ಎರಡು ಸಿಹಿಮುತ್ತು

To prevent automated spam submissions leave this field empty.

 

ಗುಂಡ ಆಫೀಸ್ ಗೆ ಹೊರಟು ನಿಂತಿದ್ದ, ಗಾಡಿ ತೆಗೆದು ಸ್ಟಾರ್ಟ್ ಮಾಡಿ,
"ಹೋಗಿ ಬರ್ತಿನಿ ನನ್ನ ಚಿನ್ನ, ಬೈ ಬೈ, ಟಾಟ..
ಹಾ!,.ಮರೆತೇ ಬಿಟ್ಟಿದ್ದೆ.........ತಗೊ ಈ ನನ್ನ ಎರಡು ಸಿಹಿಮುತ್ತುಗಳು ಚಿನ್ನ"
ಗುಂಡಿ ಆಶ್ಚರ್ಯ ದಿಂದ ಇದೇನಿದು ಎಂದೂ ಇಲ್ಲದ್ದು ಎವತ್ತು ಎರಡು ಸಿಹಿಮುತ್ತುಗಳು ಅಂತಾಇದ್ದಾರೆ,
"ಅದೇನ್ರೀ, ಹೊಸದಾಗಿ ಎರಡು ಸಿಹಿಮುತ್ತುಗಳು ಅಂತಾಯಿದ್ದೀರಾ!!!!
"ನನ್ನ ಚಿನ್ನಾ.......,  ಅದರಲ್ಲಿ ಒಂದು ನಿನಗೆ, ಎರಡನೆಯದು ಊರಿಂದ ಬಂದಿದ್ದಾಳಲ್ಲ ನಿನ್ನ ತಂಗಿಗೆ"
ಗುಂಡಿಗೆ ಮೈಯೆಲ್ಲ ಉರಿದು ಹೋಯಿತು, ಕೈಗೆ ಏನಾದರು ಸಿಕ್ಕಿದ್ದಿದ್ದರೆ ಅವನ ತಲೆಗೆ ಕುಟ್ಟಿರೋಳೂ,
ಕೋಪದಿಂದ "ಅಂಗೇನಾದರು ಆದರೆ ನಿಮ್ಮ ಮೂರು ಕಾಲುಗಳನ್ನು ಕತ್ತರಿಸಿಬಿಡ್ತಿನಿ" ಎಂದಳು.
"ಅಯ್ಯೊ ನನ್ನ ಬಂಗಾರಿ, ಯಾಕಿ ಕೋಪ ತಾಪ!!!!, ನೋಡು ಆವೆಶ ದಲ್ಲಿ ಏನು ಮಾತಾಡ್ತಾ ಇದ್ದೀಯಾ ಅಂತ ನಿನಗೆ ಗೊತ್ತಿಲ್ಲ, 
ನನಗೆ ಇರೋದೆ ಎರಡು ಕಾಲು ಅದನ್ನು ಮರೆತು, ಮೂರು ಕಾಲು ಅಂತ ಇದ್ದೆಯಲ್ಲ!!!" ಎಂದ ತಣ್ಣಗೆ,
ಗುಂಡಿ ಮತ್ತೆ ಕೋಪದಿಂದ "ಕಳೆದ ವರ್ಷ ಬೆಂಗಳೂರಿನ ಜಯನಗರದಲ್ಲಿ ಡಾಕ್ಟರ್ಗೆ ಜ್ಯೂಸ್ ಕೊಟ್ಟು ಕಟ್ ಮಾಡಿದಳಲ್ಲ ಆ ಕಾಲು"
ಒಮ್ಮೆ ಜ್ನಾಪಿಸಿಕೊಂಡ ಗುಂಡ, ಯಾಕಿದ್ದೀತಪ್ಪ ಗ್ರಹಚಾರ ಅಂತ ಅಲ್ಲಿಂದ ಎಸ್ಕೇಪ್ ಆಗಿದ್ದ.

ಗುಂಡ ಆಫೀಸ್ ಗೆ ಹೊರಟು ನಿಂತಿದ್ದ, ಗಾಡಿ ತೆಗೆದು ಸ್ಟಾರ್ಟ್ ಮಾಡಿ,

"ಹೋಗಿ ಬರ್ತಿನಿ ನನ್ನ ಚಿನ್ನ, ಬೈ ಬೈ, ಟಾಟ..

ಹಾ!,.ಮರೆತೇ ಬಿಟ್ಟಿದ್ದೆ.........ತಗೊ ಈ ನನ್ನ ಎರಡು ಸಿಹಿಮುತ್ತುಗಳು ಚಿನ್ನ"

 

ಗುಂಡಿ ಆಶ್ಚರ್ಯ ದಿಂದ ಇದೇನಿದು ಎಂದೂ ಇಲ್ಲದ್ದು ಈದಿನ ಎರಡು ಸಿಹಿಮುತ್ತುಗಳು ಅಂತಾಇದ್ದಾರೆ,

"ಅದೇನ್ರೀ, ಹೊಸದಾಗಿ ಎರಡು ಸಿಹಿಮುತ್ತುಗಳು ಅಂತಾಯಿದ್ದೀರಾ!!!!

"ನನ್ನ ಚಿನ್ನಾ.......,  ಅದರಲ್ಲಿ ಒಂದು ನಿನಗೆ, ಎರಡನೆಯದು ಊರಿಂದ ಬಂದಿದ್ದಾಳಲ್ಲ ನಿನ್ನ ತಂಗಿಗೆ"

ಗುಂಡಿಗೆ ಮೈಯೆಲ್ಲ ಉರಿದು ಹೋಯಿತು, ಕೈಗೆ ಏನಾದರು ಸಿಕ್ಕಿದ್ದಿದ್ದರೆ ಅವನ ತಲೆಗೆ ಕುಟ್ಟಿರೋಳೂ,

ಕೋಪದಿಂದ "ಅಂಗೇನಾದರು ಆದರೆ ನಿಮ್ಮ ಕಾಲುಗಳನ್ನು ಕತ್ತರಿಸಿಬಿಡ್ತಿನಿ" ಎಂದಳು.

ಗುಂಡ, ಯಾಕಿದ್ದೀತಪ್ಪ ಗ್ರಹಚಾರ ಅಂತ ಅಲ್ಲಿಂದ ಎಸ್ಕೇಪ್ ಆಗಿದ್ದ.

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

"ದಟ್ಸ್ ಕನ್ನಡ" ಸಂಪಾದಕರಾದ ಶ್ಯಾಮಸುಂದರ್ ಹೆಸರಿನ ಜೊತೆಗೆ ತಮ್ಮ ಪರಿಚಯ ನೀಡಿರುವ ತಮ್ಮಿಂದ ಇಂತಹ ಬರಹ ನಿಜಕ್ಕೂ ಅನಿರೀಕ್ಷಿತ. ಇದರಿಂದ ಶ್ಯಾಮಸುಂದರರ ಹೆಸರಿಗೂ ...!? ಸಿರಿಗನ್ನಡ ಸಂಪದದಲ್ಲಿ... ಇದು ಬೇಕಿತ್ತಾ...? - ಆಸು ಹೆಗ್ಡೆ

ಸರ್ ಇದನ್ನು ಡಿಲಿಟ್ ಮಾಡಿ ಒಂದು ಕವನ ಬರೆಯಿರಿ :) (ಸರ್ ಹಾಸ್ಯ ಚೆನ್ನಾಗಿದೆ. ಮೂರು ಕಾಲು ಎನ್ನುವುದು ಇಲ್ಲಿ ಬೇಡ ಅನ್ನಿಸಿತು.) ಮಡಿವಂತರಿಂದ ಇಂತಹ ಸಾಕಷ್ಟು ಪ್ರತಿಕ್ರಿಯೆ ನಿಶ್ಚಿತ.

ನಾಡಿಗ್ ಸರ್ ಧನ್ಯವಾದಗಳು ತಿಳಿಸಿಕೊಟ್ಟಿದ್ದಕ್ಕೆ. ಅನಗತ್ಯವಾದುದನ್ನು ತೆಗೆದು ಹಾಕಿದ್ದೇನೆ. -- ರಂಗನಾಥ

ಸಾರ್ ನಾನು ಬರೆದದ್ದು ತಮಾಷೆಗೆ. ಯಾವದೇ ಒಬ್ಬ ಬರಹಗಾರ ಬ್ರಾಂಡ್ ಆಗಬಾರದು ಎನ್ನುವುದಕ್ಕೆ. ಪ್ರತಿಯೊಬ್ಬನಲ್ಲೂ ಹಾಸ್ಯ ಪ್ರಜ್ಞೇ ಇದ್ದೇ ಇರುತ್ತದೆ. ನೀವು ಕೆಲವೊಬ್ಬರ ಒಡನಾಟ ಇಟ್ಟುಕೊಂಡಿದ್ದೀರಾ ಎನ್ನುವ ಕಾರಣಕ್ಕೆ ನೀವು ಗಂಭೀರ ಲೇಖನಗಳನ್ನು ಮಾತ್ರ ಬರೆಯಬೇಕು ಎನ್ನುವ ಕಾನೂನು ಸಂಪದದಲ್ಲಿ ಇಲ್ಲ. ನೀವು ಬರೆದಿರುವ ಹಾಸ್ಯ ನಿಜಕ್ಕೂ ಚೆನ್ನಾಗಿದೆ. ಆದರೆ ಅದನ್ನು ಅರ್ಥಮಾಡಿಕೊಳ್ಳುವವರ ಮೇಲೆ ನಿರ್ಧಾರವಾಗಿರುತ್ತದೆ. ಸರ್ ಹಾಸ್ಯ ಲೇಖನಗಳನ್ನು ಬರೆಯಿರಿ. ತಪ್ಪೇನಿಲ್ಲ. ಬರೀ ಗಂಭೀರ ಲೇಖನ, ಕವನ, ಇಂತವುಗಳನ್ನು ಮಾತ್ರ ಬರೆಯಿರಿ ಎಂದು ಹರಿಪ್ರಸಾದ್ ನಾಡಿಗರು ಎಲ್ಲೂ ಪ್ರಕಟಿಸಿಲ್ಲ. ಧನ್ಯವಾದಗಳು

ಹೆಗ್ಡೆ ಸರ್ ಕ್ಷಮಿಸಿ,. ಈ ತರಹ ತಪ್ಪುಗಳನ್ನು ಮತ್ತೆ ಆಗದಂತೆ ಎಚ್ಚರ ವಹಿಸುತ್ತೇನೆ. ಅನಗತ್ಯವಾದುದನ್ನು ತೆಗೆದು ಹಾಕಿದ್ದೇನೆ. -- ರಂಗನಾಥ

ಕ್ಷಮೆಯಾಚನೆಯ ಮಾತು ಬೇಕಿಲ್ಲ. ನನ್ನ ಅನಿಸಿಕೆ ತಿಳಿಸಿದೆ. ಒಪ್ಪಿದ್ದೀರಿ, ಸಂತೋಷವಾಯ್ತು. ಒಪ್ಪದಿದ್ದಿದ್ದರೂ ಬೇಸರವಿರುತ್ತಿರಲಿಲ್ಲ. :)