೋನು ಮಾಡಿದ್ದಳು. ಅವಳ ಮಗಳಿಗೆ, ಆರನೆಯ ಕ್ಲಾಸು ಓದುತ್ತಿರುವವಳು, ಮರುದಿನ
ಕನ್ನಡ ಟೆಸ್ಟು ಇತ್ತಂತೆ. ಅದರಲ್ಲಿ ಒಂದು ಪ್ರಶ್ನೆಗೆ ಉತ್ತರ ಹೊಳೆಯದೆ ಫೋನು ಮಾಡಿದ್ದಳು. ಪ್ರಶ್ನೆ ಇದು: "ದೀನ'
ಎಂಬುದಕ್ಕೆ ವಿರುದ್ಧಾರ್ಥ ಪದ ಬರೆಯಿರಿ. ದೀನ ಎಂಬ ಪದಕ್ಕೆ ವಿರುದ್ಧಾರ್ಥ ಪದ ಇಲ್ಲಮ್ಮ ಎಂದು ಹೇಳಿದರೆ
ಪುಸ್ತಕದಲ್ಲಿ ಕೇಳಿದ್ದಾರಲ್ಲ ಅನ್ನುವ ಪ್ರಶ್ನೆ ಅವಳಿಂದ ಬಂದಿತು.
ಪುಸ್ತಕದಲ್ಲಿ, ಅದರಲ್ಲೂ ಪಠ್ಯ ಪುಸ್ತಕದಲ್ಲಿ ಇರುವುದೆಲ್ಲ ಸತ್ಯ ಎಂಬ ಭ್ರಮೆ ನಮಗೆ ಹೋಗಿಲ್ಲ. ಭಾಷೆಯ ಸೂಕ್ಷ್ಮಗಳ
ಬಗ್ಗೆ ಎಚ್ಚರ ಮೂಡಿಲ್ಲ ಅನ್ನುವುದಕ್ಕೆ ವಿರುದ್ಧಾರ್ಥ ಪದಗಳದ್ದು ಒಂದು ಜ್ವಲಂತ ಉದಾಹರಣೆ.
ಸ್ವಲ್ಪ ಆಲೋಚಿಸಿ, ಈ ಸಂಗತಿ ಮಕ್ಕಳಿಗೆ ಎಷ್ಟು ಕಕ್ಕಾಬಿಕ್ಕಿ ಮಾಡಬಹುದು. ಅಪ್ಪ-ಅಮ್ಮ, ಗಂಡ-ಹೆಂಡತಿ,
ಒಳ್ಳೆಯದು-ಕೆಟ್ಟದ್ದು, ರೂಪ-ಕುರೂಪ, ಸಜ್ಜನ-ದುರ್ಜನ ಇವೆಲ್ಲ ಒಂದೇ ರೀತಿಯ ವಿರುದ್ಧಾರ್ಥ ಪದಗಳೇ?
ಖಂಡಿತ ಅಲ್ಲ. ಕೆಲವು ನಿರ್ದಿಷ್ಟ ಅಕ್ಷರಗಳನ್ನು ಸೇರಿಸುವ ಮೂಲಕ ವಿರುದ್ಧ ಅರ್ಥ ಮೂಡಿಸುವ ರೂಪನಿಷ್ಠ
ವಿರುದ್ಧಾರ್ಥಗಳಿವೆ: ಸು ಎಂದರೆ ಒಳ್ಳೆಯ, ದುರ್ ಎಂದರೆ ಅದಕ್ಕೆ ವಿರುದ್ಧವಾದ ಎಂಬ ರೂಪ ನಿಷ್ಠ ನಿಯಮ ಮಾಡಿ
ಆ ಮೂಲಕ ಸುಜನ-ದುರ್ಜನ, ಸುಷಮ-ದುಷ್ಷಮ ಇತ್ಯಾದಿ ಪದಗಳನ್ನು ವಿವರಿಸಬಹುದು. ಆದರೆ ಇಂಥ
ಗುಂಪಿನ ಪದಗಳ ಸಂಖ್ಯೆ ಕಡಮೆ.
ಇನ್ನೊಂದು ಬಗೆಯ ವಿರುದ್ಧಾರ್ಥಕಗಳು ಕೇವಲ ಅರ್ಥ ನಿಷ್ಠವಾದವು. ಅಂದರೆ ನಮ್ಮ ಮನಸ್ಸಿನಲ್ಲಿ ಇವು
ವಿರುದ್ಧ ಎಂಬ ಕಲ್ಪನೆ ಮೂಡಿಸಿಕೊಂಡದ್ದರಿಂದ ಬಂದವು. ಸುಖ ಎಂಬುದಕ್ಕೆ ಅಸುಖ ವಿರುದ್ಧಪದವೋ, ದುಃಖವೋ?
ರೂಪದ ಮಟ್ಟಿಗೆ ಹೇಳುವುದಾದರೆ ಅಸುಖ, ಅರ್ಥದ ಮಟ್ಟಿಗೆ ಹೇಳುವುದಾದರೆ ದುಃಖ. ಹಗಲು ಎಂಬುದಕ್ಕೆ ಇರುಳು ವಿರುದ್ಧ ಪದವೋ
ರಾತ್ರಿ ಎಂಬುದೋ? ಉದ್ದ ಎಂಬುದಕ್ಕೆ ಗಿಡ್ಡ ವಿರುದ್ಧವೋ, ಅಗಲ ವಿರುದ್ಧವೋ?
ಇದರೊಟ್ಟಿಗೆ ಕನ್ನಡ ಮತ್ತು ಸಂಸಕೃತದ ವ್ಯಾಕರಣ ನಿಯಮಗಳ ಗೊಂದಲ ಬೇರೆ.
ವ್ಯಾಕರಣವೆನ್ನುವುದು ಕೇವಲ ಭಾಷೆಯ ರೂಪ ಲಕ್ಷಣಗಳನ್ನು ವಿವರಿಸುವ ವಿಜ್ಞಾನವಾದರೆ ಆಗ ಅ, ನಿರ್, ದುರ್, ಇತ್ಯಾದಿ
ಪ್ರತ್ಯಯಗಳಿಂದ ರೂಪಗೊಳ್ಳುವ ವಿರುದ್ಧಾರ್ಥಕಗಳನ್ನು ನಿಯಮ ಸಹಿತವಾಗಿ ಹೇಳಿಕೊಡಬೇಕು. ಅರ್ಥ ಆಧಾರಿತ ವಿರುದ್ಧಪದಗಳ
ತಂಟೆಗೆ ಹೋದರೆ ಮೇಷ್ಟರಿಗೂ ವಿದ್ಯಾರ್ಥಿಗಳಿಗೂ ಪೋಷಕರಿಗೂ ಕಷ್ಟ ತಪ್ಪಿದ್ದಲ್ಲ.
ಇಷ್ಟಾಗಿ ದೀನ ಎಂಬುದಕ್ಕೆ ವಿರುದ್ಧ ಪದ ಯಾವುದು? ಅದೀನವೋ? ದಾನಿಯೋ? ಏನು? ಎಲ್ಲ ಪದಗಳಿಗೂ ವಿರುದ್ಧ ಪದಗಳನ್ನು
ಹುಡುಕಬೇಕು ಎಂಬ ಹಟ ನಮ್ಮ ಕನ್ನಡ ಬೋಧನೆಯಲ್ಲಿ