ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ಪಾಲು.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ಪಾಲು.

ಬರಹ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಭಾರತದ ಆಸ್ಕರ್‍ಗೆ ಹೋಲಿಸುತ್ತಾರೆ. 1953 ರಿಂದ ಕೊಡಮಾಡುತ್ತಿರುವ ಈ ಪ್ರಶಸ್ತಿ ಇಂದಿಗೂ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ರಾಷ್ಟ್ರಪ್ರಶಸ್ತಿ ಪಡೆಯುವುದು ಪ್ರತಿಯೊಬ್ಬ ಕಲಾವಿದ, ತಂತ್ರಜ್ಞನ ಕನಸುಗಳಲ್ಲೊಂದು ಎಂದರೆ ತಪ್ಪಾಗಲಾರದು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿಗೋಸ್ಕರ ರಾಜಕೀಯ ಲಾಬಿಗಳೂ ಹೆಚ್ಚುತ್ತಿವೆ. ಇದು ಈ ಪ್ರತಿಷ್ಠಿತ ಪ್ರಶಸ್ತಿಯ ಪಾವಿತ್ರ್ಯತೆಯನ್ನು ಹಾಳುಮಾಡುತ್ತಿರುವುದು ನಿಜಕ್ಕೂ ಖೇದಕರ.

ಆದರೂ ಇಲ್ಲಿಯವರೆಗೆ ಕನ್ನಡ ಚಿತ್ರರಂಗಕ್ಕೆ ಸಂದಿರುವ ರಾಷ್ಟ್ರೀಯ ಪ್ರಶಸ್ತಿಗಳ ಮೇಲೊಂದು ಪಕ್ಷಿನೋಟ ಬೀರುವ ಕಿರು ಪ್ರಯತ್ನ ಇಲ್ಲಿದೆ.

ಅತ್ಯುತ್ತಮ ಚಿತ್ರ - ಸ್ವರ್ಣ ಕಮಲ ಪ್ರಶಸ್ತಿ

೧. 1970 - ಸಂಸ್ಕಾರ. ನಿರ್ದೇಶನ - ಪಟ್ಟಾಭಿ ರಾಮ ರೆಡ್ಡಿ. ಜ್ಞಾನಪೀಠ ಪ್ರಶಸ್ತಿ ವಿಜೇತ ಯು.ಆರ್. ಅನಂತ ಮೂರ್ತಿಯವರ ಕಾದಂಬರಿ ಆಧಾರಿತ ಈ ಚಿತ್ರ ಕನ್ನಡಕ್ಕೆ ಮೊಟ್ಟ ಮೊದಲ ಬಾರಿಗೆ ಸ್ವರ್ಣ ಕಮಲ ಪ್ರಶಸ್ತಿಯನ್ನು ತಂದು ಕೊಟ್ಟಿತು.

೨. 1975 - ಚೋಮನ ದುಡಿ. ನಿರ್ದೇಶನ - ಬಿ.ವಿ.ಕಾರಂತ್. ಜ್ಞಾನಪೀಠ ಪ್ರಶಸ್ತಿ ವಿಜೇತ, ಕಡಲ ತೀರದ ಭಾರ್ಗವನೆಂದೇ ಖ್ಯಾತರಾದ ಡಾ.ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿಯನ್ನು ಅಮೋಘವಾಗಿ ದೃಶ್ಯ ಮಾಧ್ಯಮಕ್ಕೆ ಅಳವಡಿಸಿದರು ಬಿ.ವಿ.ಕಾರಂತರು. ಇದೇ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ವಾಸುದೇವರಾವ್ ಅವರು ಶ್ರೇಷ್ಠ ನಟ ಪ್ರಶಸ್ತಿಯನ್ನೂ ಪಡೆದರು.

೩. 1977 - ಘಟಶ್ರಾದ್ದ. ನಿರ್ದೇಶನ - ಗಿರೀಶ್ ಕಾಸರವಳ್ಳಿ. ಇದು ಕನ್ನಡ ಚಿತ್ರರಂಗದ ಖ್ಯಾತಿಯನ್ನು ಇಡೀ ವಿಶ್ವಕ್ಕೇ ಪಸರಿಸಿದ ಮಹಾನ್ ಚಿತ್ರ. ಕೆ.ವಿ.ಸುಬ್ಬಣ್ಣ, ಗಿರೀಶ್ ಕಾಸರವಳ್ಳಿಯವರ ಕಥೆಗೆ ಕಾಸರವಳ್ಳಿಯವರೇ ಚಿತ್ರಕಥೆ ಬರೆದು ನಿರ್ದೇಶಿಸಿದರು. ಈ ಚಿತ್ರ ಹಿಂದಿಗೂ ಭಾಷಾಂತರಗೊಂಡಿತಲ್ಲದೇ ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳಿಗೆ ಭಾಜನವಾಯಿತು.

೪. 1983 - ಆದಿ ಶಂಕರಾಚಾರ್ಯ (ಸಂಸ್ಕೃತ). ನಿರ್ದೇಶನ - ಜಿ.ವಿ.ಅಯ್ಯರ್. ಇದು ಸಂಸ್ಕೃತ ಚಿತ್ರವಾದರೂ ಇದನ್ನು ನಿರ್ದೇಶಿಸಿದವರು ಕನ್ನಡ ಚಿತ್ರರಂಗದ ಭೀಷ್ಮರೆಂದೇ ಖ್ಯಾತರಾದ ಜಿ.ವಿ.ಅಯ್ಯರ್‍ರವರು. ಹಾಗಾಗಿ ಇದರ ಕೀರ್ತಿಯೂ ಕನ್ನಡ ಚಿತ್ರರಂಗಕ್ಕೇ ಸೇರಿತ್ತದೆ.

೫. 1986 - ತಬರನ ಕಥೆ. ನಿರ್ದೇಶನ - ಗಿರೀಶ್ ಕಾಸರವಳ್ಳಿ. ನಿವೃತ್ತ ಬಡ ಉದ್ಯೋಗಿಯೊಬ್ಬ ತನ್ನ ನಿವ್ರೂತ್ತಿವೇತನಕ್ಕೋಸ್ಕರ ಸರಕಾರೀ ಕಛೇರಿಗಳಿಗೆ ಅಲೆಯುವ, ಸಕ್ರಾರೀ ವ್ಯವಸ್ಥೆಯ ಕರಾಳ ಮುಖವನ್ನು ಪರಿಚಯಿಸುವ ಈ ಚಿತ್ರದಲ್ಲಿ ಚಾರು ಹಾಸನ್ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಇದೇ ಚಿತ್ರಕ್ಕಾಗಿ ಅವರು ಶ್ರೇಷ್ಠ ನಟ ಪ್ರಶಸ್ತಿಯನ್ನೂ ಪಡೆದರು.

೬. 1992 - ಭಗವದ್ಗೀತಾ (ಸಂಸ್ಕೃತ). ನಿರ್ದೇಶನ - ಜಿ.ವಿ.ಅಯ್ಯರ್.

೭. 1997 - ತಾಯಿ ಸಾಹೇಬ. ನಿರ್ದೇಶನ - ಗಿರೀಶ್ ಕಾಸರವಳ್ಳಿ. ನಟಿ ಜಯಮಾಲಾ ನಿರ್ಮಿಸಿ ನಟಿಸಿರುವ ತಾಯಿ ಸಾಹೇಬ ಸಂಕೀರ್ಣ ಕಥೆಯೊಂದನ್ನು ಅತ್ಯಂತ ಉತ್ಕೃಷ್ಠ ಮಟ್ಟದಲ್ಲಿ ತೆರೆಯ ಮೇಲೆ ತೋರಿಸಿದ ಚಿತ್ರ. ಜಯಮಾಲಾರ ಅಭಿನಯಕ್ಕೆ ಸಾರ್ವತ್ರಿಕವಾಗಿ ಶ್ಲಾಘನೆ ದೊರೆಯಿತು.

೮. 2001 - ದ್ವೀಪ. ನಿರ್ದೇಶನ - ಗಿರೀಶ್ ಕಾಸರವಳ್ಳಿ. ನಾ.ಡಿಸೋಜಾರವರ ಕಾದಂಬರಿಯನ್ನು ನಟಿ ದಿ.ಸೌಂದರ್ಯಾರವರು ನಿರ್ಮಿಸಿದರು. ಅವರೇ ನಾಯಕಿಯಾಗಿಮೋಘವಾಗಿ ನಟಿಸಿದರು ಕೂಡಾ.

ಎರಡನೇ ಅತ್ಯುತ್ತಮ ಚಿತ್ರ - ರಜತ ಕಮಲ

1973 - ಕಾಡು. ನಿರ್ದೇಶನ - ಗಿರೀಶ್ ಕಾರ್ನಾಡ್.

ಅತ್ಯುತ್ತಮ ನಿರ್ದೇಶಕ - ಸ್ವರ್ಣ ಪದಕ

೧. 1971 - ಗಿರೀಶ್ ಕಾರ್ನಾಡ್ ಮತ್ತು ಬಿ.ವಿ.ಕಾರಂತ್. ಚಿತ್ರ - ವಂಶವೃಕ್ಷ. ಡಾ.ಎಸ್.ಎಲ್.ಭೈರಪ್ಪನವರ ಕಾದಂಬರಿ ಆಧಾರಿತ ಚಿತ್ರ.

೨. 1976 - ಪಿ.ಲಂಕೇಶ್. ಚಿತ್ರ - ಪಲ್ಲವಿ.

ಅತ್ಯುತ್ತಮ ನಟ

೧. 1975 - ಎಮ್.ವಿ.ವಾಸುದೇವರಾವ್. ಚಿತ್ರ - ಚೋಮನ ದುಡಿ.

೨. 1985 - ಚಾರುಹಾಸನ್. ಚಿತ್ರ - ತಬರನ ಕಥೆ.

ಅತ್ಯುತ್ತಮ ನಟಿ

೧. 1973 - ನಂದಿನಿ ಭಕ್ತವತ್ಸಲ. ಚಿತ್ರ - ಕಾಡು.

೨. 2004 - ತಾರಾ. ಚಿತ್ರ - ಹಸೀನಾ.

ಅತ್ಯುತ್ತಮ ಪೋಷಕ ನಟ

೧. 2000 - ಹೆಚ್.ಜಿ.ದತ್ತಾತ್ರೇಯ. ಚಿತ್ರ - ಮುನ್ನುಡಿ.

ಅತ್ಯುತ್ತಮ ಪೋಷಕ ನಟಿ

ಇನ್ನೂ ಕನ್ನಡಕ್ಕೆ ಬಂದಿಲ್ಲ.

ಅತ್ಯುತ್ತಮ ಬಾಲ ನಟ/ನಟಿ

೧. 1973 - ಮಾಸ್ಟರ್ ಜಿ.ಎಸ್.ನಟರಾಜ್. ಚಿತ್ರ - ಕಾಡು.

೨. 1977 - ಮಾಸ್ಟರ್ ಅಜಿತ್ ಕುಮಾರ್. ಚಿತ್ರ - ಘಟಶ್ರಾದ್ದ.

೩. 1985 - ಮಾಸ್ಟರ್ ಪುನೀತ್. ಚಿತ್ರ - ಬೆಟ್ಟದ ಹೂವು.

೪. 1994 - ಮಾಸ್ಟರ್ ವಿಜಯ ರಾಘವೇಂದ್ರ. ಚಿತ್ರ - ಕೊಟ್ರೇಶಿ ಕನಸು.

೫. 1995 - ಮಾಸ್ಟರ್ ವಿಶ್ವಾಸ್. ಚಿತ್ರ - ಕ್ರೌರ್ಯ.

ಅತ್ಯುತ್ತಮ ಚಿತ್ರಕಥೆ

೧. 1969- ಪುಟ್ಟಣ್ಣ ಕಣಗಾಲ್. ಚಿತ್ರ - ಗೆಜ್ಜೆ ಪೂಜೆ.

೨. 1978 - ಟಿ.ಎಸ್.ರಂಗ, ಟಿ.ಎಸ್.ನಾಗಾಭರಣ. ಚಿತ್ರ - ಗ್ರಹಣ.

೩. 1983 - ಜಿ.ವಿ.ಅಯ್ಯರ್. ಚಿತ್ರ -ಆದಿ ಶಂಕರಾಚಾರ್ಯ.

ಅತ್ಯುತ್ತಮ ಗೀತ ರಚನೆ (ಸಾಹಿತ್ಯ)

೧. 1991 - ಕೆ.ಎಸ್.ನರಸಿಂಹಸ್ವಾಮಿ. ಚಿತ್ರ - ಮೈಸೂರ ಮಲ್ಲಿಗೆ.

ಅತ್ಯುತ್ತಮ ಸಂಗೀತ ನಿರ್ದೇಶಕ

೧. 1976 - ಬಿ.ವಿ.ಕಾರಂತ್. ಚಿತ್ರ - ಋಷ್ಯಶೃಂಗ.

೨. 1977 - ಬಿ.ವಿ.ಕಾರಂತ್. ಚಿತ್ರ - ಘಟಶ್ರಾದ್ಧ.

೩. 1986 - ಎಮ್.ಬಾಲಮುರಳಿ ಕೃಷ್ಣ. ಚಿತ್ರ - ಮಧ್ವಾಚಾರ್ಯ.

೪. 1995 - ಹಂಸಲೇಖ. ಚಿತ್ರ - ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರಿ ಗವಾಯಿ.

 

ಅತ್ಯುತ್ತಮ ಹಿನ್ನೆಲೆ ಗಾಯಕ

೧. 1995 - ಎಮ್.ಬಾಲಮುರಳಿ ಕೃಷ್ಣ. ಚಿತ್ರ - ಹಂಸಗೀತೆ.

೨. 1978 - ಶಿವಮೊಗ್ಗ ಸುಬ್ಬಣ್ಣ. ಚಿತ್ರ - ಕಾಡು ಕುದುರೆ.

೩. 1992 - ಡಾ.ರಾಜ್ ಕುಮಾರ್. ಚಿತ್ರ - ಜೀವನ ಚೈತ್ರ.

೪. 1995 - ಎಸ್.ಪಿ.ಬಾಲಸುಬ್ರಹ್ಮಣ್ಯಂ. ಚಿತ್ರ - ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರಿ ಗವಾಯಿ.

<<To be continued...ಇನ್ನೂ ಇದೆ..>>