ಯಾರಿ 'Gay '

ಯಾರಿ 'Gay '

ಬರಹ

ನಾನು ವಿದೇಶ ದಲ್ಲಿದ್ದಾಗ , ಕೆಲವು ತಮಾಷೆ ಅನುಭವವು ಆದವು.
ವಿದೇಶ ದಲ್ಲಿ ಕನ್ನಡ ಮಾತನಾಡುವುದು ಎಂದರೆ ಎಷ್ಟು ಚಂದ, ನಾನು ವಿದೇಶಕ್ಕೆ ಹೋದರೆ
ಆ ಸ್ಥಳದಲ್ಲಿ ಕನ್ನಡ ಸಂಘ ಇದ್ಯೋ ಇಲ್ಲವೋ ಅನ್ನೋದನ್ನ ಹುಡುಕಿ ನಾನೇ ಸ್ವತಹ ಪರಿಚಯ ಮಾಡಿಕೊಂಡು
ಸ್ನೇಹಿತರನ್ನು ಸಂಪಾದಿಸುತ್ತೇನೆ , ಹೊರನಾಡ  ಕನ್ನಡಿಗರು ತುಂಬಾ ಸಹೃದಯರು , ದೂಸ್ರ ಮಾತಿಲ್ಲ !

ಹೀಗೆ ಪ್ರತಿದಿವಸ ಊಟದ ಸಮದಲ್ಲಿ ಎಲ್ಲರ ಜ್ಯೋತೆ ಹರಟುತ್ತಿದ್ದೆ , ನನ್ನ ಜ್ಯೋತೆ ಕೆಲಸಮಾಡುತ್ತಿದ್ದ  ಕೇರಳದವರು ಒಂದು ದಿನ
ಸಂಕೋಚದಿಂದ ಕೇಳಿದರು " ನೀವು ತುಂಬಾ ಸಲ ಮಾತನಾಡುವಾಗ Gay ಶಬ್ದ ಏಕೆ ಬಳಸುತ್ತಿರಿ,  ಎಂದು
ಇಲ್ಲಿನ ಸ್ಥಳಿಯರು ನನ್ನನು ಕೇಳಿದ್ದುಂಟು. ನಾನು, ಇಲ್ಲ ಭಾಹುಶ ಅವರ ಭಾಷೆಯಲಿ ಮಾತನಾಡುವಾಗ ಹಾಗೆ ಕೇಳುವುದು ಎಂದು ಹೇಳಿದೆ"
ಎಂದರು. ನನಗೆ ಆಗ ಅರಿವಾಯಿತು , ಕನ್ನಡ ಪದಗಳಲ್ಲಿ 'ಗೆ' ಬಳಸುವುದು ಜ್ಯಾಸ್ತಿ ಇರೋದ್ರಿಂದ ಅನ್ಯರಿಗೆ ಬೇರೆ ಅರ್ಥ ಕೊಡುತ್ತದೆ ಎಂದು.

ಉದಾಹರಣೆ : "ಯಾರ್ಗೆ " , "ನನ್ಗೆ " , "ಅವ್ರಿಗೆ  " , "ಇವರಿಗೆ"
 ನಮಗೂ ಅಷ್ಟೇ ಸ್ಪಾನಿಶ್ ಭಾಷೆ ಕೇಳಿದರೆ ಕೆಲೊಮ್ಮೆ ನಗು ಬರುತ್ತದೆ ......