ಮೀಸೆ ಆಂದೋಲನ...
ಇವತ್ತು ಬೆಳಿಗ್ಗೆ ಬೆಳಿಗ್ಗೆನೇ ದೂರದೂರಿನಲ್ಲಿರೂ (ಪರದೇಶ) ಗೆಳತಿ ಮಾನಸ ಅವರ ಜೊತೆ ಮೀಸೆ ಬಗ್ಗೆ ಹಾಟ್ ಡಿಸ್ಕಶನ್ ನಡೀತು..
ಹುಡುಗರಿಗೆ ಮೀಸೆ ಅಂದ್ರೆ ಇಷ್ಟ ಇಲ್ಲವಾ? ಸಾಕಷ್ಟು ಜನ ಹುಡುಗರು (ದೇಶಿ ಮತ್ತು ವಿದೇಶಿ ತಳಿಗಳೂ ಸಹ ಸೇರಿ) ಮೀಸೆ ಯಾಕೆ ಬಿಡೋದಿಲ್ಲಾ ಅನ್ನೋದರ ಬಗ್ಗೆನೇ ಚರ್ಚೆ..
ಭಾರ(?)ತೀಯರಿಗೆ ಮೀಸೆ ಅನ್ನೋದು ಗೌರವ, ಮರ್ಯಾದೆ ಅನ್ನೋದರ ಸೂಚಕ.
ನಮ್ಮ ಸ್ವಾತಂತ್ರ ಹೋರಾಟಗಾರರು ಬ್ರಿಟೀಷರ ವಿರುದ್ಧ ಹೋರಾಟ ಮಾಡಬೇಕಾದಾಗ ಮೀಸೆಗೆ ಸಹ ಪ್ರಾಶಸ್ತ್ರ ಕೊಟ್ಟಿದ್ದರು.. ಆದರೆ, ಮೀಸೆ ಬಗ್ಗೆ ಈಗೀಗ ಯಾರೂ ಪ್ರಾಶಸ್ತ್ಯಾನೇ ಕೊಡ್ತಿಲ್ಲಾ ಅನ್ನೋದು ಗಂಭೀರವಾದ ವಿಚಾರ..
ನಮ್ಮ ಭಗತ್ ಸಿಂಗ್ ರವರು ಅವರ ಮೀಸೆಯಿಂದಲೇ ಗುರುತಿಸಿಕೊಳ್ಳುತ್ತಿದ್ದರು. ಸಿನಿಮಾದಲ್ಲಿ ಸಲ್ಮಾನ್ ಖಾನ್ ಶಾರೂಖ್ ಖಾನ್ ಸಂಜಯ್ ದತ್ ಮುಂತಾದವರೂ ಬಂದಾಗಿನಿಂದ ಅವರ ಹಾಗೆ ಎಲ್ಲರೂ ಮೀಸೆ ಇಲ್ಲದಿರುವುದನ್ನೇ ಫ್ಯಾಷನ್ ಮಾಡಿಕೊಂಡಿರೋದು ಯಾವ ನ್ಯಾಯ?
ಸಿನಿಮಾಗಳಲ್ಲಿನ ವಿಲನ್ ಗಳು ಮೀಸೆ ಬಿಟ್ಟು, ಮೀಸೆಯ ಗೌರವವನ್ನು ಕಾಪಾಡಿಕೊಂಡು ಬಂದಿರುವುದು ನಮ್ಮಂಥ ಮೀಸೆಗಾರರಿಗೆ ಸಮಾಧಾನದ ವಿಷಯ..
ಬಾಲಿವುಡ್ ನಲ್ಲಿ ಎಲ್ಲರೂ ಮೀಸೆ ತೆಗೆಸಿ ನಿಂತಾಗ, ಜಪ್ಪಯ ಅಂದರೂ ಮೀಸೆ ತೆಗೆಸದೆ ತನ್ನ ಹಠವನ್ನು ಬಂದ ಅನಿಲ್ ಕಪೂರ್ ರವರಿಗೆ ನಮ್ಮ ಮೀಸೆಗಾರರ ಏಕ ಸದಸ್ಯ ಸಂಘದಿಂದ ಹೃದಯ ಪೂರ್ವಕ ಧನ್ಯವಾದಗಳು..
ಇತ್ತೀಚೆಗೆ ಮೀಸೆ ಬಗ್ಗೆ ಯಾರೂ ಪ್ರಾಮುಖ್ಯತೆ ನೀಡದೇ ಇರುವುದು ಘನ ಗಂಭೀರವಾದ ವಿಷಯವಾಗಿದೆ..
ಕೆಲವರು ಮೀಸೆ ತೆಗೆಸಿದರೆ, ಅವರು ಹುಡುಗನೋ, ಹುಡುಗೀನೋ ಇಲ್ಲಾ ನಂ.9 ಅಂತಾನೋ ಗೊತ್ತೇ ಆಗಲ್ಲಾ..
ಮೀಸೆ ಬಗ್ಗೆ ಜಾಗೃತಿ(ಕ್ರಾಂತಿ) ಆಗಬೇಕಿದೆ.. ಎಲ್ಲಾ ಹುಡುಗರೂ ಎಚ್ಚೆತ್ತುಕೊಳ್ಳಬೇಕು..
ಯಾವ ರಾಜಕೀಯ ಪಕ್ಷಗಳೂ ಇದರ ಬಗ್ಗೆ ತಲೆ ಕೆಡೆಸಿಕೊಳ್ಳುತ್ತಿಲ್ಲ..
ಎಲ್ಲಾ ಪಕ್ಷಗಳಿಗೂ ನಮ್ಮ ಧಿಕ್ಕಾರ..
ನಮ್ಮ ಮುಂದಿನ ಪ್ರಣಾಳಿಕೆ..
ಮೀಸೆ ಬಚಾವೋ ಆಂದೋಲನ..
ಏನಂತೀರಿ?
(ಈ ಆಂದೋಲನಕ್ಕೆ ಕೆಲವರು ಹುಡುಗಿಯರೂ ಸಹ ತೆರೆಯ ಹಿಂದಿನಿಂದ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ..)
ಇಂತಿ,
ಯಳವತ್ತಿ...
Comments
In reply to ಉ: ಮೀಸೆ ಆಂದೋಲನ... by Shrikantkalkoti
ಉ: ಮೀಸೆ ಆಂದೋಲನ...
In reply to ಉ: ಮೀಸೆ ಆಂದೋಲನ... by shivagadag
ಉ: ಮೀಸೆ ಆಂದೋಲನ...
ಉ: ಮೀಸೆ ಆಂದೋಲನ...
In reply to ಉ: ಮೀಸೆ ಆಂದೋಲನ... by asuhegde
ಉ: ಮೀಸೆ ಆಂದೋಲನ...
In reply to ಉ: ಮೀಸೆ ಆಂದೋಲನ... by shivagadag
ಉ: ಮೀಸೆ ಆಂದೋಲನ...
ಉ: ಮೀಸೆ ಆಂದೋಲನ...