"ಅಯ್ಯೋ ನಾವ್ಯಾಕ್ ಹೀಗೆ, ನಮಗೆಂದ್ಬುದ್ಧೀಬರೋದು" !

"ಅಯ್ಯೋ ನಾವ್ಯಾಕ್ ಹೀಗೆ, ನಮಗೆಂದ್ಬುದ್ಧೀಬರೋದು" !

ಬರಹ

"ಅಯ್ಯೋ ನಾವ್ಯಾಕ್ ಹೀಗೆ, ನಮಗೆಂದ್ಬುದ್ಧೀಬರೋದು" !
ಪ್ರತಿದಿನದ ಸುದ್ದಿ ಸಮಾಚಾರಗಳ್ನ ಓದಿದ್ಮೇಲೆ ನಮಗೆ ಹೀಗ್ ಅನ್ಸೊದ್ ಸ್ವಾಭಾವಿಕವಾಗ್ ಹೋಗಿದೆ. ಎಲ್ಲರ ಬಾಯ್ನಲ್ಲೂ ಇದೇ ಉದ್ಗಾರ. ವಿಶ್ವದ ಮೋಸಗಾರರ ಗುಂಪಿಗೆ ಭಾರತ ಸೇರ್ತಲ್ಲಾ. ವಿಶ್ವದ ದುರಾಶೆಯ ಮಿ. ಡೆತ್ ಅನ್ನೊ ವೈದ್ಯ ನಮ್ಮದೇಶದವನೆ ಆಗ್ಬಿಟ್ಟಿರೊವಾಗ ಏನ್ತಾನೆ ಮಾಡ್ಬೇಕು ?
ಸರಿ ; ಇವತ್ತಿನ ವಿಷಯಕ್ಕೆ ಬರೋಣ. "ಮುಂಬೈನ ಮಿರರ್" ಅಂತ ಒಂದು ಒಳ್ಳೆಯ ಪತ್ರಿಕೆಯೆಂದು ಇಂದಿನವರೆಗೂ (ನಾನು  ಟೈಪ್ ಮಾಡುತ್ತಿರುವ ವರೆಗೆ) ಕರೆಸಿಕೊಳ್ಳಬಹುದಾದ ಪತ್ರಿಕೆ ಇದೆ. ಇದು "ಟೈಮ್ಸ್ ಆಫ್ ಇಂಡಿಯ ಪತ್ರಿಕೆ" ಯ ಒಂದು "ಉಪ ಪತ್ರಿಕೆ", ಅದರ ಜೊತೆಯಲ್ಲೇ ಬರುತ್ತೆ. ಬೆಂಗಳೂರಿನ ಟೈಮ್ಸ್ ಪತ್ರಿಕೆ ಜೊತೆ ಯಲ್ಲೂ ಮಿರರ್ ಬರುತ್ತೆ. ಬೆಂಗಳೂರು ವಲಯದ ನ್ಯೂಸ್ ಸಹಜವಾಗಿ ಅದರಲ್ಲಿರುತ್ತೆ.
"ಟಾಯ್ಲೆಟ್ ಚೀಟ್ " ಶೀರ್ಶಿಕೆಯಡಿಯಲ್ಲಿ ಬಂದ ಲೇಖನವಿದು. "ರಾಜಿಮೆನನ್" ಎಂಬ ಓದುಗ, ಒಮ್ಮೆ ರೈಲ್ವೆ ಸ್ಟೇಷನ್ ಒಂದರ, "ರೈಲ್ವೆ ಟಾಯಿಲೆಟ್ "ಉಪಯೋಗಿಸಲು ಹೋದಾಗ, ಅಲ್ಲಿ ಮೂತ್ರಿಗಳ ಉಪಯೋಗಮಾಡಲು ೨ ರೂ. ಶುಲ್ಕದ ಬದಲು ರೂ. ೫ ವಿಧಿಸಿದ್ದರಿಂದ ಅವರು ಮೊದಲು ಅಲ್ಲಿನ "ಸ್ಟೇಷನ್ ಮಾಸ್ಟರ್" ಗೆ ದೂರು ತಿಳಿಸಿ ಅರ್ಜಿಸಲ್ಲಿಸಿದರು. ಹೀಗೆ ಮುಂಬೈನಂತಹ ಜನನಿಬಿಡ ಪ್ರದೇಶದ ರೈಲ್ವೆ ನಿಲ್ದಾಣಗಳಲ್ಲಿ  ಹೆಚ್ಚುಹಣದಿಂದ ದಿನದ ಕೊನೆಯಲ್ಲಿ,, ಕಂಟ್ರಾಕ್ಟರ್ ಗಳಿಗೆ ಸಿಗುವ ಹಣದ ಮೊತ್ತ ಸುಮಾರು ೧.೨ ಕೋಟಿರೂಪಾಯಿಗಳವರೆಗೆ.
ರೈಲ್ವೆ ಆಡಳಿತ ವರ್ಗ ಸ್ಪಷ್ಟವಾಗಿ ನಮೂದಿಸಿರುವುದು, ೨ ರೂ. ಆದರೆ ಅಲ್ಲಿನ ಅಟೆಂಡೆಂಟ್ಸ್ ವಿಧಿಸುವ ಹಣ ೩ ರಿಂದ ೫ ರವರೆಗೆ, ಸಾಮಾನ್ಯವಾಗಿ ಮುಂಬೈಕರ್ ಗಳಿಗೆ, "ಸಾಬ್ ಅಭಿ ಪಾಂಚ್ ರುಪಯಾ ಹೋಗಯ "ಅಂದರೆ, "ಐಸಾ ಹೈ ಕ್ಯಾ. ಲೇಲೊ ಭಯ್ಯ,"  ಎಂದು ಹೆಚ್ಚಿನ ಹಣತೆತ್ತು, ಅಲ್ಲಿಂದ  ತೆರಳುವ ಜನವೇ ನೂರಕ್ಕೆ ೯೯. ೯ ಶೇಕಡದಷ್ಟು. ಆದರೆ ನಮ್ಮ "ರಾಜಿಮೆನನ್"  ಯೋಚಿಸಿದ್ದು ಆ ತರಹವಲ್ಲ. ಅದು ಹೊಗಳುವಂತಹದು ಸಹಿತ !
ದಿನಪ್ರತಿ, ೨ ಲಕ್ಷಕ್ಕೂ ಹೆಚ್ಚು ಮಂದಿ ಬಳಸುವ ಶೌಚಾಲಯದಲ್ಲಿ, ಈ ಹೆಚ್ಚುವರಿ ಮೊಬಲಿಗಿಂದ, ಜಮಾಯಿಸುವ ಒಟ್ಟು ಹಣ ೧.೫ ಕೋಟಿಯಾಗುವುದು ಅತಿ ಸುಲಭ.
ಆಸಮಯದಲ್ಲಿ ಮೆನನ್ ಜೊತೆ ಮುಂಬೈ ಮಿರರ್ ಸಂಪಾದಕ ವರ್ಗದ ಕಾರ್ಯಕರ್ತರು ಜೊತೆಯಲ್ಲಿ ಬಂದು ಕಣ್ಣಾರೆ ಕಂಡು ಚಿತ್ರಗಳನ್ನೂ ತೆಗೆದಿದ್ದಾರೆ. ಅವನ್ನು ನಾವು ಪತ್ರಿಕೆಯಲ್ಲಿ ಕಾಣಬಹುದು. "ಮೆನನ್" ಪಟ್ಟ ಶ್ರಮವನ್ನು ಇಲ್ಲಿ ದಾಖಲು ಮಾಡುವುದು ಯೋಗ್ಯವಾದದ್ದು.
೧. ಮೊದಲು ಹೆಚ್ಚು ಹಣ ಕೊಟ್ಟಕೂಡಲೆ ಅಲ್ಲಿನ "ಸ್ಟೇಷನ್ ಮಾಸ್ಟರ್ "ಗಮನಕ್ಕೆ ತಂದಿ ದೂರುದಾಖಲಿಸಿದರು. ಸ್ಟೇಷನ್ ಮಾಸ್ತರ್ ಭರವಸೆ ನೀಡಿ "ಕಂಟ್ರಾಕ್ಟರ್" ಗೆ ೧೦೦ ರೂ ಜುಲ್ಮಾನೆ ವಿಧಿಸಿರುವುದಾಗಿ ತಿಳಿಸಿ ಸಮಾಧಾನ ಮಾಡಿದರು. ಆದರೆ ಮಾರನೆಯದಿನವೂ ಅದೇ ತರಹ ಮೆನನ್ ಹೆಚ್ಚು ಹಣ ತೆರಬೇಕೇಯಿತು. ಆಗ ಮೆನನ್ ಮಿರರ್ ಮ್ಯಾಗಝೈನ್ ಮೊರೆಹೊಕ್ಕರು. ಪಶ್ವಿಮ ಮತ್ತು ಮಧ್ಯ ರೈಲ್ವೆಯ ಹಲವಾರು ಸ್ಟೇಷನ್ ಗಳ ಟಾಯಿಲೆಟ್ ಗಳ ಆಚಾರ ವ್ಯವಹಾರಗಳನ್ನು ಗಮನಿಸಿದಾಗ ಮೆನನ್ ಹೇಳಿದ್ದು ನಿಜವೆಂದು ಸಾಬೀತ್ ಆಯಿತು. "ಸಿಎಸ್.ಟಿ, "ದಾದರ್ [ಪ]", "ಕುರ್ಲಾ", "ಕಲ್ಯಾಣ್", "ಖಾರ್ ರೈಲ್ವೆ ನಿಲ್ದಾಣ" ಗಳಲ್ಲೂ ಇದೇ ತರಹದ ವ್ಯವಹಾರ ಎದುರಿಗೆ ಬಂತು.
ಈಗ ಉನ್ನತ ಅಧಿಕಾರಿಗಳು, ಹೇಳಿಕೆ ಕೊಟ್ಟು, "ಚೀಫ್ ಪಬ್ಲಿಕ್ ರಿಲೇಶನ್ ಆಫಿಸರ್", "ಶ್ರೀನಿವಾಸ ಮುಡ್ಗೇರಿಕರ್", ಸಾರ್ವಜನಿಕರಿಗೆ  ಈ ತರಹದ ಹಣಕೊಟ್ಟು ಉಪಯೋಗಿಸುವ ವ್ಯವಸ್ಥೆಯುಳ್ಳ ಟಾಯ್ಲೆಟ್ ಗಳ ಕೆಲಸಗಾರರು ಹೆಚ್ಚು ಹಣ ಕೇಳಿದರೆ, ತಕ್ಷಣ ದೂರು ದರ್ಜ್ ಮಾಡಿ. ನಾವು ಅವರಿಗೆ ದಂಡ ವಿಧಿಸುತ್ತೇವೆ. ಅದೇ ತರಹ ಮುಂದುವರೆದರೆ, ಕಂಟ್ರಾಕ್ಟರ್ ಗಳನ್ನು ರದ್ದುಗೊಳಿಸುತ್ತೇವೆ ಎಂದರು.
ಪಶ್ಚಿಮ ರೈಲ್ವೆಯ "ಚೀಫ್ ಪಬ್ಲಿಕ್ ರಿಲೇಶನ್ ಆಫಿಸರ್", "ಎಸ್.ಎಸ್.ಗುಪ್ತಾ" ರವರೂ ಇದೇ ಮಾತನ್ನು ಅನುಮೋದಿಸಿದರು. ಇನ್ನು ಮುಂದೆ ದಪ್ಪ ಹಾಗೂ ಸ್ಪಷ್ಟವಾಗಿ ಬರೆದ ತಿಳುವಳಿಕೆ-ಫಲಕಗಳನ್ನು ಶೌಚಾಲಯದಲ್ಲಿ ಎಲ್ಲೆಡೆ, ತೋರಿಸಲಾಗುವುದು, ಎಂದು. ಇಷ್ಟು ಹಂಗಾಮ ಆದಮೇಲೆ ಸ್ವಲ್ಪವಾದರೂ ಮನುಷ್ಯತ್ವ ತೋರಿಸಬೇಡವೆ ?
ಒಟ್ಟಿನಲ್ಲಿ ಆದ ಪ್ರಗತಿಯೆಂದರೆ, "ಟೈಮ್ಸ್ ಆಫ್ ಇಂಡಿಯ ಪತ್ರಿಕೆ" ಯಲ್ಲಿ ಪ್ರಕಟವಾಗಿದ್ದರಿಂದ ಲಕ್ಷಗಟ್ಟಲೆ ಜನರಿಗೆ ಈ ವಿಷಯ ತಿಳಿಯಿತು. ಇದರಿಂದ ಪಾಠಕಲಿತರೆ ಒಳ್ಳೆಯದು. ಇನ್ನೂ ಮಂಡರಾಗಿ, "ಎಮ್ಮೆ ಚರ್ಮ" ದವರಾದರೆ, ಮಾಡುವುದೇನು ?

ಕೃಪೆ : "ಮುಂಬೈ ಮಿರರ್ ಪತ್ರಿಕೆ" ಯಿಂದ

ಪ್ರತಿದಿನದ ಸುದ್ದಿ ಸಮಾಚಾರಗಳ್ನ ಓದಿದ್ಮೇಲೆ ನಮಗೆ ಹೀಗ್ ಅನ್ಸೊದ್ ಸ್ವಾಭಾವಿಕವಾಗ್ ಹೋಗಿದೆ. ಎಲ್ಲರ ಬಾಯ್ನಲ್ಲೂ ಇದೇ ಉದ್ಗಾರ. ವಿಶ್ವದ ಮೋಸಗಾರರ ಗುಂಪಿಗೆ ಭಾರತ ಸೇರ್ತಲ್ಲಾ. ವಿಶ್ವದ ದುರಾಶೆಯ 'ಮಿ. ಡೆತ್ '  ಅನ್ನೊ ವೈದ್ಯ ನಮ್ಮದೇಶದವನೆ ಆಗ್ಬಿಟ್ಟಿರೊವಾಗ ಏನ್ತಾನೆ ಮಾಡ್ಬೇಕು  ?  ’ನಾರಾಯಣಮೂರ್ತಿ ’,”ಸರ್. ಎಂ.  ವಿಶ್ವೇಶ್ವರಯ್ಯ’, ಮುಂತಾದ ಮಹಾನ್ ವ್ಯಕ್ತಿಗಳ ನಾಡಿನಲ್ಲಿ ಎಂಥೆಂಥಾ ಧೂರ್ತರಿದ್ದಾರಲ್ಲ ಎಂದು ಮೈ ಉರಿಯುತ್ತದೆ. 

ಸರಿ ; ಇವತ್ತಿನ ವಿಷಯಕ್ಕೆ ಬರೋಣ. "ಮುಂಬೈನ ಮಿರರ್" ಅಂತ ಒಂದು ಒಳ್ಳೆಯ ಪತ್ರಿಕೆಯೆಂದು ಇಂದಿನವರೆಗೂ (ನಾನು  ಟೈಪ್ ಮಾಡುತ್ತಿರುವ ವರೆಗೆ) ಕರೆಸಿಕೊಳ್ಳಬಹುದಾದ ಪತ್ರಿಕೆ ಇದೆ. ಇದು "ಟೈಮ್ಸ್ ಆಫ್ ಇಂಡಿಯ ಪತ್ರಿಕೆ" ಯ ಒಂದು "ಉಪ ಪತ್ರಿಕೆ", ಅದರ ಜೊತೆಯಲ್ಲೇ ಬರುತ್ತೆ. ಬೆಂಗಳೂರಿನ ಟೈಮ್ಸ್ ಪತ್ರಿಕೆ ಜೊತೆ ಯಲ್ಲೂ ಮಿರರ್ ಬರುತ್ತೆ. ಬೆಂಗಳೂರು ವಲಯದ ನ್ಯೂಸ್ ಸಹಜವಾಗಿ ಅದರಲ್ಲಿರುತ್ತೆ.

ಮಿರರ್ ಪತ್ರಿಕೆಯ ಮುಖಪುಟದಲ್ಲಿ, "ಟಾಯ್ಲೆಟ್ ಚೀಟ್ " ಶೀರ್ಶಿಕೆಯಡಿಯಲ್ಲಿ ಬಂದ ಇಂದಿನ  ಲೇಖನವಿದು.

"ರಾಜಿಮೆನನ್" ಎಂಬ ಓದುಗ, ಒಮ್ಮೆ ರೈಲ್ವೆ ಸ್ಟೇಷನ್ ಒಂದರ, "ರೈಲ್ವೆ ಟಾಯಿಲೆಟ್ "ಉಪಯೋಗಿಸಲು ಹೋದಾಗ, ಅಲ್ಲಿ ಮೂತ್ರಿಗಳ ಉಪಯೋಗಮಾಡಲು  ೨ ರೂ. ಶುಲ್ಕದ ಬದಲು ರೂ. ೫ ವಿಧಿಸಿದ್ದರಿಂದ ಅವರು ಮೊದಲು ಅಲ್ಲಿನ "ಸ್ಟೇಷನ್ ಮಾಸ್ಟರ್" ಗೆ ದೂರು ತಿಳಿಸಿ ಅರ್ಜಿಸಲ್ಲಿಸಿದರು. ಹೀಗೆ ಮುಂಬೈನಂತಹ ಜನನಿಬಿಡ ಪ್ರದೇಶದ ರೈಲ್ವೆ ನಿಲ್ದಾಣಗಳಲ್ಲಿ  ಹೆಚ್ಚುಹಣದಿಂದ ದಿನದ ಕೊನೆಯಲ್ಲಿ,  ಕಂಟ್ರಾಕ್ಟರ್ ಗಳಿಗೆ ಸಿಗುವ ಹಣದ ಮೊತ್ತ, ಸುಮಾರು ೧.೨ ಕೋಟಿರೂಪಾಯಿಗಳವರೆಗೆ.

ರೈಲ್ವೆ ಆಡಳಿತ ವರ್ಗ ಸ್ಪಷ್ಟವಾಗಿ ನಮೂದಿಸಿರುವುದು, ೨ ರೂ. ಆದರೆ ಅಲ್ಲಿನ ಅಟೆಂಡೆಂಟ್ಸ್ ವಿಧಿಸುವ ಹಣ ೩ ರಿಂದ ೫ ರವರೆಗೆ, ಸಾಮಾನ್ಯವಾಗಿ ಮುಂಬೈಕರ್ ಗಳಿಗೆ, "ಸಾಬ್ ಅಭಿ ಪಾಂಚ್ ರುಪಯಾ ಹೋಗಯ "ಅಂದರೆ, "ಐಸಾ ಹೈ ಕ್ಯಾ. ಲೇಲೊ ಭಯ್ಯ,"  ಎಂದು ಹೆಚ್ಚಿನ ಹಣತೆತ್ತು, ಅಲ್ಲಿಂದ  ತೆರಳುವ ಜನವೇ ನೂರಕ್ಕೆ ೯೯. ೯ ಶೇಕಡದಷ್ಟು.

ಆದರೆ ನಮ್ಮ "ರಾಜಿಮೆನನ್"  ಯೋಚಿಸಿದ್ದು ಆ ತರಹವಲ್ಲ. ಅದು ಹೊಗಳುವಂತಹದು ಸಹಿತ !ದಿನಪ್ರತಿ, ೨ ಲಕ್ಷಕ್ಕೂ ಹೆಚ್ಚು ಮಂದಿ ಬಳಸುವ ಶೌಚಾಲಯದಲ್ಲಿ, ಈ ಹೆಚ್ಚುವರಿ ಮೊಬಲಿಗಿಂದ, ಜಮಾಯಿಸುವ ಒಟ್ಟು ಹಣ ೧.೫ ಕೋಟಿಯಾಗುವುದು ಅತಿ ಸುಲಭ. ಅದು ಕಂಟ್ರಾಕ್ಟರ್ ಗಳಿಗೇಕೆ ಹೋಗಬೇಕು ?

ಆಸಮಯದಲ್ಲಿ ಮೆನನ್ ಜೊತೆ ಮುಂಬೈ ಮಿರರ್ ಸಂಪಾದಕ ವರ್ಗದ ಕಾರ್ಯಕರ್ತರು ಜೊತೆಯಲ್ಲಿ ಬಂದು ಕಣ್ಣಾರೆ ಕಂಡು ಚಿತ್ರಗಳನ್ನೂ ತೆಗೆದಿದ್ದಾರೆ. ಅವನ್ನು ನಾವು ಪತ್ರಿಕೆಯಲ್ಲಿ ಕಾಣಬಹುದು. "ಮೆನನ್" ಪಟ್ಟ ಶ್ರಮವನ್ನು ಇಲ್ಲಿ ದಾಖಲು ಮಾಡುವುದು ಯೋಗ್ಯವಾದದ್ದು.

೧. ಮೊದಲು ಹೆಚ್ಚು ಹಣ ಕೊಟ್ಟಕೂಡಲೆ ಅಲ್ಲಿನ "ಸ್ಟೇಷನ್ ಮಾಸ್ಟರ್ "ಗಮನಕ್ಕೆ ತಂದು, ದೂರು ಸಲ್ಲಿಸಿದರು. ಸ್ಟೇಷನ್ ಮಾಸ್ತರ್ ಭರವಸೆ ನೀಡಿ "ಕಂಟ್ರಾಕ್ಟರ್" ಗೆ ೧೦೦ ರೂ ಜುಲ್ಮಾನೆ ವಿಧಿಸುವುದಾಗಿ ಭರವಸೆಕೊಟ್ಟು ಅವರನ್ನು ಸಮಾಧಾನ ಮಾಡಿ ಕಳಿಸಿದರು. ಆದರೆ ಮಾರನೆಯದಿನವೂ ಅದೇ ತರಹ ಮೆನನ್ ಹೆಚ್ಚು ಹಣ ತೆರಬೇಕಾಯಿತು. ಆಗ ಮೆನನ್ ಮಿರರ್ ಮ್ಯಾಗಝೈನ್ ಮೊರೆಹೊಕ್ಕರು. ಪಶ್ವಿಮ ಮತ್ತು ಮಧ್ಯ ರೈಲ್ವೆಯ ಹಲವಾರು ಸ್ಟೇಷನ್ ಗಳ ಟಾಯಿಲೆಟ್ ಗಳ ಆಚಾರ ವ್ಯವಹಾರಗಳನ್ನು ಗಮನಿಸಿದಾಗ ಮೆನನ್ ಹೇಳಿದ್ದು ನಿಜವೆಂದು ಸಾಬೀತ್ ಆಯಿತು. "ಸಿ.ಎಸ್.ಟಿ, "ದಾದರ್ [ಪ]", "ಕುರ್ಲಾ", "ಕಲ್ಯಾಣ್", "ಖಾರ್ ರೈಲ್ವೆ ನಿಲ್ದಾಣ" ಗಳಲ್ಲೂ ಇದೇ ತರಹದ  ಅವ್ಯವಹಾರ ಎದುರಿಗೆ ಬಂತು.

ಈಗ ಉನ್ನತ ಅಧಿಕಾರಿಗಳು, ಹೇಳಿಕೆ ಕೊಟ್ಟು, "ಚೀಫ್ ಪಬ್ಲಿಕ್ ರಿಲೇಶನ್ ಆಫಿಸರ್", "ಶ್ರೀನಿವಾಸ ಮುಡ್ಗೇರಿಕರ್", ಸಾರ್ವಜನಿಕರಿಗೆ  ಈ ತರಹದ ಹಣಕೊಟ್ಟು ಉಪಯೋಗಿಸುವ ವ್ಯವಸ್ಥೆಯುಳ್ಳ ಟಾಯ್ಲೆಟ್ ಗಳ ಕೆಲಸಗಾರರು ಹೆಚ್ಚು ಹಣ ಕೇಳಿದರೆ, ತಕ್ಷಣ ದೂರು ದರ್ಜ್ ಮಾಡಿ. ನಾವು ಅವರಿಗೆ ದಂಡ ವಿಧಿಸುತ್ತೇವೆ. ಅದೇ ತರಹ ಮುಂದುವರೆದರೆ, ಕಂಟ್ರಾಕ್ಟರ್ ಗಳ ಕಂಟ್ರಾಕ್ಟನ್ನು ರದ್ದುಗೊಳಿಸುತ್ತೇವೆ ಎಂದರು.