7.22 ಲೋಕಲ್

To prevent automated spam submissions leave this field empty.
(ಇದು ನಾನು ದಿನವೂ ಬೆಳಗ್ಗೆ ಹಿಡಿಯುವ ೭.೨೨ರ ಚರ್ಚ್ ಗೇಟ್ ಗೆ ಹೋಗುವ ಲೋಕಲ್ ಟ್ರೈನ್ - ನನ್ನ ಅನುಭವ) ನೋಡಿರಣ್ಣ ಇದು ನನ್ನ ಲೋಕಲ್ ನ ಪ್ರಯಾಣ ಮುಗಿದ ಕೂಡಲೇ ಎಲ್ಲರೂ ನಿಟ್ಟುಸಿರು ಬಿಡೋಣ ಒಂದು ಸಾವಿರ ಮಂದಿಯ ಹೊತ್ತೊಯ್ಯುವ ಗಾಡಿ ಮೂವತ್ತು ಸಾವಿರ ಮಂದೆಗಳ ತುಂಬಿರುವ ಗಾಡಿ ಒಂದಿಂಚೂ ಜಾಗವಿಲ್ಲದ ತುಂಬಿದ ಗಾಡಿ ಅದರ ಅನುಭವ ನಿಮಗೇನು ಗೊತ್ತು ಬಿಡಿ ಕಾಲು ನವೆಯಾದಾಗ ಕೆರೆಯುವವರು ಇನ್ಯಾರದೋ ಕಾಲು 'ಆದ್ರೂ ಹೇಳುವರು ಯಾಕೋ ನವೆ ಹೋಗ್ತಾನೇ ಇಲ್ಲ' ಮುಂಜಾವಿನ ಆ ಸಮಯದಲ್ಲೂ ಹರಿವುದು ಬೆವರು ಧಾರಾಕಾರ ಇನ್ನೊಬ್ಬನ ವಸ್ತ್ರ ಅದನ ಒರೆಸಿದಾಗ ಹಾಹಾಕಾರ ಅದೋ ಬಂತು ನೋಡು ನನ್ನ ಗಾಡಿ ನವ ಮಾಸ ತುಂಬಿದ ಗರ್ಭಿಣಿಯಂತೆ ಒಳಗೆ ಹೋಗಲು ಆಗದೆ ಅಲ್ಲೇ ನಿಂತೆ ಬರಸಿಡಿದ ಮರಿಗಿಣಿಯಂತೆ ಅದೇ ಹುಡುಗ ಹುಡುಗಿಯರು ಚೆಲ್ಲು ಚೆಲ್ಲಾಗಿ ನಗುತ ಬರಲು ಮುಂದೆ ಅವರ್ನು ನೋಡಲೆಂದೇ ಇಹರು ನನ್ನಂಥ ಮುದಿಯರ ಹಿಂಡೇ ನಿಯತಕಾಲದಂತೆ ದುತ್ಯ್ಗೆ ಬರುವನು ಆ ಭಿಕ್ಷುಕ ಅವನ ಹಿಂದೆಯೇ ಆ ಜಂಗುಳಿಯಲ್ಲೂ ಬೀದಿ ಮಾರಾಟಗಾರ (ಹಾಕರ್) ಹೊಸಬರಿಗೆ ಇಲ್ಲಿಯಾಗುವುದು ಪರದಾಟ ನಮಗೆಲ್ಲಾ ಇದು ದಿನನಿತ್ಯದ ವಿಹಾರದೂಟ
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಚೆನ್ನಾಗಿದೆ , ಆದ್ರೆ ವಿಹಾರ ನೊ, ಆಹಾರಕ್ಕೆ ಮಾಡೊCIRCUSo ?

ಇಲ್ಲಿ ನಮ್ಮನ್ನು ಮುದುಕರ ಹಿಂಡು (ಸೇವಾ ನಿವೃತ್ತಿಯಾದವರು) ಅಂತ ಹೇಳಿಕೊಂಡಿರುವೆ ಆ ನಿಟ್ಟಿನಲ್ಲಿ ಇದು ವಿಹಾರ. ಅದೇ ಸಂಪಾದನೆಗಾಗಿ ದೈನಂದಿನ ಕೆಲಸಕ್ಕೆ ಹೋಗುವ ಭರಾಟೆಯಲ್ಲಿ ಇದರಲ್ಲಿ ಪ್ರಸ್ತುತ ಪಡಿಸಿರುವದನ್ನೆಲ್ಲಾ ಅಸ್ವಾದಿಸಲಾಗುವುದಿಲ್ಲ. ಆಗ ನಾವು ಆ ಗುಂಪಿನಲ್ಲಿ ಒಂದಾಗಿ ಒದ್ದಾಡಬೇಕಾಗುವುದು. ಅದು ಆಹಾರಕ್ಕಾಗಿ ಮಾಡುವ ಸರ್ಕಸ್. ಈ ಲೋಕಲ್ ಪ್ರಯಾಣದಿಂದ ಜೀವನದ ಮಜಲಿನ ವಿವಿಧ ಮುಖಗಳನ್ನು ನೋಡಬಹುದು. ಇದರ ಬಗ್ಗೆ ಒಂದು ಲೇಖನ ಮಾಡಿ ನಿಮ್ಮಗಳ ಮುಂದೆ ಇರಿಸುವೆ. ತವಿಶ್ರೀನಿವಾಸ