ನನ್ನ ಮನಸ್ಸು

Submitted by malathi shimoga on Tue, 05/18/2010 - 16:00
ಬರಹ

ಇನಿಯ ನಿನ್ನ ತಂಗಾಳಿಯಂತ ಪ್ರೀತಿ


ನನ್ನ ಮನಸನ್ನು ಬಿರುಗಾಳಿಯಂತೆ ಚದುರಿಸಿದೆ.


............................................................


ತಿಳಿಯಾದಕೊಳದಂತಿರುನ ನನ್ನ ಮನಕ್ಕೆ


ನಿನ್ನ ನೆನಪುಗಳು ಕಲ್ಲೆಸದು ಆಟವಾಡುತ್ತಿವೆ.


..........................................................


ಹೀಗೆ ಬಂದು ಹಾಗೆ ಮಿಂಚಿ ಮಾಯವಾದರೆ.


ತಲ್ಲಣಿಸದಿರದೆ ನನ್ನ ಮನವು


ನಿನಗೇಕೆ ಅರ್ಥವಾಗುವುದಿಲ್ಲ ಈ ನೋವು........................................................


ನೀ ಇಲ್ಲದೆ ನಾ ಇರಬಲ್ಲೆ


ನೀ ಇದ್ದು ಇಲ್ಲದಂತೆ ನಾ ಹೇಗೆ ಇರಲಿ ಗೆಳೆಯ .............................................................


ಸ್ವಾರ್ಥವೊ , ಪ್ರೀತಿಯೊ ನಾ ಅರಿಯೆ


ಬದುಕಿನ ಕವಲುಗಳು ಬೇರಾದರು


ಮನ ಬಯಸುತಿದೆ ಬೇರಾದ ಕವಲುಗಳು


ಒಂದಾಗಬಾರದೆ ಎಂದು.

 ......................................................


ಅಂದು ನಾ ಮಾಡಿದ ಪ್ರೀತಿಯ ತ್ಯಾಗ


ಇಂದು ನನ್ನನ್ನೆ ಕೊಂದು ಹಾಡುತಿದೆ ಅಂತ್ಯದ ರಾಗ ..............................................................


ಹುಡುಗಾಟಕ್ಕೆಂದು ಆಡಿದ ಪ್ರೀತಿಯ ಆಟ


ಬೆಳೆದು ಹೆಮ್ಮರವಾಯಿತು


ಇಂದು ನಾ ಕಡಿದರು ಆ ಮರವನ್ನು


ಮತ್ತೆ ಮತ್ತೆ ಚಿಗುರುತಿರುವುದು


ನಾ ಹೇಗೆ ಇಲ್ಲದಾಗಿಸಲಿ ಆ ಬೇರುಗಳನ್ನು


ಉಸಿರೆ ಅದರಲ್ಲಿ ಇರುವುದು.

 ...........................................................


ನಾ ಕೊಟ್ಟೆ ನನ್ನ ಭಾವನೆಗಳಿಗೆ ಅಕ್ಷರಗಳ ರೂಪ


ಕೊನೆಗರಿತೆ ಅಕ್ಷರಗಳೆ ಅರಿಯದ ಹುಡುಗ


ಭಾವನೆಗಳೇನರಿತಾನು ಎಂದು


.......................................................


ಹುಚ್ಚು ಮನಸ್ಸು ತನ್ನದೆ ಲೋಕದಲ್ಲಿ ವಿಹರಿಸುವುದು


ವಿಧಿ ತನ್ನ ಅಟ್ಟಹಾಸ ಮೆರೆದಿರುವುದು


ಅದರರಿವಿಲ್ಲದೆ ಮನ ತನ್ನಿನಯನೊಡನೆ ವ್ಯವಹರಿಸುವುದು


.................................................................